Authors
Claim
ಆರೆಸ್ಸೆಸ್ ಶಾಖೆಯಲ್ಲಿ ನೀಡುವ ಶಿಕ್ಷಣದ ಮಾಡೆಲ್
Fact
ಆರೆಸ್ಸೆಸ್ ಶಾಖೆಯಲ್ಲಿ ಮಕ್ಕಳಿಗೆ ಹೊಡೆಯಲಾಗುತ್ತಿದೆ. ಇದು ಶಿಕ್ಷಣದ ಮಾಡೆಲ್ ಎಂದು ವೈರಲ್ ವೀಡಿಯೋದೊಂದಿಗೆ ಹೇಳಿರುವುದು ತಪ್ಪು. ಇದು ಗುರುಕುಲ ಎಂಬ ಸಂಸ್ಕೃತ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗೆ ಹೊಡೆದ ಘಟನೆ
ಆರೆಸ್ಸೆಸ್ ಶಾಖೆಯಲ್ಲಿ ನೀಡುವ ಶಿಕ್ಷಣ ಈ ರೀತಿ ಇದೆ ಎಂದು ಶಿಕ್ಷಕರಂತೆ ಕಾಣುವ ವ್ಯಕ್ತಿ ಮಕ್ಕಳಿಗೆ ಹೊಡೆಯುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ಕ್ಲೇಮಿನಲ್ಲಿ ಶಿಕ್ಷಕರಂತೆ ಕಾಣುವ ವ್ಯಕ್ತಿ ಬಾಲಕನೊಬ್ಬನಿಗೆ ಹೊಡೆಯುತ್ತಾರೆ. ಇದಕ್ಕೆ ““ಆರೆಸ್ಸೆಸ್ ಶಾಖೆಯಲ್ಲಿ ನೀಡುವ ಶಿಕ್ಷಣದ ಮಾಡೆಲ್..” ಎಂದು ಹೇಳಲಾಗಿದೆ.
ಈ ಕುರಿತು ಸತ್ಯಶೋಧನೆ ನಡೆಸುವಂತೆ ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ಗೆ ಬಳಕೆದಾರರೊಬ್ಬರು ಮನವಿ ಮಾಡಿದ್ದು, ಅದನ್ನು ಸತ್ಯಶೋಧನೆಗೆ ಸ್ವೀಕರಿಸಲಾಗಿದೆ.
Also Read: ಚಪ್ಪಲಿಯಲ್ಲಿ ಹೊಡೆದಾಡಿದ ಕಾಂಗ್ರೆಸ್ ನಾಯಕರು ಎಂಬ ವೀಡಿಯೋ ಹಿಂದಿನ ಸತ್ಯ ಏನು?
Fact Check/Verification
ಆರೆಸ್ಸೆಸ್ ಶಾಖೆಯಲ್ಲಿ ಮಕ್ಕಳಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂಬ ವೈರಲ್ ವೀಡಿಯೋದ ದೃಶ್ಯಾವಳಿಗಳ ಕೀಫ್ರೇಮ್ಗಳನ್ನು ತೆಗೆದು ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಇದು ಉತ್ತರ ಪ್ರದೇಶದ ಸೀತಾಪುರ ಪ್ರದೇಶದ ಸಂಸ್ಕೃತ ಶಾಲೆಯೊಂದರಲ್ಲಿ ನಡೆದಿದೆ ಎಂಬುದು ದೃಢಪಟ್ಟಿದೆ.
ಶೋಧದ ವೇಳೆ ಅಕ್ಟೋಬರ್, 9 2023ರಂದು ಇಂಡಿಯಾ ಪೋಸ್ಟ್ಸ್ ಇಂಗ್ಲಿಷ್ ನಲ್ಲಿ ವರದಿಯಾಗಿರುವುದನ್ನು ಗುರುತಿಸಿದ್ದೇವೆ. ಇದರ ಪ್ರಕಾರ ಉತ್ತರಪ್ರದೇಶದ ಸೀತಾಪುರದ ಗುರುಕುಲ ಸಂಸ್ಕೃತ ಶಾಲೆಯಲ್ಲಿ ಘಟನೆ ನಡೆದಿದೆ.
ಇನ್ನೂ ಹೆಚ್ಚಿನ ಶೋಧ ನಡೆಸಿದಾಗ, ಆಜ್ ತಕ್, ಅಮರ್ ಉಜಾಲಾ ಮತ್ತು ಯುಪಿ ಇಂಡಿಯಾ ನ್ಯೂಸ್ ಸೇರಿದಂತೆ ವಿವಿಧ ಮಾಧ್ಯಮಗಳು ಸಹ ಈ ಘಟನೆಯ ಬಗ್ಗೆ ವರದಿ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಅವುಗಳಲ್ಲಿಯೂ, ಈ ಘಟನೆ ಸೀತಾಪುರ ಗುರುಕುಲ ಶಾಲೆಯಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ಆರೆಸ್ಸೆಸ್ ಶಾಖೆಯ ಅಥವಾ ಆರೆಸ್ಸೆಸ್ ತರಬೇತಿ ಶಿಬಿರ ಎನ್ನುವುದು ಇಲ್ಲಿ ಉಲ್ಲೇಖವಾಗಿಲ್ಲ.
Also Read: ಇಸ್ರೇಲ್ ಸ್ನಿಪರ್ ಗಳು ಶೂಟ್ ಮಾಡುತ್ತಿರುವ ದೃಶ್ಯ ಎನ್ನುವುದು ನಿಜವಾದ್ದೇ?
ಈ ಘಟನೆ ಬಗ್ಗೆ ಹೆಚ್ಚಿನ ಶೋಧ ನಡೆಸಿದ ವೇಳೆ ಸೀತಾಪುರ ಪೊಲೀಸರು ಘಟನೆ ಕುರಿತು ವಿವರಿಸಿದ ವೀಡಿಯೋ ನಮಗೆ ಎಕ್ಸ್ ನಲ್ಲಿ ಲಭ್ಯವಾಗಿದೆ. ವೈರಲ್ ಆಗಿರುವ ವೀಡಿಯೋ ಎರಡು ತಿಂಗಳ ಹಿಂದೆ ತೆಗೆದಿದ್ದಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಗುರುಕುಲದ ಸತೀಶ್ ಜೋಶಿ ಎಂಬ ಶಿಕ್ಷಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಇದರಲ್ಲಿದೆ.
ಇದರೊಂದಿಗೆ ಪೊಲೀಸರು ಸಂಬಂಧಪಟ್ಟ ಶಾಲೆಗೆ ಹೋಗಿ ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ವಿಚಾರಿಸಲಾಗಿದೆ ಎಂದು ಸೀತಾಪುರ ಪೊಲೀಸರು ಎಕ್ಸ್ ನಲ್ಲಿ ಹೇಳಿಕೊಂಡಿದ್ದಾರೆ.
ಲಭ್ಯವಿರುವ ಮೂಲಗಳ ಪ್ರಕಾರ, ವೈರಲ್ ಆಗುತ್ತಿರುವ ಈ ಘಟನೆ ಆರೆಸ್ಸೆಸ್ ಶಾಖೆಯದ್ದಲ್ಲ. ಅಥವಾ ತರಬೇತಿ ಶಿಬಿರದ್ದಲ್ಲ, ಬದಲಾಗಿ ಗುರುಕುಲ ಎಂಬ ಶಾಲೆಯಲ್ಲಿ ನಡೆದಿದ್ದಾಗಿದೆ.
Also Read: ಹಮಾಸ್ ದಾಳಿಕೋರರು ಇಸ್ರೇಲ್ ವ್ಯಕ್ತಿಯ ಎದೆ ಸೀಳಿ ಹೃದಯ ಹೊರ ತೆಗೆದಿದ್ದಾರೆಯೇ?
Conclusion
ಸತ್ಯಶೋಧನೆಯ ಪ್ರಕಾರ ಆರೆಸ್ಸೆಸ್ ಶಾಖೆಯಲ್ಲಿ ಮಕ್ಕಳಿಗೆ ಹೊಡೆಯಲಾಗುತ್ತಿದೆ. ಇದು ಶಿಕ್ಷಣದ ಮಾಡೆಲ್ ಎಂದು ವೈರಲ್ ವೀಡಿಯೋದೊಂದಿಗೆ ಹೇಳಿರುವ ಹೇಳಿಕೆ ತಪ್ಪಾಗಿದೆ.
Result: Partly False
Our Sources
Report By Posts English, Dated: October 09, 2023
Tweet By Sitapur Police, Dated: October 09, 2023
Tweet By Sitapur Police, Dated: October 09, 2023
ಈ ಲೇಖನ ಮೊದಲು ನ್ಯೂಸ್ಚೆಕರ್ ತಮಿಳಿನಲ್ಲಿ ಪ್ರಕಟವಾಗಿದ್ದು, ಅದು ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.