Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಚಲನ್ ನೀಡಿದ ಮುಂಬೈ ಟ್ರಾಫಿಕ್ ಪೊಲೀಸರಿಗೆ ಮುಸ್ಲಿಮರು ಥಳಿಸಿದರು
ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಚಲನ್ ನೀಡಿದ ಪೊಲೀಸರಿಗೆ ಮುಸ್ಲಿಂ ಗುಂಪು ಥಳಿಸಿದ ವಿದ್ಯಮಾನ 2015ರಲ್ಲಿ ದಿಲ್ಲಿಯಲ್ಲಿ ನಡೆದಿದ್ದಾಗಿದೆ. ಇದು ಮುಂಬೈನಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನವಲ್ಲ
ಚಲನ್ ನೀಡಿದ ಮುಂಬೈ ಟ್ರಾಫಿಕ್ ಪೊಲೀಸರಿಗೆ ಮುಸ್ಲಿಮರು ಥಳಿಸಿದರು ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಇಂದು ಮುಂಬೈನಲ್ಲಿ @ ಪೊಲೀಸರು ಚಲನ್ ನೀಡಿದಾಗ, ಮುಸ್ಲಿಮರು ಅವರನ್ನು ಥಳಿಸಿದರು. ಇದು ಕಾನೂನಿಗೆ ಸವಾಲಾಗಿದೆ. ಭವಿಷ್ಯದಲ್ಲಿ ಭಾರತದಲ್ಲಿ ಏನಾಗುತ್ತದೆ ಎಂಬುದನ್ನು ಈ ವೀಡಿಯೊ ಹೇಳುತ್ತದೆ. ದೇಶವನ್ನು ಮುನ್ನಡೆಸುವವರು ಯಾರು? ಮತ್ತು ಪ್ರತಿಯೊಬ್ಬರ ಭವಿಷ್ಯ ಹೇಗಿರುತ್ತದೆ? ಕಹಿ ಸತ್ಯವೆಂದರೆ ದೇಶವು ಒಳಗಿನಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಿದೆ. ಸ್ನೇಹಿತರೇ, ಮಡಚಿದ ಕೈಗಳಿಂದ, ಈ ವೀಡಿಯೊವನ್ನು ಪ್ರತಿ ಗುಂಪಿಗೆ ಕಳುಹಿಸಲು ನಾನು ನಿಮ್ಮಗೆ ಕೈಗಳನ್ನು ಮಡಚಿ ವಿನಂತಿಸುತ್ತೇನೆ. ಇದು ನಾಳೆ ಸಂಜೆಯೊಳಗೆ ಪ್ರತಿ ಸುದ್ದಿ ವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕು” ಎಂದಿದೆ.
ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, 2015ರ ದಿಲ್ಲಿಯ ಪ್ರಕರಣವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
Also Read: ಬ್ರಿಟಿಷ್ ಪೈಲಟ್ ವಿಮಾನದಲ್ಲಿ ಮಹಾಕುಂಭ ಮೇಳದ ಮಹತ್ವ ಹೇಳಿದ್ದಾರೆ ಎನ್ನುವುದು ಸುಳ್ಳು!
ಸತ್ಯಶೋಧನೆಗಾಗಿ ನಾವು ವೈರಲ್ ಆದ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ ಈ ವೇಳೆ ಫಲಿತಾಂಶ ಲಭ್ಯವಾಗಿದ್ದು, ಇದು ಹಳೆಯ ಪ್ರಕರಣ ಎಂಬುದನ್ನು ಹೇಳಿದೆ.
ಜುಲೈ 13, 2015ರ ಝೀ ನ್ಯೂಸ್ ಇಂಡಿಯಾ ವರದಿ ಪ್ರಕಾರ, “ರಸ್ತೆ ಉಲ್ಲಂಘನೆಯ ಮತ್ತೊಂದು ಘಟನೆಯಲ್ಲಿ, ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ಸೋಮವಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ಆರೋಪದ ಮೇಲೆ ಇಬ್ಬರು ಕಾನ್ ಸ್ಟೇಬಲ್ ಗಳಿಗೆ ನಿರ್ದಯವಾಗಿ ಥಳಿಸಲಾಗಿದೆ ಎಂದು ವರದಿಯಾಗಿದೆ. ಈ ಕೃತ್ಯವನ್ನು ಪ್ರೇಕ್ಷಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದರು. ವೀಡಿಯೋದಲ್ಲಿ, ಒಬ್ಬ ಪೊಲೀಸ್ ಪೇದೆ ರಸ್ತೆಯಲ್ಲಿ ಮಲಗಿರುವುದನ್ನು ಕಾಣಬಹುದು, ಆದರೆ ಪುರುಷರ ಗುಂಪೊಂದು ಆತನನ್ನು ಒದ್ದು ಹೊಡೆಯುತ್ತಿದೆ. ಇಬ್ಬರೂ ಪೊಲೀಸರಿಗೂ ಗುಂಪು ಹಲವಾರು ಬಾರಿ ಕಪಾಳಮೋಕ್ಷ ಮಾಡಿದೆ” ಎಂದಿದೆ.
ಜುಲೈ 14, 2015ರಂದು ಎನ್ ಡಿಟಿವಿ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಲಾದ ವೀಡಿಯೋದಲ್ಲಿ ಟ್ರಾಫಿಕ್ ಪೊಲೀಸರನ್ನು ಗುಂಪು ಥಳಿಸಿತು ಎಂದಿದೆ. ಇದರ ವಿವರಣೆಯಲ್ಲಿ ಈಶಾನ್ಯ ದೆಹಲಿಯ ಗೋಕುಲಪುರಿಯಲ್ಲಿ ಹೆಲ್ಮೆಟ್ ಧರಿಸದ ಮತ್ತು ಟ್ರಿಪಲ್ ರೈಡ್ ಮಾಡಿದ್ದಕ್ಕಾಗಿ ಬೈಕ್ನಲ್ಲಿ ಬಂದ ಮೂವರನ್ನು ಕೆಳಗಿಳಿಸಿ ಇಬ್ಬರು ಟ್ರಾಫಿಕ್ ಪೊಲೀಸ್ ಪೊಲೀಸರನ್ನು ಜನಸಮೂಹ ಥಳಿಸಿದೆ ಎಂದಿದೆ.
ಜುಲೈ 14, 2015ರ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ “ಸೋಮವಾರ ಬೆಳಿಗ್ಗೆ ಈಶಾನ್ಯ ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕಾಗಿ ದಂಡ ಪಾವತಿಸುವಂತೆ ಪೊಲೀಸರು ಕೇಳಿದಾಗ, ಅವರ ಮೇಲೆ ಹಲ್ಲೆ ನಡೆಸಿದ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಸ್ಥಳೀಯರೊಬ್ಬರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಶಹನವಾಜ್ (22), ಅವರ ಸಹೋದರ ಮತ್ತು ಅವರ ತಂದೆ ಸಗೀರ್ ಅಹ್ಮದ್ (65) ಅವರನ್ನು ದೈಹಿಕ ಹಲ್ಲೆ ಮತ್ತು ಸಾರ್ವಜನಿಕ ಸೇವೆಗೆ ಅಡ್ಡಿ ಆರೋಪದ ಮೇಲೆ ಬಂಧಿಸಿದ್ದೇವೆ. ಮೂವರು, ಇತರ ಕೆಲವರೊಂದಿಗೆ ಸೇರಿ, ಸಂಚಾರ ಪೊಲೀಸರಾದ ಮನೋಜ್ ಮತ್ತು ಜೈ ಭಗವಾನ್ ಅವರನ್ನು ಥಳಿಸಿದ್ದಾರೆ. ಸ್ಥಳೀಯರೊಬ್ಬರು ಈ ಘಟನೆಯನ್ನು ತಮ್ಮ ಸೆಲ್ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.” ಎಂದಿದೆ.
ಜುಲೈ 14, 2015ರ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ, “ಸೋಮವಾರ ಬೆಳಿಗ್ಗೆ ಈಶಾನ್ಯ ದೆಹಲಿಯಲ್ಲಿ ಟ್ರಾಫಿಕ್ ಸಿಗ್ನಲ್ ದಾಟಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ಬೈಕ್ನಲ್ಲಿದ್ದ ಇಬ್ಬರು ಯುವಕರನ್ನು ನಿಲ್ಲಿಸಿದ ನಂತರ, ಗುಂಪೊಂದು ಇಬ್ಬರು ಸಂಚಾರ ಪೊಲೀಸರನ್ನು ಥಳಿಸಿದೆ ಚಲನ್ ಪಾವತಿಸಲು ಕೇಳಿದಾಗ, ಯುವಕರು ತಮ್ಮ ಸಂಬಂಧಿಕರಿಗೆ ಕರೆ ಮಾಡಿದ್ದಾರೆ ಎಂದು ಹೇಳಲಾಗಿದೆ, ಅವರು ಶೀಘ್ರದಲ್ಲೇ ಸ್ಥಳದಲ್ಲಿಜಮಾಯಿಸಿ ಹೆಡ್ ಕಾನ್ಸ್ಟೆಬಲ್ ಜೈ ಭಗವಾನ್ (55) ಮತ್ತು ಕಾನ್ಸ್ಟೆಬಲ್ ಮನೋಜ್ ಕುಮಾರ್ (25) ಅವರನ್ನು ನೆಲಕ್ಕೆ ಇಳಿಸಿದ ನಂತರ ಗುದ್ದಿ ಒದೆದಿದ್ದಾರೆ. ಈ ವೀಡಿಯೋವನ್ನು ದಾರಿಹೋಕರು ರೆಕಾರ್ಡ್ ಮಾಡಿದ್ದಾರೆ” ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಸಾಕ್ಷ್ಯಗಳ ಪ್ರಕಾರ, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಚಲನ್ ನೀಡಿದ ಪೊಲೀಸರಿಗೆ ಮುಸ್ಲಿಂ ಗುಂಪು ಥಳಿಸಿದ ವಿದ್ಯಮಾನ 2015ರಲ್ಲಿ ದಿಲ್ಲಿಯಲ್ಲಿ ನಡೆದಿದ್ದಾಗಿದೆ. ಇದು ಮುಂಬೈನಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನವಲ್ಲ ಎಂದು ಗೊತ್ತಾಗಿದೆ.
Also Read: ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: ಅಶ್ವಿನಿ ವೈಷ್ಣವ್ ಭಾವುಕರಾದ ಹಳೆಯ ವೀಡಿಯೋ ವೈರಲ್
Our Sources
Report By Zee news India, Dated: July 13, 2015
Report By Indian Express, Dated: July 14, 2015
Report By Times of India, Dated: July 14, 2015
YouTube Video By NDTV, Dated: July 14, 2015
Shaminder Singh
May 15, 2025
Ishwarachandra B G
April 16, 2025
Ishwarachandra B G
April 16, 2025