Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಭಾರತ ದಾಳಿಯಲ್ಲಿ ಪಾಕಿಸ್ತಾನದ ನೂರ್ ಖಾನ್ ವಿಮಾನ ನಿಲ್ದಾಣ ಧ್ವಂಸ
ಭಾರತ ದಾಳಿಯಲ್ಲಿ ಪಾಕಿಸ್ತಾನದ ನೂರ್ ಖಾನ್ ವಿಮಾನ ನಿಲ್ದಾಣ ಧ್ವಂಸ ಎಂದು ಹಂಚಿಕೊಳ್ಳುತ್ತಿರುವ ವೀಡಿಯೋ ಸುಡಾನ್ ನದ್ದಾಗಿದೆ
ಭಾರತದ ಸೇನಾ ಪಡೆಗಳು ಪಾಕಿಸ್ತಾನದ ನೂರ್ ಖಾನ್ ವಿಮಾನ ನಿಲ್ದಾಣಗಳನ್ನು ಪುಡಿಗಟ್ಟಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಪೆಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ-ಪಾಕಿಸ್ತಾನದ ಮಧ್ಯೆ ಉಂಟಾದ ಯುದ್ಧ ವಾತಾವರಣಕ್ಕೆ ವಿರಾಮ ಬಿದ್ದಿದ್ದು, ಎರಡು ದೇಶಗಳು ಯಾವುದೇ ರೀತಿಯಲ್ಲಿ ದಾಳಿ ಮಾಡದೇ ಇರುವುದಕ್ಕೆ ಒಪ್ಪಂದಕ್ಕೆ ಬಂದಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದರು.
ಅದಾದ ಬಳಿಕ ಭಾರತೀಯ ಸೇನಾ ಪಡೆಗಳು ನಡೆಸಿದ ಕಾರ್ಯಾಚರಣೆಗಳ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದು ಪಾಕಿಸ್ತಾನದ 11 ವಾಯುಪಡೆ ನಿಲ್ದಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದ್ದವು. ಇದಕ್ಕೆ ಪೂರಕವಾಗಿ ವೈರಲ್ ವೀಡಿಯೋವನ್ನು ಹಂಚಿಕೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇವೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಭಾರತೀಯ ವಾಯು ಸೇನೆ ಪಾಕಿಸ್ತಾನದ ನೂರ್ ಖಾನ್ ಏರ್ ಬೇಸ್ ಅನ್ನ ಹೇಗೆ ಹೊಡೆದಿದೆ ಅಂತ” ಎಂದಿದೆ. ಇದೇ ರೀತಿ ಇನ್ನೊಂದು ಹೇಳಿಕೆ ಇಲ್ಲಿದೆ


ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಸೂಡಾನ್ ನದ್ದು ಎಂದು ಕಂಡುಬಂದಿದೆ.
Also Read: ಪಾಕಿಸ್ತಾನದ ವಿವಿಧೆಡೆಗಳಲ್ಲಿ ಭಾರತ ದಾಳಿ ಎಂದು ಲೆಬನಾನ್ ವೀಡಿಯೋ ವೈರಲ್
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ದೊರಕಿದ ಫಲಿತಾಂಶಗಳು, ಈ ವೀಡಿಯೋ ಸೂಡಾನ್ ನ ಖರ್ಟೋಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ್ದು ಎಂದು ಹೇಳಿವೆ.
ಏಪ್ರಿಲ್ 2, 2025ರಂದು HavaSosyalMedya ಎಕ್ಸ್ ಪೋಸ್ಟ್ ಪ್ರಕಾರ, ಸುಡಾನ್ ನ ಖರ್ಟೋಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಸುಡಾನ್ನಲ್ಲಿ ಕ್ಷಿಪ್ರ ಬೆಂಬಲ ಪಡೆಗಳು (RSF) ಮತ್ತು ಸೈನ್ಯದ ಮಧ್ಯೆ ಹೋರಾಟ ನಡೆದು ವಿಮಾನ ನಿಲ್ದಾಣಕ್ಕೆ ಹಾನಿಯಾಗಿದೆ ಎಂದಿದೆ. ಆದರೆ ಈ ಪೋಸ್ಟ್ ನಲ್ಲಿ ಘಟನೆ ನಡೆದ ದಿನಾಂಕದ ಬಗ್ಗೆ ವಿವರ ಕಂಡುಬಂದಿಲ್ಲ. (ಟರ್ಕಿಶ್ ಭಾಷೆಯಿಂದ ಅನುವಾದಿಸಲಾಗಿದೆ)
ಈ ಹಿನ್ನೆಲೆಯಲ್ಲಿ ನಾವು ಇನ್ನಷ್ಟು ಹುಡುಕಾಟ ನಡೆಸಿದ್ದೇವೆ. ಈ ವೇಳೆ ಮಾರ್ಚ್ 27, 2025ರಂದು FL360aero ಎಂಬ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಗಮನಿಸಿದ್ದೇವೆ. ಇದರಲ್ಲಿ ಸುಡಾನ್ನ ಖರ್ಟೋಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KRT/HSSK) ಇತ್ತೀಚಿನ ದೃಶ್ಯಗಳು, ಇದು ಮೇ 2023 ರಲ್ಲಿ ಸುಡಾನ್ ಸೈನ್ಯ ಮತ್ತು ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಘರ್ಷಣೆಯ ಸಮಯದಲ್ಲಿ ಏಪ್ರನ್ನಲ್ಲಿ ಹೆಚ್ಚಿನ ಸಂಖ್ಯೆಯ ವಿಮಾನಗಳು ನಾಶವಾದದ್ದನ್ನು ತೋರಿಸುತ್ತದೆ. ಸುಡಾನ್ ಸೇನೆಯು ವಿಮಾನ ನಿಲ್ದಾಣವನ್ನು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳಿಂದ (RSF) ಮರುವಶಪಡಿಸಿಕೊಳ್ಳುವುದಾಗಿ ಘೋಷಿಸಿದೆ ಎಂದಿದೆ.
ಈ ಫೋಸ್ಟ್ ನಲ್ಲಿ ಘಟನೆಯ ಸಮಯವನ್ನು ಮೇ 2023 ಎಂದು ನಮೂದಿಸಿರುವುದನ್ನು ನಾವು ನೋಡಿದ್ದೇವೆ.
ಮಾರ್ಚ್ 31, 2025ರಂದು africanaviators_official ಇನ್ಸ್ಟಾಗ್ರಾಮ್ ಪೋಸ್ಟ್ ಪ್ರಕಾರವೂ , ಸುಡಾನ್ನ ಖರ್ಟೋಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇ 2023 ರಲ್ಲಿ ಸುಡಾನ್ ಸೈನ್ಯ ಮತ್ತು ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಘರ್ಷಣೆಯ ಸಮಯದಲ್ಲಿ ಸಂಭವಿಸಿದ ವಿಮಾನಗಳ ನಾಶದ ದೃಶ್ಯಾವಳಿ ಇದು ಎಂದು ಹೇಳಿದೆ.

ಈ ಪ್ರಕಾರ, ಇದು ಸುಡಾನ್ ನಲ್ಲಿ ನಾಗರಿಕ ದಂಗೆ ಸಂದರ್ಭದಲ್ಲಿ ಘರ್ಷಣೆ ವೇಳೆ ವಿಮಾಣ ನಿಲ್ದಾಣವನ್ನು ನಾಶ ಮಾಡಿದ ದೃಶ್ಯವಾಗಿದೆ. ಇದು ಭಾರತ ಪಾಕಿಸ್ತಾನದ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ ಕುರಿತ ದೃಶ್ಯವಲ್ಲ ಎಂದು ಗೊತ್ತಾಗಿದೆ.
Also Read: ಯುದ್ಧ ವಿಮಾನ ಚಾಲನೆ ಮಾಡುತ್ತಿರುವವರು ಕರ್ನಲ್ ಸೋಫಿಯಾ ಖುರೇಷಿ ಅಲ್ಲ!
Our Sources
X post By HavaSosyalMedya, April 2, 2025
Facebook Post By FL360aero, March 27, 2025
Facebook Post By africanaviators_official, March 31, 2025
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025