Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವಾರ ಸುಳ್ಳು ಸುದ್ದಿಗಳು ಆ ವಿಚಾರದ ಸುತ್ತನೇ ಗಿರಕಿ ಹೊಡೆದಿದ್ದವು. ಚರ್ಚ್ ನಲ್ಲಿ ರಾಮನವಮಿ ಆಚರಣೆ ಎಂದು ಕಲ್ಲು ಹೊಡೆದ ವೀಡಿಯೋ, ಬಿಯರ್ ಬಾಟಲಿ ಮೇಲೆ ಡಿ.ಕೆ.ಸುರೇಶ್ ಫೋಟೋ ಹಾಕಿ ಹಂಚಲಾಗುತ್ತಿದೆ, ಸಚಿವ ರಾಜಣ್ಣ ದೇವೇಗೌಡರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ, ಪ್ರಿಯಾಂಕಾ ವಾದ್ರಾ ಕೆಳೆಗೆ ತ್ರಿವರ್ಣ ಧ್ವಜದ ಚಿತ್ರ ಹಾಕಿದ ಬ್ಯಾನರ್ ಬೆಂಗಳೂರಲ್ಲಿ ಅಳವಡಿಸಲಾಗಿದೆ, ತುಮಕೂರು ಗುಬ್ಬಿ ಗೇಟ್ ಬಳಿಯ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜ ಹಾರಾಡಿದೆ, ಸಂವಿಧಾನ ಬದಲಾವಣೆ ಮೌನವಾಗಿಯೇ ಮಾಡೋಣ ಎಂದು ಮೋಹನ್ ಭಾಗವತ್ ಹೇಳಿದ್ದಾರೆ ಎಂದು ಹೊಸದಿಗಂತದ ಹೆಸರಿನಲ್ಲಿ ಸುದ್ದಿ, ಸೋಲುವ ಹತಾಶೆಯಿಂದ ಐಎನ್ಡಿ ಒಕ್ಕೂಟದವರು ಇವಿಎಂ ಒಡೆದು ಹಾಕಲೂ ತಯಾರು ಎಂದು ಹಳೆ ವೀಡಿಯೋ ಹಂಚಿಕೆ ಬಿಜೆಪಿಯವರು ಎಸ್ಸಿ ಎಸ್ಟಿ ಸಮುದಾಯದ ವಿರುದ್ಧ ಮುರ್ದಾಬಾದ್ ಎಂದು ಕೂಗಿದ್ದಾರೆ, ಸೋಲುವ ಹತಾಶೆಯಿಂದ ಐಎನ್ಡಿ ಒಕ್ಕೂಟದವರು ಇವಿಎಂ ಒಡೆದು ಹಾಕಲೂ ತಯಾರು ಎಂದು ಹಳೆ ವೀಡಿಯೋ ಹಂಚಿಕೆಗಳು ಮುಖ್ಯವಾಗಿದ್ದವು. ಇದರೊಂದಿಗೆ ಮೈಸೂರಿನಲ್ಲಿ ಶತಮಾನದಷ್ಟು ಹಳೆಯ ನಂದಿ ವಿಗ್ರಹ ಪತ್ತೆ ಎಂದು 2019ರ ಫೋಟೋ ಹಂಚಿಕೆ, ಕತ್ತರಿಸಿದ ಈರುಳ್ಳಿಯನ್ನು ಪಾದದ ಬಳಿ ಇಡುವುದರಿಂದ ಶೀತ, ಜ್ವರವನ್ನು ಕಡಿಮೆ ಮಾಡುತ್ತದೆ ಎಂಬ ವಿಚಾರವೂ ಹರಿದಾಡಿತ್ತು. ಈ ಎಲ್ಲ ಹೇಳಿಕೆಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಸಾಬೀತು ಪಡಿಸಿ ನೈಜಾಂಶವನ್ನು ತೆರೆದಿಟ್ಟಿದೆ.
ಸಚಿವ ರಾಜಣ್ಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಲಭ್ಯ ಸಾಕ್ಷ್ಯಗಳ ಪ್ರಕಾರ, ರಾಜಣ್ಣ ಅವರು ಈಗ ಎಚ್ಡಿ ದೇವೇಗೌಡರ ವಿರುದ್ಧ ನೀಡಿದ ಹೇಳಿಕೆ ಇದಲ್ಲ. 2022ರಲ್ಲಿ ತುಮಕೂರಿನ ಮಧುಗಿರಿಯಲ್ಲಿ ನೀಡಿದ ಹೇಳಿಕೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ರಾಮ ಭಕ್ತರು ಚರ್ಚ್ ಗೆ ಹೋಗಿ ರಾಮನವಮಿ ಆಚರಿಸಿದ ರೀತಿ ಎಂದು ಕಲ್ಲೆಸೆಯುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನ್ಯೂಸ್ಚೆಕರ್ ಸತ್ಯಶೋಧನೆ ಪ್ರಕಾರ ಹನುಮಾನ್ ಮಾಲಾಧಾರಿ ವಿದ್ಯಾರ್ಥಿಗಳು ತರಗತಿ ಪ್ರವೇಶಿಸಲು ಅನುಮತಿ ನೀಡದ್ದಕ್ಕಾಗಿ ಗುಂಪೊಂದು ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಕನ್ನೆಪಲ್ಲಿಯಲ್ಲಿರುವ ಸಂತ ಮದರ್ ಥೆರೇಸಾ ಇಂಗ್ಲಿಷ್ ಮಾಧ್ಯಮ ಶಾಲೆ ಮೇಲೆ ದಾಂಧಲೆ ನಡೆಸಿದ ಘಟನೆ ಇದಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬೆಂಗಳೂರು ರಾಲಿಗೂ ಮುನ್ನ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಿಯಾಂಕಾ ಗಾಂಧಿ ಅವರ ಪಾದಗಳ ಬಳಿ ತಲೆಕೆಳಗಾಗಿ ತ್ರಿವರ್ಣ ಧ್ವಜ ಚಿತ್ರವಿರುವ ಬ್ಯಾನರ್ ಹಾಕಲಾಗಿದೆ ಎಂಬ ವೀಡಿಯೋ ಹಂಚಿಕೊಂಡಿದ್ದಾರೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ವೈರಲ್ ವೀಡಿಯೋ ಮಧ್ಯಪ್ರದೇಶ ಜಬಲ್ಪುರದ್ದಾಗಿದ್ದು ಬೆಂಗಳೂರಿನ ಪ್ರಿಯಾಂಕಾ ಪ್ರಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಬಿಯರ್ ಬಾಟಲಿ ಮೇಲೆ ಡಿ.ಕೆ.ಸುರೇಶ್ ಫೋಟೋ ಹಾಕಿ ಮತದಾರರಿಗೆ ಹಂಚಲಾಗುತ್ತಿದೆ ಎಂದು ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ನಮ್ಮ ತನಿಖೆಯಲ್ಲಿ ಇದು 2023ರಲ್ಲಿ ತೆಲಂಗಾಣ ಚುನಾವಣೆ ಸಂದರ್ಭದ್ದಾಗಿದ್ದು, ನಕಿರೇಕಲ್ ಕಾಂಗ್ರೆಸ್ ಅಭ್ಯರ್ಥಿ ವೇಮುಲ ವೀರೇಶ ಅವರ ಫೋಟೋ ಹಾಕಿ ಬಾಟಲಿಗಳನ್ನು ವಿತರಿಸಲಾಗಿದ್ದು, ಆ ಫೋಟೊವನ್ನು ತಿರುಚಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನದ ಧ್ವಜವನ್ನು ಬೀಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಶೇರ್ ಮಾಡಲಾಗುತ್ತಿದೆ. ಆದರೆ ಇದು ನಿಜವಲ್ಲ, ಪಾಕಿಸ್ಥಾನದ ಧ್ವಜವನ್ನು ಬೀಸಲಾಗಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿರುವುದು ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಬಿಜೆಪಿ ಮಂದಿ ಎಸ್ಸಿ ಎಸ್ಟಿ ಸಮುದಾಯಗಳ ವಿರುದ್ಧ ಮುರ್ದಾಬಾದ್ ಎಂದು ಕೂಗುತ್ತಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ಬಿಹಾರದ ಆಡಿಯೋಕ್ಕೆ ಬೇರೆಡೆಯ ವೀಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ, ಇದನ್ನು ಹೊಸದಿಗಂತ ಪತ್ರಿಕೆಯಲ್ಲಿ ವರದಿಯಾಗಿದೆ ಎಂಬಂತೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನ್ಯೂಸ್ ಚೆಕರ್ ಸತ್ಯಶೋಧನೆಯಲ್ಲಿ ಕಂಡುಬಂದಂತೆ ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ ಎಂದು ಹೊಸದಿಗಂತ ಪತ್ರಿಕೆ ಹೆಸರಲ್ಲಿ ವರದಿ ಬಂದಿಲ್ಲ, ಆ ವರದಿ ನಕಲಿಯಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮತದಾನದ ಇದೇ ಸಂದರ್ಭದಲ್ಲಿ ಇವಿಎಂ ಅನ್ನು ಒಡೆದು ಹಾಕಲೂ ವಿಪಕ್ಷಗಳು ತಯಾರಾಗಿವೆ ಮತ್ತು ಒಡೆದು ಹಾಕಲಾಗಿದೆ ಎಂಬಂತೆಯೂ ಕ್ಲೇಮುಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ವೈರಲ್ ವೀಡಿಯೋ ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಅವಧಿಯದ್ದಾಗಿದೆ. ಮೈಸೂರಿನಲ್ಲಿ ಈ ಘಟನೆ ನಡೆದಿತ್ತು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿದೆ. ಪುರಾವೆಗಳ ಪ್ರಕಾರ, ಮೈಸೂರಿನ ಸನಿಹ ಜೋಡಿ ನಂದಿ ವಿಗ್ರಹ ಸಿಕ್ಕಿದ ವಿದ್ಯಮಾನ 2019ರ ಲ್ಲಿ ನಡೆದಿದ್ದು, ಇದು ಈಗಿನದ್ದಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕತ್ತರಿಸಿದ ಈರುಳ್ಳಿಯನ್ನು ಪಾದದ ಬಳಿ ಇಡುವುದು ಅಥವಾ ಸಾಕ್ಸ್ ಒಳಗೆ ಹಾಕಿ ಮಲಗುವುದಿಂದ ಶೀತವನ್ನು ಕಡಿಮೆ ಮಾಡಬಹುದು ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಆದರೆ ಕತ್ತರಿಸಿದ ಈರುಳ್ಳಿಯನ್ನು ಪಾದದ ಬಳಿ ಇಡುವುದರಿಂದ ಶೀತ, ಜ್ವರವನ್ನು ಕಡಿಮೆ ಮಾಡಬಹುದು ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ, ಯಾವುದೇ ಸಂಶೋಧನೆಗಳಲ್ಲೂ ಸಾಬೀತಾಗಿಲ್ಲ ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Prasad S Prabhu
November 29, 2024
Kushel Madhusoodan
July 4, 2024
Runjay Kumar
May 20, 2024