ಹೈದ್ರಾಬಾದ್ ನ ಹುಸೇನ್ ಸಾಗರ್ ಸರೋವರದಲ್ಲಿ ಬುದ್ಧ ಪ್ರತಿಮೆ ಪ್ರತಿಷ್ಠಾಪನೆಯ ವೀಡಿಯೋ ಎಂದು ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಈ ಪೋಸ್ಟ್ ಕಂಡುಬಂದಿದ್ದು, 1992ರಲ್ಲಿ ಹೈದ್ರಾಬಾದ್‌ನ ಹುಸೈನ್ ಸಾಗರ ಸರೋವರದಲ್ಲಿ ಬುದ್ಧ ಪ್ರತಿಮೆ ಪ್ರತಿಷ್ಠಾಪನೆಯ ವೀಡಿಯೋ ಇದು ಎಂದು ಹೇಳಲಾಗಿದೆ.


ಈ ಪೋಸ್ಟ್ ಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದಾಗ, ಇದು ನಿಜವಾದ ವೀಡಿಯೋ ಅಲ್ಲ, ಎಐ ಮೂಲಕ ರಚಿಸಿದ್ದಾಗಿದೆ ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಯ ಭಾಗವಾಗಿ ನಾವು ಮೊದಲಾಗಿ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ವೀಡಿಯೋದಲ್ಲಿ ಸಾಕಷ್ಟು ಅಸಹಜತೆಗಳು ಕಂಡುಬಂದಿವೆ. ನಡೆದಾಡುವ ಜನರು ರೂಪಾಂತರವಾದಂತೆ, ಅಸಹಜವಾದ ವಾಹನ ಸಂಚಾರ (ಹಿಂದಕ್ಕೆ-ಮುಂದಕ್ಕೆ ಹೋಗುವುದು), ಜನರ ಕೈಗಳು ಸರಿಯಾಗಿಲ್ಲದಿರುವುದು ಇತ್ಯಾದಿಗಳನ್ನು ಗಮನಿಸಿದ್ದೇವೆ. ಇವೆಲ್ಲ, ಇದು ಎಐನಿಂದ ಮಾಡಿರುವ ವೀಡಿಯೋ ಆಗಿರಬಹುದು ಎಂಬ ಸಂಶಯವನ್ನು ಇನ್ನಷ್ಟು ಬಲಪಡಿಸಿದೆ.
Also Read: ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎಂದ ವೀಡಿಯೋ ನಿಜವಲ್ಲ!
ಆ ಬಳಿಕ ನಾವು ಎಐ ಪತ್ತೆ ಸಾಧನಗಳ ಮೂಲಕ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಪರಿಶೀಲಿಸಿದ್ದೇವೆ.
ವಾಸ್ ಇಟ್ ಎಐ ಮೂಲಕ ಕೀಫ್ರೇಮ್ ಪರಿಶೀಲಿಸಿದಾಗ, ಅದು ಈ ಚಿತ್ರವನ್ನು ಎಐನಿಂದ ಮಾಡಲಾಗಿದೆ ಎಂಬುದರ ಕುರಿತು ವಿಶ್ವಾಸವಿರುವುದಾಗಿ ಹೇಳಿದೆ.

ಹೈವ್ ಮಾಡರೇಶನ್ ಮೂಲಕ ಕೀಫ್ರೇಮ್ ಪರಿಶೀಲಿಸಿದಾಗ, ಅದು 99.9%ರಷ್ಟು ಎಐನಿಂದ ಮಾಡಿರುವ ಸಾಧ್ಯತೆಯನ್ನು ಹೇಳಿದೆ.

ಆ ಬಳಿಕ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸಂದರ್ಭ bharathfx1 ಎಂಬ ಇನ್ ಸ್ಟಾಗ್ರಾಂ ಖಾತೆಯಿಂದ ವೈರಲ್ ವೀಡಿಯೋವನ್ನು ಹೋಲು ವೀಡಿಯೋ ಕಂಡುಬಂದಿದೆ.

ವೀಡಿಯೋದ ವಿವರಣೆಯಲ್ಲಿ “1992 ರಲ್ಲಿ, ಹುಸೇನ್ ಸಾಗರ್ ಸರೋವರದ ಹೃದಯಭಾಗದಲ್ಲಿ ವಿಶ್ವದ ಅತಿ ಎತ್ತರದ ಏಕಶಿಲೆಯ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಿದ ಕುರಿತು ಈ ರೀಲ್ ಅವಿಸ್ಮರಣೀಯ ಕ್ಷಣವನ್ನು ಮರುಸೃಷ್ಟಿಸಿದೆ; ಈ ರೀಲ್‌ನಲ್ಲಿ ತೋರಿಸಿರುವ ಚಿತ್ರಗಳು/ವೀಡಿಯೋಗಳು ಸಂಪೂರ್ಣವಾಗಿ ಎಐ ನಿಂದ ರಚಿತವಾಗಿವೆ, ನಮ್ಮ ಉದ್ದೇಶಗಳು ಯಾರಿಗೂ ನೋವುಂಟು ಮಾಡುವುದು ಅಥವಾ ಹಾನಿ ಮಾಡುವುದು ಅಲ್ಲ. ಇದು ಕೇವಲ ಮನರಂಜನಾ ಉದ್ದೇಶಕ್ಕಾಗಿ.” ಎಂದಿದೆ.
ಇದೇ ವೀಡಿಯೋವನ್ನು Bharath Kumar ಎಂಬ ಬಳಕೆದಾರರು ಫೇಸ್‌ಬುಕ್ ನಲ್ಲೂ ಪೋಸ್ಟ್ ಮಾಡಿದ್ದು, ಅಲ್ಲೂ ಇದು ಎಐ ಮೂಲಕ ರಚಿಸಲಾದ ವೀಡಿಯೋ ಆಗಿದೆ ಎಂದು ಹೇಳಿದ್ದಾರೆ.

Conclusion
ಆದ್ದರಿಂದ ಸತ್ಯಶೋಧನೆಯ ಪ್ರಕಾರ, ಇದು ಎಐನಿಂದ ರಚಿಸಿದ್ದು ಹೊರತು, 1992ರಲ್ಲಿ ಹೈದ್ರಾಬಾದ್ ನ ಹುಸೇನ್ ಸಾಗರ್ ಸರೋವರದಲ್ಲಿ ಬುದ್ಧನ ಪ್ರತಿಷ್ಠಾಪನೆಯ ನೈಜ ವೀಡಿಯೋ ಅಲ್ಲ ಎಂದು ಕಂಡುಬಂದಿದೆ.
Also Read: ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಎರಗಿದ ಲಾರಿ; ಚಾಲಕ ಮುಸ್ಲಿಂ?
Our Sources
Instagram post by bharathfx1 Dated: September 7, 2025
Facebook post by Bharath Kumar Dated: September 7, 2025
Was it AI
Hive moderation