Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸಿಯಾಲ್ ಕೋಟ್ ಮೇಲೆ ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆ
ಸಿಯಾಲ್ ಕೋಟ್ ಮೇಲೆ ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆ ಎಂದ ಈ ವೀಡಿಯೋ ಮುಂಬೈನ ಧಾರಾವಿಯದ್ದಾಗಿದೆ. ಸಿಲಿಂಡರ್ ಇದ್ದ ಟ್ರಕ್ ಗೆ ಬೆಂಕಿ ಬಿದ್ದು ಸಂಭವಿಸಿದ ಸ್ಫೋಟದ ವೀಡಿಯೋ ಇದಾಗಿದೆ
ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆದ ಬೆನ್ನಲ್ಲೇ, ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತದ ದಾಳಿ ಮುಂದುವರಿದಿದೆ ಎಂಬಂತೆ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರದಾಡಿದೆ.
ಪಾಕಿಸ್ತಾನದ ಸಿಯಾಲ್ ಕೋಟ್ ಮೇಲೆ ಭಾರತ ದಾಳಿ ನಡೆಸಿದೆ ಎಂದು ಫೇಸ್ ಬುಕ್ ನಲ್ಲಿ ಹೇಳಿಕೆ ಹಂಚಿಕೊಳ್ಳಲಾಗಿದೆ. “ಸಿಯಾಲ್ಕೋಟ್ನಲ್ಲಿ ಪ್ರಾರಂಭವಾಗಿದೆ. ಸಿಯಾಲ್ಕೋಟ್ನಲ್ಲಿರುವ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ಬೃಹತ್ ದಾಳಿ ನಡೆಸಿತು.” ಎಂದಿದೆ. ಈ ಹೇಳಿಕೆಯೊಂದಿಗೆ 22 ಸೆಕೆಂಡ್ ಗಳ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ನ್ಯೂಸ್ಚೆಕರ್ ಇದರ ಬಗ್ಗೆ ಸತ್ಯಶೋಧನೆ ನಡೆಸಿದ್ದು ಇದು ಸಿಯಾಲ್ ಕೋಟ್ ನಲ್ಲಿ ಭಾರತ ನಡೆಸಿದ ದಾಳಿ ಎನ್ನುವುದು ಸುಳ್ಳು ಎಂದು ಕಂಡುಕೊಂಡಿದೆ.
Also Read: ಆಪರೇಷನ್ ಸಿಂದೂರ: ಇಸ್ರೇಲಿ ದಾಳಿಯ ಹಳೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್
ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ.
ವೀಡಿಯೋದಲ್ಲಿ ನಾವು ಕೆಂಪು ಬಣ್ಣದ ಕಾರೊಂದನ್ನು ಕಂಡಿದ್ದು, ಇದು ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ Jeep Compass ಮಾದರಿಯ ಕಾರು ಎಂದು ಕಂಡಿದ್ದೇವೆ.

ಜೊತೆಗೆ XThutdammgurl ಎಂದು ವಾಟರ್ ಮಾರ್ಕ್ ನಲ್ಲಿ ಬರೆದಿರುವುದನ್ನು ನೋಡಿದ್ದೇವೆ.

ಆ ಪ್ರಕಾರ ಎಕ್ಸ್ ನಲ್ಲಿ ನಾವು ಹುಡುಕಾಡಿದ್ದು, @Thatdammgurl ಎಂಬ ಖಾತೆ ಲಭ್ಯವಾಗಿದೆ. ಇದರಲ್ಲಿ ಬಳಕೆದಾರರು ವೈರಲ್ ಆಗಿರುವ ಅದೇ ವೀಡಿಯೋವನ್ನು ಪೋಸ್ಟ್ ಮಾಡಿದ್ದು, “ಪೂಂಛ್ ಕೆ ಬದಲಿಯಾಗಿ ಸಿಯಾಲ್ ಕೋಟ್ ನಲ್ಲಿ ಜೈ ಹಿಂದಿ “ಖಚಿತಪಡಿಸಿದ ವೀಡಿಯೋ” ಎಂದು ಬರೆದಿರುವುದನ್ನು ಗಮನಿಸಿದ್ದೇವೆ.

ಆ ಬಳಿಕ ನಾವು ಗೂಗಲ್ ನಲ್ಲಿ ವೀಡಿಯೋದ ಕೀಫ್ರೇಮಗಳನ್ನು ಪಡೆದು ಅದನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ, expressnewshindi4u ಎಂಬ ಇನ್ಸ್ಟಾ ಗ್ರಾಂ ಪೇಜ್ ನಲ್ಲಿ ಮಾರ್ಚ್ 24, 2024ರಂದು ಮಾಡಲಾದ ಪೋಸ್ಟ್ ನಲ್ಲಿ ಧಾರಾವಿಯ ಪಿಎನ್ಜಿಪಿ ಕಾಲೊನಿ, ಸಿಯೋನ್ ಧಾರಾವಿ ಲಿಂಕ್ ರೋಡ್ ಲ್ಲಿ ಟ್ರಕ್ ನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ವಿವರಣೆಯಲ್ಲಿ ಬರೆದಿರುವುದನ್ನು ಗಮನಿಸಿದ್ದೇವೆ.

ನಾವು ಇನ್ನಷ್ಟು ಶೋಧ ನಡೆಸಿದಾಗ, ಮಾರ್ಚ್ 25, 2025ರಂದು ನ್ಯೂಸ್ 9 ಲೈವ್ ಯೂಟ್ಯೂಬ್ ನಲ್ಲಿ ಮಾಡಿರುವ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಮುಂಬೈನ ಸಿಯಾನ್-ಧಾರವಿ ಲಿಂಕ್ ರಸ್ತೆಯಲ್ಲಿರುವ ನೇಚರ್ ಪಾರ್ಕ್, ಪಿಎನ್ಜಿಪಿ ಕಾಲೋನಿಯಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಟ್ರಕ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸೋಮವಾರ ಕಾರೊಂದಕ್ಕೆ ಬೆಂಕಿ ಹೊತ್ತಿಕೊಂಡ ನಂತರ ಈ ಘಟನೆ ಸಂಭವಿಸಿದ್ದು, ಹತ್ತಿರದ ಟ್ರಕ್ಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದಾರೆ. ನೋ-ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಶಾಸಕಿ ಜ್ಯೋತಿ ಗಾಯಕ್ವಾಡ್ ಹೇಳಿದ್ದಾರೆ. ಅದೃಷ್ಟವಶಾತ್, ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದಿದೆ. ಈ ವೀಡಿಯೋವನ್ನು ನೋಡಿದಾಗ, ಅದು ವೈರಲ್ ವೀಡಿಯೋ ಜೊತೆ ಸಾಮ್ಯತೆ ಇರುವುದು ಕಂಡುಬಂದಿದೆ.
ಮಾರ್ಚ್ 24, 2025ರ ಸಿಎನ್ಎನ್ ನ್ಯೂಸ್ 18 ವರದಿಯಲ್ಲೂ ಧಾರಾವಿಯ ನೇಚರ್ ಪಾರ್ಕ್ ಬಳಿ ಟ್ರಕ್ ನಲ್ಲಿದ್ದ ಎಲ್ ಪಿಜಿ ಸಿಲಿಂಡರ್ ಗಳಿಗೆ ಬೆಂಕಿ ತಗುಲಿ ಸ್ಫೋಟ ಸಂಭವಿಸಿದೆ ಎಂದಿದೆ.
ಮಾರ್ಚ್ 26, 2025ರ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ, ಮುಂಬೈನ ನೇಚರ್ ಪಾರ್ಕ್ಗೆ ಹೊಂದಿಕೊಂಡಿರುವ ಸಿಯಾನ್ಧಾರವಿ ಲಿಂಕ್ ರಸ್ತೆಯಲ್ಲಿರುವ ಧಾರಾವಿ ಬಸ್ ಡಿಪೋ ಬಳಿ ರಾತ್ರಿ 9.50 ರ ಸುಮಾರಿಗೆ ಹೆಚ್ಚಿನ ಸಂಖ್ಯೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ನಿಲ್ಲಿಸಿದ್ದ ಟ್ರಕ್ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಆಕಾಶದಲ್ಲಿ ಅನೇಕ ಸ್ಫೋಟಗಳು ಸಂಭವಿಸಿದವು. ಸಿಲಿಂಡರ್ಗಳಲ್ಲಿ ಒಂದರಿಂದ ಸೋರಿಕೆಯಾದ ನಂತರ ಬೆಂಕಿ ಕಾಣಿಸಿಕೊಂಡಿತು. ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ ಎಂದಿದೆ.

ಈ ಸಾಕ್ಚ್ಯಾಧಾರಗಳ ಪ್ರಕಾರ, ಇದು ಆಪರೇಷನ್ ಸಿಂದೂರ ಕ್ಕೆ ಸಂಬಂಧಿಸಿ ಸಿಯಾಲ್ ಕೋಟ್ ನಲ್ಲಿ ಭಾರತ ನಡೆಸಿದ ದಾಳಿಯ ಕುರಿತಾದ ವೀಡಿಯೋ ಅಲ್ಲ, ಧಾರಾವಿಯಲ್ಲಿ ಗ್ಯಾಸ್ ಸಿಲಿಂಡರ್ ಹೊತ್ತಿದ್ದ ಟ್ರಕ್ ಗೆ ಬೆಂಕಿ ಹತ್ತಿಕೊಂಡು ಸಂಭವಿಸಿದ ಅವಘಡ ಎಂದು ಗೊತ್ತಾಗಿದೆ.
Also Read: ಪಾಕಿಸ್ತಾನ ಮೇಲೆ ಭಾರತದ ಕ್ಷಿಪಣಿ ದಾಳಿ ಎಂದ ಈ ವೀಡಿಯೋ ಇಸ್ರೇಲ್ ವಿರುದ್ಧ ಇರಾನ್ ದಾಳಿಯದ್ದು!
Our Sources
X post By @Thatdammgurl, Dated: May 7, 2025
Instagram Post By expressnewshindi4u, Dated: March 24, 2025
YouTube Video By News9 Live, Dated: March 25, 2025
YouTube Video By CNN News 18, Dated: March 24, 2025
Report By Times of India, Dated: March 26, 2025
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025