18 ನೇ ಶತಮಾನದ ಮೈಸೂರು ಸಾಮ್ರಾಜ್ಯದ ಭಾರತೀಯ ದೊರೆ ಟಿಪ್ಪು ಸುಲ್ತಾನನನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ “ಜಿಹಾದಿ” ಎಂದು ಘೋಷಿಸಿದೆ ಎಂದು ಹೇಳುವ ಗ್ರಾಫಿಕ್ ಅನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
“ಟಿಪ್ಪು ಸುಲ್ತಾನ್ ಸಾವಿರಾರು ಹಿಂದೂಗಳನ್ನು ಕಗ್ಗೊಲೆ ಮಾಡಿ, ಅತ್ಯಾಚಾರ ಮಾಡಿ, ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ. ದೇವಾಲಯಗಳನ್ನು ನಾಶಪಡಿಸಿದ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಭಾರತದ ಸ್ವಾತಂತ್ರ್ಯಕ್ಕಾಗಿ ಅಲ್ಲ, ಇಸ್ಲಾಂ ಧರ್ಮಕ್ಕಾಗಿ. ಟಿಪ್ಪು ಒಬ್ಬ ಕ್ರೂರ ಜಿಹಾದಿ, ಸ್ವಾತಂತ್ರ್ಯ ಹೋರಾಟಗಾರನಲ್ಲ” ಎಂದು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಹೇಳಿದ್ದಾರೆ ಎಂದು ವೈರಲ್ ಗ್ರಾಫಿಕ್ ಹೇಳುತ್ತದೆ.


ಪೋಸ್ಟ್ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು , ಇದು ಇಲ್ಲಿಯವರೆಗೆ 226.6K ವೀಕ್ಷಣೆಗಳನ್ನು ಕಂಡಿದೆ.
Also Read: ರೈಲಿನಲ್ಲಿ ಶ್ರೀರಾಮನ ಫೋಟೋ ನಿಜವಾದದ್ದೇ?
Fact Check/Verification
ಸತ್ಯಶೋಧನೆಯ ಸಂದರ್ಭದಲ್ಲಿ, ಕರ್ನಾಟಕ ಹೈಕೋರ್ಟ್ನ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಕರ್ನಾಟಕ ಹೈಕೋರ್ಟ್ನ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಅವರಾಗಿದ್ದಾರೆ ಎಂಬುದನ್ನು ನ್ಯೂಸ್ಚೆಕರ್ ಗಮನಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್ವಿ ಅಂಜಾರಿಯಾ ಅವರು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಬಡ್ತಿ ಪಡೆದ ನಂತರ ಕಚೇರಿಯ ಜವಾಬ್ದಾರಿಯನ್ನು ನ್ಯಾ.ಕಾಮೇಶ್ವರ್ ಅವರು ವಹಿಸಿದ್ದು, ಇತ್ತೀಚೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು ಎಂದೂ ನೋಡಿದ್ದೇವೆ. ಇದಲ್ಲದೆ, ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರು ಹೈಕೋರ್ಟ್ನಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ನಂತರ 2017 ರಲ್ಲಿ ನಿವೃತ್ತರಾದರು ಎಂದು ತಿಳಿದುಬಂದಿದೆ. ಆದ್ದರಿಂದ ಇದು ವೈರಲ್ ಗ್ರಾಫಿಕ್ ಹಳೆಯದಾಗಿದೆ ಎಂಬುದನ್ನು ಸೂಚಿಸುತ್ತದೆ.
ಅನಂತರ ನಾವು “Justice Subhro Kamal Mukherjee Tipu Sultan” ಎಂಬ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಇದು ನವೆಂಬರ್ 2, 2016 ರ ಇಂಡಿಯನ್ ಎಕ್ಸ್ಪ್ರೆಸ್ ವರದಿಗೆ ನಮ್ಮನ್ನು ಕರೆದೊಯ್ಯಿತು. ಇದರಲ್ಲಿ ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಹಿಂದಿನ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದೆ. ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಆದರೆ ಅವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹೋರಾಡಿದ ರಾಜ ಎಂದು ಗಮನಿಸಿದೆ. “ಟಿಪ್ಪು ಜಯಂತಿಯನ್ನು ಆಚರಿಸುವ ಹಿಂದಿನ ತರ್ಕವೇನು? ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಆದರೆ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ವಿರೋಧಿಗಳ ವಿರುದ್ಧ ಹೋರಾಡಿದ ರಾಜ” ಎಂದು ವಿಭಾಗೀಯ ಪೀಠದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ, ದಕ್ಷಿಣ ಕೊಡಗು ಮೂಲದ ಕೆ.ಪಿ. ಮಂಜುನಾಥ ಅವರು ಟಿಪ್ಪು ಜಯಂತಿಯನ್ನು ಆಚರಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ. ನವೆಂಬರ್ 3, 2016 ರ ಇದೇ ರೀತಿಯ ಡೆಕ್ಕನ್ ಹೆರಾಲ್ಡ್ ವರದಿಯನ್ನು ಇಲ್ಲಿ ನೋಡಬಹುದು .
ಆದಾಗ್ಯೂ, ಆ ಯಾವುದೇ ವರದಿಗಳು ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರು ಹೇಳಿದ್ದಾರೆ ಎನ್ನಲಾದ, ವೈರಲ್ ಗ್ರಾಫಿಕ್ ನಲ್ಲಿ ಬರೆದಿರುವಂತೆ “ಟಿಪ್ಪು ಸುಲ್ತಾನ್ ಸಾವಿರಾರು ಹಿಂದೂಗಳನ್ನು ಕಗ್ಗೊಲೆ ಮಾಡಿ ಅತ್ಯಾಚಾರ ಮಾಡಿದ, ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ. ದೇವಾಲಯಗಳನ್ನು ನಾಶಪಡಿಸಿದನು… ಟಿಪ್ಪು ಒಬ್ಬ ಕ್ರೂರ ಜಿಹಾದಿ, ಸ್ವಾತಂತ್ರ್ಯ ಹೋರಾಟಗಾರನಲ್ಲ” ಎನ್ನುವುದನ್ನು ಉಲ್ಲೇಖಿಸಿಲ್ಲ.
ಮತ್ತಷ್ಟು ಹುಡುಕಾಟ ನಡೆಸಿದಾಗ , ಅರ್ಜಿಯನ್ನು ವಿಲೇವಾರಿ ಮಾಡಿರು ನವೆಂಬರ್ 3, 2016 ರ ನ್ಯಾಯಾಲಯದ ಆದೇಶ ವನ್ನು ಗಮನಿಸಿದ್ದೇವೆ. ಟಿಪ್ಪು ಜಯಂತಿ ಆಚರಿಸುವ ನಿರ್ಧಾರವು ಸರ್ಕಾರದ ನೀತಿ ವಿಷಯವಾಗಿದೆ ಮತ್ತು ಅರ್ಜಿದಾರರು ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಯ ವಿರುದ್ಧ ಎತ್ತಿರುವ ಆಕ್ಷೇಪಣೆಗಳನ್ನು ಪರಿಗಣಿಸಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪ್ರಾತಿನಿಧ್ಯ ನೀಡುವಂತೆ ನಿರ್ದೇಶಿಸಲಾಗಿದೆ. ಆದರೆ ಆದೇಶದ ಯಾವುದೇ ಹಂತದಲ್ಲಿಯೂ ನ್ಯಾಯಾಲಯವು ಟಿಪ್ಪು ಸುಲ್ತಾನ್ ಹಿಂದೂಗಳನ್ನು ಹತ್ಯಾಕಾಂಡ, ಅತ್ಯಾಚಾರ ಮತ್ತು ಇಸ್ಲಾಂಗೆ ಮತಾಂತರಿಸಿದ “ಜಿಹಾದಿ” ಎಂದು ಹೇಳಿಲ್ಲ, ಇದು ವೈರಲ್ ಗ್ರಾಫಿಕ್ಸ್ ನಲ್ಲಿ ನ್ಯಾಯಮೂರ್ತಿ ಮುಖರ್ಜಿಯವರ ಹೇಳಿಕೆಯ ತಪ್ಪು ನಿರೂಪಣೆಯಾಗಿದೆ ಎಂಬುದನ್ನು ಸಾಬೀತು ಪಡಿಸುತ್ತದೆ.
“ಟಿಪ್ಪು ಜಯಂತಿಯನ್ನು ಆಚರಿಸುವುದರ ಹಿಂದಿನ ನಿರ್ಧಾರದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ ಒಂದು ದಿನದ ನಂತರ ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ನೇತೃತ್ವದ ದ್ವಿಸದಸ್ಯ ವಿಭಾಗೀಯ ಪೀಠವು ಈ ರೀತಿ ಆದೇಶ ನೀಡಿದೆ, ಅವರು ಸ್ವಾತಂತ್ರ್ಯ ಹೋರಾಟಗಾರನಲ್ಲ, ಬದಲಾಗಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹೋರಾಡಿದ ರಾಜ ಎಂದು ಹೇಳಿತು” ಎಂದು ನವೆಂಬರ್ 3, 2016 ರ ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ತಿಳಿಸಲಾಗಿದೆ. ಕೊಡಗು ಜಿಲ್ಲೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕೋಮು ಉದ್ವಿಗ್ನತೆ ಹೆಚ್ಚಾಗುವ ಭೀತಿಯ ನಡುವೆ ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಿಸುವುದರ ಹಿಂದಿನ ತರ್ಕವನ್ನು ನ್ಯಾಯಮೂರ್ತಿ ಮುಖರ್ಜಿ ಪ್ರಶ್ನಿಸಿದ್ದಾರೆ. 2015 ರ ಕಾರ್ಯಕ್ರಮವು ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದ ನಂತರ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿತ್ತು ಎಂದು ಅವರು ಗಮನಿಸಿದ್ದಾರೆ.
ಟಿಪ್ಪು ಜಯಂತಿ ವಿವಾದ
2015 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಿಪ್ಪುವಿನ 266 ನೇ ಜನ್ಮ ದಿನಾಚರಣೆಯನ್ನು ಸ್ಮರಿಸಲು ಆಚರಣೆಯನ್ನು ಪ್ರಾರಂಭಿಸಿದಾಗಿನಿಂದ ವಿವಾದದಲ್ಲಿ ಸಿಲುಕಿಕೊಂಡಿತ್ತು . ಟಿಪ್ಪು ಸುಲ್ತಾನ್ ಅವರನ್ನು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿ ಮಡಿದ ಸ್ವಾತಂತ್ರ್ಯ ಹೋರಾಟಗಾರ ಎಂದು ಕಾಂಗ್ರೆಸ್ ಉಲ್ಲೇಖಿಸಿದ್ದು, ಇದೇ ವೇಳೆ ಬಿಜೆಪಿ ಹಿಂದೂ ವಿರೋಧಿ ನಿರಂಕುಶಾಧಿಕಾರಿ ಎಂದು ಕರೆದಿತ್ತು. ಈ ವಿಚಾರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಟಿಪ್ಪು ಜಯಂತಿ ಆಚರಣೆಯನ್ನು ವಾರ್ಷಿಕ ಆಚರಣೆಯನ್ನಾಗಿ ಮಾಡಲಾಯಿತು. ಜುಲೈ 2019 ರಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದಾಗ, ಟಿಪ್ಪು ಜಯಂತಿಯನ್ನು ರದ್ದುಗೊಳಿಸಲಾಯಿತು.
Conclusion
ಕರ್ನಾಟಕ ಹೈಕೋರ್ಟ್ ಟಿಪ್ಪು ಸುಲ್ತಾನನನ್ನು “ಜಿಹಾದಿ” ಎಂದು ಘೋಷಿಸಿದೆ ಎಂದು ಹೇಳುವ ವೈರಲ್ ಗ್ರಾಫಿಕ್ಸ್ ಹೇಳಿಕೆಯು 2016 ರ ಕರ್ನಾಟಕ ಹೈಕೋರ್ಟ್ ಅವಲೋಕನವನ್ನು ತಿರುಚಿರುವಂಥಾದ್ದು ಮತ್ತು ಇದು ಕಟ್ಟುಕಥೆ ಎಂದು ಕಂಡುಬಂದಿದೆ.
Our Sources
Report By Indian Express, Dated: November 3, 2016
Report By Deccan Herald, Dated: November 3, 2016
Karnataka HC Order, Dated: November 3, 2016
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)