Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸರ್ಕಾರದ ಹೊಸ ಯೋಜನೆ ರಕ್ತದ ಅವಶ್ಯಕತೆಗೆ “104” ಹೊಸ ಹೆಲ್ಪ್ ಲೈನ್
ರಕ್ತದ ಅವಶ್ಯಕತೆಗೆ ಇಂತಹ ಯಾವುದೇ ಹೆಲ್ಪ್ ಲೈನ್ ಚಾಲ್ತಿಯಲ್ಲಿ ಇಲ್ಲ
ಸರ್ಕಾರದ ಹೊಸ ಯೋಜನೆ ರಕ್ತದ ಅವಶ್ಯಕತೆಗೆ ‘104’ ಹೊಸ ಹೆಲ್ಪ್ ಲೈನ್ ಗೆ ಕರೆ ಮಾಡಬಹುದು ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಪ್ ನಲ್ಲಿ ಕಂಡುಬಂದ ಈ ಮೆಸೇಜ್ ನಲ್ಲಿ, “ಸರ್ಕಾರದ ಹೊಸ ಯೋಜನೆ… ಇಂದಿನಿಂದ ಭಾರತದಲ್ಲಿ ರಕ್ತದ ಅವಶ್ಯಕತೆಗಳಿಗಾಗಿ “104” ಎಂಬ ವಿಶೇಷ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಈ ಸೇವೆಯ ಹೆಸರನ್ನು “Blood_On_Call” ಎಂದು ಕರೆಯುತ್ತಾರೆ. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಲೋಮೀಟರ್ ವ್ಯಾಪ್ತಿಯೊಳಗೆ, ನಾಲ್ಕು ಗಂಟೆಗಳ ಒಳಗೆ ರಕ್ತವನ್ನು ತಲುಪಿಸಲಾಗುತ್ತದೆ… ಒಂದು ಬಾಟಲಿಗೆ ₹450/- ಮತ್ತು ಸಾರಿಗೆ ಶುಲ್ಕವಾಗಿ ₹100/- ವಿಧಿಸಲಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ನಿಮ್ಮ ಸ್ನೇಹಿತರು, ಬಂಧುಗಳು ಮತ್ತು ಗುಂಪುಗಳಲ್ಲಿ ಹಂಚಿಕೊಳ್ಳಿ. ಗಮನಿಸಿ – ಈ ಸೌಲಭ್ಯ ಅನೇಕ ಜೀವಗಳನ್ನು ಉಳಿಸಬಹುದು.” ಎಂದಿದೆ.

ನ್ಯೂಸ್ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಕೊಂಡಿದೆ.
Also Read: ಅಫ್ಘಾನಿಸ್ತಾನದ ದಾಳಿಗೆ ಹೆದರಿ ಪಾಕಿಸ್ತಾನಿ ಸೈನಿಕನ ಅಳು, ವೈರಲ್ ವೀಡಿಯೋ ಹಿಂದಿನ ಸತ್ಯವೇನು?
ಸತ್ಯಶೋಧನೆಗಾಗಿ ನಾವು ಮೊದಲು ಗೂಗಲ್ ನಲ್ಲಿ ಸರ್ಚ್ ನಡೆಸಿದ್ದೇವೆ. ಈ ವೇಳೆ, 104 ಎಂಬ ರಕ್ತದ ಹೆಲ್ಪ್ ಲೈನ್ ಆರಂಭಿಸಿದ ಬಗ್ಗೆ ಯಾವುದೇ ಮಾಧ್ಯಮ ವರದಿಗಳು, ಸರ್ಕಾರದ ಅಧಿಕೃತ ಹೇಳಿಕೆಗಳು ಕಂಡುಬಂದಿಲ್ಲ.
ಹೆಚ್ಚಿನ ಶೋಧ ನಡೆಸಿದಾಗ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ನವೆಂಬರ್ 5, 2024ರಂದು ಮಾಡಿದ ಎಕ್ಸ್ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಈ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದಾಗಿದೆ. ಸರ್ಕಾರ ಅಂತಹ ಯಾವುದೇ ಯೋಜನೆ ಹೊರತಂದಿಲ್ಲ, 104 ಹೆಲ್ಪ್ ಲೈನ್ ಸಂಖ್ಯೆಯನ್ನು ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಲ್ಪ್ ಲೈನ್ ಆಗಿ ಬಳಸಲಾಗುತ್ತಿದೆ ಎಂದಿದೆ.
ಅದೇ ರೀತಿ ಕರ್ನಾಟಕದಲ್ಲಿ 104 ಎಂಬ ಹೆಲ್ಪ್ ಲೈನ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಂದಿದ್ದು, ಆರೋಗ್ಯ ಸೇವೆಗಳಿಗೆ ಮೀಸಲಾಗಿರಿಸಿದೆ. ಕೋವಿಡ್ ಸಂದರ್ಭದಲ್ಲಿಕೋವಿಡ್-19 ರಾಜ್ಯ ನಿಯಂತ್ರಣ ಕೊಠಡಿಯ ಸಂಖ್ಯೆಯಾಗಿ ಇದು ಕಾರ್ಯನಿರ್ವಹಣೆಯಲ್ಲಿತ್ತು ಎಂದು ಗೊತ್ತಾಗಿದೆ. ಈ ಮಾಹಿತಿಯು ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣದ ಸಹಾಯವಾಣಿ ಸಂಪರ್ಕ ವಿಭಾಗದಲ್ಲಿದೆ.

ಪರಿಶೀಲನೆಗಾಗಿ ನ್ಯೂಸ್ ಚೆಕರ್ 104ಗೆ ಡಯಲ್ ಮಾಡಿ ನೋಡಿದಾಗ, ಕರೆ ಯಾವದಕ್ಕೂ ಕನೆಕ್ಟ್ ಆಗದೇ ಇರುವುದನ್ನು ಕಂಡುಕೊಂಡಿದೆ.
ಆದ್ದರಿಂದ 104 ಮೂಲಕ ಸದ್ಯಯಾವುದೇ ಸಹಾಯವಾಣಿಗಳು ಲಭ್ಯವಿಲ್ಲ ಎಂಬುದು ಗೊತ್ತಾಗಿದೆ.
ಈ ಸತ್ಯಶೋಧನೆಯ ಪ್ರಕಾರ, ರಕ್ತದ ಅವಶ್ಯಕತೆಗೆ “104” ಹೆಲ್ಪ್ ಲೈನ್ ಗೆ ಕರೆ ಮಾಡಬಹುದು ಎಂಬ ಮೆಸೇಜ್ ತಪ್ಪಾಗಿದೆ ಎಂದು ತಿಳಿದುಬಂದಿದೆ.
Also Read: ಪಾಕಿಸ್ತಾನದ ಯುದ್ಧ ವಿಮಾನವನ್ನ ಹೊಡೆದುಹಾಕಿದ ಆಫ್ಘಾನಿಸ್ತಾನ, ವೈರಲ್ ವೀಡಿಯೋ ನಿಜವೇ?
Our Sources
X post by PIB, Dated November 5, 2024
Karnataka Government website, Helpline list
Ishwarachandra B G
June 27, 2025
Ishwarachandra B G
June 12, 2025
Ishwarachandra B G
November 21, 2024