Authors
Claim
ನಟ ಡ್ವೇನ್ ಜಾನ್ಸನ್ ಹಿಂದೂ ಉಡುಪನ್ನು ಧರಿಸಿ ಆರತಿಯನ್ನು ಮಾಡುತ್ತಿರುವ ದೃಶ್ಯ
Fact
ನಟ ಡ್ವೇನ್ ಜಾನ್ಸನ್ ಹಿಂದೂ ಉಡುಪು ಧರಿಸಿ ಆರತಿ ಮಾಡುತ್ತಿದ್ದಾರೆ ಎನ್ನಲಾದ ಈ ಫೋಟೊ ನಿಜವಲ್ಲ. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಮಾಡಿದ್ದಾಗಿದೆ.
ಖ್ಯಾತ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಹಿಂದೂ ಉಡುಪನ್ನು ಧರಿಸಿ ಆರತಿಯನ್ನು ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತ ಫೇಸ್‌ಬುಕ್ ಕ್ಲೇಮಿನಲ್ಲಿ “ಯಾವ ದುಡ್ಡಿನ ಆಮಿಷ ಇಲ್ಲ, ಯಾವ ಖಡ್ಗದ ಬೆದರಿಕೆ ಇಲ್ಲ. ಆದರೂ ತನ್ನತ್ತ ಸೆಳೆಯುವ ಈಕೈಕ ಧರ್ಮ ಹಿಂದೂ ಧರ್ಮ. WWE ಸೂಪರ್ ಸ್ಟಾರ್ ಹಾಗೂ ಹಾಲಿವುಡ್ ನಟ Rock (Dwayne Douglas Johnson) ಸನಾತನ ಧರ್ಮದ ಉಡುಪಿನಲ್ಲಿ.” ಎಂದು ಹೇಳಲಾಗಿದೆ.
Also Read: ಮೊಳೆಗಳಿರುವ ಕ್ಯಾಪ್ಸೂಲ್ ಮೂಲಕ ಜಿಹಾದ್, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಇದೇ ರೀತಿಯ ಪೋಸ್ಟ್‌ಗಳನ್ನು ನಾವು ವಿವಿಧೆಡೆ ಗುರುತಿಸಿದ್ದೇವೆ.
ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
Fact Check/ Verification
ವೈರಲ್ ಫೋಟೋಗಳ ಬಗ್ಗೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ ಮೇ 27, 2023 ರಂದು @hatwillbefun ಅವರು ಮಾಡಿದ ಫೇಸ್ ಬುಕ್ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ “ಡ್ವೇನ್ ಜಾನ್ಸನ್ ಅವರ ಎಐ ಚಿತ್ರಗಳು” ಎಂಬ ಶೀರ್ಷಿಕೆಯೊಂದಿಗೆ ಹಾಲಿವುಡ್ ನಟನ ವೈರಲ್ ಚಿತ್ರಗಳನ್ನು ಈ ಪೋಸ್ಟ್ ನಲ್ಲಿ ಹಾಕಲಾಗಿತ್ತು.
ಇದಲ್ಲದೆ, ಟ್ವಿಟರ್ ಬಳಕೆದಾರ @MauryanPentool ಡ್ವೇನ್ ಜಾನ್ಸನ್ ಅವರ ವೈರಲ್ ಚಿತ್ರಗಳನ್ನು ಹಂಚಿಕೊಂಡಿದ್ದು, ಅವು ಎಐನ ಉತ್ಪನ್ನ ಎಂದು ಹೇಳಿದ್ದಾರೆ. ಬಳಕೆದಾರರು ಫೇಸ್ ಬುಕ್ ಪೋಸ್ಟ್ ನ ಲಿಂಕ್ ಅನ್ನು ಕೂಡ ಹಂಚಿಕೊಂಡಿದ್ದಾರೆ.
Also Read: ಕಾಂಗ್ರೆಸ್ ಸರ್ಕಾರದ ‘ಉಚಿತ ವಿದ್ಯುತ್’ ಭರವಸೆ ನೆಪದಲ್ಲಿ ವಿದ್ಯುತ್ ಸಿಬ್ಬಂದಿ ಮೇಲೆ ಹಲ್ಲೆ, ಸತ್ಯಾಂಶ ಏನು?
ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಜಾನ್ಸನ್ ಅವರ ವೈರಲ್ ಚಿತ್ರಗಳನ್ನು ಹೊಂದಿರುವ @bhargav.Valera ಅವರ ಫೇಸ್ಬುಕ್ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಅವರು “ಸಾಧುವಾಗಿ ಡ್ವೇನ್ ಜಾನ್ಸನ್ ಮಂದಿರದಲ್ಲಿ ಪೂಜೆಸಲ್ಲಿಸುತ್ತಿದ್ದಾರೆ. @therock ಅದು ಹೇಗೆ? ಎಐ ಕಾನ್ಸೆಪ್ಟ್ ಆರ್ಟ್” ಎಂದು ಬರೆದುಕೊಂಡಿದ್ದಾರೆ.
ನಾವು @bhargav.Valera ಅವರ ಫೇಸ್ಬುಕ್ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಎಐ ಮೂಲಕ ರಚಿಸಲಾದ ಚಿತ್ರಗಳ ಅನೇಕ ಪೋಸ್ಟ್‌ಗಳನ್ನುಕಂಡಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಡ್ವೇನ್ ಜಾನ್ಸನ್ ಫೋಟೋಗಳನ್ನು ಹೊಂದಿರುವ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ಗಳ ಸ್ಕ್ರೀನ್ ಗ್ರ್ಯಾಬ್‌ಗಳನ್ನು ಕೂಡ ವಲೇರಾ ಅವರು ಹಂಚಿಕೊಂಡಿದ್ದಾರೆ, “ನನ್ನ ಕಲಾಕೃತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ … ಹೌದು.” ಎಂದವರು ಹೇಳಿದ್ದಾರೆ.
ಇದಲ್ಲದೆ, ಜಾನ್ಸನ್ ಅವರ ಅದೇ ಎಐ ಚಿತ್ರಗಳನ್ನು ವಲೇರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಅಪ್ಲೋಡ್ ಮಾಡಿದ್ದಾರೆ. ವಿಶೇಷವೆಂದರೆ, ಅವರು ಇನ್ಸ್ಟಾಗ್ರಾಮ್ ಬಯೋದಲ್ಲಿ ತಮ್ಮನ್ನು “ಎಐ ಆರ್ಟಿಸ್ಟ್” ಎಂದು ಗುರುತಿಸಿಕೊಂಡಿದ್ದಾರೆ.
ಆದ್ದರಿಂದ, ಡ್ವೇನ್ ಜಾನ್ಸನ್ ಹಿಂದೂ ಅರ್ಚಕನಂತೆ ವೇಷ ಧರಿಸಿದ ವೈರಲ್ ಚಿತ್ರಗಳನ್ನು ಎಐ ಉಪಕರಣವನ್ನು (ಕೃತಕ ಬುದ್ಧಿಮತ್ತೆ ಉಪಕರಣ) ಬಳಸಿಕೊಂಡು ರಚಿಸಲಾಗಿದೆ ಎಂಬುದು ಖಚಿತವಾಗಿದೆ.
Also Read: ದೆಹಲಿ ಪೊಲೀಸರು ಬಂಧಿಸಿದ ವೇಳೆಯ ವಿನೇಶ್ ಫೋಗಟ್, ಸಂಗೀತಾ ಫೋಗಟ್ ಫೋಟೋ ವೈರಲ್
Conclusion
ಈ ಸತ್ಯಶೋಧನೆಯ ಪ್ರಕಾರ, ಡ್ವೇನ್ ಜಾನ್ಸನ್ ಅವರು ಹಿಂದೂ ಅರ್ಚಕನಂತೆ ವೇಷಧರಿಸಿ, ಪೂಜೆ ಸಲ್ಲಿಸುತ್ತಿರುವ ಚಿತ್ರಗಳು ಕೃತಕ ಬುದ್ಧಿಮತ್ತೆ ಉಪಕರಣವನ್ನು ಬಳಸಿಕೊಂಡು ಮಾಡಿದ್ದಾಗಿದೆ.
Result: False
Our Sources
Tweet By @MauryanPentool, Dated: May 26, 2023
Facebook Account Of @bhargav.valera
Instagram Account Of @bhargavvalera
ಈ ಲೇಖನವು ನ್ಯೂಸ್‌ಚೆಕರ್ ಇಂಗ್ಲಿಷ್‌ನಲ್ಲಿ ಮೊದಲು ಪ್ರಕಟಗೊಂಡಿದ್ದು ಅದನ್ನು ಇಲ್ಲಿ ಓದಬಹುದು
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.