Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸ್ಫೇನ್ ನಲ್ಲಿ ಜನರಿಂದ ಮಸೀದಿಗೆ ಬೆಂಕಿ
ಇಂಡೋನೇಷ್ಯಾದಲ್ಲಿ ಮಸೀದಿಯಲ್ಲಿ ಆದ ಬೆಂಕಿ ಅವಘಡದ ದೃಶ್ಯ ಇದಾಗಿದೆ
ಸ್ಪೇನ್ ನ ಬಾರ್ಸಿಲೋನಾದಲ್ಲಿ ಜನರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
21 ಸೆಕೆಂಡುಗಳ ಈ ವೀಡಿಯೋ ವೈರಲ್ ಆಗಿದ್ದು, “ಮುಸ್ಲಿಮರಿಂದ ನಿರಂತರ ಕಿರುಕುಳಕ್ಕೆ ಒಳಗಾದ ಸ್ಪೇನ್ ನ ಸಾರ್ವಜನಿಕರು ಮುಸ್ಲಿಮರ ದೊಡ್ಡ ಮಸೀದಿಗೆ ಬೆಂಕಿ ಹಚ್ಚಿ ಸುಟ್ಟಿ ದ್ದಾರೆ ಈಗ ಎಚ್ಚತ್ತು ಕೊಂಡ ಸ್ಪೇನ್ ಸಾರ್ವಜನಿಕರು…” ಎಂಬ ಹೇಳಿಕೆಯೊಂದಿಗೆ ವೀಡಿಯೋ ಹಂಚಿಕೊಳ್ಳಲಾಗಿದೆ.

ಆದಾಗ್ಯೂ, 2022 ರಲ್ಲಿ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಮಸೀದಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದ ವೀಡಿಯೋ ಇದು ಎಂದು ಸತ್ಯಶೋಧನೆಯಲ್ಲಿ ಕಂಡುಬಂದಿದೆ.
ಇದು ಹೊರತಾಗಿ ಜುಲೈ 12 ರಂದು, ಸ್ಪ್ಯಾನಿಷ್ ನಗರ ಪಿಯೆರಾದಲ್ಲಿನ ಮಸೀದಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಮಸೀದಿ ಉದ್ಘಾಟನೆಗೆ ಎರಡು ದಿನಗಳ ಮೊದಲು ಈ ಘಟನೆ ನಡೆದಿದೆ. ಆದಾಗ್ಯೂ, ಅಗ್ನಿಸ್ಪರ್ಶ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ಮಸೀದಿಯಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Also Read: ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ನ್ಯಾಯಾಧೀಶರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರೇ?
ವೈರಲ್ ವೀಡಿಯೊವನ್ನು ತನಿಖೆ ಮಾಡಲು, ನಾವು ಕೀಫ್ರೇಮ್ಗಳ ಸಹಾಯದಿಂದ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ್ದೇವೆ. ಈ ಸಮಯದಲ್ಲಿ, ಇಂಡೋನೇಷ್ಯಾದ RadioElshinta ಎಕ್ಸ್ ಖಾತೆyಲ್ಲಿ 19 ಅಕ್ಟೋಬರ್ 2022 ರಂದು ಮಾಡಿದ ಪೋಸ್ಟ್ ಬಂದಿದೆ. ಪೋಸ್ಟ್ನಲ್ಲಿನ ವೀಡಿಯೋದ ದೃಶ್ಯಗಳು ವೈರಲ್ ವೀಡಿಯೋಗೆ ಹೋಲಿಕೆಯಾಗುತ್ತವೆ. ‘ಉತ್ತರ ಜಕಾರ್ತಾದ ಇಸ್ಲಾಮಿಕ್ ಸೆಂಟರ್ ಮಸೀದಿಯ ಮಿನಾರ್ ಗೆ ಬೆಂಕಿ ಹೊತ್ತಿಕೊಂಡಿದೆ’ ಎಂದು ಇಂಡೋನೇಷ್ಯಾ ಭಾಷೆಯಲ್ಲಿ ಬರೆಯಲಾಗಿದೆ.

ಆ ಬಳಿಕ ಕೀವರ್ಡ್ ಸರ್ಚ್ ನಡೆಸಲಾಗಿದ್ದು, 19 ಅಕ್ಟೋಬರ್ 2022 ರಂದು ಸಿಎನ್ಎನ್ ಇಂಡೋನೇಷ್ಯಾ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ನಾವು ನೋಡಿದ್ದೇವೆ. ಈ ವೀಡಿಯೋ ವರದಿಯಲ್ಲಿ ವೈರಲ್ ವೀಡಿಯೋಗೆ ಸಂಬಂಧಿಸಿದ ಅನೇಕ ದೃಶ್ಯಗಳಿವೆ. ಅಕ್ಟೋಬರ್ 19, 2022 ರಂದು ಇಸ್ಲಾಮಿಕ್ ಸೆಂಟರ್ ಜಕಾರ್ತಾದ ಮಸೀದಿಯ ಮಿನಾರ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಉತ್ತರ ಜಕಾರ್ತಾ ಮೆಟ್ರೋ ಪೊಲೀಸ್ ಮುಖ್ಯಸ್ಥ ಕೊಂಬಸ್ ಪೋಲ್ ವಿಬೊವೊ ಹೇಳಿದ್ದಾರೆ. ಬೆಂಕಿಯಿಂದಾಗಿ ಗೋಪುರ ಕುಸಿದಿದೆ ಎಂದಿದೆ.

ಇದಲ್ಲದೆ, ಇಂಡೋನೇಷ್ಯಾದ ಮಾಧ್ಯಮ ಸಂಸ್ಥೆ ಕೊಂಪಾಸ್ನ ವೆಬ್ಸೈಟ್ನಲ್ಲಿ 20 ಅಕ್ಟೋಬರ್ 2022 ರಂದು ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. 2022 ರ ಅಕ್ಟೋಬರ್ 19 ರ ಮಧ್ಯಾಹ್ನ, ಜಕಾರ್ತಾ ಇಸ್ಲಾಮಿಕ್ ಸೆಂಟರ್ ನ ಗ್ರ್ಯಾಂಡ್ ಮಸೀದಿಯ ಗುಮ್ಮಟಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಈ ವರದಿಯಲ್ಲಿದೆ. ಮಸೀದಿಯ ಗುಮ್ಮಟಕ್ಕೆ ಬೆಂಕಿ ವ್ಯಾಪಿಸಿದ್ದು, ಬೆಂಕಿಯನ್ನು ನಂದಿಸಲು ಸಾಧ್ಯವಾಗದ ಕಾರಣ ಗುಮ್ಮಟ ಕುಸಿದಿದೆ. ಮಸೀದಿಯ ಗುಮ್ಮಟದ ನವೀಕರಣದ ಕೆಲಸದ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಉತ್ತರ ಜಕಾರ್ತಾ ಮೆಟ್ರೋಪಾಲಿಟನ್ ಪೊಲೀಸರ ಗುಪ್ತಚರ ಮತ್ತು ಭದ್ರತಾ ಮುಖ್ಯಸ್ಥ ಎಕೆಬಿಪಿ ಸಲಾಮತ್ ವಿಬಿಸೊನೊ ಹೇಳಿದ್ದಾರೆ. ಬೆಂಕಿ ಅವಘಡದ ಬಳಿಕ ಮಸೀದಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು ಎಂದಿದೆ.

ನಮ್ಮ ಸತ್ಯಶೋಧನೆಯ ಪ್ರಕಾರ, ಸ್ಪೇನ್ ನ ಬಾರ್ಸಿಲೋನಾದಲ್ಲಿ ಜನರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎನ್ನುವ ಹೇಳಿಕೆ ತಪ್ಪಾಗಿದೆ. ವೈರಲ್ ಆಗುತ್ತಿರುವ ವೀಡಿಯೋ 2022 ರಲ್ಲಿ ಜಕಾರ್ತಾದ ಮಸೀದಿಯಲ್ಲಿ ಸಂಭವಿಸಿದ ಬೆಂಕಿ ಅವಘಡದ್ದಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
Also Read: ಪೊಲೀಸ್ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿರುವ ವೈರಲ್ ವೀಡಿಯೋ ಎಲ್ಲಿಯದ್ದು?
Our Sources
X Post By Radio Elshinta, Dated: October 19, 2022
Report By CNN Indonesia Dated: October 19, 2022
Report By KOMPAS Dated: October 20, 2022
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 4, 2025
Ishwarachandra B G
October 18, 2025
Runjay Kumar
October 13, 2025