Fact Check: ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್‌ ಕುರಿತ ಟ್ವೀಟ್ಗಳನ್ನು ರಾಹುಲ್‌ ಗಾಂಧಿ ಡಿಲೀಟ್‌ ಮಾಡಿದ್ದಾರಾ?

ಸಾವರ್ಕರ್‌ ಕುರಿತ ಟ್ವೀಟ್‌ಗಳನ್ನು ರಾಹುಲ್‌ ಗಾಂಧಿ ಅಳಿಸಿ ಹಾಕಿದ್ದಾರಾ?

Claim
ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್‌ ಕುರಿತ ಟ್ವೀಟ್ಗಳನ್ನು ಡಿಲೀಟ್ ಮಾಡಿದ ರಾಹುಲ್‌ ಗಾಂಧಿ

Fact
ರಾಹುಲ್‌ ಅವರು ಇತ್ತೀಚಿನ ಯಾವುದೇ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿಲ್ಲ 

ಸಾವರ್ಕರ್ ಕುರಿತ ಎಲ್ಲಾ ಟ್ವಿಟರ್ ಪೋಸ್ಟ್ಗಳನ್ನು ರಾಹುಲ್ ಗಾಂಧಿ ಡಿಲೀಟ್‌ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ಈ ಕುರಿತ ಕ್ಲೇಮಿನಲ್ಲಿ “ಸಾವರ್ಕರ್‌ ಕುರಿತು ಮಾಡಿದ್ದ ಎಲ್ಲಾ ಟ್ವೀಟ್‌ಗಳನ್ನು ಭಯದಿಂದ ಡಿಲೀಟ್‌ ಮಾಡಿದ ರಾಹುಲ್‌ ಗಾಂಧಿ. ಸಾಕ್ಷಿ ಕೊಡಿ ಇಲ್ಲದಿದ್ದರೆ ನಿಮ್ಮ ಮೇಲೆ ಕೇಸ್‌ ದಾಖಲಿಸುತ್ತೇನೆ ಎಂಬ ಸಾವರ್ಕರ್‌ರವರ ಮೊಮ್ಮಗನ ಹೇಳಿಕೆಗೆ ಭಯಬಿದ್ದು, ಎಲ್ಲಾ ಟ್ವೀಟ್‌ಗಳನ್ನು ತೆಗೆದು ಹಾಕಿದ ಹೇಡಿ ರಾಹುಲ್‌ ಗಾಂಧಿ..” ಎಂದು ಹೇಳಲಾಗಿದೆ.

ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್‌ ಕುರಿತ ಟ್ವೀಟ್ಗಳನ್ನು ರಾಹುಲ್‌ ಗಾಂಧಿ ಡಿಲೀಟ್‌ ಮಾಡಿದ್ದಾರಾ?
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

ಇಂತಹುದೇ ಕ್ಲೇಮ್‌ಗಳು ಫೇಸ್‌ಬುಕ್‌ನಲ್ಲಿ ಕಂಡು ಬಂದಿದ್ದು, ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್‌ ಕುರಿತ ಟ್ವೀಟ್ಗಳನ್ನು ರಾಹುಲ್‌ ಗಾಂಧಿ ಡಿಲೀಟ್‌ ಮಾಡಿದ್ದಾರಾ?


ಈ ಕುರಿತ ಮಾಹಿತಿಯ ಸತ್ಯಶೋಧನೆಗೆ ನ್ಯೂಸ್‌ಚೆಕರ್‌ ಪರಿಶೀಲನೆ ನಡೆಸಿದ್ದು, ಇದೊಂದು ತಪ್ಪಾದ ಮಾಹಿತಿ ಎಂದು ತಿಳಿದುಬಂದಿದೆ.  

Fact Check/ Verification

ಸಾವರ್ಕರ್ ಅವರ ಮೊಮ್ಮಗ ವಿ.ಡಿ. ಸಾವರ್ಕರ್‌ ಅವರು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿಯವರಿಗೆ ಸಾವರ್ಕರ್‌ ವಿರುದ್ಧದ ಹೇಳಿಕೆಗಾಗಿ ಎಚ್ಚರಿಕೆ ನೀಡಿದ್ದು, ಆ ನಂತರ ರಾಹುಲ್‌ ಅವರು ಎಲ್ಲ ಟ್ವಿಟರ್ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಾವು ಅಧ್ಯಯನ ನಡೆಸಿದ್ದೇವೆ.  

ಈ ಪ್ರಕರಣದ ಹಿನ್ನೆಲೆ ಏನೆಂದರೆ, ಮೋದಿ ಜಾತಿ ಸೂಚಕ ಪದದ ವಿರುದ್ಧ ಅವಹೇಳನಕಾರಿಯಾಗಿ ವಯನಾಡ್‌ ಸಂಸದರೂ ಆದ ರಾಹುಲ್‌ ಗಾಂಧಿಯವರು ಮಾತನಾಡಿದ್ದಾರೆ ಎಂದು ಸೂರತ್‌ ಕೋರ್ಟ್ ಇತ್ತೀಚೆಗೆ ಜೈಲು ಶಿಕ್ಷೆ ವಿಧಿಸಿತ್ತು. ಆ ನಂತರ ಅವರು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದರು.
ಈ ವಿಚಾರದ ಕುರಿತ ಮಾಧ್ಯಮಗೋಷ್ಠಿಯಲ್ಲಿ ರಾಹುಲ್‌ ಗಾಂಧಿಯವರಿಗೆ ಮಾಧ್ಯಮದ ಮಂದಿ ಇತ್ತೀಚಿನ ಅವರ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಭಾಷಣದ ಬಗ್ಗೆ ಪ್ರಶ್ನೆ ಕೇಳಿದ್ದು, ಅದಕ್ಕೆ ಕ್ಷಮೆಯಾಚಿಸುವಂತೆ ಹೇಳುತ್ತಿದ್ದಾರೆ ಎಂದು ಕೇಳಿದರು. ಈ ವೇಳೆ ರಾಹುಲ್‌ ಅವರು “ನಾನು ಸಾವರ್ಕರ್‌ ಅಲ್ಲ, ನನ್ನ ಹೆಸರು ಗಾಂಧಿ, ಗಾಂಧಿ ಎಂದಿಗೂ ಕ್ಷಮೆಯಾಚಿಸಿಲ್ಲ” ಎಂದು ಹೇಳಿದ್ದರು.

ರಾಹುಲ್‌ ಅವರ ಈ ಹೇಳಿಕೆಗೆ ಪ್ರತಿಯಾಗಿ “ಸಾವರ್ಕರ್ ಬಗ್ಗೆ ಮಾತನಾಡಿದ್ದಕ್ಕಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸದಿದ್ದರೆ, ನಾನು ಅವರ ವಿರುದ್ಧ ದೂರು ದಾಖಲಿಸುತ್ತೇನೆ” ಎಂದು ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದ್ದರು.

ರಂಜಿತ್ ಸಾವರ್ಕರ್ ಅವರ ಎಚ್ಚರಿಕೆಯ ನಂತರ ರಾಹುಲ್ ಗಾಂಧಿ ಸಾವರ್ಕರ್ ಬಗ್ಗೆ ಪೋಸ್ಟ್ ಮಾಡಿದ ಟ್ವೀಟ್ಗಳನ್ನು ಅಳಿಸಿದ್ದಾರೆಯೇ ಎಂದು ಕಳೆದ ಕೆಲವು ದಿನಗಳಲ್ಲಿ ನಾವು ಸೋಷಿಯಲ್ ಬ್ಲೇಡ್ ಮೂಲಕ ಪರಿಶೀಲಿಸಿದ್ದೇವೆ. ಆದರೆ, ಕಳೆದ ಕೆಲವು ದಿನಗಳಿಂದ ಅವರು ಯಾವುದೇ ಟ್ವಿಟರ್ ಪೋಸ್ಟ್ ಅನ್ನು ಅಳಿಸಿಹಾಕಿಲ್ಲ.

Also Read: ಹೊಸ ಸಂಸತ್‌ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ ಮೋದಿ ಕಾಲದಲ್ಲಿ 970 ಕೋಟಿ ಆಗಿತ್ತೇ?

 ಮಾರ್ಚ್ 24 ಮತ್ತು ಮಾರ್ಚ್ 28 ರ ನಡುವೆ, ಅವರ ಯಾವುದೇ ಟ್ವಿಟರ್ ಪೋಸ್ಟ್‌ಗಳನ್ನು ಅಳಿಸಲಾಗಿಲ್ಲ. ಅಲ್ಲದೆ, ಅವರ ಟ್ವಿಟರ್‌ ಪುಟವನ್ನು ಪರಿಶೀಲಿಸಿದಾಗ ಕಳೆದ ದಿನಗಳಲ್ಲಿ ಸಾವರ್ಕರ್‌ ಬಗ್ಗೆ ಯಾವುದೇ ಪೋಸ್ಟ್‌ಗಳನ್ನು ಮಾಡಿಲ್ಲ ಎಂಬುದನ್ನು ದೃಢಪಡಿಸಲಾಗಿದೆ.  ರಾಹುಲ್ ಗಾಂಧಿ ಅವರು ಸಾವರ್ಕರ್ ಬಗ್ಗೆ ಮೌಖಿಕವಾಗಿ ಹಲವು ಟೀಕೆಗಳನ್ನು ಮಾಡಿದ್ದರೂ ಅದನ್ನು ಟ್ವಿಟರ್‌ನಲ್ಲಿ ದಾಖಲಿಸಿಲ್ಲ ಎಂದು ತಿಳಿದುಬಂದಿದೆ.

ಇದರೊಂದಿಗೆ ನಾವು Google Cache ಮೂಲಕ ಹುಡುಕಿದಾಗ, ಅವರು ಈ ಹಿಂದೆ ಸಾವರ್ಕರ್ ಬಗ್ಗೆ ಪೋಸ್ಟ್ ಮಾಡಿದ ಮತ್ತು ಅದನ್ನು ಅಳಿಸಿದ ಬಗ್ಗೆ ಯಾವುದೇ ಸಂಗ್ರಹಿತ ದಾಖಲೆಗಳು ಲಭ್ಯವಾಗಿಲ್ಲ. 2016 ರಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾದ ಸಾವರ್ಕರ್ ಅವರ ಪೋಸ್ಟ್ ಅನ್ನು ಸಹ ತೆಗೆದುಹಾಕಲಾಗಿಲ್ಲ.

Conclusion

ಈ ಸತ್ಯಶೋಧನೆಯ ಪ್ರಕಾರ, ಸಾವರ್ಕರ್ ಮೊಮ್ಮಗ ಅವರು ಪ್ರಕರಣ ದಾಖಲಿಸುವ ಎಚ್ಚರಿಕೆಯ ನಂತರ ರಾಹುಲ್ ಗಾಂಧಿ ಸಾವರ್ಕರ್ ಬಗ್ಗೆ ಎಲ್ಲಾ ಟ್ವಿಟರ್ ಪೋಸ್ಟ್‌ಗಳನ್ನು ಅಳಿಸಿ ಹಾಕಿದ್ದಾರೆ ಎಂಬ ಮಾಹಿತಿ ತಪ್ಪು ಎಂದು ತಿಳಿದುಬಂದಿದೆ.

Result: False

Our Sources:
Twitter Post From, INC India, Dated March 25, 2023

Twitter Post by, INC India, Dated March 23, 2016

YouTube Post From, Moneycontrol

SocialBlade

Twitter Post From, ANI, Dated March 28, 2023

Transcontinentaltimes

Report by, The Economic Times, Dated March 27, 2016

Report by, Livemint Dated: 24 March 2023

(ವಿಜಯಲಕ್ಷ್ಮೀ ಬಾಲಸುಹ್ಮಣ್ಯಂ ಅವರು ಬರೆದಿರುವ ಈ ಲೇಖನ ಮೂಲತಃ ನ್ಯೂಸ್‌ಚೆಕರ್‌ ತಮಿಳಿನಲ್ಲಿ ಪ್ರಕಟವಾಗಿದ್ದು, ಅದನ್ನು ಇಲ್ಲಿ ಓದಬಹುದು)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.