Authors
ಮಣಿಪುರದ ಕುಕಿ-ಮೈತೇಯಿ ಸಮುದಾಯದ ನಡುವಿನ ಗಲಭೆ ಹೆಚ್ಚು ಹೆಚ್ಚು ಸುದ್ದಿ ಮಾಡಿರುವಂತೆಯೇ, ಈ ವಾರ ಇದಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳೇ ಹೆಚ್ಚು ಹರಿದಾಡಿವೆ. ಇದರೊಂದಿಗೆ ಕರಾವಳಿ-ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾದ ಸಂದರ್ಭ ಚಾರ್ಮಾಡಿ ಘಾಟಿಯಲ್ಲಿ ಪ್ರವಾಹದ ನೀರು ಹರಿದಿದೆ ಎಂದು ಸುದ್ದಿಯಾಗಿತ್ತು. ಆರೋಗ್ಯ ಸಂಬಂಧಿ ಇನ್ನೊಂದು ಕ್ಲೇಮ್ನಲ್ಲಿ ಈರುಳ್ಳಿ ತಿಂದರೆ, ವೀರ್ಯದ ಗುಣಮಟ್ಟ ವೃದ್ಧಿಯಾಗುತ್ತಿದೆ ಎಂದು ಸಂದೇಶ ಹರಿದಾಡಿತ್ತು. ಈ ಹೇಳಿಕೆಗಳನ್ನು ನ್ಯೂಸ್ಚೆಕರ್ ಸತ್ಯಶೋಧನೆಗೊಳಪಡಿಸಿದ್ದು, ಅವುಗಳು ಸುಳ್ಳು ಎಂದು ಕಂಡುಬಂದಿದೆ.
ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್ ದಿರಿಸಿನಲ್ಲಿದ್ದ ಫೋಟೋ ನಿಜವೇ?
ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಮತ್ತು ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ಆರೆಸ್ಸೆಸ್ ಸಮವಸ್ತ್ರದಲ್ಲಿದ್ದ ಇಬ್ಬರು ಪುರುಷರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ ವೇಳೆ ಕುಕಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಆರೋಪಿಗಳು ಇವರಲ್ಲ. ಇವರು ಮಣಿಪುರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಅವರ ಪುತ್ರ. ಆರೆಸ್ಸೆಸ್ ಕಾರ್ಯಕ್ರಮವೊಂದರಲ್ಲಿ ಅವರು ಈ ಫೋಟೋ ತೆಗೆಸಿಕೊಂಡಿದ್ದರು. ಈ ಸುಳ್ಳು ಸುದ್ದಿಯ ವಿರುದ್ಧ ಪೊಲೀಸ್ ದೂರು ದಾಖಲಾಗಿರುವುದೂ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ
ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ
ಐಸಿಸ್ ಶೈಲಿಯಲ್ಲಿ ಮಣಿಪುರದಲ್ಲಿ ಹಿಂದೂ ಮೈತೇಯಿ ಸಮುದಾಯದ ಪುಟ್ಟ ಹುಡುಗಿಯ ಹತ್ಯೆ ನಡೆದಿದೆ. ಕೊಲೆಗಾರರಲ್ಲಿ ಕುಕಿ (ಕ್ರಿಶ್ಚಿಯನ್) ಮಹಿಳೆಯರೂ ಸೇರಿದ್ದಾರೆ ಎಂದು ಮಣಿಪುರ ಗಲಭೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳು ಕಂಡುಬಂದಿದ್ದವು. ಸತ್ಯ ಶೋಧನೆ ವೇಳೆ ಇದು ಮಣಿಪುರದಲ್ಲಿ ನಡೆದ ಘಟನೆಯ ವೀಡಿಯೋ ಅಲ್ಲ, 2022ರಲ್ಲಿ ಮ್ಯಾನ್ಮಾರ್ ನಲ್ಲಿ ಬಂಡುಕೋರ ಪಡೆಗಳು, ಮಿಲಿಟರಿಯ ಮಾಹಿತಿದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಹತ್ಯೆಗೈದ ಘಟನೆಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆಯೇ ಪ್ರವಾಹ, ವೈರಲ್ ವೀಡಿಯೋ ನಿಜವೇ?
ಮಲೆನಾಡಿನಲ್ಲಿ ಭಾರೀ ಮಳೆಯ ಸಂದರ್ಭ ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆಯೇ ಪ್ರವಾಹ ಹರಿದಿದೆ ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸತ್ಯಶೋಧನೆ ವೇಳೆ ವೈರಲ್ ವೀಡಿಯೋದಲ್ಲಿ ತೋರಿಸಿದ ದೃಶ್ಯ ಚಾರ್ಮಾಡಿ ಘಾಟಿಯದ್ದಲ್ಲ. ಇದು ಮಹಾರಾಷ್ಟ್ರದ ಮಾಲ್ಶೆಜ್ ಅಥವಾ ಅಂಬೋಲಿ ಘಾಟಿ ರಸ್ತೆಯದ್ದಾಗಿದೆ ಎಂದು ತಿಳಿದುಬಂದಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ದಿನವೂ ಈರುಳ್ಳಿ ತಿನ್ನೋದ್ರಿಂದ ವೀರ್ಯದ ಗುಣಮಟ್ಟ ಹೆಚ್ಚುತ್ತದೆಯೇ, ಸತ್ಯ ಏನು?
ಈರುಳ್ಳಿ ತಿನ್ನುವುದರಿಂದ ವೀರ್ಯ ಗುಣಮಟ್ಟ, ಪ್ರಮಾಣ ಹೆಚ್ಚಳಕ್ಕೆ ನೆರವಾಗುತ್ತದೆ ಎನ್ನುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಸತ್ಯಶೋಧನೆಯಲ್ಲಿ ಈರುಳ್ಳಿ ಒಂದರಿಂದಲೇ ವೀರ್ಯದ ಗುಣಮಟ್ಟ, ಪ್ರಮಾಣ ಹೆಚ್ಚಳವಾಗುವುದಿಲ್ಲ. ಇದಕ್ಕೆ ಇತರ ಅಂಶಗಳೂ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.