Claim
ಇನ್ಫೋಸಿಸ್ ಫೌಂಡೇಶನ್‌ನ ಸ್ಥಾಪಕ-ಅಧ್ಯಕ್ಷೆ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರು ಹೂಡಿಕೆ ವೇದಿಕೆಯನ್ನು ಪ್ರಚಾರ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.

Fact
ಗೂಗಲ್‌ನಲ್ಲಿ “ಸುಧಾ ಮೂರ್ತಿ”, “ಕ್ವಾಂಟಮ್ AI” ಮತ್ತು “ಹೂಡಿಕೆ ವೇದಿಕೆ” ಎಂಬ ಕೀವರ್ಡ್ ಹುಡುಕಾಟ ನಡೆಸಿದಾಗ ಮೂರ್ತಿಯವರ ಅಂತಹ ಯಾವುದೇ ಘೋಷಣೆಯ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ.
Also Read: ಹರಿದ್ವಾರದಲ್ಲಿ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಕೊಂದಿದ್ದಾನೆ ಎನ್ನುವ ಹೇಳಿಕೆ ಸುಳ್ಳು!
ಆದಾಗ್ಯೂ, ಜನವರಿ 19, 2023 ರಂದು CNBC-TV18 ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಏನೂ ಅಸಾಧ್ಯವಲ್ಲ”: ವ್ಯಾಪಾರ ಜಗತ್ತಿನಲ್ಲಿ ಮಹಿಳೆಯರಿಗಾಗಿ ಸುಧಾ ಮೂರ್ತಿ ಅವರ ಮಂತ್ರ” ಎಂಬ ಶೀರ್ಷಿಕೆಯಡಿಯಲ್ಲಿ ಅಪ್‌ಲೋಡ್ ಮಾಡಲಾದ ಮೂರ್ತಿ ಅವರ ವೀಡಿಯೊ ಸಂದರ್ಶನ ಲಭ್ಯವಾಗಿದೆ.

ಮೂರ್ತಿ ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಅದೇ ಉಡುಗೆ ಮತ್ತು ಹಿನ್ನೆಲೆಯಿರುವುದನ್ನು ನಾವು ಗಮನಿಸಿದ್ದೇವೆ. ಎರಡೂ ವೀಡಿಯೋಗಳನ್ನು ಹೋಲಿಸಿದಾಗ, ವೈರಲ್ ಕ್ಲಿಪ್ ಯೂಟ್ಯೂಬ್ ವೀಡಿಯೋ ದೃಶ್ಯಗಳ ಮಿರರ್ ಎಫೆಕ್ಟ್ ಆವೃತ್ತಿಯಾಗಿದೆ ಎಂದು ಗೊತ್ತಾಗಿದೆ.

CNBC-TV18 ನ ವೀಡಿಯೋದಲ್ಲಿ ಅಂತಹ ಯಾವುದೇ ಹೂಡಿಕೆ ವೇದಿಕೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವುದು ಕಂಡುಬಂದಿದೆ. ಆದ್ದರಿಂದ ವೈರಲ್ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ ಎಂದು ದೃಢಪಡಿಸಿದೆ.
ನಂತರ ನಾವು AI ಪತ್ತೆ ಸಾಧನ ಹೈವ್ ಮಾಡರೇಶನ್‌ನಲ್ಲಿ ವೈರಲ್ ಕ್ಲಿಪ್‌ನ ಒಂದು ಭಾಗವನ್ನು ಪರಿಶೀಲಿಸಿದ್ದೇವೆ, ಅದು AI ಮೂಲಕ ಮಾಡಲಾಗಿದೆ ಅಥವಾ ಡೀಪ್‌ಫೇಕ್ ವಿಷಯವನ್ನು ಹೊಂದಿದೆ ಎನ್ನಲಾದ ಒಟ್ಟು 99.9% ಸಾಧ್ಯತೆಯನ್ನು ಕಂಡುಹಿಡಿದಿದೆ.

ಮತ್ತೊಂದು AI ಆಡಿಯೋ ಪತ್ತೆ ಸಾಧನವಾದ Resemble.ai , ಸುಧಾ ಮೂರ್ತಿ ಅವರು ಹೂಡಿಕೆ ವೇದಿಕೆಯನ್ನು ಪ್ರಚಾರ ಮಾಡುತ್ತಿರುವುದನ್ನು ತೋರಿಸುವ ಆಡಿಯೋವನ್ನು “ನಕಲಿ” ಎಂದು ಕರೆದಿದೆ.
ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ನಮ್ಮನ್ನು “ https://ndtvnow.com/ ” URL ಗೆ ಕರೆದೊಯ್ದಿದೆ. ಅದು NDTV ವೆಬ್‌ಸೈಟ್‌ನಂತಿರುವ ನಕಲಿ ವೆಬ್ ಪುಟವನ್ನು ಪ್ರದರ್ಶಿಸಿತು – ಎನ್‌ಡಿಟಿವಿ ಸುದ್ದಿವಾಹಿನಿಯ ನಿಜವಾದ URL “ https://www.ndtv.com/ ” ಆಗಿದೆ.

ನಂತರ ನಾವು ಸ್ಕ್ಯಾಮ್ ಡಿಟೆಕ್ಟರ್ ವೆಬ್‌ಸೈಟ್‌ನಲ್ಲಿ “https://ndtvnow.com/” ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ URL ಅನ್ನು ಪರಿಶೀಲಿಸಿದಾಗ ಅದು “ಅಸುರಕ್ಷಿತ. ಎಚ್ಚರಿಕೆ” ಎಂದು ಕಂಡುಬಂದಿದೆ ಮತ್ತು 3.6 ಅಂಕಗಳಿಗಿಂತ ಕಡಿಮೆ ಅಂಕವನ್ನು ಪಡೆದಿದೆ.

ನ್ಯೂಸ್ ಚೆಕರ್ ಒಂದು ಭಾಗವಾಗಿರುವ ಮಿಸ್ ಇನ್ಫಾರ್ಮೇಶನ್ ಕಾಂಬ್ಯಾಟ್ ಅಲೈಯನ್ಸ್ (ಎಂಸಿಎ) ನ ಡೀಪ್ ಫೇಕ್ಸ್ ಅನಾಲಿಸಿಸ್ ಯೂನಿಟ್ (ಡಿಎಯು) ಕೂಡ ಕ್ಲಿಪ್ ಅನ್ನು ವಿಶ್ಲೇಷಿಸಿ , “ಸುಧಾ ಮೂರ್ತಿಯವರನ್ನು ಒಳಗೊಂಡ ಮೂಲ ತುಣುಕನ್ನು ಸಿಂಥೆಟಿಕ್ ಆಡಿಯೋದೊಂದಿಗೆ ಎಡಿಟ್ ಮಾಡಿ ವೀಡಿಯೋ ತಯಾರಿಸಲಾಗಿದೆ” ಎಂದು ತೀರ್ಮಾನಿಸಿದೆ.
ಸುಧಾ ಮೂರ್ತಿಯವರು ಹೂಡಿಕೆ ವೇದಿಕೆಯನ್ನು ಪ್ರಚಾರ ಮಾಡುತ್ತಿರುವುದನ್ನು ತೋರಿಸುವ ಹಲವಾರು ಡೀಪ್‌ಫೇಕ್ ವೀಡಿಯೊಗಳನ್ನು ನ್ಯೂಸ್‌ಚೆಕರ್ ಬಹಿರಂಗಪಡಿಸಿದೆ. ಅದೇ ವಿಷಯವನ್ನು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು .
ಆದ್ದರಿಂದ, ಸುಧಾ ಮೂರ್ತಿ ಹೂಡಿಕೆ ವೇದಿಕೆಯನ್ನು ಉತ್ತೇಜಿಸುವ ವೈರಲ್ ವೀಡಿಯೊವನ್ನು AI ಬಳಸಿ ಎಡಿಟ್ ಮಾಡಲಾಗಿದೆ ಎಂದು ಕಂಡುಬಂದಿದೆ.
Also Read: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಹಿಂದೂಗಳ ಮೇಲೆ ದಾಳಿ ಎನ್ನುವುದು ನಿಜವಲ್ಲ
Sources
YouTube Video By CNBC-TV18 , Dated January 19, 2023
Hive Moderation Website
Resemble.ai Website
Scam Detector Website
DAU Analysis
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)