Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇರಾನ್-ಇಸ್ರೇಲ್ ಮಧ್ಯೆ ಕದನ ಮುಂದುವರಿದಿರುವಂತೆಯೇ, ಆ ಕುರಿತ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿದ್ದವು, ಇರಾನ್ ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ, ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ, ಸರ್ಕಾರದ ವಿರುದ್ಧವೇ ಇರಾನ್ ಜನ ತಿರುಗಿಬಿದ್ದಿದ್ದಾರೆ ಎಂಬ ಹೇಳಿಕೆಗಳಿದ್ದವು. ಆದರೆ ಈ ಹೇಳಿಕೆಗಳು ಸುಳ್ಳು ಮತ್ತು ಹೇಳಿಕೆಗಳೊಂದಿಗೆ ಬಳಸಲಾದ ವೀಡಿಯೋಗಳು ಬೇರೆ ಸಂದರ್ಭದ್ದು ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಇದರೊಂದಿಗೆ ಬಾಂಗ್ಲಾದೇಶ ಧ್ವಜ ಮಾರಾಟ ಮಾಡಿದ್ದಕ್ಕೆ ಭಾರತೀಯ ಯೋಧ ಮಾರಾಟಗಾರನನ್ನು ಥಳಿಸಿದ್ದಾನೆ, ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ವೇದಿಕೆ ಮೇಲೆ ಅವಕಾಶ ಸಿಕ್ಕಿಲ್ಲ, ಶುಂಠಿ ನೀರು ನಿಜವಾಗಿಯೂ ಸೊಂಟ, ಬೆನ್ನು ಮತ್ತು ತೊಡೆ ಕೊಬ್ಬು ಕರಗಿಸುತ್ತದೆ ಎಂಬ ಹೇಳಿಕೆಗಳೂ ಇದ್ದವು. ಇವುಗಳೂ ನಿಜವಲ್ಲ ಎಂದು ನ್ಯೂಸ್‌ಚೆಕರ್ ಕಂಡುಕೊಂಡಿದೆ. ಈ ಕುರಿತ ವಾರದ ನೋಟ ಇಲ್ಲಿದೆ

ಇರಾನ್ ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ನಿಜವಾಗಿ ಚೀನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ದುರಂತದ ದೃಶ್ಯವಾಗಿದ್ದು, ಇರಾನ್ ಅಣ್ವಸ್ತ್ರ ಘಟಕದ ಮೇಲೆ ನಡೆದ ದಾಳಿ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಶೋಧನೆ ಮಾಡಿದಾಗ, ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ ಎಂಬ ಹೇಳಿಕೆ ಸುಳ್ಳು. ಈಜಿಪ್ಟ್ ಮಿಲಿಟರಿ ಅಕಾಡೆಮಿ ಪದವಿ ಪ್ರದಾನ ಸಂದರ್ಭದ ವೀಡಿಯೋವನ್ನು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಇರಾನ್-ಇಸ್ರೇಲ್ ಕದನ ತೀವ್ರವಾಗುತ್ತಿರುವಂತೆಯೇ, ಇರಾನ್ ನಲ್ಲಿ ಸರ್ಕಾರದ ವಿರುದ್ಧವೇ ಜನರು ತಿರುಗಿಬಿದ್ದಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಸರ್ಕಾರದ ವಿರುದ್ಧವೇ ಇರಾನ್ ಜನ ತಿರುಗಿಬಿದ್ದಿದ್ದಾರೆ ಎನ್ನುವ ಈ ವೀಡಿಯೋ 2017ರದ್ದಾಗಿದ್ದು, ಸರ್ಕಾರದ ನೀತಿಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಬಾಂಗ್ಲಾದೇಶದ ಧ್ವಜ ಮಾರಾಟ ಮಾಡಿದ್ದಕ್ಕೆ ಧ್ವಜ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಭಾರತೀಯ ಯೋಧ ಥಳಿಸಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇದು ಸುಳ್ಳು, ಈ ವೀಡಿಯೋ ಮೂಲತಃ ಬಾಂಗ್ಲಾದೇಶದ್ದಾಗಿದೆ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ಕೆನಡಾದಲ್ಲಿ ನಡೆದ ಜಿ7 ಶೃಂಗ ಸಭೆಯ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಶ್ವನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲದಿರುವುದನ್ನು ಇಲ್ಲಿ ಹೇಳಲಾಗಿದೆ ಮತ್ತು ಇದು ರಾಜತಾಂತ್ರಿಕವಾಗಿ ಭಾರತಕ್ಕೆ ಹಿನ್ನಡೆ ಎನ್ನಲಾಗಿದೆ. ಈ ಕುರಿತು ನ್ಯೂಸ್‌ಚೆಕರ್ ತನಿಖೆ ನಡೆಸಿದಾಗ, ಈ ಫೊಟೋ ಜಿ7 ಸದಸ್ಯ ರಾಷ್ಟ್ರಗಳ ನಾಯಕರ ಫೋಟೋ ಆಗಿದ್ದು, ಭಾರತ ಜಿ7 ಸದಸ್ಯ ರಾಷ್ಟ್ರ ಅಲ್ಲ, ಅದು ಆಹ್ವಾನಿತ ರಾಷ್ಟ್ರ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಶುಂಠಿ ನೀರು ಸೊಂಟ, ಬೆನ್ನು ಮತ್ತು ತೊಡೆ ಕೊಬ್ಬು ಕರಗಿಸಲು ಆರೋಗ್ಯಕರ ಪಾನೀಯ ಎಂದು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಶುಂಠಿ ನೀರು ಸೊಂಟ, ಬೆನ್ನು ಮತ್ತು ತೊಡೆ ಕೊಬ್ಬು ಕರಗಿಸಲು ಆರೋಗ್ಯಕರ ಪಾನೀಯ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ, ಈ ಪಾನೀಯ ಒಂದರಿಂದಲೇ ಕೊಬ್ಬು ಕರಗುವುದಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ
Ishwarachandra B G
November 22, 2025
Vasudha Beri
November 20, 2025
Tanujit Das
November 17, 2025