ಸೋಮವಾರ, ಮೇ 20, 2024
ಸೋಮವಾರ, ಮೇ 20, 2024

Home 2024 ಮಾರ್ಚ್

Monthly Archives: ಮಾರ್ಚ್ 2024

Fact Check: ಬೆಂಗಳೂರು ಕುಡಿಯುವ ನೀರಿನ ಕುರಿತ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಚಿಪ್ಸ್ ತಿನ್ನುತ್ತಿದ್ದರೇ?

Claimಬೆಂಗಳೂರು ಕುಡಿಯುವ ನೀರಿನ ಕುರಿತ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಚಿಪ್ಸ್ ತಿನ್ನುತ್ತಿದ್ದರುFactವೈರಲ್ ವೀಡಿಯೋ ಬೆಂಗಳೂರಿನ ನೀರಿನ ಬಿಕ್ಕಟ್ಟಿನ ಬಗ್ಗೆ ಕರೆದ ಸಭೆಯದ್ದಲ್ಲ, ಅದು ಸುಮಾರು ಮೂರು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಸಭೆಯ ವೀಡಿಯೋ ಆಗಿದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಭೆಯೊಂದರ ಮಧ್ಯದಲ್ಲಿ ಏನನ್ನೋ ತಿನ್ನುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ...

Fact Check: ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಂ ಆಗಿಯೇ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ?

Claimಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಂ ಆಗಿಯೇ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆFactಮಂಡ್ಯದಲ್ಲಿ ನಡೆದ ಗ್ಯಾರೆಂಟಿ ಸಮಾವೇಶದಲ್ಲಿ ಸಿದ್ದರಾಮಯ್ಯನವರು ದೇವೇಗೌಡರನ್ನು ಉದ್ದೇಶಿಸಿ ಹೇಳಿದ ಮಾತುಗಳ ವೀಡಿಯೋವನ್ನು ಕತ್ತರಿಸಿ, ಬಳಸಿರುವುದು ಕಂಡುಬಂದಿದೆ ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಂ ಆಗಿಯೇ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಗಳು ಹರಿದಾಡುತ್ತಿವೆ. ಎಕ್ಸ್ ಪೋಸ್ಟ್ ನಲ್ಲಿ ಕಂಡುಬಂದ ಪ್ರಕಾರ “ಬಿಜೆಪಿ ಮೇಲಿನ ಕೋಪಕ್ಕೆ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆಂದ...

Fact Check: ಅಹಮದಾಬಾದ್‌ನ ರಾಣಿ ಕಾ ಹಜಿರಾದಲ್ಲಿ ದೇಗುಲ ಪತ್ತೆಯಾಗಿದೆಯೇ?

Claimಅಹಮದಾಬಾದ್‌ನ ರಾಣಿ ಕಾ ಹಜಿರಾದಲ್ಲಿ 1600 ವರ್ಷ ಹಳೆಯ ದೇಗುಲ ಪತ್ತೆಯಾಗಿದೆFactಅಹಮದಾಬಾದ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ರಾಣಿ ಕಾ ಹಜಿರಾ ಹೊರಭಾಗದಲ್ಲಿ ನಡೆದಿದೆ. ಇದು ಮೊಘಲ್ ರಾಣಿಯರ ಸಮಾಧಿಯಾಗಿದ್ದು ಇಲ್ಲಿ ಯಾವುದೇ ದೇಗುಲ ಕಂಡುಬಂದಿಲ್ಲ ಅಹಮದಾಬಾದ್‌ ನಲ್ಲಿ ರಾಣಿ ಕಾ ಹಜಿರಾ ಎಂಬ ಮುಸ್ಲಿಂ ಪ್ರದೇಶವನ್ನು ನೆಲಸಮಗೊಳಿಸಿ ಬಳಿಕ ಅಲ್ಲಿದ್ದ 1600 ವರ್ಷ ಹಳೆಯ ಹಿಂದೂ ದೇಗುಲವನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಹೇಳಿಕೆಯೊಂದು...

Fact Check: ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆಯೇ?

Claimಬೆಂಗಳೂರಲ್ಲಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆFactಕೆಎಸ್‌ಆರ್ ಎಸ್‌ನಿಂದ ಇದೀಗ ನೀರು ಹರಿಸಿರುವುದು ಬೆಂಗಳೂರಿನ ನೀರಿನ ಉದ್ದೇಶಕ್ಕಾಗಿ. ಮಳವಳ್ಳಿಯ ಶಿವಾ ಡ್ಯಾಂ ಗೆ ನೀರು ಬಿಟ್ಟು ಅಲ್ಲಿಂದ ಅದನ್ನು ಬೆಂಗಳೂರಿಗೆ ಪೂರೈಸಲು ನೀರು ಹರಿಯಬಿಡಲಾಗಿದೆ ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಬೆಂಗಳೂರಿನಲ್ಲಿ ನೀರಿಗೆ ತೀವ್ರವಾದ ಹಾಹಾಕಾರ ಕಂಡುಬಂದ ಬೆನ್ನಲ್ಲೇ, ಕೆಆರ್ ಎಸ್‌...

Weekly wrap: ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ, ವಾರದ ಕ್ಲೇಮ್ ನೋಟ

ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿ ಆಂಧ್ರದಲ್ಲಿ ಸೆರೆ, 21 ಬಿಲಿಯನ್‌ ವರ್ಷ ಹಳೆಯ ಡ್ರೋನ್‌ ಉತ್ತರಪ್ರದೇಶದಲ್ಲಿ ಪತ್ತೆ, ರಂಜಾನ್‌ ಉದ್ದೇಶಕ್ಕೆ ಸರ್ಕಾರಿ ಶಾಲೆಗಳ ಸಮಯ ಬದಲು ಎಂಬ ಕ್ಲೇಮ್ ಗಳು ಈ ವಾರ ಹರಿದಾಡಿವೆ. ಇದರಲ್ಲಿ ಎರಡು ಕ್ಲೇಮ್‌ ಗಳು ಕೋಮು ಭಾವನೆಗೆ ಸಂಬಂಧಿಸಿದ್ದಾಗಿದ್ದವು. ಈ ಎಲ್ಲವುಗಳ...

Fact Check: ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆಯೇ?

Claimರಂಜಾನ್‌ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆFactರಾಜ್ಯದ ಎಲ್ಲ ಶಾಲೆಗಳಿಗೆ ಅನ್ವಯವಾಗುವಂತೆ ರಂಜಾನ್‌ ತಿಂಗಳಲ್ಲಿ ಸಮಯ ಬದಲಾವಣೆ ಮಾಡಿ ಆದೇಶ ನೀಡಲಾಗಿಲ್ಲ. ಬದಲಾಗಿ ಉರ್ದು ಶಾಲೆಗಳಿಗೆ ಮಾತ್ರ ಸಮಯದ ಬದಲಾವಣೆ ಮಾಡಲಾಗಿದೆ. ಈ ಕುರಿತ ಸುದ್ದಿಗಳಲ್ಲಿ ತಪ್ಪು ಅರ್ಥ ಬರುವಂತೆ ಹೆಡ್ ಲೈನ್‌ ಮಾತ್ರ ಬದಲಾಯಿಸಲಾಗಿದೆ ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯ ಬದಲಿಸಿದ ರಾಜ್ಯ ಸರ್ಕಾರ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಒಂದು...

Fact Check: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್‌ ವರ್ಷ ಹಳೆಯ ಡ್ರೋನ್‌ ಸಿಕ್ಕಿದೆಯೇ?

Claim ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್‌ ವರ್ಷ ಹಳೆಯ ಡ್ರೋನ್‌ ಸಿಕ್ಕಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹರಿದಾಡಿದೆ. ಎಕ್ಸ್ ನಲ್ಲಿ ಕಂಡುಬಂದ ಕ್ಲೇಮಿನ ಪ್ರಕಾರ, “ಉತ್ತರ ಪ್ರದೇಶದ ಪ್ರಯಾಗರಾಜ್ ಅಲ್ಲಿ ಉತ್ಖತನ ಮಾಡುವಾಗ ಸಿಕ್ಕಿದ 21 ಬಿಲಿಯನ್ ವರ್ಷ ಹಳೆಯ ಸನಾತನ ಡ್ರೋನ್. ಜಗತ್ತಿನ ಅತ್ಯಂತ ಹಳೆಯ ಮತ್ತು ಮೂಲ ನಾಗರೀಕತೆ ನನ್ನ ಸನಾತನ ಆರ್ಯ ನಾಗರೀಕತೆ. ಜೈ ಸನಾತನ” ಎಂದಿದೆ. Also Read:...

Fact Check: ಹಿಂದೂ ಹುಡುಗಿಗೆ ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಹುಡುಗಿಯಿಂದ ಬಲವಂತ, ಸತ್ಯ ಏನು?

Claimಹಿಂದೂ ಹುಡುಗಿಗೆ ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಹುಡುಗಿ ಬಲವಂತFactಮಡಿಕೇರಿಯ ಶನಿವಾರ ಸಂತೆಯಲ್ಲಿ 2021ರಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಇದಾಗಿದೆ. ಮುಸ್ಲಿಂ ಹುಡುಗಿ ತನ್ನ ಕಾಲೇಜಿನ ತರಗತಿಗೆ ಹಾಜರಾಗಿದ್ದಳು. ತರಗತಿಗಳಿಗೆ ಹಾಜರಾಗುವ ಮೊದಲು ಆಕೆ ಬುರ್ಖಾವನ್ನು ತೆಗೆಯಬೇಕಿದ್ದು ಆಕೆ ಬುರ್ಖಾವನ್ನು ತೆಗೆದು ಅದೇ ಕಾಲೇಜಿನ ಕ್ರಿಶ್ಚಿಯನ್‌ ಹುಡುಗಿಗೆ ಹಸ್ತಾಂತರಿಸಿದ್ದಳು. ನಂತರ ಕ್ರಿಶ್ಚಿಯನ್‌ ಹುಡುಗಿ ಕಾಲೇಜಿಗೆ ಹಾಜರಾಗಿರಲಿಲ್ಲ....

Explainer: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಸತ್ಯವೇ?

ಸೋನಿಯಾ ಗಾಂಧಿಯವರು ಒಂದೇ ಒಂದು ಮನೆಯನ್ನು ಹೊಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳುತ್ತಿರುವ ವೀಡಿಯೋ ಒಂದು ವೈರಲ್‌ ಆಗಿದೆ. ಕಾಂಗ್ರೆಸ್‌ ಅಧ್ಯಕ್ಷರಾಗಿದ್ದವರು ಹಲವು ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದರೂ, ಅವರ ಬಳಿ ಸ್ವಂತಕ್ಕೊಂದು ಸೂರಿಲ್ಲ ಎಂಬಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿರುವ ವೀಡಿಯೋ ಇದಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯ...

Fact Check: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಆಂಧ್ರ ವ್ಯಕ್ತಿಯ ಬಂಧನವಾಗಿದೆ ಎನ್ನುವುದು ಸುಳ್ಳು

Claimರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಆಂಧ್ರ ವ್ಯಕ್ತಿಯ ಬಂಧನವಾಗಿದೆFactನಿಜಾಮಾಬಾದ್‌ ಪಿಎಫ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್‌ ಸಲೀಂ ಎಂಬಾತನನ್ನು ಎನ್‌ಐಎ ಆಂಧ್ರ ಪ್ರದೇಶದಲ್ಲಿ ಬಂಧಿಸಿದೆ. ಇದು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಿದ್ದಲ್ಲ ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಬಂಧನವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಗಳು ಹರಿದಾಡಿವೆ. ಟ್ವಿಟರ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ ಇಸ್ಲಾಮಿಸ್ಟ್ ಟೆರರಿಸ್ಟ್, ಪಿಎಫ್‌ಐ...