Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮುಸ್ಲಿಂ ಮಹಿಳೆ ಮಗುವಿನಿಂದ ಉಚ್ಚೆಹೊಯ್ಯಿಸಿ, ಆಹಾರ ಗ್ರಾಹಕರಿಗೆ ಬಡಿಸಿದ್ದಾಳೆಂದ ವೀಡಿಯೋ
ಈ ವೈರಲ್ ವೀಡಿಯೋ ಮಲೇಷ್ಯಾದಲ್ಲಿ 2022ರಲ್ಲಿ ನಡೆದ ಘಟನೆಯಾಗಿದ್ದು, ಮಗು ಅಡುಗೆ ಕೋಣೆಯಲ್ಲಿ ಮೂತ್ರ ಮಾಡಿದ ಪ್ರಕರಣದ ನಂತರ ಅದನ್ನು ಮುಚ್ಚಲಾಗಿತ್ತು
ಆಹಾರ ತಯಾರಿಸುವ ಅಂಗಡಿಯೊಂದರಲ್ಲಿ ಮುಸ್ಲಿಂ ಮಹಿಳೆ ಬಾಲಕನಿಂದ ಉಚ್ಚೆಹೊಯ್ಯಿಸಿ, ಆ ಆಹಾರವನ್ನು ಗ್ರಾಹಕರಿಗೆ ಬಡಿಸುತ್ತಿದ್ದಾಳೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
1.05 ನಿಮಿಷದ ಈ ವೀಡಿಯೋದಲ್ಲಿ ಬಾಲಕನೊಬ್ಬ ಅಡುಗೆ ಕೋಣೆಯಲ್ಲಿ ಮೂತ್ರ ಮಾಡುತ್ತಾನೆ. ಅಲ್ಲೇ ಇದ್ದ ಅಡುಗೆಯಾಕೆ ಅದು ತಪ್ಪು ಎಂದು ಭಾವಿಸದೇ ಅಲ್ಲೇ ಮೂತ್ರ ಮಾಡಲು ಬಿಟ್ಟು ಬಳಿ ಬಾಲಕನ ಮರ್ಮಾಂಗವನ್ನು ಮುಟ್ಟಿದ್ದೂ ಅಲ್ಲದೇ ಅದೇ ಕೈಯಲ್ಲಿ ಗ್ರಾಹಕರಿಗೆ ನೀಡುವ ಪ್ಲೇಟ್ ಗೆ ಆಹಾರ ಹಾಕುವುದನ್ನು ಕಾಣಬಹುದು.
ಫೇಸ್ಬುಕ್ ನಲ್ಲಿ ಈ ವೈರಲ್ ವೀಡಿಯೋ ಕಂಡುಬಂದಿದ್ದು, “ನೋಡಿ ಹೋಟೆಲ್ ನಲ್ಲಿ ತನ್ನ ಮಗನಿಂದ ಉಚ್ಚೆ ಹೊಯ್ಸಿ ಅದನ್ನ ಊಟದಲ್ಲಿ ಬೆರೆಸಿ ಗ್ರಾಹಕರಿಗೆ ತಿನ್ನಿಸುತ್ತಿರುವ ಮುಲ್ಲಿ ಹೋಗಿ ಹಿಂದುಗಳೇ ತಿಂದು ಬನ್ನಿ” ಎಂದು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಮಲೇಷ್ಯಾದಲ್ಲಿ 2022ರಲ್ಲಿ ನಡೆದ ಘಟನೆಯಾಗಿದೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಕಂಡುಬಂದ ಫಲಿತಾಂಶಗಳು ಇದು ಮಲೇಷ್ಯಾದ ವೀಡಿಯೋ ಎಂದು ಹೇಳಿವೆ.
ಡಿಸೆಂಬರ್ 16, 2022ರ ಮಲಯ್ ಮೇಲ್ ವರದಿಯ ಪ್ರಕಾರ, “ಅಡುಗೆ ಮನೆಯಲ್ಲಿ ಮಗು ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ: ಜೋಹೋರ್ ಆರೋಗ್ಯ ಅಧಿಕಾರಿಗಳು ಕೋಟಾ ಟಿಂಗಿ ರೆಸ್ಟೋರೆಂಟ್ ಅನ್ನು ಮುಚ್ಚಿದರು. ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ನೈರ್ಮಲ್ಯದ ಕೊರತೆಯಿರುವ ಅಡುಗೆ ಪದ್ಧತಿಗಳ ವೀಡಿಯೊ ವೈರಲ್ ಆದ ನಂತರ, ಜೋಹರ್ ಆರೋಗ್ಯ ಅಧಿಕಾರಿಗಳು ಕೋಟಾ ಟಿಂಗಿಯಲ್ಲಿರುವ ರೆಸ್ಟೋರೆಂಟ್ ಅನ್ನು ಹಲವು ಉಲ್ಲಂಘನೆಗಳ ಕಾರಣ ಇಂದು ಮುಚ್ಚಲು ಆದೇಶಿಸಿದರು. ಕೋಟಾ ಟಿಂಗಿಯ ಹೆರಿಟೇಜ್ ಮಾಲ್ನಲ್ಲಿರುವ ಈ ರೆಸ್ಟೋರೆಂಟ್ ಅನ್ನು ವಿದೇಶಿಯರೇ ನಿರ್ವಹಿಸುತ್ತಿದ್ದು, ಆಹಾರ ನಿರ್ವಹಣೆಗೆ ಅಗತ್ಯವಾದ ಪ್ರಮಾಣೀಕರಣವನ್ನು ಹೊಂದಿರಲಿಲ್ಲ. ಮುಚ್ಚುವ ಆದೇಶವು ಎರಡು ವಾರಗಳ ಅವಧಿಗೆ ಇರುತ್ತದೆ ಎಂದು ತಿಳಿದುಬಂದಿದೆ.” ಎಂದಿದೆ.
ಡಿಸೆಂಬರ್ 16, 2022ರಂದು ಓರಿಂಯಂಟಲ್ ಡೈಲಿ ಪ್ರಕಟಿಸಿದ ವರದಿಯಲ್ಲಿ “ಆಹಾರ ಅಂಗಡಿಯ ಅಡುಗೆಮನೆಯಲ್ಲಿ ಒಬ್ಬ ಹುಡುಗ ಮೂತ್ರ ವಿಸರ್ಜನೆ ಮಾಡಿದ. ಅಡುಗೆಯವಳು ತನ್ನ ಕೈಗಳಿಂದ ಹುಡುಗನ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಿದಳು ಮತ್ತು ಅದೇ ಕೈಗಳನ್ನು ತೊಳೆಯದೆ ಆಹಾರವನ್ನು ತಟ್ಟೆಯಲ್ಲಿ ಇಟ್ಟಳು. ನೆಟಿಜನ್ಗಳು ಘಟನೆಯ ಚಿತ್ರಗಳನ್ನು ಚಿತ್ರೀಕರಿಸಿದ್ದು ಎಷ್ಟು ಅಸಹ್ಯಕರ ಎಂದು ಉದ್ಗರಿಸಿದ್ದಾರೆ. ಸೋಮವಾರ ಇಝ್ಹೈಕಲ್ ಎಂಬ ಟಿಕ್ಟಾಕ್ ಬಳಕೆದಾರರು 1 ನಿಮಿಷ ಮತ್ತು 24 ಸೆಕೆಂಡುಗಳ ಕಿರು ವೀಡಿಯೋ ಚಿತ್ರೀಕರಿಸಿದ್ದು, ಮೇಲಿನ ಘಟನೆ ಕೋಟಾ ಟಿಂಗಿಯಲ್ಲಿರುವ H&M ಬಟ್ಟೆ ಅಂಗಡಿಯಲ್ಲಿರುವ ಆಹಾರ ಮಳಿಗೆಯಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ.” ಎಂದಿದೆ. (ಚೀನಿ ಭಾಷೆಯಿಂದ ಭಾಷಾಂತರಿಸಲಾಗಿದೆ)
ಡಿಸೆಂಬರ್ 17, 2022ರ ವರ್ಲ್ಡ್ ಆಫ್ ಬಝ್ ವರದಿಯ ಪ್ರಕಾರ, “ಜೋಹರ್ನ ಕೋಟಾ ಟಿಂಗಿಯಲ್ಲಿರುವ ಶಾಪಿಂಗ್ ಮಾಲ್ನಲ್ಲಿರುವ ರೆಸ್ಟೋರೆಂಟ್ ಅನ್ನು ಜೋಹರ್ ಆರೋಗ್ಯ ಪ್ರಾಧಿಕಾರವು ಬಲವಂತವಾಗಿ ಮುಚ್ಚಿಸಿದೆ. ಅಲ್ಲಿ ಕೆಲಸಗಾರನ ಮಗು ಮೂತ್ರ ವಿಸರ್ಜನೆ ಮಾಡುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ವೀಡಿಯೋದಲ್ಲಿ, ಕೆಲಸಗಾರ್ತಿ ಅಡುಗೆ ಮಾಡುತ್ತಾ ತನ್ನ ಮಗನನ್ನು ‘ನಿರ್ವಹಿಸುತ್ತಿರುವ’ ದೃಶ್ಯವು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿತು. ಜೋಹೋರ್ ಆರೋಗ್ಯ ಮತ್ತು ಏಕತಾ ಸಮಿತಿಯ ಅಧ್ಯಕ್ಷ ಲಿಂಗ್ ಟಿಯಾನ್ ಸೂನ್ ಅವರ ಪ್ರಕಾರ, ಕೋಟಾ ಟಿಂಗ್ಗಿಯಲ್ಲಿರುವ ಔಟ್ಲೆಟ್ನಲ್ಲಿ ಶುಚಿತ್ವದ ಮಟ್ಟವು ತೃಪ್ತಿಕರವಾಗಿಲ್ಲ ಎಂದು ತಪಾಸಣೆಯಲ್ಲಿ ಕಂಡುಬಂದಿದೆ.” ಎಂದಿದೆ.
ವೈರಲ್ ವೀಡಿಯೋವನ್ನು ಹೋಲುವ ವೀಡಿಯೋ ಕೂಡ ವರ್ಲ್ಡ್ ಆಫ್ ಬಝ್ ವರದಿಯಲ್ಲಿರುವುದನ್ನು ನಾವು ನೋಡಿದ್ದೇವೆ.
ಇದರೊಂದಿಗೆ ಈ ವರದಿಗಳಲ್ಲಿ ಹೇಳಿರುವ ಜೋಹೊರ್ ಬಾಹ್ರು ಎಂಬ ಪ್ರದೇಶ ಮಲೇಷ್ಯಾದ ಒಂದು ನಗರ ಎಂದು ಗೊತ್ತಾಗಿದೆ.
ಈ ಸಾಕ್ಷ್ಯಾಧಾರಗಳ ಪ್ರಕಾರ, 2022ರಲ್ಲಿ ಮಲೇಷ್ಯಾದಲ್ಲಿ ನಡೆದ ಘಟನೆ ಇದಾಗಿದ್ದು, ಈ ಆಹಾರ ಕೇಂದ್ರವನ್ನು ಮುಚ್ಚಿಸಲಾಗಿದೆ ಎಂದು ಕಂಡುಬಂದಿದೆ. ಮತ್ತು ಇದು ಭಾರತದ್ದಲ್ಲ ಎಂದು ಗೊತ್ತಾಗಿದೆ.
Also Read: ಉಕ್ರೇನ್ನ ಡ್ರೋನ್ ದಾಳಿಯ ನಂತರ ರಷ್ಯಾದ ವಾಯುನೆಲೆ ನಾಶ ಎಂದ ವೈರಲ್ ಫೋಟೋ, ಎಐ ಸೃಷ್ಟಿ
Our Sources
Report By Malaymail, Dated: December 16, 2022
Report By orientaldaily, Dated: December 16, 2022
Report By worldofbuzz, Dated: December 17, 2022
Runjay Kumar
April 22, 2025
Ishwarachandra B G
April 16, 2025
Ishwarachandra B G
April 16, 2025