Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಆಪರೇಷನ್ ಸಿಂದೂರದ ವೇಳೆ ಭಾರತದ 3 ರಫೇಲ್ ಜೆಟ್ ನಾಶವಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆ
ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿಕೆ ಕುರಿತ ಈ ವೀಡಿಯೋ ಡೀಪ್ ಫೇಕ್ ಆಗಿದೆ
ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಿಖರ ಮಿಲಿಟರಿ ದಾಳಿಯನ್ನು ನಡೆಸಿದ್ದು, ಈ ವೇಳೆ 3 ರಫೇಲ್ ಫೈಟರ್ ಜೆಟ್ ಗಳನ್ನು ಕಳೆದುಕೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು 1 ನಿಮಿಷ 12 ಸೆಕೆಂಡುಗಳ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.



ವೈರಲ್ ಸಂದರ್ಶನದಲ್ಲಿ ಜೈಶಂಕರ್ ಏನು ಹೇಳುತ್ತಾರೆ ಎಂಬುದು ಇಲ್ಲಿದೆ:
“… ಪಾಕಿಸ್ತಾನದೊಂದಿಗಿನ ನಮ್ಮ ವ್ಯವಹಾರಗಳು ದ್ವಿಪಕ್ಷೀಯವಾಗಿವೆ ಎಂಬುದು ರಾಷ್ಟ್ರೀಯ ಒಮ್ಮತವಾಗಿದೆ. ಮತ್ತು ಈ ನಿರ್ದಿಷ್ಟ ಪ್ರಕರಣದಲ್ಲಿ, ಮೇ 9 ರ ರಾತ್ರಿ [ಅಮೆರಿಕ] ಉಪಾಧ್ಯಕ್ಷ ವ್ಯಾನ್ಸ್ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದಾಗ, ನಾವು ಕೆಲವು ವಿಷಯಗಳನ್ನು ಒಪ್ಪಿಕೊಳ್ಳದಿದ್ದರೆ ಪಾಕಿಸ್ತಾನಿಗಳು ಭಾರತದ ಮೇಲೆ ಭಾರಿ ದಾಳಿ ನಡೆಸುತ್ತಾರೆ ಎಂದು ಹೇಳಿದಾಗ ನಾನು ಆ ಕೋಣೆಯಲ್ಲಿದ್ದೆ. ಮತ್ತು ಪಾಕಿಸ್ತಾನಿಗಳು ಏನು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ, ಅದಕ್ಕೆ ವಿರುದ್ಧವಾಗಿ, ಅವರು ನಮ್ಮಿಂದ ಪ್ರತಿಕ್ರಿಯೆ ಇರುತ್ತದೆ ಎಂದು ಪ್ರಧಾನಿಯವರು ಹೇಳಿದರು. ನಿಮಗೆ ತಿಳಿದಿದೆ, ಪಾಕಿಸ್ತಾನಿಗಳು ಆ ರಾತ್ರಿ ನಮ್ಮ ಮೇಲೆ ಭಾರಿ ದಾಳಿ ಮಾಡಿದರು. ನಾವು ಈಗಾಗಲೇ ಎರಡು ದಿನಗಳ ಹಿಂದೆ ಪಾಕಿಸ್ತಾನಕ್ಕೆ ಮೂರು ರಫೇಲ್ಗಳನ್ನು ಕಳೆದುಕೊಂಡಿದ್ದೇವೆ, ಆದ್ದರಿಂದ ಅವರು ದಾಳಿ ಮಾಡುವುದು ತುಂಬಾ ಅನ್ಯಾಯ. ಆದರೂ ಅವರು ಅದನ್ನು ಮಾಡಿದರು. ಅದರ ನಂತರ ನಾವು ಬಹಳ ಬೇಗನೆ ಪ್ರತಿಕ್ರಿಯಿಸಿದೆವು. ಮರುದಿನ ಬೆಳಿಗ್ಗೆ, ರುಬಿಯೊ ನನಗೆ ಕರೆ ಮಾಡಿ ಪಾಕಿಸ್ತಾನಿಗಳು ಮಾತುಕತೆಗೆ ಸಿದ್ಧರಿದ್ದಾರೆ ಎಂದು ಹೇಳಿದರು.
ಪಾಕಿಸ್ತಾನದೊಂದಿಗಿನ ಸಂಕ್ಷಿಪ್ತ ಮಿಲಿಟರಿ ಸಂಘರ್ಷದಲ್ಲಿ ಭಾರತೀಯ ವಾಯುಪಡೆ (ಐಎಎಫ್) “ಕೆಲವು ವಿಮಾನಗಳನ್ನು” ಕಳೆದುಕೊಂಡಿದೆ ಎಂದು ಹಿರಿಯ ಭಾರತೀಯ ಮಿಲಿಟರಿ ಅಧಿಕಾರಿಯೊಬ್ಬರು ಕಳೆದ ತಿಂಗಳು ಒಪ್ಪಿಕೊಂಡ ನಂತರ ಈ ವೀಡಿಯೋ ವೈರಲ್ ಆಗಿದೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ತನಿಖೆಯ ಸಂದರ್ಭದಲ್ಲಿ ನ್ಯೂಸ್ಚೆಕರ್ ಮೊದಲು “Jaishankar Rafale” ಮೂಲಕ ಕೀವರ್ಡ್ ಸರ್ಚ್ ನಡೆಸಿತು. ಈ ವೇಳೆ ವಿದೇಶಾಂಗ ಸಚಿವರ ಅಂತಹ ಹೇಳಿಕೆಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿವರದಿಗಳು ಕಂಡುಬಂದಿಲ್ಲ. ಆದರೆ ವೀಡಿಯೋದ 00:57 ಸೆಕೆಂಡಿನಲ್ಲಿ ಜೈಶಂಕರ್ ಅವರು “ನಾವು ಈಗಾಗಲೇ ಎರಡು ದಿನಗಳ ಹಿಂದೆ ಪಾಕಿಸ್ತಾನದ ಎದುರು ಮೂರು ರಫೇಲ್ ಗಳನ್ನು ಕಳೆದುಕೊಂಡಿದ್ದೇವೆ, ಆದ್ದರಿಂದ ಅವರು ದಾಳಿ ಮಾಡುವುದು ತುಂಬಾ ಅನ್ಯಾಯ. ಆದರೂ ಅವರು ಅದನ್ನು ಮಾಡಿದರು” ಎನ್ನುವ ಮಾತುಗಳು ಹಿಂದಿನ ಧ್ವನಿಗಿಂತ ಭಿನ್ನವಾಗಿದೆ ಮತ್ತು ತುಟಿ ಚಲನೆ, ವೀಡಿಯೋದ ದೃಶ್ಯಕ್ಕೆ ಹೊಂದಿಕೆಯಾಗುತ್ತಿಲ್ಲ ಎಂಬುದನ್ನು ಗಮನಿಸಿದ್ದೇವೆ. ಆದ್ದರಿಂದ ವೀಡಿಯೋವನ್ನು ಡಿಜಿಟಲ್ ಆಗಿ ತಿದ್ದಲಾಗಿದೆಯೇ ಎಂಬ ಬಗ್ಗೆ ನಮ್ಮ ಅನುಮಾನಗಳನ್ನು ಹುಟ್ಟುಹಾಕಿತು.
ನಾವು ಈ ಸಂಶಯಾಸ್ಪದ 7 ಸೆಕೆಂಡ್ ಗಳ ಆಡಿಯೋವನ್ನು ಡೀಫ್ ಫೇಕ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದ್ದೇವೆ, ಆಗ ಅದು “ನಕಲಿ” ಎಂದು ಕಂಡುಬಂದಿದೆ, ಆದರೆ ವೈರಲ್ ವೀಡಿಯೋದ ಉಳಿದ ಆಡಿಯೋವನ್ನು “ನೈಜ” ಎಂದು ಕರೆಯಲಾಗಿದೆ. ಅಲ್ಲದೆ, ನಾವು ಓಪನ್-ಸೋರ್ಸ್ ಡೀಪ್ಫೇಕ್ ಪತ್ತೆ ಸಾಧನವಾದ ಡೀಪ್ವೇರ್ ಮೂಲಕ ಏಳು ಸೆಕೆಂಡುಗಳ ವೀಡಿಯೋದ ಆಯ್ದ ಭಾಗವನ್ನು ನಡೆಸಿದ್ದೇವೆ, ಅದೂ ಕೂಡ “ಅನುಮಾನಾಸ್ಪದ” ಎಂದು ಪರಿಗಣಿಸಿದೆ.


ನ್ಯೂಸ್ಚೆಕರ್ ವೈರಲ್ ವೀಡಿಯೋವನ್ನು ಡೀಪ್ಫೇಕ್-ಒ-ಮೀಟರ್ ಮೂಲಕ ಪರಿಶೀಲಿಸಿದೆ. ಅಲ್ಲಿ ಅದರ ಮುಖ್ಯ ವರ್ಗೀಕರಣವು ವೀಡಿಯೋವನ್ನು “ಎಐ ಮೂಲಕ ರಚಿಸಲಾಗಿದೆ” ಎಂಬ ಬಗ್ಗೆ ಪ್ರತಿಶತ 100 ರಷ್ಟು ಸಂಭವನೀಯತೆಯನ್ನು ಹೇಳಿದೆ.

ಅನಂತರ ನಾವು ಕೀಫ್ರೇಮ್ ಮೂಲಕ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು, ಈ ವೇಳೆ ಜುಲೈ 1, 2025 ರಂದು ಯುಎಸ್ ಮೂಲದ ನ್ಯೂಸ್ ವೀಕ್, ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ ಮೂಲ ಸಂದರ್ಶನ ಲಭ್ಯವಾಗಿದೆ. ಇದರ ವೀಡಿಯೋ ವಿವರಣೆಯಲ್ಲಿ “ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ನ್ಯೂಸ್ ವೀಕ್ ಸಿಇಒ ದೇವ್ ಪ್ರಗದ್ ಅವರಿಗೆ ಅಮೆರಿಕ ಮತ್ತು ಟ್ರಂಪ್ನಿಂದ ಹಿಡಿದು ಚೀನಾ ಮತ್ತು ಪಾಕಿಸ್ತಾನದವರೆಗೆ ಎಲ್ಲದರೊಂದಿಗಿನ (ಮತ್ತು ಎಲ್ಲರೊಂದಿಗಿನ) ಭಾರತದ ಸಂಬಂಧಗಳು, ಕನಸುಗಳು ಮತ್ತು ಸಂದಿಗ್ಧತೆಗಳ ಬಗ್ಗೆ ವಿವರಿಸುತ್ತಾರೆ” ಎಂದಿದೆ.
ವೈರಲ್ ವೀಡಿಯೋದ ಆಯ್ದ ಭಾಗವನ್ನು 42:13 ಸೆಕೆಂಡ್ ನಿಂದ ಶುರುವಾಗುತ್ತಿದ್ದು, ಅದರಲ್ಲಿ “ನಾವು ಈಗಾಗಲೇ ಎರಡು ದಿನಗಳ ಹಿಂದೆ ಪಾಕಿಸ್ತಾನಕ್ಕೆ ಮೂರು ರಫೇಲ್ಗಳನ್ನು ಕಳೆದುಕೊಂಡಿದ್ದೇವೆ, ಆದ್ದರಿಂದ ಅವರು ದಾಳಿ ಮಾಡುವುದು ತುಂಬಾ ಅನ್ಯಾಯವಾಗಿದೆ. ಆದರೆ ಅವರು ಹೇಗಾದರೂ ಅದನ್ನು ಮಾಡಿದರು “, ಎನ್ನುವುದು ಮೂಲ ಸಂದರ್ಶನದ ಭಾಗವಾಗಿರಲಿಲ್ಲ. 43:10 ರಲ್ಲಿ, ಜೈಶಂಕರ್ ಅವರು, “ಇದು ಹಿಂದಿನ ರಾತ್ರಿ ಮತ್ತು ನಿಮಗೆ ತಿಳಿದಿದೆ, ಪಾಕಿಸ್ತಾನಿಗಳು ಆ ರಾತ್ರಿ ನಮ್ಮ ಮೇಲೆ ಭಾರಿ ದಾಳಿ ಮಾಡಿದರು” ಎಂದು ಹೇಳಿದ ನಂತರ “ನಂತರ ನಾವು ಬಹಳ ಬೇಗ ಪ್ರತಿಕ್ರಿಯಿಸಿದ್ದೇವೆ. ಮರುದಿನ ಬೆಳಿಗ್ಗೆ, ರುಬಿಯೊ ನನಗೆ ಕರೆ ಮಾಡಿ ಪಾಕಿಸ್ತಾನಿಗಳು ಮಾತನಾಡಲು ಸಿದ್ಧರಿದ್ದಾರೆ ಎಂದು ಹೇಳಿದರು” ಎಂದಿದೆ. ಆದ್ದರಿಂದ ವೈರಲ್ ವೀಡಿಯೋವನ್ನು ಎಐ ಮೂಲಕ ತಿರುಚಲಾಗಿದೆ ಎಂದು ದೃಢಪಡಿಸಲಾಗಿದೆ. ಸಂದರ್ಶನದ ಬಗ್ಗೆ ನ್ಯೂಸ್ ವೀಕ್ ಮತ್ತು ಎಕನಾಮಿಕ್ ಟೈಮ್ಸ್ ವರದಿಗಳು ವೈರಲ್ ವೀಡಿಯೋ ತಿರುಚಲಾಗಿದೆ ಮತ್ತು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸಾಬೀತುಪಡಿಸಿವೆ.
ಮೇ 7, 2025ರಂದು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಡೆದ ದಾಳಿಯಲ್ಲಿ ಐಎಎಫ್ ಮೂರು ರಫೇಲ್ ಗಳು, ಒಂದು ಸುಖೋಯ್ -30 ಎಂಕೆಐ ಮತ್ತು ಒಂದು ಮಿಗ್ -29 ಅನ್ನು ಕಳೆದುಕೊಂಡಿದೆ ಎಂದು ಇಂಡೋನೇಷ್ಯಾದ ಭಾರತೀಯ ರಕ್ಷಣಾ ಸಹಾಯಕ ಕ್ಯಾಪ್ಟನ್ ಶಿವ ಕುಮಾರ್ ಒಪ್ಪಿಕೊಂಡಿದ್ದಾರೆ ಎಂಬ ಮತ್ತೊಂದು ವೈರಲ್ ಸುಳ್ಳು ಹೇಳಿಕೆಯನ್ನೂ ನ್ಯೂಸ್ಚೆಕರ್ ಈಗಾಗಲೇ ತಳ್ಳಿಹಾಕಿದೆ. ಜಕಾರ್ತಾದಲ್ಲಿ ನಡೆದ ಸೆಮಿನಾರ್ ನಲ್ಲಿ ಇಂಡೋನೇಷ್ಯಾದ ರಕ್ಷಣಾ ತಜ್ಞರಾದ ಭಾಷಣಕಾರರು ಈ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ ಎಂದು ನ್ಯೂಸ್ಚೆಕರ್ ಕಂಡುಕೊಂಡಿದೆ.
ಮೇ 7, 2025ರಂದು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ನಿಖರ ಮಿಲಿಟರಿ ದಾಳಿಯಲ್ಲಿ ಭಾರತವು ಮೂರು ರಫೇಲ್ ಫೈಟರ್ ಜೆಟ್ ಗಳನ್ನು ಕಳೆದುಕೊಂಡಿದೆ ಎಂದು ಎಸ್ ಜೈಶಂಕರ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾದ ವೈರಲ್ ವೀಡಿಯೋ ಡೀಪ್ ಫೇಕ್ ಆಗಿದೆ.
Also Read: ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದಿರುವ ವೀಡಿಯೋ ಹಿಂದಿನ ಸತ್ಯವೇನು?
Our Source
Resemble Deepfake Detector
Deepfake-o-Meter
YouTube video By The Newsweek, Dated: July 1, 2025
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
December 13, 2025
Mohammed Zakariya
December 11, 2025
Ishwarachandra B G
December 6, 2025