Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ
ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ ಎಂಬ ಹೇಳಿಕೆ ಸುಳ್ಳು. ಈಜಿಪ್ಟ್ ಮಿಲಿಟರಿ ಅಕಾಡೆಮಿ ಪದವಿ ಪ್ರದಾನ ಸಂದರ್ಭದ ವೀಡಿಯೋವನ್ನು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ಪೋಸ್ಟ್ ಗಳು ಕಂಡುಬಂದಿದ್ದು, ಯುದ್ಧವಿಮಾನಗಳು ಗುಂಪಾಗಿ ಹಾರಾಡುತ್ತಿರುವ ದೃಶ್ಯ ಇದೆ.


ಈ ಪೋಸ್ಟ್ ಗಳನ್ನ ಇಲ್ಲಿ, ಇಲ್ಲಿ ನೋಡಬಹುದು.
ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದೇವೆ.
ಈ ವೇಳೆ ಏಪ್ರಿಲ್ 9, 2025ರಂದು fatabyyano.net ಎಂಬ ವೆಬ್ ಸೈಟ್ ನಲ್ಲಿ ಫ್ಯಾಕ್ಟ್ ಚೆಕ್ ವರದಿಯೊಂದು ಕಂಡುಬಂದಿದೆ. ಈ ವರದಿಯಲ್ಲಿ ವಿಮಾನಗಳು ಈಜಿಪ್ಟಿನದ್ದಾಗಿದ್ದು ಕೈರೋದಲ್ಲಿ ನಡೆದ ಮಿಲಿಟರಿ ಅಕಾಡೆಮಿ ಪದವಿ ಪ್ರದಾನ ಸಮಾರಂಭದ ಸಂದರ್ಭ ಹಾರಾಟ ನಡೆಸಿವೆ ಎಂದಿದೆ. (ಅರೆಬಿಕ್ ಭಾಷೆಯಿಂದ ಭಾಷಾಂತರಿಸಲಾಗಿದೆ)

ಈ ವಿಮಾನ ಹಾರಾಟದ ವೀಡಿಯೋವನ್ನು ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಹೇಳಿಕೆಗಳೊಂದಿಗೆ ಹಂಚಿಕೊಂಡಿರುವುದನ್ನು ವಿವಿಧ ಅರೆಬಿಕ್ ಫ್ಯಾಕ್ಟ್ ಚೆಕ್ ಸಂಸ್ಥೆಗಳು ಸತ್ಯಶೋಧನೆ ನಡೆಸಿದ್ದು ನಿಜಾಂಶವನ್ನು ತೆರೆದಿಟ್ಟಿವೆ. ಅವುಗಳ ವರದಿಯಲ್ಲಿ ಈ ವೀಡಿಯೋಗಳು ಈಜಿಪ್ಟ್ ಮಿಲಿಟರಿ ಅಕಾಡೆಮಿಯ ಪದವಿ ಪ್ರದಾನ ಸಮಾರಂಭದ ವೀಡಿಯೋಗಳು ಎಂದು ಹೇಳಿವೆ. ಈ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಇದರೊಂದಿಗೆ ನಾವು ಈಜಿಪ್ಟ್ ಮಿಲಿಟರಿ ಅಕಾಡೆಮಿ ಪದವಿ ಪ್ರದಾನ ಸಮಾರಂಭದ ಕುರಿತಾಗಿ ಕೀವರ್ಡ್ ಸರ್ಚ್ ನಡೆಸಿದ್ದು, ಅದು ಅಕ್ಟೋಬರ್ 2024ರ ಹೊತ್ತಿಗೆ ನಡೆದಿದೆ ಎಂದು ಗೊತ್ತಾಗಿದೆ. ಈ ಕುರಿತು ಅಕ್ಟೋಬರ್ 3, 2024ರಂದು ಯೂಟ್ಯೂಬ್ ನಲ್ಲಿ ElMehwar Tv Channel ಎಂಬ ಬಳಕೆದಾರರು ವೀಡಿಯೋವನ್ನು ಪ್ರಕಟಿಸಿದ್ದು, ಇದರ ವಿವರಣೆಯಲ್ಲಿ, ‘ಮಿಲಿಟರಿ ಅಕಾಡೆಮಿಯ ಹೊಸ ಬ್ಯಾಚ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಈಜಿಪ್ಟ್ ವಾಯುಪಡೆಯ ಸ್ಕೈ ಈಗಲ್ಸ್ನಿಂದ ಭವ್ಯ ಪ್ರದರ್ಶನ.’ ಎಂದಿದೆ (ಅರೆಬಿಕ್ ನಿಂದ ಭಾಷಾಂತರಿಸಲಾಗಿದೆ)
ಫೇಸ್ಬುಕ್ ನಲ್ಲೂ ಅಕ್ಟೋಬರ್ 3, 2024ರಂದು Mehwar TV ಯಲ್ಲಿ ಈಜಿಪ್ಟ್ ಮಿಲಿಟರಿ ಅಕಾಡೆಮಿಯ ಪದವಿ ಪ್ರದಾನದ ದೃಶ್ಯಗಳನ್ನು ನೋಡಿದ್ದೇವೆ.
ಈ ಸಾಕ್ಷ್ಯಾಧಾರಗಳ ಪ್ರಕಾರ, ಇದು ಈಜಿಪ್ಟ್ ನ ಮಿಲಿಟರಿ ಅಕಾಡೆಮಿ ಸಮಾರಂಭದ ದೃಶ್ಯಗಳಾಗಿದ್ದು, ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ ಎಂಬ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ.
Also Read: ಇರಾನ್-ಇಸ್ರೇಲ್ ಕದನ; ಸರ್ಕಾರದ ವಿರುದ್ಧವೇ ಇರಾನ್ ಜನ ತಿರುಗಿಬಿದ್ದಿದ್ದಾರೆಯೇ?
Our Sources
Report By fatabyyano.net, Dated: April 9, 2025
YouTube Video By ElMehwar Tv Channel, Dated: October 3, 2024
Facebook Post By Mehwar TV, October 3, 2024
Ishwarachandra B G
November 7, 2025
Ishwarachandra B G
October 13, 2025
Ishwarachandra B G
June 28, 2025