Weekly wrap: ಮೋದಿ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ, ಉಗ್ರ ಮಸೂದ್‌ ಅಜರ್ ಸಾವು ವೀಡಿಯೋ, ವಾರದ ಕ್ಲೇಮ್ ನೋಟ

weekly wrap

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

ಮೋದಿ  26 ವರ್ಷದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆ, ಬಾಂಬ್ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್‌ ಅಜರ್ ಸಾವು ಎಂಬ ವೈರಲ್‌ ವೀಡಿಯೋ, ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ಗೆ ಗಂಟೆ ಸಮರ್ಪಿಸಿದ್ದಾರೆ, ಜೇನುತುಪ್ಪ-ಏಲಕ್ಕಿ ಮಿಶ್ರ ಮಾಡಿ ತಿಂದರೆ ಬೊಜ್ಜು, ಹೃದಯದ ಸಮಸ್ಯೆಗೆ ಅನುಕೂಲ ಎಂಬ ಕ್ಲೇಮ್‌ ಗಳು ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಸಾಬೀತು ಮಾಡಿವೆ.

Weekly wrap: ಮೋದಿ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ, ಉಗ್ರ ಮಸೂದ್‌ ಅಜರ್ ಸಾವು ವೀಡಿಯೋ, ವಾರದ ಕ್ಲೇಮ್ ನೋಟ

ಮೋದಿ 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆಯೇ?

ಪ್ರಧಾನಿ ನರೇಂದ್ರ ಮೋದಿಯವರು 26 ವರ್ಷ ದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆ ಎಂದು ಕ್ಲೇಮ್‌ ಒಂದು ಹರಿದಾಡಿದೆ. ಸತ್ಯಶೋಧನೆ ವೇಳೆ ತಿಳಿದುಬಂದಿದ್ದೇನೆಂದರೆ, ಸಂತೋಷ್‌ ತ್ರಿವೇದಿ ಎನ್ನುವ ಅರ್ಚಕರು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ತಲೆಕೆಳಗಾಗಿ ಕೇದಾರನಾಥ ದೇಗುಲಕ್ಕೆ ಪ್ರದಕ್ಷಿಣೆ ಬಂದ ವೀಡಿಯೋ ಆಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

Weekly wrap: ಮೋದಿ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ, ಉಗ್ರ ಮಸೂದ್‌ ಅಜರ್ ಸಾವು ವೀಡಿಯೋ, ವಾರದ ಕ್ಲೇಮ್ ನೋಟ

ಬಾಂಬ್‌ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಸಾವು ಎಂಬ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?

ಮೋಸ್ಟ್ ವಾಂಟೆಡ್ ಉಗ್ರ, ಕಂದಹಾರ್ ವಿಮಾನ ಅಪಹರಣದ ರೂವಾರಿ ಪಾಕಿಸ್ಥಾನದ ಮಸೂದ್ ಅಜರ್ ಮೇಲೆ ಅಜ್ಞಾತ ವ್ಯಕ್ತಿಗಳಿಂದ ಬಾಂಬ್‌ ದಾಳಿ ಎಂದು ವೈರಲ್‌ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ತನಿಖೆಯಲ್ಲಿ ಕಂಡುಬಂದ ಪ್ರಕಾರ, ಉಗ್ರ ಮಸೂದ್ ಅಜರ್ ಮೃತಪಟ್ಟ ಸ್ಫೋಟದ ವೀಡಿಯೋ ಎಂದು ಹೇಳಲಾದ ದೃಶ್ಯ ವಾಸ್ತವವಾಗಿ ಡೇರಾ ಇಸ್ಮಾಯಿಲ್ ಖಾನ್ ನದ್ದು ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡ ಈ ಸ್ಫೋಟ ನವೆಂಬರ್ ನಲ್ಲಿ ನಡೆದಿರುವುದಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

Weekly wrap: ಮೋದಿ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ, ಉಗ್ರ ಮಸೂದ್‌ ಅಜರ್ ಸಾವು ವೀಡಿಯೋ, ವಾರದ ಕ್ಲೇಮ್ ನೋಟ

ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರಾ?

ತೂತುಕುಡಿ ಲೋಕಸಭಾ ಸದಸ್ಯೆ ಮತ್ತು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕನಿಮೋಳಿ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ 613 ಕೆಜಿ ತೂಕದ ಗಂಟೆಯನ್ನು ದಾನ ಮಾಡಿದ್ದಾರೆ ಎಂಬ ಸುದ್ದಿ ಸುದ್ದಿ ತಾಣದಲ್ಲಿ ಹರಿದಾಡಿದೆ. ನ್ಯೂಸ್ ಚೆಕರ್ ಶೋಧದ ಪ್ರಕಾರ, ರಾಮ ಮಂದಿರಕ್ಕೆ ಗಂಟೆ ದಾನ ಮಾಡಿದವರು ಸಂಸದೆ ಕನಿಮೋಳಿ ಅವರಲ್ಲ, ತಮಿಳುನಾಡಿನ ಎಸ್‌ ಪಿ ಇ ಗ್ರೂಪ್ ನ ಪಿ.ಕೆ.ಕನಿಮೋಳಿ ಎಂಬವರಾಗಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

Weekly wrap: ಮೋದಿ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ, ಉಗ್ರ ಮಸೂದ್‌ ಅಜರ್ ಸಾವು ವೀಡಿಯೋ, ವಾರದ ಕ್ಲೇಮ್ ನೋಟ

ಜೇನುತುಪ್ಪ ಮತ್ತು ಏಲಕ್ಕಿ, ಮಿಶ್ರ ಮಾಡಿ ತಿಂದರೆ ಬೊಜ್ಜು ಮತ್ತು ಹೃದಯದ ಸಮಸ್ಯೆಗಳಲ್ಲಿ ಅನುಕೂಲ ಎಂಬುದು ನಿಜವೇ?

ಎರಡು ಚಿಟಿಕೆ ಏಲಕ್ಕಿ ಪುಡಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸ್ಥೂಲಕಾಯತೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಲ್ಲಿ ಅನುಕೂಲವಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ವಾಟ್ಸಾಪ್‌ ನಲ್ಲಿ ಕಂಡುಬಂದ ಈ ಸಂದೇಶದಲ್ಲಿ, ಏಲಕ್ಕಿ ಪುಡಿ ಪ್ರಯೋಜನ ಬಗ್ಗೆ ಹೇಳಲಾಗಿದೆ. ಆದರೆ ಸತ್ಯಶೋಧನೆ ವೇಳೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ, ವೈದ್ಯರ ಹೇಳಿಕೆಗಳ ಪ್ರಕಾರವೂ ಇದರಿಂದ ನೇರ ಪ್ರಯೋಜನಗಳಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.