Fact Check: ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣವಾಗಿದೆಯೇ, ಇದು ನಿಜವೇ?

ಕಾಶ್ಮೀರ ಶಾರದಾ ಪೀಠ

Claim
ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣ

Fact
ಭಾರತದ ಕಾಶ್ಮೀರದ ಕುಪ್ವಾರಾದ ತೀತ್ವಾಲ್‌ನಲ್ಲಿ ಹೊಸದಾಗಿ ನಿರ್ಮಾಣವಾದ ಶಾರದಾ ದೇಗುಲ ಬೇರೆ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಮೂಲ ಶಾರದಾ ಪೀಠ ಬೇರೆಯದ್ದಾಗಿದೆ.

ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣಗೊಂಡಿದೆ ಎಂಬಂತೆ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಕುರಿತ ಕ್ಲೇಮ್‌ನಲ್ಲಿ “ ಮೋದಿ ಇದ್ದರೆ ಎಲ್ಲವೂ ಸಾಧ್ಯ, ಕಾಶ್ಮೀರದ ಕುಪ್ವಾರದಲ್ಲಿರುವ ಮಾ ಶಾರದಾ ದೇವಾಲಯ, ಅವತ್ತು ಹೇಗಿತ್ತು, ಇವತ್ತು ಹೇಗಾಗಿ ನೋಡಿ” ಎಂದು ಹೇಳಲಾಗಿದೆ. ಇದರೊಂದಿಗೆ ಶಿಥಿಲಗೊಂಡ ಶಾರದಾ ದೇವಿ ಪೀಠ ಮತ್ತು ಹೊಸ ಶಾರದಾ ದೇವಿ ದೇಗುಲದ ಫೋಟೋವನ್ನು ಹಾಕಲಾಗಿದೆ. ಈ ಕ್ಲೇಮ್‌ ಅನ್ನು ಇಲ್ಲಿ ನೋಡಬಹುದು.

ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣ
ಟ್ವಿಟರಿನಲ್ಲಿ ಕಂಡುಬಂದ ಕ್ಲೇಮ್

ನ್ಯೂಸ್‌ಚೆಕರ್‌ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ನಡೆಸಿದ್ದು, ದಿ ಎಕ್ಸ್‌ ಪ್ರೆಸ್‌ ಟ್ರಿಬ್ಯೂನ್‌ ಪ್ರಕಟಿಸಿದ ಈ ಲೇಖನ ಲಭ್ಯವಾಗಿದೆ. ಇದರಲ್ಲಿ, “ಪಾಕಿಸ್ಥಾನ ಮುಜಫ್ಫರಾಬಾದ್‌ನಿಂದ 221 ಕಿಲೋ ಮೀಟರ್‌ ದೂರದಲ್ಲಿ, ಏರಲು ಕಷ್ಟವಾದ ಕಲ್ಲಿನ ಚಪ್ಪಡಿಗಳ ಮೆಟ್ಟಿಲು ಮತ್ತು ಭವ್ಯವಾದ ನಾರದ ಪರ್ಚತದ ಅಂಚಿನಲ್ಲಿರುವ ಈ ಪ್ರದೇಶದ ವಿಶಾಲ ಅಂಗದಳಲ್ಲಿದೆ. ಈ ಪ್ರದೇಶದಲ್ಲಿ ಪುರಾತನ ವಿಶ್ವವಿದ್ಯಾಲಯವಿದ್ದು ತಕ್ಷಶಿಲಾ ಮತ್ತು ನಳಂದದ ರೀತಿಯ ಶ್ರೀಮಂತ ಗ್ರಂಥಾಲಯವಿದ್ದ ವಿಶ್ವವಿದ್ಯಾಲಯ ಇದಾಗಿತ್ತು ಎಂದು ಹೇಳಿದೆ.

ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣ
ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ

ಇದರೊಂದಿಗೆ ಮಿಡ್‌ ಡೇ ಮಾರ್ಚ್ 22, 2023ರಂದು ಪ್ರಕಟಿಸಿದ ವರದಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, “ನಿಯಂತ್ರಣ ರೇಖೆ ಸನಿಹದಲ್ಲಿರುವ ಕರ್ತಾಪುರ ಕಾರಿಡಾರ್‌ ರೀತಿ ಶಾರದಾ ಪೀಠ ಕಾರಿಡಾರ್ ರಚನೆಗೂ ಪ್ರಯತ್ನಿತ್ತೇನೆ ಎಂದು ಹೇಳಿದ್ದಾಗಿ ಹೇಳಲಾಗಿದೆ. ನಿಯಂತ್ರಣ ರೇಖೆ ಸನಿಹ, ಉತ್ತರ ಕುಪ್ವಾರಾ ಜಿಲ್ಲೆಯ ಕರನ್ಹಾ ಪ್ರದೇಶದಲ್ಲಿರುವ ಮಾತಾ ಶಾರದಾ ದೇವಿ ದೇಗುಲವನ್ನು ಉದ್ಘಾಟಿಸಿ ಅವರು ಹೀಗೆ ಹೇಳಿದ್ದಾರೆ” ಎಂದು ವರದಿಯಲ್ಲಿದೆ.

ಔಟ್‌ಲುಕ್‌ ಮಾರ್ಚ್‌ 22, 2023ರಂದು ಪ್ರಕಟಿಸಿದ ವರದಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉದ್ಘಾಟಿಸಿದ ಶಾರದಾ ದೇವಿ ದೇಗುಲದ ಬಗ್ಗೆ ಹೇಳಲಾಗಿದೆ. “ನಿಯಂತ್ರಣ ರೇಖೆ ಸನಿಹ, ಉತ್ತರ ಕುಪ್ವಾರಾ ಜಿಲ್ಲೆಯ ತೀತ್ವಾಲ್‌ನಲ್ಲಿರುವ ಶಾರದಾ ದೇವಿ ದೇಗುಲವನ್ನು ವರ್ಚುವಲ್‌ ಆಗಿ ಅಮಿತ್‌ ಶಾ ಉದ್ಘಾಟಿಸಿದರು. ಇದರೊಂದಿಗೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠಕ್ಕೆ ತೀರ್ಥ ಯಾತ್ರೆ ನಡೆಸುವ ಪಂಡಿತರ ಇಚ್ಛೆಗೆ ಇನ್ನಷ್ಟು ಬಲ ಬಂದಿದೆ” ಎಂದು ವರದಿ ಹೇಳಿದೆ.

Also Read: ಮುಸ್ಲಿಂ ಗುಂಪು ಯುವಕನಿಗೆ ಥಳಿಸಿ, ಕತ್ತಿಯಲ್ಲಿ ಕುತ್ತಿಗೆ ಕಡಿಯುವ ದೃಶ್ಯ ನಿಜವೇ? ಈ ಘಟನೆ ಎಲ್ಲಿಯದ್ದು?

ಇನ್ನು ಹೆಚ್ಚಿನ ಪರಿಶೀಲನೆಗಾಗಿ ಗೂಗಲ್‌ ಮ್ಯಾಪ್‌ನಲ್ಲಿ ಶಾರದಾ ಪೀಠ ಎಂದು ಸರ್ಚ್‌ ನಡೆಸಲಾಗಿದ್ದು ಅದು ನೀಲಂ ಕಣಿವೆಯಲ್ಲಿ ಕಿಶನ್‌ ಗಂಗಾ ನದಿ ಪಕ್ಕದಲ್ಲಿರುವ ಶಾರದಾ ಪೀಠವನ್ನು ತೋರಿಸಿದೆ. ಇದು ಈಗಲೂ ಪಾಕಿಸ್ಥಾನದ ಹಿಡಿತದಲ್ಲಿದ್ದು, ಅಲ್ಲಿನ ಒಂದು ಪ್ರವಾಸಿ ಸ್ಥಳವಾಗಿದೆ.

ಇದರೊಂದಿಗೆ ತೀತ್ವಾಲ್‌ನ ನೂತನ ಶಾರದಾ ಮಂದಿರ ಬಗ್ಗೆಯೂ ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್ ಮಾಡಲಾಗಿದ್ದು ಅದು ಶಾರದಾ ಮಂದಿರ & ಗುರುದ್ವಾರ ಎಂದು ಇರುವುದು ತಿಳಿದು ಬಂದಿದೆ. ಈ ನೂತನ ಶಾರದಾ ದೇಗುಲ ಎದುರು ಗುರುದ್ವಾರವೂ ಇರುವುದು ಕಂಡುಬಂದಿದೆ.

ಪರಿಶೀಲನೆಗಳ ಮೂಲಕ ಗೊತ್ತಾದ ರೀತಿ ಎರಡೂ ಶಾರದಾ ದೇಗುಲಗಳು ಬೇರೆ ಬೇರೆ ಸ್ಥಳದಲ್ಲಿದ್ದು, ಅದನ್ನು ಇಲ್ಲಿ ನೋಡಬಹುದು.

ಪಾಕ್‌ ಆಕ್ರಮಿತ ಕಾಶ್ಮೀರದ ಶಾರದಾ ಪೀಠ ಮತ್ತು ತೀತ್ವಾಲ್‌ನಲ್ಲಿ ನಿರ್ಮಾಣಗೊಂಡ ನೂತನ ಶಾರದಾ ದೇಗುಲ
ನೂತನ ಶಾರದಾ ದೇಗುಲ (ಎಡ) ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಮೂಲ ಶಾರದಾ ಪೀಠ (ಬಲ)

Conclusion

ಈ ಸತ್ಯಶೋಧನೆ ಪ್ರಕಾರ, ಕ್ಲೇಮ್‌ ತಪ್ಪಾದ ಸಂದರ್ಭದ್ದಾಗಿದೆ. ಶಾರದಾ ಪೀಠ ಮತ್ತು ಶಾರದಾ ದೇಗುಲ ಬೇರೆ ಬೇರೆಯದಾಗಿದ್ದು ಮೂಲ ಶಾರದಾ ಪೀಠ ಎನ್ನವುದು ಇನ್ನೂ ಪಾಕಿಸ್ಥಾನದ ಹಿಡಿತದಲ್ಲಿದೆ. ಅದನ್ನು ಅಭಿವೃದ್ಧಿ ಮಾಡಲಾಗಿಲ್ಲ ಬದಲಾಗಿ ಭಾರತದ ಕಾಶ್ಮೀರದ ಕುಪ್ವಾರದ ತೀತ್ವಾಲ್‌ನಲ್ಲಿ ಹೊಸ ಶಾರದಾ ದೇಗುಲವನ್ನು ನಿರ್ಮಿಸಲಾಗಿದೆ ಎಂಬುದು ತಿಳಿದುಬಂದಿದೆ.

Result: Missing Context

Our Sources:

Article by The Tribune Express

Report by MidDay, Dated: March 22, 2023

Report by Outlook, Dated: March 22, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.