ಪಾಕಿಸ್ತಾನದಲ್ಲಿ ಉಗ್ರರ ಗುಂಡಿನ ದಾಳಿಗೆ ಹೊತ್ತಿ ಉರಿದ ರೈಲು ಎಂಬತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಬಂಡುಕೋರರು ಕ್ವೆಟ್ಟಾದಿಂದ ಪೇಶಾವರಕ್ಕೆ ಸಂಚರಿಸುತ್ತಿದ್ದ, ಜಾಫರ್ ಎಕ್ಸ್ಪ್ರೆಸ್ ರೈಲಿನ ಮೇಲೆ ದಾಳಿ ಮಾಡಿ ಅದನ್ನು ವಶಕ್ಕೆ ಪಡೆದಿದ್ದು ಅದರಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು.
ಈ ಲೇಖನವನ್ನು ಬರೆಯುವ ಹೊತ್ತಿಗೆ ಪಾಕಿಸ್ತಾನ ಭದ್ರತಾ ಪಡೆಗಳು ಕಾರ್‍ಯಚರಣೆ ನಡೆಸಿ 27ಕ್ಕೂ ಹೆಚ್ಚು ಮಂದಿ ಬಂಡುಕೋರರನ್ನು ಹತ್ಯೆ ಗೈದು 155ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಉಗ್ರರು ದಾಳಿ ನಡೆಸಿದಾಗ ರೈಲು ಹೊತ್ತಿ ಉರಿದಿದಿದೆ ಎಂಬಂತೆ ಹೇಳಲು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಟಿವಿ9 ಕನ್ನಡ ಕೂಡ ಇದೇ ವೀಡಿಯೋವನ್ನು ತನ್ನ ವೆಬ್ ಪೇಜ್ ನಲ್ಲಿ ಪ್ರಕಟಿಸಿದೆ.

ಇದೇ ರೀತಿಯ ಪೋಸ್ಟ್ ಗಳನ್ನು ನಾವು ಇಲ್ಲಿ, ಇಲ್ಲಿ ಕಂಡುಕೊಂಡಿದ್ದೇವೆ.


ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ವೀಡಿಯೋ ಬಲೂಚಿಸ್ತಾನದಲ್ಲಿ ಉಗ್ರರು ರೈಲು ಹೈಜಾಕ್ ವೇಳೆ ನಡೆಸಿದ ಸಂದರ್ಭದ ಸ್ಫೋಟದಲ್ಲ, ಇದು ಕರಾಚಿಯ ಗುಲ್ಶನ್-ಎ-ಮೇಮರ್ ಮೀರ್ ಚಕರ್ ಎಂಬಲ್ಲಿ ನಡೆದ ಅಗ್ನಿ ದುರಂತಕ್ಕೆ ಸಂಬಂಧಿಸಿದ್ದು ಎಂದು ಕಂಡುಕೊಂಡಿದ್ದೇವೆ.
ಚಾಂಪಿಯನ್ಸ್ ಟ್ರೋಫಿ ವೇಳೆ ರಂಜಾನ್ ಉಪವಾಸ ಮುರಿದಿದ್ದಕ್ಕಾಗಿ ವೇಗಿ ಮೊಹಮ್ಮದ್ ಶಮಿ ಕ್ಷಮೆ ಕೇಳಿದ್ರಾ?
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ನಲ್ಲಿ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ದಿ ಫ್ಯಾಕ್ಟ್ 360 ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಮಾರ್ಚ್ 11, 2025ರಂದು ಪೋಸ್ಟ್ ಮಾಡಿದ ವೀಡಿಯೋ ಲಭ್ಯವಾಗಿದೆ. ಈ ವೀಡಿಯೋ ವೈರಲ್ ವೀಡಿಯೋಕ್ಕೆ ಹೋಲಿಕೆಯಾಗುತ್ತಿರುವುದನ್ನು ಕಂಡುಕೊಂಡಿದ್ದೇವೆ.

ಈ ಬಗ್ಗೆ ಹೆಚ್ಚಿನ ಶೋಧ ನಡೆಸಿದಾಗ, geonewsdottv ಎಂಬ ಇನ್ಸ್ಟ್ರಾ ಗ್ರಾಂ ಖಾತೆಯಲ್ಲೂ ಅದೇ ಹೇಳಿಕೆಯೊಂದಿಗೆ, ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವ ವೀಡಿಯೋವನ್ನು ಕಂಡಿದ್ದೇವೆ.
ಕರಾಚಿಯ ಗುಲ್ಶನ್-ಎ-ಮೇಮರ್ ಮೀರ್ ಚಕರ್ ನಲ್ಲಿ ಸಂಭವಿಸಿದ ಅಗ್ನಿ ದುರಂತ ಎಂಬುದಕ್ಕೆ ಪೂರಕವಾಗಿ ಇನ್ನಷ್ಟು ಇನ್ಸ್ಟಾಗ್ರಾಂ ಪೋಸ್ಟ್ ಗಳನ್ನು ನಾವು ಕಂಡಿದ್ದೇವೆ. ಅವುಗಳನ್ನು ಇಲ್ಲಿ ಇಲ್ಲಿ ಇಲ್ಲಿ ನೋಡಬಹುದು.



ಘಟನೆಯ ಕುರಿತಂತೆ ನಾವು ವರದಿಗಳ ಬಗ್ಗೆ ಶೋಧ ನಡೆಸಿದಾಗ ಇಟಿ ಟೈಮ್ಸ್ ಪಾಕಿಸ್ತಾನ ಮಾರ್ಚ್ 11, 2025ರಂದು ಮಾಡಿರುವ ಪೋಸ್ಟ್ ಕಂಡಿದ್ದೇವೆ. ಇದೂ ಕರಾಚಿಯ ಗುಲ್ಶನ್-ಎ-ಮೇಮರ್ ಮೀರ್ ಚಕರ್ ನಲ್ಲಿ ಸಂಭವಿಸಿದ ಅಗ್ನಿ ದುರಂತ ಎಂದು ಹೇಳಿದೆ.

ಇದೇ ರೀತಿ ಮಾಧ್ಯಮ ವರದಿಯನ್ನು ಎನ್‌ಟಿಎನ್ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಕಂಡಿದ್ದೇವೆ. ಮಾರ್ಚ್ 11, 2025ರಂದು ವೀಡಿಯೋ ಅಪ್ಲೋಡ್ ಮಾಡಲಾಗಿದ್ದು, ಕರಾಚಿಯ ಗುಲ್ಶನ್-ಎ-ಮೇಮರ್ ಮಿರ್ ಚಕರ್ ಬ್ರೋಹಿ ಹೋಟೆಲ್ ಬಳಿಯ ಜಮೀನಿನಲ್ಲಿ ಬೆಂಕಿ ಅವಘಡ ಎಂಬ ಶೀರ್ಷಿಕೆಯಿದೆ.
ಮಾರ್ಚ್ 11, 2024 ಡಾನ್ ವರದಿಯಲ್ಲಿ “ಕರಾಚಿಯಲ್ಲಿ ಸೋಮವಾರ ಮಧ್ಯಾಹ್ನ ಸೂಪರ್‌ಹೈವೇಯಲ್ಲಿರುವ ತಿನಿಸು ಮಳಿಗೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಉಂಟಾದ ಭಾರಿ ಬೆಂಕಿ ಅವಘಡದಲ್ಲಿ ಮರದ ಮಾರುಕಟ್ಟೆಯ 150 ಅಂಗಡಿಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ರೆಸ್ಟೋರೆಂಟ್‌ನಿಂದ ಹತ್ತಿರದ ಮರದ ಅಂಗಡಿಗಳಿಗೆ ವೇಗವಾಗಿ ಹರಡಿ ಮೇಮರ್ ಮೋರ್ ಬಳಿಯ ಇಡೀ ಮಾರುಕಟ್ಟೆಯನ್ನು ಆವರಿಸಿತು ಎಂದು ಅವರು ಹೇಳಿದ್ದಾರೆ” ಎಂದಿದೆ.

Conclusion
ಈ ಸತ್ಯಶೋಧನೆಯ ಪ್ರಕಾರ ಪಾಕಿಸ್ತಾನದಲ್ಲಿ ಉಗ್ರರ ಗುಂಡಿನ ದಾಳಿಗೆ ಹೊತ್ತಿ ಉರಿದ ರೈಲು ಎಂಬ ಹೇಳಿಕೆ ತಪ್ಪಾಗಿದ್ದು, ವೈರಲ್ ವೀಡಿಯೋ ಕರಾಚಿಯ ಗುಲ್ಶನ್-ಎ-ಮೇಮರ್ ಮೀರ್ ಚಕರ್ ನಲ್ಲಿ ಸಂಭವಿಸಿದ ಅಗ್ನಿ ದುರಂತದ್ದಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್ ನಲ್ಲಿ ಮೆಟ್ರೋ ರೈಲು ಅಪಘಾತವಾಗಿದೆ ಎಂದು ಎಐ ವೀಡಿಯೋ ಹಂಚಿಕೆ
Our Sources
Instagram Post By geonewsdottv, Dated: March 11, 2025
YouTube Video By NTN News, Dated: March 11, 2025
Report By Dawn, Dated: March 11, 2025
(With inputs from Mohammed Zakariya, Newschceker Urdu)