Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನೇಪಾಳದಲ್ಲಿ ಹಿಂದೂಗಳು ಮುಸ್ಲಿಂ ಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದರು
ನೇಪಾಳದಲ್ಲಿ ಹಿಂದೂಗಳು ಮುಸ್ಲಿಂ ಧ್ವಜ ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದರು ಎನ್ನುವುದು ಸುಳ್ಳು ಈ ವೈರಲ್ ವೀಡಿಯೋ ಕರ್ನಾಟಕದ ಮದ್ದೂರಿನದ್ದಾಗಿದೆ
ನೇಪಾಳದಲ್ಲಿ ಇತ್ತೀಚೆಗೆ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳ ಮಧ್ಯೆ, ನೇಪಾಳದ ಹಿಂದೂಗಳು ಮುಸ್ಲಿಂ ಧ್ವಜಗಳನ್ನು ಕೆಳಗಿಳಿಸುವ ಮೂಲಕ ಕೇಸರಿ ಧ್ವಜವನ್ನು ಹಾರಿಸಲು ಆರಂಭಿಸಿದ್ದಾರೆ ಎಂಬ ಹೇಳಿಕೆಯಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಆದರೆ, ಈ ವೀಡಿಯೋ ನೇಪಾಳದ್ದಲ್ಲ, ಕರ್ನಾಟಕದ ಮದ್ದೂರಿನದ್ದು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮದ್ದೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯಲ್ಲಿ ಅಹಿತಕರ ಘಟನೆಗಳು ನಡೆದ ಬಳಿಕ ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಈ ವಿದ್ಯಮಾನ ನಡೆದಿತ್ತ.
ಈ ಹಿಂದೆ, ನೇಪಾಳ ಸರ್ಕಾರವು ಅನೇಕ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿತ್ತು, ಅನಂತರ ಯುವಕರು ಸೆಪ್ಟೆಂಬರ್ 8 ರಂದು ನೇಪಾಳದ ರಾಜಧಾನಿಯಲ್ಲಿ ಪ್ರತಿಭಟನೆ ಪ್ರಾರಂಭಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ರಾಜೀನಾಮೆ ನಂತರ, ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು ಮತ್ತು ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಅದರ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ. 6 ತಿಂಗಳೊಳಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಪ್ರಧಾನಿ ಸುಶೀಲಾ ಕಾರ್ಕಿ ಘೋಷಿಸಿದ್ದಾರೆ.
ವೈರಲ್ ವೀಡಿಯೋವು 21 ಸೆಕೆಂಡುಗಳಷ್ಟು ದೀರ್ಘವಾಗಿದ್ದು, ಇದರಲ್ಲಿ ಜನರ ಮಧ್ಯೆ ಇದ್ದ ಯುವಕನೊಬ್ಬ ಕಂಬಕ್ಕೇರಿ ಅದರ ಮೇಲಿದ್ದ ಹಸಿರು ಧ್ವಜ ಕೆಳಗಿಳಿಸಿ, ಕೇಸರಿ ಧ್ವಜ ಹಾಕುತ್ತಾನೆ. ಈ ವೀಡಿಯೋ ಜೊತೆಗಿನ ಹೇಳಿಕೆಯಲ್ಲಿ, “ನೇಪಾಳದ ಹಿಂದೂಗಳು ಮುಸ್ಲಿಮರ ಧ್ವಜಗಳನ್ನು ಕೆಳಗಿಳಿಸುವ ಮೂಲಕ ಕೇಸರಿ ಧ್ವಜವನ್ನು ಹಾರಿಸಲು ಪ್ರಾರಂಭಿಸಿದ್ದಾರೆ” ಎಂದು ಹೇಳಲಾಗಿದೆ. ಇದನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದೆ.

ವೈರಲ್ ವೀಡಿಯೋದ ತನಿಖೆಯವೇಳೆ, 8 ಸೆಪ್ಟೆಂಬರ್ 2025 ರಂದು ಪ್ರಜಾನುಡಿ ಇನ್ಸ್ಟಾಗ್ರಾಮ್ ಖಾತೆಯಿಂದ ಅಪ್ಲೋಡ್ ಮಾಡಲಾದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಅದರಲ್ಲಿರುವ ದೃಶ್ಯಗಳು ವೈರಲ್ ವೀಡಿಯೋಗೆ ಸಂಬಂಧಿಸಿದ್ದಾಗಿವೆ.
Also Read: ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಎರಗಿದ ಲಾರಿ; ಚಾಲಕ ಮುಸ್ಲಿಂ?

ವೀಡಿಯೋ ಜೊತೆಗಿರುವ ಶೀರ್ಷಿಕೆಯಲ್ಲಿ ಲೊಕೇಶನ್ ಬಗ್ಗೆ ಮಾಹಿತಿ ನೀಡದಿದ್ದರೂ, ಕರ್ನಾಟಕ, ಮದ್ದೂರು, ಗಣೇಶ್ ವಿಸರ್ಜನೆ ಎಂಬಂತಹ ಹ್ಯಾಶ್ ಟ್ಯಾಗ್ ಗಳಿದ್ದವು.
ಆದ್ದರಿಂದ ನಾವು ಸಂಬಂಧಿತ ಕೀವರ್ಡ್ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದ್ದೇವೆ ಮತ್ತು ಮುಸ್ಲಿಂ ಮಿರರ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಸೆಪ್ಟೆಂಬರ್ 9, 2025 ರಂದು ಅಪ್ಲೋಡ್ ಮಾಡಲಾದ ವೀಡಿಯೋ ಕಂಡುಕೊಂಡಿದ್ದೇವೆ. ಇದು ಬೇರೆ ಕೋನದಿಂದ ತೆಗೆದ ವೀಡಿಯೋ ಆಗಿದೆ. “ಸೆಪ್ಟೆಂಬರ್ 8 ರಂದು, ನೂರಾರು ಹಿಂದುತ್ವ ಕಾರ್ಯಕರ್ತರು ಕರ್ನಾಟಕದ ಮದ್ದೂರಿನ ನರಸಿಂಹ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ನಡೆಸಿದರು, ಈ ಸಮಯದಲ್ಲಿ ಅವರು ಮಸೀದಿಯ ಬಳಿ ಇಸ್ಲಾಮಿಕ್ ಧ್ವಜವನ್ನು ಬಲವಂತವಾಗಿ ತೆಗೆದುಹಾಕಿದರು ಮತ್ತು ಅದರ ಜಾಗದಲ್ಲಿ ಕೇಸರಿ ಧ್ವಜವನ್ನು ಹಾರಿಸಿದರು.” ಎಂದಿದೆ.

ಸೆಪ್ಟೆಂಬರ್ 8, 2025 ರಂದು ನಮ್ಮ ಟಿವಿ ಮೈಸೂರು ಇನ್ಸ್ಟಾಗ್ರಾಮ್ ಖಾತೆಯಿಂದ ಅಪ್ಲೋಡ್ ಮಾಡಲಾದ ಅದೇ ಘಟನೆಗೆ ಸಂಬಂಧಿಸಿದ ಮತ್ತೊಂದು ವೀಡಿಯೋವನ್ನೂ ನಾವು ನೋಡಿದ್ದೇವೆ.

ಈ ಮಾಹಿತಿಯ ಆಧಾರಗಳಲ್ಲಿ ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಘಟನೆಯ ಸ್ಥಳವನ್ನು ಹುಡುಕಿದ್ದೇವೆ, ಇದು ಮದ್ದೂರಿನ ಮುಖ್ಯ ರಸ್ತೆಯಲ್ಲಿದೆ ಎಂದು ಗೊತ್ತಾಗಿದೆ. ಈ ಸ್ಥಳದ ಮಾಹಿತಿಯನ್ನು ಕೆಳಗಿನ ಚಿತ್ರಗಳಲ್ಲಿ ನೋಡಬಹುದು.

ಸೆಪ್ಟೆಂಬರ್ 7ರ ಭಾನುವಾರದಂದು ಮದ್ದೂರಿನ ತಮಿಳು ಕಾಲೋನಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಲಾಯಿತು. ಮದ್ದೂರಿನ ರಾಮ್ ರಹೀಮ್ ನಗರದ ಮೂಲಕ ಯಾತ್ರೆ ಹೋಗುತ್ತಿದ್ದಾಗ ಮಸೀದಿಯ ಬಳಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಮತ್ತು ಹಿಂಸಾಚಾರ ಭುಗಿಲೆದ್ದಿತು. ಆದರೆ, ನಂತರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಮರುದಿನ, ಯಾತ್ರೆಯ ಮೇಲೆ ಕಲ್ಲು ತೂರಾಟವನ್ನು ವಿರೋಧಿಸಿ ಮದ್ದೂರಿನಲ್ಲಿ ಪ್ರತಿಭಟನೆ ನಡೆದಿದೆ.
ಈ ಬಗ್ಗೆ ಪತ್ರಕರ್ತ ಮಂಜುನಾಥ ಮಂಡ್ಯ ಅವರನ್ನೂ ಸಂಪರ್ಕಿಸಿದ್ದೇವೆ. ಈ ವಿಡಿಯೋ ಸೆ.8ರಂದು ಮದ್ದೂರಿನಲ್ಲಿ ನಡೆದ ಪ್ರತಿಭಟನೆಯ ಸಮಯದ್ದು ಎಂದು ಖಚಿತಪಡಿಸಿದ್ದಾರೆ.
ತನಿಖೆಯಲ್ಲಿ ದೊರೆತ ಪುರಾವೆಗಗಳ ಪ್ರಕಾರ, ನೇಪಾಳದಲ್ಲಿ ಹಿಂದೂಗಳು ಮುಸ್ಲಿಂ ಧ್ವಜಗಳನ್ನು ಕೆಳಗಿಳಿಸಿ ಕೇಸರಿ ಧ್ವಜಗಳನ್ನು ಹಾರಿಸಿದ್ದಾರೆ ಎಂದು ಹೇಳಿದ ವೈರಲ್ ವೀಡಿಯೋ, ನಿಜವಾಗಿ ಕರ್ನಾಟಕದ ಮದ್ದೂರಿನದ್ದು ಎಂದು ತಿಳಿದುಬಂದಿದೆ.
Also Read: ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎಂದ ವೀಡಿಯೋ ನಿಜವಲ್ಲ!
Our Sources
Instagram post by Prajanudi, Dated: September 8, 2025
Instagram post by Muslim Mirror, Dated: September 9, 2025
Google Street View
Conversation with journalist Manjunath Mandya
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 18, 2025
Ishwarachandra B G
November 4, 2025
Ishwarachandra B G
October 18, 2025