Sunday, December 21, 2025

Fact Check

Fact Check: ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?

Written By Kushel Madhusoodan, Translated By Ishwarachandra B G, Edited By Pankaj Menon
Jan 9, 2024
banner_image

Claim
ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ

Fact
ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದೇಗುಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದೇಗುಲದಿಂದ ಹೊರಗೆ ಹಾಕಿದ್ದಾರೆ. ಇದು 2023ರ ಪ್ರಕರಣವಾಗಿದ್ದು ಯಾವುದೇ ಜಾತಿ ಕಾರಣ ಹೊಂದಿಲ್ಲ

ದೇವಸ್ಥಾನಕ್ಕೆ ನುಗ್ಗಿದ ದಲಿತ ಯುವತಿಯ ಮೇಲೆ ಬ್ರಾಹ್ಮಣ ಅರ್ಚಕರೊಬ್ಬರು ಹಲ್ಲೆ ನಡೆಸಿ, ಆಕೆಯ ಕೂದಲನ್ನು ಎಳೆದು, ಹೊರ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂದು ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಟ್ವಿಟರ್ ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ ದಲಿತ ಮಹಿಳೆ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕೆ ಹೀಗೆ ಮಾಡಲಾಗಿದೆ ಎಂದುಹೇಳಲಾಗಿದೆ.  

Also Read: ಅಯೋಧ್ಯೆಯಲ್ಲಿ ಜಟಾಯು ಪಕ್ಷಿ ರೀತಿ ದೊಡ್ಡ ಗಾತ್ರದ ಹದ್ದುಗಳು ಕಂಡುಬಂದಿವೆಯೇ?

ಕ್ಲೇಮ್‌ ಗಳ ಆರ್ಕೈವ್ ಆವೃತ್ತಿ ಇಲ್ಲಿ, ಇಲ್ಲಿದೆ.

ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

Fact Check/ Verification

ಸತ್ಯಶೋಧನೆಯ ಭಾಗವಾಗಿ ಮೊದಲು ನ್ಯೂಸ್‌ ಚೆಕರ್, ಕೀವರ್ಡ್‌ ಸರ್ಚ್ ನಡೆಸಿದ್ದು, ಹಲವು ವರದಿಗಳು ಲಭ್ಯವಾಗಿವೆ. ಇವುಗಳಲ್ಲಿ ಕಂಡುಬಂದಂತೆ ಘಟನೆ ಜನವರಿ 2023 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದಾಗಿದೆ. ಆ ಸಂದರ್ಭ ವೆಂಕಟೇಶ್ವರ ದೇವರ ಪತ್ನಿ ಎಂದು ಹೇಳಿದ ಮಹಿಳೆಯೊಬ್ಬರು ದೇವರ ಮೂರ್ತಿ ಪಕ್ಕದಲ್ಲಿ ಕೂರಲು ಯತ್ನಿಸಿದ್ದಾರೆ ಎಂದಿದೆ. ಈ ವರದಿಗಳನ್ನು ಇಲ್ಲಿಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಜನವರಿ 6, 2023ರ ಟೈಮ್ಸ್ ಆಫ್‌ ಇಂಡಿಯಾ ವರದಿಯ ಪ್ರಕಾರ “ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರೊಬ್ಬರು ಮಹಿಳೆಗೆ ಕಪಾಳಮೋಕ್ಷ ಮಾಡಿ, ಕೂದಲನ್ನು ಹಿಡಿದು ದೇವಾಲಯದ ಹೊರಗೆ ಎಳೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆ ಡಿಸೆಂಬರ್ 21 ರಂದು ನಡೆದಿದೆ ಎಂದು ಹೇಳಲಾಗಿದೆ. ವೀಡಿಯೋದಲ್ಲಿ, ಮಹಿಳೆ ಮತ್ತು ಅರ್ಚಕರು ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು ಮತ್ತು ಮಹಿಳೆ ದೇವಾಲಯದ ಒಳಗೆ ಇರುವಂತೆ ಹೇಳುತ್ತಾಳೆ, ಮತ್ತು ಅರ್ಚಕರು ಆಕೆಯನ್ನು ಹೊರ ಹಾಕಲು ಹಠ ಹಿಡಿದಂತೆ ತೋರುತ್ತದೆ. ಮಹಿಳೆ ಇದನ್ನು ಪ್ರತಿರೋದಿಸುತ್ತಾಳೆ. ಬಳಿಕ ಅರ್ಚಕರು ಅವಳ ಕೂದಲನ್ನು ಹಿಡಿದು ಅವಳನ್ನು ಕಪಾಳಮೋಕ್ಷ ಮಾಡುತ್ತಾನೆ. ಮಹಿಳೆ ಕೆಳಗೆ ಬೀಳುತ್ತಾಳೆ. ಆದರೆ ಅರ್ಚಕ ತನ್ನ ಕೃತ್ಯವನ್ನು ನಿಲ್ಲಿಸದೆ, ಆಕೆಯ ಕೂದಲನ್ನು ಹಿಡಿದು ಹೊರಗೆ ಎಳೆಯುತ್ತಾನೆ. ಅರ್ಚಕರಂತೆ ಬಟ್ಟೆ ಧರಿಸಿರುವ ಮೂವರು ಗರ್ಭಗುಡಿಯಲ್ಲಿದ್ದರೂ ಅವರ್ಯಾರೂ ಕೃತ್ಯವನ್ನು ತಡೆಯಲು ಯತ್ನಿಸುವುದಿಲ್ಲ” ಎಂದಿದೆ.

Also Read: ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ ವೀಡಿಯೋ ನಿಜವೇ?

ಜನವರಿ 7, 2023ರ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, “ ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಆವರಣದಿಂದ ಮಹಿಳೆಯೊಬ್ಬರನ್ನು ಥಳಿಸಿ ಹೊರಗೆ ಎಳೆದೊಯ್ದ ಆರೋಪದ ಮೇಲೆ ದೇವಾಲಯದ ಅಧಿಕಾರಿಯೊಬ್ಬರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ದೂರಿನಲ್ಲಿ ಸಂತ್ರಸ್ತೆ ಯಾವುದೇ ಪರಿಶಿಷ್ಟ ಜಾತಿ ಅಥವಾ ಪಂಗಡದ ಸದಸ್ಯ ಎಂದು ಗುರುತಿಸದ ಕಾರಣ ಪೊಲೀಸರು ಎಸ್ಸಿ / ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ ಎಂದು ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅನೂಪ್ ಶೆಟ್ಟಿ  ಹೇಳಿದ್ದಾರೆ” ಎಂದು ವರದಿಯಲ್ಲಿದೆ.

ಜನವರಿ 9, 2023ರ ಡೆಕ್ಕನ್‌ ಹೆರಾಲ್ಡ್ ವರದಿಯ ಪ್ರಕಾರ, “ವೆಂಕಟೇಶ್ವರ ದೇವರು ತನ್ನ ಪತಿ ಎಂದು ಮಹಿಳೆ ಹೇಳಿಕೊಂಡಿದ್ದು, ಗರ್ಭಗುಡಿಯಲ್ಲಿರುವ ವಿಗ್ರಹದ ಪಕ್ಕದಲ್ಲಿ ಕುಳಿತುಕೊಳ್ಳಲು ಬಯಸಿದ್ದಳು ಎಂದು ಆರೋಪಿ ಮುನಿಕೃಷ್ಣ ಪೊಲೀಸರಿಗೆ ತಿಳಿಸಿದ್ದಾನೆ. ಆಕೆಯ ಬೇಡಿಕೆಯನ್ನು ತಿರಸ್ಕರಿಸಿದಾಗ, ಅವಳು ಪುರೋಹಿತನ ಮೇಲೆ ಉಗುಳಿದಳು, ನಂತರ ಅವಳನ್ನು ಹೊರಹೋಗುವಂತೆ ಹೇಳಲಾಯಿತು. ಮಹಿಳೆ ಕೇಳದ ಕಾರಣ, ಅವಳನ್ನು ಥಳಿಸಿ ಹೊರಗೆ ಎಳೆದೊಯ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ”. ಈ ವರದಿಯ ಪ್ರಕಾರ, “ಮುನಿಕೃಷ್ಣಪ್ಪ ತನ್ನ ಮೇಲೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹಿಳೆಯ ದೂರಿನಲ್ಲಿ ತಿಳಿಸಲಾಗಿದ್ದರೂ, ಪೊಲೀಸರು ಆಕೆ ದಲಿತಳಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ನಾನು ಕೊಳಕಾಗಿದ್ದೇನೆ ಮತ್ತು ಸ್ನಾನ ಮಾಡುವುದಿಲ್ಲ ಎಂದು ಹೇಳಿ ಮುನಿಕೃಷ್ಣಪ್ಪ ನನಗೆ ದೇವರ ದರ್ಶನಕ್ಕೆ ಅವಕಾಶ ನೀಡಲಿಲ್ಲ. ಅವರು ನನ್ನನ್ನು ಹುಚ್ಚನೆಂದು ಕರೆದರು, ತಲೆ ಮತ್ತು ಕಾಲಿಗೆ ಹೊಡೆದರು ಮತ್ತು ನನ್ನನ್ನು ಹೊರಗೆ ಎಳೆದರು” ಎಂದು ಹೇಳಿದ್ದಾಗಿ ಇದೆ.

ಜನವರಿ 7, 2023 ರ ದಿ ನ್ಯೂಸ್ ಮಿನಿಟ್ ವರದಿ ಪ್ರಕಾರ, “ಮುನಿಕೃಷ್ಣ ಎಂಬ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ತಿಗಳ ಸಮುದಾಯಕ್ಕೆ ಸೇರಿದವಳು ಎಂದು ಪೊಲೀಸ್ ಅಧಿಕಾರಿಗಳು ಟಿಎನ್ಎಂಗೆ ತಿಳಿಸಿದ್ದಾರೆ, ಆದರೆ ಇದು ದೇವಾಲಯಕ್ಕೆ ಪ್ರವೇಶ ನಿರಾಕರಿಸದ ಜಾತಿ ಆಧರಿತ ಪ್ರಕರಣ ಎಂಬುದನ್ನು ನಿರಾಕರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ, ಎಸ್ಸಿ / ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಯಾವುದೇ ಪ್ರಕರಣ ದಾಖಲಿಸಿಲ್ಲ” ಎಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಮೂಲಗಳಿಂದ ನಾವು ಎಫ್‌ಐಆರ್ ವರದಿಯನ್ನು ಪಡೆದುಕೊಂಡಿದ್ದು, ಆ ಪ್ರಕಾರ 2022 ಡಿಸೆಂಬರ್ ನಲ್ಲಿ ನಡೆದ ಘಟನೆ ಇದಾಗಿದ್ದು, 2023 ಜನವರಿಯಲ್ಲಿ ದೂರು ದಾಖಲಾಗಿದೆ. ಮತ್ತು ಎಫ್‌ಐಆರ್ ಪ್ರಕಾರ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಕಂಡುಬಂದಿಲ್ಲ.

ಸತ್ಯಶೋಧನೆಯ ಭಾಗವಾಗಿ ನಾವು ಸಂತ್ರಸ್ತೆಯ ಪತಿ ರವಿಕುಮಾರ್ ಅವರನ್ನು ಸಂಪರ್ಕಿಸಿದ್ದೇವೆ. ಈ ವೇಳೆ ಅವರು ಸ್ಪಷ್ಟಪಡಿಸಿ, ಪ್ರಕರಣದಲ್ಲಿ ಜಾತಿ ವಿಚಾರವಿಲ್ಲ, ಮತ್ತು ನಾವು ದಲಿತ ಸಮುದಾಯದವರಲ್ಲ. ದೇಗುಲ ಉಸ್ತುವಾರಿ ನಡೆಸುತ್ತಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾರೆ.  

Conclusion

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ದೇವಸ್ಥಾನಕ್ಕೆ ನುಗ್ಗಿದ ದಲಿತ ಯುವತಿಯ ಮೇಲೆ  ಬ್ರಾಹ್ಮಣ ಅರ್ಚಕರೊಬ್ಬರು ಹಲ್ಲೆ ನಡೆಸಿ, ಆಕೆಯ ಕೂದಲನ್ನು ಎಳೆದು, ಹೊರ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನವುದು ತಪ್ಪಾದ ಸಂದರ್ಭವಾಗಿದೆ.

Also Read: ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರಾ?

Result: False

Our Sources:
Report By Times of India report, Dated: January 6, 2023

Report By Hindustan Times report, Dated: January 7, 2023

Report By Deccan Herald report, Dated: January 9, 2023

Report By The News Minute report, Dated:  January 7, 2023

Conversation with Ravi Kumar, victims husband

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,641

Fact checks done

FOLLOW US
imageimageimageimageimageimageimage