Fact Check: ಬೈಕಿನ ಹಿಂಬದಿ ಗೊಂಬೆ ಸಾಗಿಸಿದ ವ್ಯಕ್ತಿಯ ಫೋಟೋದೊಂದಿಗೆ ‘ಲವ್‌ ಜಿಹಾದ್‌’ ಹೇಳಿಕೆ ವೈರಲ್!

ಬೈಕ್‌ ಹಿಂದೆ ಹೆಣ ಸಾಗಾಟ, ಲವ್‌ ಜಿಹಾದ್‌

Authors

An Electronics & Communication engineer by training, Arjun switched to journalism to follow his passion. After completing a diploma in Broadcast Journalism at the India Today Media Institute, he has been debunking mis/disinformation for over three years. His areas of interest are politics and social media. Before joining Newschecker, he was working with the India Today Fact Check team.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Fact
ಬೈಕಿನ ಹಿಂಬದಿಯಲ್ಲಿ ಶವವನ್ನು ಕಟ್ಟಿ ತೆಗೆದುಕೊಂಡು ಹೋಗುತ್ತಿರುವ ಮುಸ್ಲಿಂ ವ್ಯಕ್ತಿ

Claim
ಈ ವೈರಲ್‌ ಫೊಟೋ ಈಜಿಪ್ಟ್‌ನದ್ದಾಗಿದ್ದು, ವ್ಯಕ್ತಿ ಗೊಂಬೆಯನ್ನು ಸಾಗಿಸುತ್ತಿದ್ದಾನೆ, ಹೊರತು ಹೆಣವಲ್ಲ

ಬೈಕಿನ ಹಿಂಬದಿಯಲ್ಲಿ ಶವವನ್ನು ಕಟ್ಟಿ ತೆಗೆದುಕೊಂಡು ಹೋಗುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶವವನ್ನು ಪ್ಯಾಕ್‌ ಮಾಡಲಾಗಿದ್ದು, ಕಾಲು ಹೊರಗಿದೆ. ಈ ಚಿತ್ರವನ್ನು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು “ಲವ್‌ ಜಿಹಾದ್‌” ಪ್ರಕರಣ ಎಂದು ಹೇಳಲಾಗುತ್ತಿದೆ.

ಫೇಸ್‌ಬುಕ್‌ ನಲ್ಲಿ ಕಂಡು ಬಂದ ಈ ಕ್ಲೇಮಿನಲ್ಲಿ, “ಈ ಹಿಂದೂ ಹುಡುಗಿ ಬಿನಿತಾ ರಾಜಸ್ಥಾನದವಳು, ಹಣ್ಣು ಮಾರಾಟಗಾರ ಮೊಹಮ್ಮದ್‌ನನ್ನು ಪ್ರೀತಿಸಿ, ಮನೆಯಿಂದ ಓಡಿಹೋದಳು, 22 ದಿನಗಳ ನಂತರ ಅವಳು ಗೋಣಿಚೀಲದಲ್ಲಿ ಪತ್ತೆಯಾಗಿದ್ದಳು, ಮೊಹಮ್ಮದ್ ಬಿನಿತಾಳನ್ನು ಸೇತುವೆಯ ಕೆಳಗೆ ಎಸೆಯಲು ಗೋಣಿಚೀಲದಲ್ಲಿ ಸಾಗಿಸುತ್ತಿದ್ದನು. ಮೊಹಮ್ಮದ್‌ಗೆ ಯಾವಾಗ ಅವಳ ಕಾಲುಗಳು ಗೋಣಿಚೀಲದಿಂದ ಜಾರಿದವು ಎಂದು ಸಹ ತಿಳಿದಿರಲಿಲ್ಲ. ಹಿಂದಿನಿಂದ ಕಾರೊಂದು ಬರುತ್ತಿದ್ದು, ಈ ಫೋಟೋ ತೆಗೆದು ಪೊಲೀಸರಿಗೆ ಕರೆ ಮಾಡಿದ್ದಾರೆ. ಲವ್ ಜಿಹಾದ್” ಎಂದಿದೆ.

Also Read: ಒಡಿಶಾ ರೈಲು ದುರಂತ ಬಳಿಕ ಸ್ಟೇಷನ್‌ ಮಾಸ್ಟರ್ ಶರೀಫ್‌ ತಲೆಮರೆಸಿಕೊಂಡಿದ್ದಾರೆಯೇ, ಇಲ್ಲ ಈ ವೈರಲ್‌ ಹೇಳಿಕೆ ಸುಳ್ಳು!

ಈ ಪೋಸ್ಟ್ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಹಿಂದಿ ಭಾಷೆಯಲ್ಲಿ ಕೂಡ ವೈರಲ್ ಆಗಿದ್ದು ““ಅವರ ಅಬ್ದುಲ್ ಉಳಿದವರಿಗಿಂತ ಭಿನ್ನವಾಗಿದ್ದರು”  ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನ್ಯೂಸ್‌ಚೆಕರ್‌ ಈ ಬಗ್ಗೆ ಸತ್ಯಶೋಧನೆ ಮಾಡಿದ್ದು ಇದೊಂದು ಸುಳ್ಳು ಹೇಳಿಕೆ ಎಂದು ತಿಳಿದುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ಗೂಗಲ್ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದ್ದೇವೆ. ಈ ವೇಳೆ ಜೂನ್ 24 ರಂದು ಪ್ರಕಟವಾದ ಕೈರೋ 2 ಸುದ್ದಿ ವರದಿಯಿಂದ ವೈರಲ್ ಚಿತ್ರವನ್ನು ನಾವು ಪತ್ತೆಹಚ್ಚಿದ್ದೇವೆ. ಆ ಪ್ರಕಾರ ವೈರಲ್ ಚಿತ್ರವು ಈಜಿಪ್ಟ್ ರಾಜಧಾನಿ ಕೈರೋದಿಂದ ಬಂದಿದೆ ಎಂದು ಗೊತ್ತಾಗಿದೆ. ವರದಿಯ ಪ್ರಕಾರ ಈ ಚಿತ್ರವು ಈಜಿಪ್ಟ್ನ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬೆಚ್ಚಿಬೀಳಿಸಿದೆ, ಈ ವ್ಯಕ್ತಿಯು ತನ್ನ ದ್ವಿಚಕ್ರ ವಾಹನದಲ್ಲಿ ಶವವನ್ನು ಸಾಗಿಸುತ್ತಿದ್ದಾನೆ ಎಂದು ಅನೇಕರು ನಂಬಿದ್ದರು.

ಈಜಿಪ್ಟ್ ನ ಆಂತರಿಕ ಸಚಿವರು ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿರುವುದನ್ನು ವರದಿ ಉಲ್ಲೇಖಿಸಿದೆ. ಫೋಟೋದಲ್ಲಿ ಕಂಡುಬರುವ ವ್ಯಕ್ತಿಯು ಕೈರೋದ ಅಂಗಡಿಯೊಂದಕ್ಕೆ ಮಾನವ ಮಾದರಿಯನ್ನು ತಲುಪಿಸಲು ತೆರಳುತ್ತಿದ್ದಾಗ, ಯಾರೋ ಆತನ ಚಿತ್ರವನ್ನು ಕ್ಲಿಕ್ಕಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ಅದು ಹೇಳಿದೆ.

Also Read: ಒಡಿಶಾ ರೈಲು ದುರಂತ ಸ್ಥಳದ ಬಳಿಯ ಇಸ್ಕಾನ್ ದೇಗುಲ ಫೋಟೋ ಅರ್ಧ ತೋರಿಸಿ ಮಸೀದಿ ಎಂದು ಘಟನೆಗೆ ಕೋಮು ಬಣ್ಣ

ಮಧ್ಯಪ್ರಾಚ್ಯದ ಮತ್ತೊಂದು ಪ್ರಮುಖ ಮಾಧ್ಯಮ ಸಂಸ್ಥೆ ಅಲರಾಬಿಯಾ ಕೂಡ ತನ್ನ ವರದಿಯಲ್ಲಿ ಇದನ್ನು ದೃಢಪಡಿಸಿದೆ. ಸತ್ಯಶೋಧನೆ ಪ್ರಕಾರ, ಮೊಹಮ್ಮದ್ ನಾಸರ್ ಎಂಬವರು ಜೂನ್ 1 ರಂದು ಫೇಸ್ಬುಕ್ ಪೋಸ್ಟ್ ಒಂದರಲ್ಲಿ, ವೈರಲ್ ಫೋಟೋದಲ್ಲಿ ಕಂಡುಬರುವ ವ್ಯಕ್ತಿ ತಾನು ಎಂದು ಹೇಳಿದ್ದಾರೆ ಮತ್ತು ಅವರು ತಮ್ಮ ಬೈಕಿನಲ್ಲಿ ಶವವನ್ನು ಸಾಗಿಸಿದ್ದಾರೆ ಎಂಬ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.

ಬೈಕಿನ ಹಿಂಬದಿಯಲ್ಲಿ ಗೊಂಬೆ ಸಾಗಿಸಿದ ವ್ಯಕ್ತಿಯ ಫೋಟೋದೊಂದಿಗೆ 'ಲವ್‌ ಜಿಹಾದ್‌' ಕ್ಲೇಮ್ ವೈರಲ್!

ಆ ಪೋಸ್ಟ್‌ ನಲ್ಲಿ ನಾಸರ್‌ ಅವರು ತನ್ನ ಫೋನ್‌ ಸಂಖ್ಯೆ ಮತ್ತು ಮಾನವ ಮಾದರಿಯನ್ನು ತಲುಪಿಸಬೇಕಿದ್ದ ಅಂಗಡಿಯ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಜೊತೆಗೆ ವೈರಲ್ ಫೋಟೋದ ಹಿಂದಿನ ಸತ್ಯ ಸಂಗತಿಗಳನ್ನು ವಿವರಿಸುವ ಸಮಹ್ ಎಮಾದ್ ಎಂಬ ಮಹಿಳೆಯ ಫೇಸ್ಬುಕ್ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ.

ಈಜಿಪ್ಟ್‌ ನ ಸೂಯೆಜ್ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನದ ಬೋಧಕಿ ಎಂದು ಗುರುತಿಸಿಕೊಂಡಿರುವ ಸಮಹ್, ತನ್ನ ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ನಸ್ರ್ ಮತ್ತು ಅವರ ಬೈಕಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಸಮಾ ಪೋಸ್ಟ್ ಮಾಡಿದ ಚಿತ್ರದಲ್ಲಿರುವ ಬೈಕ್ ವೈರಲ್ ಫೋಟೋದಲ್ಲಿ ಕಂಡುಬರುವ ಬೈಕನ್ನು ಹೋಲುವುದು ಕಂಡುಬಂದಿದೆ. 

ನ್ಯೂಸ್ಚೆಕರ್ ಮೊಹಮ್ಮದ್ ನಾಸರ್ ಮತ್ತು ಸಮಾ ಇಮಾದ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿಲಾಗಿದೆ. ಒಂದೊಮ್ಮೆ ನಾವು ಅವರ ಪ್ರತಿಕ್ರಿಯೆ ಲಭ್ಯವಾಗಿದ್ದೇ ಆದಲ್ಲಿ ಈ ಲೇಖನವನ್ನು ಪರಿಷ್ಕರಿಸಲಾಗುವುದು.

Also Read: ರೈಲ್ವೇ ಟ್ರ್ಯಾಕ್‌ ಮೇಲೆ ಬಾಲಕ ಕಲ್ಲು ಇಟ್ಟ ಈ ವೈರಲ್‌ ವೀಡಿಯೋ ಈಗಿನದ್ದಲ್ಲ, ಇದರ ಹಿಂದಿನ ಸತ್ಯ ಏನು?

Conclusion

ತನ್ನ ದ್ವಿಚಕ್ರ ವಾಹನದಲ್ಲಿ ಮೃತ ದೇಹವನ್ನು ಸಾಗಿಸುತ್ತಿರುವ ವೈರಲ್ ಫೋಟೋ ವಾಸ್ತವವಾಗಿ ಈಜಿಪ್ಟ್ನಿಂದ ಬಂದಿದೆ ಮತ್ತು ಒಬ್ಬ ವ್ಯಕ್ತಿಯು ಮಾನವ ಮಾದರಿಯನ್ನು ಒಯ್ಯುತ್ತಿರುವುದನ್ನು ತೋರಿಸುತ್ತದೆ ಎಂದು ತೀರ್ಮಾನಿಸಬಹುದು. ಈ ಚಿತ್ರವನ್ನು ತಪ್ಪಾಗಿ ಕೋಮು ಬಣ್ಣದೊಂದಿಗೆ ತಿರುಚಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.  

Results: False

Our Sources

Reports of Cairo24, published on June 2, 2023

Report of Alarabiya, published on May 31, 2023

Facebook posts of Mohammed Nasr and Samah Emad

ಈ ಲೇಖನ ಮೊದಲು ನ್ಯೂಸ್‌ಚೆಕರ್‌ ಹಿಂದಿಯಲ್ಲಿ ಪ್ರಕಟಗೊಂಡಿದ್ದು, ಅದನ್ನು ಇಲ್ಲಿ ಓದಬಹುದು


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

An Electronics & Communication engineer by training, Arjun switched to journalism to follow his passion. After completing a diploma in Broadcast Journalism at the India Today Media Institute, he has been debunking mis/disinformation for over three years. His areas of interest are politics and social media. Before joining Newschecker, he was working with the India Today Fact Check team.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.