Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಜೇನುತುಪ್ಪದೊಂದಿಗೆ ಅಮೃತಬಳ್ಳಿ ರಸವನ್ನು ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ
Fact
ಜೇನುತುಪ್ಪದೊಂದಿಗೆ ಅಮೃತಬಳ್ಳಿ ರಸವನ್ನು ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುವುದಕ್ಕೆ ಮಾನವನ ಮೇಲೆ ನಡೆದ ವೈದ್ಯಕೀಯ ಪ್ರಯೋಗಗಳ ಫಲಿತಾಂಶಗಳು ಲಭ್ಯವಿಲ್ಲ
ಜೇನುತುಪ್ಪದೊಂದಿಗೆ ಅಮೃತಬಳ್ಳಿ ರಸವನ್ನು ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇನ್‌ಸ್ಟಾಗ್ರಾಂನಲ್ಲಿ ಈ ಹೇಳಿಕೆ ಕಂಡುಬಂದಿದೆ. ಈ ಬಗ್ಗೆ ನಾವು ಸತ್ಯಶೋಧನೆಯನ್ನು ನಡೆಸಿದ್ದು ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
Also Read: ಬಾದಾಮಿ ಹಾಲು ರಕ್ತದೊತ್ತಡ ಮತ್ತು ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ ಎಂಬುದು ನಿಜವೇ?

ರಕ್ತದಲ್ಲಿನ ಸಕ್ಕರೆಯ ಮಟ್ಟವು ರಕ್ತದಲ್ಲಿನ ಗ್ಲೂಕೋಸ್‌ನ ಸಾಂದ್ರತೆಯನ್ನು ಪ್ರತಿನಿಧಿಸುತ್ತದೆ, ಇದು ಜೀವಕೋಶದ ಶಕ್ತಿಗೆ ನಿರ್ಣಾಯಕವಾಗಿದೆ. ಸಕ್ಕರೆ ಪ್ರಮಾಣವನ್ನು mg/dL ನಲ್ಲಿ ಅಳತೆ ಮಾಡಲಾಗುತ್ತದೆ. ಮಧುಮೇಹದಂತಹ ಸ್ಥಿತಿಗಳನ್ನು ಸೂಚಿಸಬೇಕಾದರೆ, ಊಟದ ಮೊದಲು, ಊಟದ ನಂತರ ಮತ್ತು ಯಾದೃಚ್ಛಿಕ ಮಟ್ಟದಂತಹ ಸಕ್ಕರೆ ಪ್ರಮಾಣದ ವಿಚಾರವನ್ನು ಒಳಗೊಂಡಿರುತ್ತದೆ. ಇದರ ಬಗ್ಗೆ ನಿರ್ದಿಷ್ಟವಾಗಿ ತಿಳಿಯಲು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.
ಸಾಮಾನ್ಯ ವ್ಯಾಪ್ತಿಯ ಹೊರತಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ಕಂಡುಬಂದರೆ ಅದನ್ನು ಅಸಹಜ ಎಂದು ಪರಿಗಣಿಸಬಹುದು. ಖಾಲಿ ಹೊಟ್ಟೆಯಲ್ಲಿ ರಕ್ತದ ಗ್ಲೂಕೋಸ್ ಮಟ್ಟ ಹೀಗಿರಬೇಕಾಗುತ್ತದೆ:
ವಿವಿಧ ಪ್ರಯೋಗಾಲಯಗಳು ಮತ್ತು ಬಳಸಿದ ನಿರ್ದಿಷ್ಟ ಪರೀಕ್ಷಾ ವಿಧಾನವನ್ನು ಅವಲಂಬಿಸಿ ಈ ಮೌಲ್ಯಗಳು ಸ್ವಲ್ಪ ಬದಲಾಗಬಹುದು. ಇದಲ್ಲದೆ, ರಕ್ತದಲ್ಲಿ ದೋಷಪೂರಿತ ಸಕ್ಕರೆ ಮಟ್ಟವು ಮಧುಮೇಹದ ಸಂಕೇತವಾಗಿದೆ.
ಮಧುಮೇಹ ಎನ್ನುವುದು ದೀರ್ಘಕಾಲದ ಚಯಾಪಚಯ ಸ್ಥಿತಿ ಅದು ನಿಮ್ಮ ದೇಹವು ಗ್ಲೂಕೋಸ್ ಅನ್ನು ಪ್ರಕ್ರಿಯೆಗೊಳಿಸುವುದನ್ನು ಅಡ್ಡಿಪಡಿಸುತ್ತದೆ. ಈ ದೋಷವು ದೇಹದಲ್ಲಿ ಅಧಿಕ ರಕ್ತದ ಸಕ್ಕರೆಯನ್ನು ಉಂಟುಮಾಡುತ್ತದೆ. ಹೆಚ್ಚಿದ ಬಾಯಾರಿಕೆ, ಹಸಿವು ಮತ್ತು ಆಗಾಗ್ಗೆ ಮೂತ್ರವಿಸರ್ಜನೆ ಮಾಡಬೇಕೆನ್ನುವುದು ಮಧುಮೇಹದ ಕೆಲವು ಚಿಹ್ನೆಗಳು.
ಇದಲ್ಲದೆ, ಮಧುಮೇಹದಲ್ಲಿ ಎರಡು ಮುಖ್ಯ ವಿಧಗಳಿವೆ. ಟೈಪ್ 2 ಮಧುಮೇಹವು ಇನ್ಸುಲಿನ್ ಪ್ರತಿರೋಧ (ಕೋಶಗಳು ಇನ್ಸುಲಿನ್‌ಗೆ ಕಡಿಮೆ ಪ್ರತಿಕ್ರಿಯಿಸಿದಾಗ) ಮತ್ತು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುವುದು ಸೇರಿದಂತೆ ವಿವಿಧ ಅಂಶಗಳ ಕಾರಣದಿಂದ ಸಂಭವಿಸುತ್ತದೆ. ಆದರೆ ಟೈಪ್ 1 ಮಧುಮೇಹ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಮೇಲೆ ದಾಳಿ ಮಾಡುವ ಒಂದು ಕಾಲಿಲೆಯಾಗಿದೆ. ಇದರರ್ಥ ದೇಹವು ಇನ್ಸುಲಿನ್ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ.
Also Read: ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆಯೇ?
ಮಧುಮೇಹವನ್ನು ನಿರ್ವಹಿಸಲು ಅಮೃತಬಳ್ಳಿ ಸಂಭಾವ್ಯ ಪ್ರಯೋಜನಗಳನ್ನು ಹೊಂದಿರಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಆದಾಗ್ಯೂ, ಈ ಸಂಶೋಧನೆಗಳನ್ನು ದೃಢೀಕರಿಸಲು ನಮಗೆ ಹೆಚ್ಚಿನ ಮಾನವ ಪ್ರಯೋಗಗಳ ಅಗತ್ಯವಿದೆ. ಅಮೃತಬಳ್ಳಿ ಕುರಿತ ಮಧುಮೇಹದ ಹೆಚ್ಚಿನ ಸಂಶೋಧನೆಯು ಪ್ರಾಣಿಗಳು ಅಥವಾ ಜೀವಕೋಶಗಳಲ್ಲಿ ಮಾಡಲಾಗಿದೆ. ಅಮೃತಬಳ್ಳಿಯ ಮೂಲಕ ಮಧುಮೇಹಕ್ಕೆ ಚಿಕಿತ್ಸೆ ನೀಡುವ ಕಾರ್ಯವಿಧಾನವನ್ನು ವಿವರವಾಗಿ ವಿವರಿಸುವ ಯಾವುದೇ ಸಂಶೋಧನೆ ನಮಗೆ ಕಂಡುಬಂದಿಲ್ಲ.
ಇದರ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಮಧುಮೇಹಕ್ಕೆ ನಿರ್ದಿಷ್ಟವಾಗಿ ಅದರ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಸ್ಥಾಪಿಸಲು ಹೆಚ್ಚು ಕಠಿಣ ಮತ್ತು ವ್ಯಾಪಕವಾದ ಕ್ಲಿನಿಕಲ್ ಪ್ರಯೋಗಗಳ ಅಗತ್ಯವಿದೆ.
ಮಧುಮೇಹಕ್ಕೆ ಅಮೃತಬಳ್ಳಿ ಸಹಾಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ:
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು: ಅಧ್ಯಯನ ವೊಂದು ಮಧುಮೇಹ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಅಮೃತಬಳ್ಳಿ ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ. ಇನ್ನೊಂದು ಅಧ್ಯಯನ ಅಮೃತಬಳ್ಳಿ ರೋಗನಿರೋಧಕ ಅಂಶಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ. ಆಂಟಿಹೈಪರ್ಗ್ಲೈಸೆಮಿಕ್ (ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವುದು), ಆಂಟಿ ಆಕ್ಸಿಡೆಂಟ್ ಗಳು, ಅಡಾಪ್ಟೋಜೆನಿಕ್, ಹೆಪಟೊಪ್ರೊಟೆಕ್ಟಿವ್ ಮತ್ತು ಹಾರ್ಮೋನ್ ನಿಯಂತ್ರಕ ಗುಣಲಕ್ಷಣಗಳನ್ನು ಇದು ಹೊಂದಿದೆ. ಇದು ಟೈನೋಸ್ಪೊರಿನ್, ಬರ್ಬೆರಿನ್, ಜಟ್ರೊರ್ರಿಝಿನ್‌ನಂತಹ ಪ್ರತ್ಯೇಕವಾದ ಫೈಟೊಕಾನ್‌ಸ್ಟಿಟ್ಯುಯೆಂಟ್‌ಗಳನ್ನು ಸಹ ಒಳಗೊಂಡಿದೆ, ಇದು ಮಧುಮೇಹವನ್ನು ನಿರ್ವಹಿಸುವಲ್ಲಿ ಸಮರ್ಥವಾಗಿ ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಶೋಧನೆ ಪ್ರಕಾರ ಅಮೃತಬಳ್ಳಿಯಲ್ಲಿರುವ ಸಾರಗಳಲ್ಲಿರುವ ಗುಣಪಡಿಸುವ ಗುಣಲಕ್ಷಣಗಳು ಅವುಗಳ ಫೈಟೊಕೆಮಿಕಲ್ ಸಂಯೋಜನೆಗೆ ಸಂಬಂಧಿಸಿವೆ ಎಂದು ಸೂಚಿಸುತ್ತದೆ, ಸ್ಟೀರಾಯ್ಡ್ಗಳು, ಆಲ್ಕಲಾಯ್ಡ್ಗಳು, ಡೈಟರ್ಪೆನಾಯ್ಡ್ ಲ್ಯಾಕ್ಟೋನ್ಗಳು ಮತ್ತು ಗ್ಲೈಕೋಸೈಡ್ಗಳನ್ನು ಒಳಗೊಂಡಿದೆ.
ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವುದು: ಅಮೃತಬಳ್ಳಿ ದೇಹದ ಬಳಕೆಯ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉರಿಯೂತವನ್ನು ಕಡಿಮೆ ಮಾಡುವುದು: ದೀರ್ಘಕಾಲದ ಉರಿಯೂತವು ಮಧುಮೇಹ ಮತ್ತು ಅದರ ತೊಡಕುಗಳಲ್ಲಿ ಪ್ರಮುಖ ಅಂಶವಾಗಿದೆ. ಅಮೃತಬಳ್ಳಿಯ ಉರಿಯೂತದ ಗುಣಲಕ್ಷಣಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮೂತ್ರಪಿಂಡಗಳ ರಕ್ಷಣೆ: ಮಧುಮೇಹವು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ. ಅಮೃತ ಬಳ್ಳಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಇದು ಹಾನಿಯಿಂದ ಮೂತ್ರಪಿಂಡ ರಕ್ಷಿಸಲು ಸಹಾಯ ಮಾಡಬಹುದು.
ಸಾಂಪ್ರದಾಯಿಕ ಮಧುಮೇಹ ಔಷಧಿಗಳಿಗೆ ಅಮೃತಬಳ್ಳಿ/ಅಮೃತಬಳ್ಳಿ ರಸ ಪರ್ಯಾವಲ್ಲ ಎಂದು ನಮ್ಮ ಸಂಶೋಧನೆ ತೋರಿಸುತ್ತದೆ. ಅಮೃತಬಳ್ಳಿ ಮತ್ತು ಅದರ ರಸವನ್ನು ಸೇವಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡುವುದು ಮುಖ್ಯ. ಅಮೃತಬಳ್ಳಿ ಕೆಲವು ಔಷಧಿಗಳೊಂದಿಗೆ ಪರಿಣಾಮ ಬೀರಬಹುದು ಮತ್ತು ಅದು ಎಲ್ಲರಿಗೂ ಸೂಕ್ತವಲ್ಲ.
ಇನ್ನು, ಜೇನುತುಪ್ಪ ಹಲವಾರು ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಮತ್ತು ಅನೇಕ ಮನೆಮದ್ದುಗಳು ಮತ್ತು ಪರ್ಯಾಯ ಔಷಧ ಚಿಕಿತ್ಸೆಗಳಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಹೆಚ್ಚಿನ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಅದಯ ಹೊಂದಿದೆ. ಜೇನುತುಪ್ಪವು ಗಾಯಗಳು, ಕೆಮ್ಮುಗಳು, ಮತ್ತುದೇಹದ ಮೇಲ್ಭಾಗದ ಉಸಿರಾಟದ ಸಮಸ್ಯೆ ಇರುವ ಪರಿಸ್ಥಿತಿಗಳಲ್ಲಿ ಚಿಕಿತ್ಸಕವಾಗಿ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದಿದೆ.
ಜೇನುತುಪ್ಪವು ನೈಸರ್ಗಿಕ ಸಿಹಿಕಾರಕವಾಗಿದೆ, ಇದು ಪ್ರಾಥಮಿಕವಾಗಿ ಫ್ರಕ್ಟೋಸ್ ಮತ್ತು ಗ್ಲೂಕೋಸ್ ಗಳು ಇದರಲ್ಲಿ ಸಂಯೋಜಿಸಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯ ಸಕ್ಕರೆಗೆ ಹೋಲಿಸಿದರೆ, ಜೇನಿನಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುತ್ತದೆ. ಆದರೂ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ನಿಧಾನವಾಗಿ ಹೆಚ್ಚಳಕ್ಕೆ ಕಾರಣವಾಗಬಹುದು. ಇದನ್ನೂ ಮಿತವಾಗಿ ಸೇವಿಸಬೇಕಾದ್ದು ಅವಶ್ಯ. ವಿಶೇಷವಾಗಿ ಮಧುಮೇಹ ಹೊಂದಿರುವ ವ್ಯಕ್ತಿಗಳು ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಪ್ರಯತ್ನಿಸುತ್ತಿರುವವರು ಇದನ್ನು ಗಮನಿಸಬೇಕು.
ಅಧ್ಯಯನ ಜೇನುತುಪ್ಪವು ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಮತ್ತು ಸಂಭಾವ್ಯ ಆಂಟಿ ಬ್ಯಾಕ್ಟೀರಿಯಲ್ ಪರಿಣಾಮಗಳಂತಹ ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ. ಆದಾಗ್ಯೂ, ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಮೇಲೆ ಅದರ ಪ್ರಭಾವದ ಬಗ್ಗೆ ಪುರಾವೆಗಳು ಸ್ಪಷ್ಟವಾಗಿಲ್ಲ, ಮತ್ತು ಅದರ ಪರಿಣಾಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.
ಹೆಚ್ಚು ಜೇನುತುಪ್ಪವನ್ನು ಸೇವಿಸುವುದರಿಂದ ಅದರಲ್ಲಿರುವ ಹೆಚ್ಚಿನ ಸಕ್ಕರೆ ಅಂಶ ಮತ್ತು ಕ್ಯಾಲೋರಿ ಅಂಶದಿಂದಾಗಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಕೆಲವು ಜನರು ಜೇನುತುಪ್ಪಕ್ಕೆ ಅಲರ್ಜಿಯನ್ನು ಹೊಂದಿರಬಹುದು (2014ರ) ಅಧ್ಯಯನ ಹೆಚ್ಚು ಜೇನುತುಪ್ಪವನ್ನು ಸೇವಿಸುವುದರಿಂದ ಆಹಾರ ವಿಷದಂತೆ ಆಗುವ ಸಾಧ್ಯತೆ ಇದೆ.
ಜೇನುತುಪ್ಪವು ಸಾಕಷ್ಟು ಔಷಧೀಯ ಪ್ರಯೋಜನಗಳನ್ನು ಹೊಂದಿದ್ದರೂ ಸಹ, ಜೇನುತುಪ್ಪವು ವಿವಿಧ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂಬುದಕ್ಕೆ ಸಾಕಷ್ಟು ವೈದ್ಯಕೀಯ ಆಧಾರಗಳಿಲ್ಲ.
ದೆಹಲಿ ಮೂಲದ ಸರೋಜ್ ಡಯಾಬಿಟಿಸ್ & ರಿಸರ್ಚ್ ಸೆಂಟರ್‌ನ ಸಂಸ್ಥಾಪಕ ಮತ್ತು ಹಿರಿಯ ಮಧುಮೇಹಶಾಸ್ತ್ರಜ್ಞರಾದ ಡಾ. ರಿತೇಶ್ ಬನ್ಸಾಲ್ ಅವರು ಹೇಳುವಂತೆ, “ಬಹುತೇಕ ಮಧುಮೇಹ ರೋಗಿಗಳು ಸಹಾಯಕವಾಗಬಹುದಾದ ಪರ್ಯಾಯ ವೈದ್ಯಕೀಯ ಚಿಕಿತ್ಸೆಗಳನ್ನು ನಿರಂತರವಾಗಿ ಹುಡುಕುತ್ತಾರೆ. ಏಕೆಂದರೆ ಎಲ್ಲಾ ಮಧುಮೇಹ ರೋಗಿಗಳಿಗೆ ಆಹಾರ, ಜೀವನಶೈಲಿ ಬದಲಾವಣೆ ಮತ್ತು ಅಲೋಪತಿ ಔಷಧಿಗಳ ಮೂಲಕ ನಿರ್ದಿಷ್ಟ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸೂಚಿಸಲಾಗುತ್ತದೆ. ನೈಸರ್ಗಿಕ ಚಿಕಿತ್ಸೆಗಳು ಜೀವನಶೈಲಿಯ ಸಮಸ್ಯೆಗಳನ್ನು ಹೊಂದಿರುವವರಿಗೆ ಪ್ರಯೋಜನವನ್ನು ನೀಡುತ್ತದೆ. ಆದಾಗ್ಯೂ, ಅಂತಹ ನೈಸರ್ಗಿಕ ಪರಿಹಾರಗಳನ್ನು ಬಳಸುವಾಗ ರೋಗಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಚಿಕಿತ್ಸೆ ಯನ್ನು ಅವರ ವೈದ್ಯರು ಸೂಚಿಸಿದಂತೆ ಮಾಡಬೇಕಿರುವುದರಿಂದ ಅವರಲ್ಲಿ ವೈದ್ಯರ ಸಲಹೆಯನ್ನು ಅನುಸರಿಸಲು ಹೇಳಲಾಗುತ್ತದೆ.” ಎಂದಿದ್ದಾರೆ.
Also Read: ಹೊಕ್ಕುಳಕ್ಕೆ ತುಪ್ಪ ಹಚ್ಚುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆಯೇ?
ಜೇನುತುಪ್ಪದೊಂದಿಗೆ ಅಮೃತಬಳ್ಳಿ ರಸವನ್ನು ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುವುದಕ್ಕೆ ಮಾನವನ ಮೇಲೆ ನಡೆದ ವೈದ್ಯಕೀಯ ಪ್ರಯೋಗಗಳ ಫಲಿತಾಂಶಗಳು ಲಭ್ಯವಿಲ್ಲ ಆದ್ದರಿಂದ ಇದು ತಪ್ಪಾದ ಸಂದರ್ಭವಾಗಿದೆ.
Our Sources:
Toxic compounds in honey – PubMed (nih.gov)
Honey and Health: A Review of Recent Clinical Research – PMC (nih.gov)
Diabetes, Type 1 Archives – THIP Media
All About Honey Glycemic Index and How It Compares to Sugar | Signos
Honey: A Reference Guide to Nature’s Sweetener (PDF)
Effect of honey in improving the gut microbial balance | Food Quality and Safety | Oxford Academic (oup.com)
Honey and beehive products in otorhinolaryngology: a narrative review – Henatsch – 2016 – Clinical Otolaryngology – Wiley Online Library
Effect of honey, dextromethorphan, and no treatment on nocturnal cough and sleep quality for coughing children and their parents – PubMed (nih.gov)
Medical honey for wound care–still the ‘latest resort’? – PubMed (nih.gov)
Phenolic Compounds in Honey and Their Associated Health Benefits: A Review – PMC (nih.gov)
Tinospora cordifolia: One plant, many roles – PMC (nih.gov)
Antidiabetic claims of Tinospora cordifolia (Willd.) Miers: critical appraisal and role in therapy – ScienceDirect
Unmasking the Many Faces of Giloy (Tinospora cordifolia L.): A Fresh Look on its Phytochemical and Medicinal Properties | Bentham Science (eurekaselect.com)
Hypoglycemic and anti-hyperglycemic activity of Guduchi Satva in experimental animals – PMC (nih.gov)
Diabetes – PubMed (nih.gov)
Diabetes Diagnosis & Tests | ADA
Pre-Diabetes: Prevention & Lifestyle Tips (thip.media)
Conversation with Dr. Ritesh Bansal, Senior Consultant Diabetologist
(This article has been published in collaboration with THIP Media)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
April 12, 2025
Newschecker and THIP Media
April 11, 2025
Newschecker and THIP Media
February 28, 2025