Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಾಮಸೇತು ಅವಶೇಷ ನೀರೊಳಗೆ ಅನ್ವೇಷಿಸುವ ಸ್ಕ್ಯೂಬಾಡೈವರ್ ಗಳು
ಇದು ನಿಜವಾದ್ದಲ್ಲ, ಎಐ ಮೂಲಕ ಮಾಡಲಾಗಿದೆ
ರಾಮಸೇತುವಿನ ಅವಶೇಷಗಳನ್ನು ಅನ್ವೇಷಿಸುವ ನೀರೊಳಗಿನ ವೀಡಿಯೋಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಸ್ಕೂಬಾ ಡೈವರ್ಗಳ ತಂಡವು ಬಂಡೆಗಳು, ಪ್ರಾಚೀನ ರಚನೆಗಳ ಅವಶೇಷಗಳುನ್ನು ಪರಿಶೀಲಿಸುತ್ತಿರುವುದನ್ನು ತೋರಿಸುತ್ತದೆ.
ಈ ವೀಡಿಯೋಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ-ಎಐ)ನಿಂದ ಮಾಡಿದ್ದು ಎಂದು ಕಂಡುಹಿಡಿದಿದೆ.
ವೈರಲ್ ಕ್ಲಿಪ್ನ ಕೀಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ರಾಮ ಸೇತುವಿನ ಅವಶೇಷಗಳನ್ನು ತೋರಿಸುವುದಾಗಿ ಹೇಳಿಕೊಳ್ಳುವ ವೀಡಿಯೊವನ್ನು ಒಳಗೊಂಡ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಸಂಬಂಧಿಸಿದ ಅಧಿಕಾರಿಗಳ ಹೇಳಿಕೆಗಳು ಸಿಕ್ಕಿಲ್ಲ.
ಆ ನಂತರ ನಾವು AI ಪತ್ತೆ ವೇದಿಕೆ ಹೈವ್ ಮಾಡರೇಶನ್ನಲ್ಲಿ ವೀಡಿಯೋದ ಒಂದು ಭಾಗವನ್ನು ಪರಿಶೀಲಿಸಿದ್ದೇವೆ, ಅದು ಮಾಧ್ಯಮವು ಎಐ ರಚಿತ ಅಥವಾ ಡೀಪ್ಫೇಕ್ ಆಗಿದೆ ಎಂದು 99.9% ಸಾಧ್ಯತೆಯನ್ನು ಹೇಳಿದೆ.
ಮತ್ತೊಂದು ಎಐ ಪತ್ತೆ ವೆಬ್ಸೈಟ್ WasItAI ವೈರಲ್ ಕ್ಲಿಪ್ನಿಂದ ವಿವಿಧ ಚಿತ್ರಗಳನ್ನು ವಿಶ್ಲೇಷಿಸಿ, “ಈ ಚಿತ್ರ ಅಥವಾ ಅದರ ಭಾಗವನ್ನು ಎಐ ಮೂಲಕ ರಚಿಸಲಾಗಿದೆ ಎಂದು ವಿಶ್ವಾಸವಿದೆ” ಎಂದು ಹೇಳಿದೆ.
ಇದಲ್ಲದೆ, ನಾವು @bharathfx1 ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ನೋಡಿದ್ದು, ಅದರಲ್ಲಿ ಅವರ ವಾಟರ್ ಮಾರ್ಕ್ ಅನ್ನು ವೀಡಿಯೋ ಮಧ್ಯೆ ಅಸ್ಪಷ್ಟವಾಗಿ ಕಾಣಬಹುದು. ಮಾರ್ಚ್ 27, 2025ರ ಅವರ ಪೋಸ್ಟ್ ಅದೇ ವೀಡಿಯೊವನ್ನು ಒಳಗೊಂಡಿದೆ.
ಪೋಸ್ಟ್ನಲ್ಲಿ ವೀಡಿಯೋವನ್ನು ಕೃತಕ ಬುದ್ಧಿಮತ್ತೆಯಿಂದ ಮಾಡಲಾಗಿದೆ ಎಂದು ಘೋಷಿಸಲಾಗಿದೆ. “ಈ ರೀಲ್ನಲ್ಲಿ ತೋರಿಸಿರುವ ಚಿತ್ರಗಳು/ವೀಡಿಯೊಗಳು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟಿವೆ, ನಮ್ಮ ಉದ್ದೇಶಗಳು ಯಾರಿಗೂ ನೋವುಂಟು ಮಾಡುವುದು ಅಥವಾ ಹಾನಿ ಮಾಡುವುದು ಅಲ್ಲ. ಇದು ಕೇವಲ ಮನರಂಜನಾ ಉದ್ದೇಶಕ್ಕಾಗಿ” ಎಂದು ಅದರಲ್ಲಿದೆ.
3D ಕಂಪ್ಯೂಟರ್ ಗ್ರಾಫಿಕ್ಸ್ (VFX, ಚಲನಚಿತ್ರ ಮತ್ತು ಅನಿಮೇಷನ್), ವೀಡಿಯೊ ಸಂಪಾದನೆ ಮತ್ತು ಚಲನಚಿತ್ರ ತಯಾರಿಕೆಯಲ್ಲಿ ತೊಡಗಿರುವ ‘ಭಾರತ್ FX’ ಖಾತೆಯ ಪ್ರೊಫೈಲ್ ಅನ್ನು ನಾವು ಪರಿಶೀಲಿಸಿದಾಗ , ಅಂತಹ ಹಲವಾರು ಎಐ ರಚಿತ ವೀಡಿಯೋಗಳು ಕಂಡುಬಂದಿವೆ.
ಈ ವೈರಲ್ ವೀಡಿಯೋವನ್ನು ನಾವು ನ್ಯೂಸ್ ಚೆಕರ್ ಒಂದು ಭಾಗವಾಗಿರುವ ಮಿಸ್ ಇನ್ಫಾರ್ಮೇಶನ್ ಕಾಂಬ್ಯಾಟ್ ಅಲೈಯನ್ಸ್ (ಎಂಸಿಎ) ನ ಡೀಪ್ ಫೇಕ್ಸ್ ಅನಾಲಿಸಿಸ್ ಯೂನಿಟ್ (ಡಿಎಯು) ಗೆ ಪರಿಶೀಲನೆಗೆ ಕಳುಹಿಸಿದ್ದು, ಅವರಿಂದ ಫಲಿತಾಂಶವನ್ನು ಪಡೆದುಕೊಂಡಿದ್ದೇವೆ.
ಹೈವ್ ಮಾಡರೇಷನ್ ನಲ್ಲಿ ವಿವಿಧ ಕೀಫ್ರೇಂಗಳನ್ನು ಪರಿಶೀಲಿಸಿದಾಗ, ಅದು ವಿವಿಧ ನಮೂನೆಗಳನ್ನು ಪತ್ತೆಹಚ್ಚಿದ್ದು ವೀಡಿಯೋ ಎಐನಿಂದ ಮಾಡಿದ್ದು ಎಂಬ ಉತ್ತರವನ್ನು ನೀಡಿದೆ. ಇದರ ಫಲಿತಾಂಶವನ್ನು ಇಲ್ಲಿ ನೋಡಬಹುದು.
ವಾಸ್ ಇಟ್ ಎಐ ಎಂಬ ಎಐ ಪತ್ತೆ ಸಾಧನದಲ್ಲೂ ಪರಿಶೀಲನೆ ನಡೆಸಲಾಗಿದೆ. ಇದರ ಪ್ರಕಾರ ಈ ವೀಡಿಯೋದಲ್ಲಿನ ತಯಾರಿಕೆಯ ಅಂಶಗಳು ಎಐ ನಿಂದ ಮಾಡಿದ್ದಾಗಿದೆ ಎಂದು ಹೇಳಿದೆ. ಇದರ ಫಲಿತಾಂಶಗಳನ್ನು ಇಲ್ಲಿ ನೋಡಬಹುದು.
ಡಿಎಯು ಹೇಳಿಕೆಯ ಪ್ರಕಾರ “ವೀಡಿಯೋವನ್ನು ಬರಿಗಣ್ಣಿನಿಂದ ನೋಡಿದಾಗ, ಹೈವ್ನ ಇಮೇಜ್ ವರ್ಗೀಕರಣದಿಂದ ಗುರುತಿಸಲ್ಪಡದ ಹಲವಾರು ಇತರ ವ್ಯತ್ಯಾಸಗಳು ಕಂಡುಬರುತ್ತವೆ. ಇದರಲ್ಲಿ ಪ್ರಮುಖವಾದ್ದೆಂದರೆ ‘ಸ್ಕೂಬಾ ಗೇರ್’. ಇದನ್ನು ಹೋಲಿಕೆ ಮಾಡುವುದಾದರೆ, ವೀಡಿಯೋದಲ್ಲಿ ಪ್ರದರ್ಶಿಸಲಾದ ಯಾವುದೇ ಸಾಮಗ್ರಿಗಳು ಅವುಗಳು ನೈಜವಾಗಿರುವ ಪ್ರತಿರೂಪವನ್ನು ಹೊಂದಿಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಹೇಳಿದೆ.
ಆ ಬಳಿಕ ನಾವು ವೈರಲ್ ವೀಡಿಯೋದಲ್ಲಿ ಕಂಡುಬಂದ ವಾಟರ್ ಮಾರ್ಕ್ ಅನ್ನು ನೋಡಿದ್ದು ಅದರಲ್ಲಿ jayprints ಎಂದಿತ್ತು. ಅದರ ಪ್ರಕಾರ ಇನ್ ಸ್ಟಾಗ್ರಾಂ ಅನ್ನು ನೋಡಿದಾಗ ಖಾತೆಯಲ್ಲಿ ವೈರಲ್ ವೀಡಿಯೋ ಹೋಲುವ ವೀಡಿಯೋ ಕಂಡುಬಂದಿದೆ. ಈ ವೀಡಿಯೋದ ಜೊತೆಗೆ ನೀಡಲಾದ ಸೂಚನೆಯಲ್ಲಿ ಇದು ಎಐನಿಂದ ಮಾಡಿದ್ದು ಎಂದಿದೆ.
ಸ್ಕೂಬಾ ಡೈವರ್ಗಳು ರಾಮ ಸೇತುವಿನ ಅವಶೇಷಗಳನ್ನು ಅನ್ವೇಷಿಸುತ್ತಿರುವುದು ಎಂದು ತೋರಿಸಲಾದ ವೈರಲ್ ವೀಡಿಯೋ, ಎಐನಿಂದ ರಚಿಸಲಾಗಿದೆ ಎಂದು ಕಂಡುಬದಿಂದೆ.
Also Read: ಶಿರಾದಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲಾಗುತ್ತಿದೆ ಎಂದು ಚೀನಾ ವೀಡಿಯೋ ವೈರಲ್
Our Sources
Hive Moderation Website
WasItAI Website
Instagram Post By @bharathfx1, Dated March 27, 2025
Instagram Post By jayprints, Dated: April 7, 2025
DAU Analysis
(ಈ ಕುರಿತ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
Ishwarachandra B G
April 12, 2025
Ishwarachandra B G
March 15, 2025
Ishwarachandra B G
March 11, 2025