Authors
Claim
ಅಯೋಧ್ಯೆ ರಾಮ ಮಂದಿರದಲ್ಲಿ ಅರ್ಧ ದಿನದಲ್ಲೇ ಕಾಣಿಕೆ ಹುಂಡಿ ಭರ್ತಿಯಾಗಿದೆ
Fact
ವೈರಲ್ ವೀಡಿಯೋ ರಾಜಸ್ಥಾನದ ಸವಾಲಿಯಾ ಸೇಠ್ ಕೃಷ್ಣ ದೇಗುಲದ್ದಾಗಿದೆ ಅಯೋಧ್ಯೆಯದ್ದಲ್ಲ.
ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಕಾಣಿಕೆ ಹುಂಡಿ ಭರ್ತಿಯಾಗಿದೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, “ನಿನ್ನೆಯ ದಿನ ಅಯೋಧ್ಯೆ ರಾಮ ಜನ್ಮ ಭೂಮಿ ಮಂದಿರದಲ್ಲಿ ಅರ್ಧ ದಿನದಲ್ಲೇ ಕಾಣಿಕೆ ಹುಂಡಿ ಭರ್ತಿಯಾಗಿದೆ 🛕🚩… ಒಟ್ಟು ಸಂಗ್ರಹವಾದ ಹಣ 3 ಕೋಟಿ 17 ಲಕ್ಷ..ಇದನ್ನ ನೋಡಿದ ಗುಲಾಮರು ಉರ್ಕೊಂಡು ಸಾಯ್ತಾರೆ ಇದನ್ನ ಗುಲಾಮರ ಕೈಯಲ್ಲಿ ಕೊಟ್ರೆ..?” ಎಂದಿದೆ.
Also Read: ಮೀರಾ ರೋಡ್‌ನಲ್ಲಿ ಗಲಭೆಗೈದ ಮುಸ್ಲಿಮರಿಗೆ ಪೊಲೀಸರ ಹೊಡೆತ ಎಂದ ಈ ವೀಡಿಯೋ ಹಿಂದಿನ ಸತ್ಯ ಏನು?
ಇದೇ ರೀತಿಯ ಹೇಳಿಕೆಗಳುಳ್ಳ ಪೋಸ್ಟ್ ಗಳು ಫೇಸ್‌ಬುಕ್ ನಲ್ಲೂ ಕಂಡುಬಂದಿದೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಕೊಂಡಿದೆ.
Fact Check/ Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇದು sanwaliya_seth_1007 ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಬಂದಿರುವುದನ್ನು ಗಮನಿಸಿದ್ದೇವೆ.
ಈ ಪೋಸ್ಟ್ ನಲ್ಲಿ ಬಳಕೆದಾರರು ನೀಡಿದ ವಿವರಣೆ ಪ್ರಕಾರ, ಶ್ರೀ ಸವಾಲಿಯಾ ಸೇಠ್, ಈ ಬಾರಿ ರೆಕಾರ್ಡ್, 12 ಕೋಟಿ, 69 ಲಕ್ಷ ನಗದು ಕಾಣಿಕೆ ಸಂಗ್ರಹ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ, ಖಾತೆಯ ಬಳಕೆದಾರ ನಿತಿನ್ ವೈಷ್ಣವ್ ಎಂಬವರಾಗಿದ್ದು, ವೈರಲ್ ವೀಡಿಯೋದಲ್ಲಿ ಕಂಡುಬಂದ ವ್ಯಕ್ತಿ ಮತ್ತು ಇನ್‌ಸ್ಟಾಗ್ರಾಂ ನಲ್ಲಿ ನಿತಿನ್ ಅವರು ಹಾಕಿಕೊಂಡಿರುವ ವೀಡಿಯೋಕ್ಕೆ ಸಾಮ್ಯತೆ ಕಂಡುಬಂದಿದೆ.
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
Also Read: ಭಕ್ತನೊಬ್ಬ ಕೈಗಳಲ್ಲಿ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿದ್ದಾನೆ ಎನ್ನುವುದು ನಿಜವೇ?
ಜನವರಿ 14, 2024ರ ಎನ್‌ಡಿಟಿವಿ ರಾಜಸ್ಥಾನ ವರದಿ ಪ್ರಕಾರ, ಶ್ರೀ ಸವಾಲಿಯಾ ಸೇಠ್ ದೇಗುಲದಲ್ಲಿ ಹೊಸ ವರ್ಷದಲ್ಲಿ ಮೊದಲ ಬಾರಿಗೆ ಕಾಣಿಕೆ ಹುಂಡಿಗಳನ್ನು ತೆರೆದಿದ್ದು, ಕೋಟಿಗಟ್ಟಲೆ ಕಾಣಿಕೆ ಕಂಡುಬಂದಿದೆ. ಇನ್ನೂ ಎಣಿಕೆ ಚಾಲ್ತಿಯಲ್ಲಿದೆ ಎಂದಿದೆ. ಈ ವರದಿಯಲ್ಲಿ ಪ್ರಖ್ಯಾತ ಕೃಷ್ಣ ಧಾಮ ಶ್ರೀ ಸನ್ವಾಲಿಯಾ ಸೇಥ್ ರಾಜಸ್ಥಾನದ ಚಿತ್ತೋಗಢ ಜಿಲ್ಲೆಯಲ್ಲಿದೆ ಎಂದಿದೆ.
ಜನವರಿ 11 2024ರ ಎಬಿಪಿ ನ್ಯೂಸ್ ಪ್ರಕಾರ, ಸವಾಲಿಯಾ ಸೇಠ್ ದೇಗುಲದ ಕಾಣಿಕೆ ಹುಂಡಿಯನ್ನು ತೆರೆಯಲಾಗಿದ್ದು, ಕೋಟಿಗಟ್ಟಲೆ ಕಾಣಿಕೆ ಮತ್ತು ಅಮೆರಿಕನ್ ಡಾಲರ್ ಗಳು ಮೊದಲ ದಿನವೇ ಲಭ್ಯವಾಗಿವೆ ಎಂದಿದೆ.
Conclusion
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ ಇದು ರಾಜಸ್ಥಾನದ ಸವಾಲಿಯಾ ಸೇಥ್ ದೇಗುಲದ ಕಾಣಿಕೆ ಹುಂಡಿ ಎಣಿಕೆ ಸಂದರ್ಭದ ವೀಡಿಯೋ ಆಗಿದ್ದು ಅಯೋಧ್ಯೆ ರಾಮ ಮಂದಿರದ್ದಲ್ಲ. ರಾಮ ಮಂದಿರ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿರುವುದು ತಪ್ಪಾಗಿದೆ.
Also Read: ಬುರ್ಜ್ ಖಲೀಫಾ ಮೇಲೆ ರಾಮನ ಚಿತ್ರ ಪ್ರದರ್ಶಿಸಲಾಗಿದೆಯೇ?
Result: False
Our Sources:
Instagram Post By sanwaliya_seth_1007, Dated: January 16, 2024
Report By, NDTV Rajastan, Dated: January 14, 2024
Report By ABP News, Dated: January 11, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.