Sunday, April 27, 2025
ಕನ್ನಡ

Fact Check

ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸಂಸದರ ಹರಟೆ; ವೀಡಿಯೋ ಸತ್ಯವೇ?

Written By Raushan Thakur, Translated By Ishwarachandra B G, Edited By Pankaj Menon
Apr 9, 2025
banner_image

Claim

image

ವಕ್ಫ್ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸಂಸದರ ಹರಟೆ

Fact

image

ವಕ್ಫ್ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸಂಸದರ ಹರಟೆ ಎನ್ನುವ ಈ ವೀಡಿಯೋ ವಕ್ಫ್ ಮಸೂದೆ ಅಂಗೀಕಾರದ ಬಳಿಕದ್ದಲ್ಲ, ಇದು ಜನವರಿ ಸಮಯದ್ದಾಗಿದೆ

ವಕ್ಫ್ ತಿದ್ದುಪಡಿ ಮಸೂದೆಗೆ ಏಪ್ರಿಲ್ 5, 2025 ರಂದು ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದರು. ಇದರೊಂದಿಗೆ ವಕ್ಫ್ ತಿದ್ದುಪಡಿ ಮಸೂದೆ ಈಗ ಕಾನೂನಾಗಿ ಮಾರ್ಪಟ್ಟಿದೆ. ಈ ಕಾನೂನಿನ ಅನುಷ್ಠಾನದ ದಿನಾಂಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರತ್ಯೇಕ ಅಧಿಸೂಚನೆಯನ್ನು ಹೊರಡಿಸುತ್ತದೆ. ಮಸೂದೆಯನ್ನು ಏಪ್ರಿಲ್ 2 ರಂದು ಲೋಕಸಭೆ ಮತ್ತು ಏಪ್ರಿಲ್ 3 ರಂದು ರಾಜ್ಯಸಭೆಯಲ್ಲಿ 12 ಗಂಟೆಗಳ ಚರ್ಚೆಯ ನಂತರ ಅಂಗೀಕರಿಸಲಾಯಿತು. ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಹೊಸ ಕಾನೂನಿಗೆ ಸಂಬಂಧಿಸಿದಂತೆ ಇದುವರೆಗೆ ಸುಪ್ರೀಂ ಕೋರ್ಟ್ ನಲ್ಲಿ ಆರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದೇ ವೇಳೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಏಪ್ರಿಲ್ 11 ರಿಂದ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ವಕ್ಫ್ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಬಳಿಕ, ಎಐಎಐಎಂ ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ಸಂಸದರೊಂದಿಗೆ ಹರಟುತ್ತಿರುವ ದೃಶ್ಯ ಎಂಬಂತೆ ಹೇಳಿಕೆಯೊಂದನ್ನು ವೀಡಿಯೋ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸಂಸದರ ಹರಟೆ; ವೀಡಿಯೋ ಸತ್ಯವೇ?

30 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಮಾಧ್ಯಮ ಎಕ್ಸ್ (ಎಕ್ಸ್) ಮತ್ತು ಫೇಸ್ಬುಕ್ನಲ್ಲಿ ವೈರಲ್ ಆಗಿದ್ದು, ಇದನ್ನು ವಕ್ಫ್ ತಿದ್ದುಪಡಿ ಮಸೂದೆಯ ಸಂದರ್ಭಕ್ಕೆ ಲಿಂಕ್ ಮಾಡಲಾಗಿದೆ. ಜಗದಾಂಬಿಕಾ ಪಾಲ್, ನಿಶಿಕಾಂತ್ ದುಬೆ ಮತ್ತು ಅಸಾದುದ್ದೀನ್ ಒವೈಸಿ ಸೇರಿದಂತೆ ಹಲವಾರು ಸಂಸದರು ದುಂಡು ಮೇಜಿನ ಸುತ್ತಲೂ ಕುಳಿತಿರುವುದನ್ನು ವೀಡಿಯೋ ತೋರಿಸುತ್ತದೆ. ಈ ವೀಡಿಯೋದಲ್ಲಿ, ಎಲ್ಲ ಸಂಸದರು ಯಾವುದೋ ವಿಚಾರಕ್ಕೆ ನಗುತ್ತಿರುವುದನ್ನು ನೋಡಬಹುದು. ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ನಂತರ ಅಸಾದುದ್ದೀನ್ ಒವೈಸಿ ಸಂಭ್ರಮಿಸುತ್ತಿದ್ದಾರೆ ಎಂದೂ ಕೆಲವು ಹೇಳಿಕೆಗಳಲ್ಲಿ ಹೇಳಲಾಗಿದೆ.

Also Read: ಶಿರಾದಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲಾಗುತ್ತಿದೆ ಎಂದು ಚೀನಾ ವೀಡಿಯೋ ವೈರಲ್

ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸಂಸದರ ಹರಟೆ; ವೀಡಿಯೋ ಸತ್ಯವೇ?

Fact Check/Verification

ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ನಂತರ ಅಸಾದುದ್ದೀನ್ ಒವೈಸಿ ನಗುತ್ತಿದ್ದಾರೆ ಎಂದು ಹೇಳುವ ವೈರಲ್ ವೀಡಿಯೋದ ಬಗ್ಗೆ ತನಿಖೆ ಮಾಡಲು ಕೀಫ್ರೇಮ್ ಗಳನ್ನು ತೆಗೆದು ನಾವು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ವೇಳೆ, ಜನವರಿ 29, 2025 ರಂದು ಪ್ರಭಾತ್ ಖಬರ್ ಪ್ರಕಟಿಸಿದ ವರದಿ ಲಭ್ಯವಾಗಿದೆ. ಈ ವರದಿಯು ವೈರಲ್ ವೀಡಿಯೊವನ್ನು ಹೋಲುವ ಚಿತ್ರವನ್ನು ಹೊಂದಿದೆ.

ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸಂಸದರ ಹರಟೆ; ವೀಡಿಯೋ ಸತ್ಯವೇ?

ಪ್ರಭಾತ್ ಖಬರ್ ವರದಿಯ ಪ್ರಕಾರ, ಸಭೆಯ ಈ ಚಿತ್ರವು ಜನವರಿ 2025 ರದ್ದಾಗಿದೆ. ವಕ್ಫ್ ತಿದ್ದುಪಡಿ ಮಸೂದೆಯ ವಿಷಯದ ಬಗ್ಗೆ ಸಂಸತ್ತಿನ ಜಂಟಿ ಸಮಿತಿಯು ವಕ್ಫ್ ತಿದ್ದುಪಡಿ ಮಸೂದೆಯ ವರದಿ ಮತ್ತು ಪ್ರಸ್ತಾವಿತ ಕಾನೂನಿನ ಪರಿಷ್ಕೃತ ಆವೃತ್ತಿಯನ್ನು 15-11 ಬಹುಮತದೊಂದಿಗೆ ಅಂಗೀಕರಿಸಿತು.

ಇದರ ಬಗ್ಗೆ ಹುಡುಕಿದಾಗ, ಜನವರಿ 29, 2025 ರಂದು ಅಮರ್ ಉಜಾಲಾ ಪ್ರಕಟಿಸಿದ ವರದಿ ಲಭ್ಯವಾಗಿದೆ.  ವಕ್ಫ್ ಮಸೂದೆಯ ಕರಡು ವರದಿ ಮತ್ತು ತಿದ್ದುಪಡಿ ಮಸೂದೆಯನ್ನು ಜೆಪಿಸಿ ಒಪ್ಪಿಕೊಂಡಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ವೈರಲ್ ವೀಡಿಯೋ ಹಳೆಯದು ಎಂದು ಇದು ಸ್ಪಷ್ಟಪಡಿಸುತ್ತದೆ.

ವೀಡಿಯೋ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, JPC Adopts Draft Report On Waqf Bill ಎಂಬ ಕೀವರ್ಡ್ಗಳೊಂದಿಗೆ ಅಂತರ್ಜಾಲದಲ್ಲಿ ಹುಡುಕಿದ್ದೇವೆ. ಈ ಸಮಯದಲ್ಲಿ, ಜನವರಿ 29, 2025 ರಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. 5 ನಿಮಿಷ 6 ಸೆಕೆಂಡುಗಳ ಈ ವಿಡಿಯೋದಲ್ಲಿ 15 ರಿಂದ 30 ಸೆಕೆಂಡುಗಳ ನಡುವೆ ವೈರಲ್ ವಿಡಿಯೋ ಹೋಲು ಕ್ಲಿಪ್ ಅನ್ನು ಕಾಣಬಹುದು. ಇಂಗ್ಲಿಷ್ನಲ್ಲಿ ವೀಡಿಯೋದ ವಿವರಣೆ ಹೀಗಿದೆ, ಅದರ ಅನುವಾದ ಹೀಗಿದೆ, “ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯು ವಿರೋಧ ಪಕ್ಷದ ಸದಸ್ಯರ ತೀವ್ರ ಆಕ್ಷೇಪಣೆಗಳ ಹೊರತಾಗಿಯೂ ಕರಡು ವರದಿಯನ್ನು ಸ್ವೀಕರಿಸಿದೆ. 655 ಪುಟಗಳ ವರದಿಯನ್ನು ತಡರಾತ್ರಿ ಸಂಸದರಿಗೆ ಸಲ್ಲಿಸಲಾಗಿದ್ದು, ಭಿನ್ನಾಭಿಪ್ರಾಯ ಟಿಪ್ಪಣಿಯನ್ನು ಸಲ್ಲಿಸಲು ಮರುದಿನ ಸಂಜೆ 4 ಗಂಟೆಯವರೆಗೆ ಗಡುವು ನಿಗದಿಪಡಿಸಲಾಗಿದೆ.”

aimimnizamabad_official ಲ ಎಂಬ ಇನ್‌ಸ್ಟಾ ಗ್ರಾಂ ಖಾತೆಯಿಂದಲೂ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಇದು 29 ಜನವರಿ 2025ರ ವೀಡಿಯೋ ಎನ್ನಲಾಗಿದೆ. ಜೊತೆಗೆ ಅಸಾದುದ್ದೀನ್ ಓವೈಸಿ ಜೊತೆಗಿರುವ ಸಂಸದರು ಯಾರು ಎಂಬ ಬಗ್ಗೆಯೂ ಹೇಳಲಾಗಿದೆ.

ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸಂಸದರ ಹರಟೆ; ವೀಡಿಯೋ ಸತ್ಯವೇ?

Conclusion

ಹೀಗಾಗಿ, ನಮ್ಮ ತನಿಖೆಯ ಪ್ರಕಾರ, ಅಸಾದುದ್ದೀನ್ ಒವೈಸಿ ಸಂಸದರೊಂದಿಗೆ ಕುಳಿತು ಹರಟುತ್ತಿರುವ ಈ ವೀಡಿಯೊ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ನಂತರದ್ದಲ್ಲ ಎಂಬುದು ಸ್ಪಷ್ಟವಾಗಿದೆ.

Also Read: ವಕ್ಫ್ ಮಸೂದೆ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಎಂದು 2019ರ ವೀಡಿಯೋ ಹಂಚಿಕೆ

Our Sources
Report by Prabhat Khabar, Dated: January 29, 2025

Report by Amar Ujala,  Dated: January 29, 2025

YouTube Video by The Indian Express, Dated: January 29, 2025

Instagram Post By aimimnizamabad_official, Dated: April 7, 2025

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


RESULT
imageFalse
image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,944

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.