Authors
Claim
ಮಕ್ಕಳನ್ನು ಲ್ಯಾಬ್ ನಲ್ಲಿ ತಯಾರಿಸುವ ತಂತ್ರಜ್ಞಾನ ಬಂದಿದೆ
Fact
ಮಕ್ಕಳನ್ನು ಲ್ಯಾಬ್ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಒಂದು ಕಾಲ್ಪನಿಕ ವೀಡಿಯೋವಾಗಿದೆ. ಇದು ನಿಜವಲ್ಲ
ಮಕ್ಕಳನ್ನು ಲ್ಯಾಬ್ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದಿರುವ ವೈರಲ್ ಹೇಳಿಕೆಯಲ್ಲಿ “ಮಕ್ಕಳನ್ನು ಲ್ಯಾಬ್ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದೇ ಬಿಡ್ತು, ನಿಮಗೆ ಬೇಕಾದ ರೀತಿಯಲ್ಲಿ ಮಕ್ಕಳನ್ನು ಸೃಷ್ಟಿ ಮಾಡಬಹುದು” ಎಂದಿದೆ.
Also Read: ಕರ್ನಾಟಕದಲ್ಲಿ ಮತದಾನಕ್ಕೆ ಹೋಗಲು ದುಬೈ ಅಸೋಸಿಯೇಷನ್ ಆಫ್ ಸುನ್ನಿ ಮುಸ್ಲಿಂ ಸಂಘಟನೆ ನೆರವು ನೀಡಿದೆಯೇ?
ವೈರಲ್ ಆಗಿರುವ ಈ ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಒಂದು ಪರಿಕಲ್ಪನಾತ್ಮಕ ವೀಡಿಯೋ ಆಗಿದ್ದು, ನಿಜವಾದ್ದಲ್ಲ ಎಂದು ಕಂಡುಕೊಂಡಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ “artificial incubator for human babies” ಎಂದು ಕೀವರ್ಡ್ ಸರ್ಚ್ ನಡೆಸಿದ್ದೇವೆ ಈ ವೇಳೆ ಡಿಸೆಂಬರ್ 9, 2022 ರಂದು ಹಾಶಿಮ್ ಅಲ್-ಘೈಲಿಯ ಯೂಟ್ಯೂಬ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೋ ಕಂಡುಬಂದಿದೆ. ಇದು ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನು ನಾವು ಗುರುತಿಸಿದ್ದೇವೆ.
ಸರಿಸುಮಾರು 8:25 ನಿಮಿಷಗಳ ಈ ವೀಡಿಯೋದಲ್ಲಿ, ಎಕ್ಟೋಲೈಫ್ ಸೌಲಭ್ಯದ ವೀಡಿಯೋ ಮುಗಿಯುವ ಸ್ವಲ್ಪ ಮೊದಲು, ಈ ಸೌಲಭ್ಯ ಮತ್ತು ತಂತ್ರಜ್ಞಾನವು ಒಂದು ಪರಿಕಲ್ಪನೆ ಎಂದು ಸ್ಪಷ್ಟವಾಗಿ ಹೇಳುತ್ತದೆ.
ಶೋಧದ ಸಮಯದಲ್ಲಿ ಹಾಶಿಮ್ ಅಲ್-ಘೈಲಿ ವೆಬ್ಸೈಟ್ ಸಹ ಕಂಡುಬಂದಿದೆ. ಅವರ ವೆಬ್ಸೈಟ್ ಪ್ರಕಾರ, ಹಾಶಿಮ್ ಅಲ್-ಘೈಲಿ ಜರ್ಮನಿಯ ಬರ್ಲಿನ್ ಮೂಲದ ಬರ್ಲಿನ್ ಮೂಲದ ಚಲನಚಿತ್ರ ನಿರ್ಮಾಪಕರಾಗಿದ್ದಾರೆ.
ಇನ್ನು “ಎಕ್ಟೋಲೈಫ್: ವಿಶ್ವದ ಮೊದಲ ಕೃತಕ ಗರ್ಭಾಶಯ ಸೌಲಭ್ಯ” ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೋದ ಜೊತೆಗೆ, “ಕೃತಕ ಗರ್ಭಾಶಯ ಸೌಲಭ್ಯವು ವರ್ಷಕ್ಕೆ 30,000 ಶಿಶುಗಳಿಗೆ ಪೋಷಣೆ ನೀಡಬಲ್ಲದು” ಎಂಬ ಶೀರ್ಷಿಕೆಯ ಇನ್ನೊಂದು ವೀಡಿಯೋವನ್ನು ಡಿಸೆಂಬರ್ 9, 2022 ರಂದು ಅಲ್ ಘೈಲಿಯ ವೆರಿಫೈಡ್ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಪೋಸ್ಟ್ ನ ಮೊದಲ ಕಾಮೆಂಟ್ನಲ್ಲಿ, ಅವರು “ಇನ್ನಷ್ಟು ತಿಳಿಯಿರಿ:” ಎಂಬ ಶೀರ್ಷಿಕೆಯ ಮೂರು ಲಿಂಕ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಡಿಸೆಂಬರ್ 9, 2022ರ scienceandstuff.com/EcoLife-artificial-wombs ಕಾಮೆಂಟ್ ನ ಮೊದಲ ಲಿಂಕ್ ನಲ್ಲಿ “ಎಕ್ಸ್ಕ್ಲೂಸಿವ್: ವಿಶ್ವದ ಮೊದಲ ಕೃತಕ ಗರ್ಭಾಶಯ ಸೌಲಭ್ಯಕ್ಕಾಗಿ ಅನಾವರಣಗೊಂಡ ಕಲ್ಪನೆ” ಎಂಬ ಶೀರ್ಷಿಕೆಯ ಲೇಖನವಿದೆ. scienceandstuff.com ಎನ್ನುವುದೂ ಅಲ್ ಘೈಲಿ ಸಹ-ಸ್ಥಾಪಿಸಿದ ವೆಬ್ಸೈಟ್ ಆಗಿದೆ.
ಎರಡನೇ ಲಿಂಕ್ ನಲ್ಲಿ ಎಕ್ಟೋಲೈಫ್ ಸೌಲಭ್ಯದ ಲೋಗೋ, ಚಿತ್ರಗಳು, ವೀಡಿಯೋಗಳು ಮತ್ತು ಮೂರು ಪುಟಗಳ ಪತ್ರಿಕಾ ಪ್ರಕಟಣೆ ಸೇರಿದಂತೆ ಹಲವಾರು ಫೈಲ್‌ಳನ್ನು ಹಂಚಿಕೊಳ್ಳಲಾಗಿದೆ. ಪತ್ರಿಕಾ ಪ್ರಕಟಣೆಯಲ್ಲಿ ಅಲ್ ಘೈಲಿಯ ಕಿರು ಜೀವನಚರಿತ್ರೆಯೂ ಸೇರಿದೆ.
“ಎಕ್ಟೋಲೈಫ್ ಕೃತಕ ಗರ್ಭಾಶಯದ ಪರಿಕಲ್ಪನೆಯ ಸೃಷ್ಟಿಕರ್ತ” ಎಂಬ ಶೀರ್ಷಿಕೆಯ ಪತ್ರಿಕಾ ಪ್ರಕಟಣೆಯೊಂದರಲ್ಲಿ ಹೀಗೆ ಹೇಳಲಾಗಿದೆ: “ಹಾಶಿಮ್ ಅಲ್-ಘೈಲಿ ಜರ್ಮನಿಯ ಬರ್ಲಿನ್ ಮೂಲದ ಚಲನಚಿತ್ರ ನಿರ್ಮಾಪಕ ಮತ್ತು ವಿಜ್ಞಾನ ಸಂವಹನಕಾರ. ಆಣ್ವಿಕ ಜೀವಶಾಸ್ತ್ರಜ್ಞರಾದ ಹಾಶಿಮ್ ಅವರು ವಿಜ್ಞಾನದ ಬಗ್ಗೆ ತಮ್ಮ ಜ್ಞಾನ ಮತ್ತು ಉತ್ಸಾಹವನ್ನು ತಮ್ಮ ಸಾಮಾಜಿಕ ಮಾಧ್ಯಮ ಮತ್ತು ವೀಡಿಯೋ ವಿಷಯದ ಮೂಲಕ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಬಳಸುತ್ತಾರೆ. ಮೂರನೇ ಲಿಂಕ್, muse.io/hashemalghaili, ಎಕ್ಟೋಲೈಫ್ ಯೂಟ್ಯೂಬ್ ವೀಡಿಯೋವನ್ನು ಹೊಂದಿದೆ.
ಅನಂತರದ ಹುಡುಕಾಟದಲ್ಲಿ, ನಾವು ಹಾಶಿಮ್ ಅಲ್ ಘೈಲಿಯ ಇನ್ಸ್ಟಾಗ್ರಾಮ್ ಪುಟವನ್ನು ಕಂಡುಕೊಂಡಿದ್ದೇವೆ. ಡಿಸೆಂಬರ್ 13, 2022 ರಂದು, ಹಫಿಂಗ್ಟನ್ ಪೋಸ್ಟ್ನ ಯುಕೆ ಆವೃತ್ತಿಯಲ್ಲಿ ಪ್ರಕಟವಾದ ಲೇಖನದ ಉಲ್ಲೇಖವನ್ನು ಒಳಗೊಂಡ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “ಕೃತಕ ಗರ್ಭಾಶಯದ ವೀಡಿಯೋ ನಿಜವಲ್ಲ, ಆದರೆ ವಿಜ್ಞಾನಿಗಳು ಭವಿಷ್ಯದಲ್ಲಿ ಇದು ವಾಸ್ತವವಾಗಬಹುದು ಎಂದು ಹೇಳುತ್ತಿದ್ದಾರೆ” ಎಂದು ಲೇಖನದ ಶೀರ್ಷಿಕೆ ನೀಡಲಾಗಿದೆ.
ಲಂಡನ್ ನ ಕಿಂಗ್ಸ್ ಕಾಲೇಜಿನಲ್ಲಿ ಪ್ರಸೂತಿಶಾಸ್ತ್ರದ ಪ್ರಾಧ್ಯಾಪಕರಾದ ಆಂಡ್ರ್ಯೂ ಶೆನ್ನಾನ್ ಎಕ್ಟೋಲೈಫ್ ಸೌಲಭ್ಯ ಎಂದು ಕರೆಯಲ್ಪಡುವ ಕೃತಕ ಗರ್ಭಾಶಯದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದನ್ನು ಈ ಪೋಸ್ಟ್ನಲ್ಲಿನಲ್ಲಿದೆ. ಪ್ರೊ. ಆಂಡ್ರ್ಯೂ ಶೆನ್ನಾನ್ “ಸೈದ್ಧಾಂತಿಕ ದೃಷ್ಟಿಕೋನದಿಂದ, ಕೃತಕ ಗರ್ಭಾಶಯವು ಸಾಧ್ಯವಿದೆ. ನೀವು ಮಾಡಬೇಕಾಗಿರುವುದು ಅದಕ್ಕೆ ಅಗತ್ಯವಾದ ಇಂಧನ ಮತ್ತು ಆಮ್ಲಜನಕದೊಂದಿಗೆ ಸರಿಯಾದ ವಾತಾವರಣವನ್ನು ಒದಗಿಸುವುದು. ಅದನ್ನು ಸಾಧಿಸಲು ತಂತ್ರಜ್ಞಾನಗಳಿವೆ ಎಂದು ನಾನು ಭಾವಿಸುತ್ತೇನೆ. ಶಿಶುಗಳು ಬೇಗನೆ ಹೊರಬರುತ್ತವೆ ಮತ್ತು ಇನ್ಕ್ಯುಬೇಟರ್ಗಳಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ.” ಎಂದು ಹೇಳಿದ್ದಾರೆ.
Conclusion
ಮಕ್ಕಳನ್ನು ಲ್ಯಾಬ್ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಒಂದು ಕಾಲ್ಪನಿಕ ವೀಡಿಯೋವಾಗಿದೆ.
Also Read: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆಯೇ?
Result: Missing Context
Our Sources:
YouTube video of Hashem Al-Ghaili, Dated: December 9,2022
Website of Hashem Al-Ghaili
Facebook post of Hashem Al-Ghaili, Dated: December 9,2022
Article in the website scienceandstuff.com, Dated: December 9, 2022
Instagram post of Hashem Al-Ghaili Dated: December 13, 2022
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.