ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯಾದ ಬೆನ್ನಲ್ಲೇ ಮುರ್ಷಿದಾಬಾದ್ ನಲ್ಲಿ ಹಿಂಸಾಚಾರ ನಡೆದಿದ್ದು ಬೇರೆ ಬೇರೆ ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದರೊಂದಿಗೆ ಬಾಂಗ್ಲಾದಲ್ಲಿ ತಾಲಿಬಾನ್ ಮಾದರಿ ಮಹಿಳೆ ಮೇಲೆ ಕಲ್ಲು ಎಸೆಯಲಾಗಿದೆ ಎಂದು ಹೇಳಿಕೊಳ್ಳಲಾಗಿದೆ. ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದಾಗ ಇದು ಸುಳ್ಳು ಹೇಳಿಕೆಗಳು ಎಂದು ಕಂಡುಬಂದಿದೆ. ಈ ಕುರಿತ ವಾರದ ನೋಟ ಇಲ್ಲಿದೆ.

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಪ್ರತಿಭಟನೆ ಎನ್ನುವುದು ನಿಜವಲ್ಲ
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಪ್ರತಿಭಟನೆ ಎಂದು ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಇದರ ಬಗ್ಗೆ ಸತ್ಯಶೋಧನೆ ಮಾಡಿದಾಗ, ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಪ್ರತಿಭಟನೆ ಎನ್ನುವುದು ನಿಜವಲ್ಲ, ಇದು ವಿದ್ಯಾರ್ಥಿ ಸಂಘಟನೆ ವತಿಯಿಂದ 2024ರಲ್ಲಿ ನಡೆದ ಪ್ರತಿಭಟನೆಯಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಮುರ್ಷಿದಾಬಾದ್ ಗಲಭೆ ಬೆನ್ನಲ್ಲೇ ಹಿಂದೂಗಳ ರಕ್ಷಣೆಗೆ ಬಜರಂಗದಳ ಕಾರ್‍ಯಕರ್ತರು ತೆರಳಿದ್ದಾರೆ ಎಂದು ಸಾಂಗ್ಲಿ ವೀಡಿಯೋ ವೈರಲ್

ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಕಲ್ಲೆಸೆಯಲಾಗುತ್ತಿದೆ ಎಂದ ಈ ವೀಡಿಯೋ ನಿಜವಲ್ಲ, ಇದು ಶೂಟಿಂಗ್!
ತಾಲಿಬಾನ್ ಶೈಲಿ ಬಾಂಗ್ಲಾದೇಶಕ್ಕೂ ಬಂದಿದೆ, ಅಲ್ಲಿ ಮಹಿಳೆಯೊಬ್ಬಳ ಮೇಲೆ ಕಲ್ಲೆಸೆಯುತ್ತಿರುವ ವೀಡಿಯೋ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯ ಶೋಧನೆ ನಡೆಸಿದಾಗ ಇದು ಒಂದು 2023ರ ವೀಡಿಯೋವಾಗಿದ್ದು, ಇದು ಶೂಟಿಂಗ್ ಮಾಡಿದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಮುರ್ಷಿದಾಬಾದ್ ನಲ್ಲಿ ಹಿಂದೂಗಳನ್ನು ಮನೆ ಬಿಟ್ಟು ಓಡಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ ಎಂದು ಜೈಪುರ ವೀಡಿಯೋ ವೈರಲ್
ಮುರ್ಷಿದಾಬಾದ್ ನಲ್ಲಿ ಹಿಂದೂಗಳನ್ನು ಮನೆ ಬಿಟ್ಟು ಓಡಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ ಎಂದು ಅಲ್ಲಿ ನಡೆದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾಚಾರದ ವೇಳೆ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಮುರ್ಷಿದಾಬಾದ್ ನಲ್ಲಿ ಹಿಂದೂಗಳನ್ನು ಮನೆ ಬಿಟ್ಟು ಓಡಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ ಎಂದು ತಪ್ಪು ಹೇಳಿಕೆಗಳೊಂದಿಗೆ ಜೈಪುರದ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ. ಆಸ್ತಿ ಪ್ರಕರಣವೊಂದಕ್ಕೆ ಸಂಬಂಧಿಸಿ, ಗುಂಪೊಂದು ಕುಟುಂಬದ ಮೇಲೆ ನಡೆಸಿದ ಹಲ್ಲೆ ನಡೆಸಿ ಮನೆ ಮೇಲೆ ನಡೆದ ದಾಳಿಯ ವೀಡಿಯೋ ಇದಾಗಿದೆ. ಈ ಕುರಿತ ವರದಿ ಇಲ್ಲಿದೆ