Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅರುಣಾಚಲ ಪ್ರದೇಶದಲ್ಲಿ ಜನಾಂಗೀಯ ಘರ್ಷಣೆ ಪ್ರಚೋದಿಸುವ ಆರ್ಎಸ್ಎಸ್ ಸಂಚು ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ
ಅರುಣಾಚಲ ಪ್ರದೇಶದಲ್ಲಿ ಜನಾಂಗೀಯ ಘರ್ಷಣೆಯನ್ನು ಪ್ರಚೋದಿಸುವ ಆರ್ಎಸ್ಎಸ್ ಯೋಜನೆಯನ್ನು ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ ಎಂದು ಹೇಳುವ ವೈರಲ್ ವೀಡಿಯೋ ನಕಲಿ
ಅರುಣಾಚಲ ಪ್ರದೇಶದಲ್ಲಿ ಜನಾಂಗೀಯ ಸಂಘರ್ಷವನ್ನು ಹುಟ್ಟುಹಾಕಲು ಆರ್ಎಸ್ಎಸ್ ನಡೆಸುತ್ತಿರುವ ಪಿತೂರಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ ಎಂದು ಹೇಳುವ ವೀಡಿಯೋ ಒಂದು ವೈರಲ್ ಆಗಿದೆ.
3 ನಿಮಿಷ 20 ಸೆಕೆಂಡುಗಳ ಈ ವೀಡಿಯೋ ಫೇಸ್ಬುಕ್ ನಲ್ಲಿ ಕಂಡುಬಂದಿದೆ. ಈ ಹೇಳಿಕೆಯ ಪ್ರಕಾರ, ಭವಿಷ್ಯದಲ್ಲಿ ಕೆಲವು ರೀತಿಯ ರಾಜಕೀಯ ಲಾಭಕ್ಕಾಗಿ ಟ್ಯಾನಿ ಬುಡಕಟ್ಟು ಜನಾಂಗಗಳನ್ನು ವಿಭಜಿಸಲು ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯಲು ಪ್ರಯತ್ನಿಸುವ ಕಾನೂನಾದ ಅರುಣಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ (ಎಎಫ್ಆರ್ಎ) ಅನ್ನು ಮಾಡುವಂತೆ ಆರ್ಎಸ್ಎಸ್ ಪ್ರಭಾವಿಸಬಹುದು.
ವೈರಲ್ ವೀಡಿಯೋದಲ್ಲಿ ಟ್ರಂಪ್ ಹೇಳುತ್ತಿವುದರ ಸಾರಾಂಶ
“ದಯವಿಟ್ಟು ಈ ಪ್ರಮುಖ ಸಂದೇಶವನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಈ ಸಂದೇಶವನ್ನು ಅರುಣಾಚಲ ಪ್ರದೇಶದ ಎಲ್ಲಾ ತಾನಿ ಬುಡಕಟ್ಟು ಜನಾಂಗದವರಿಗೆ ಹಂಚಿಕೊಳ್ಳಿ. ನಿಮ್ಮ ಡೋನಿ ಪೋಲೊ ಸಮುದಾಯದ ಕೆಲವು ದೊಡ್ಡ ಜನರು ಆರ್ಎಸ್ಎಸ್ನಿಂದ ಬಹಳ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದಾರೆ ಮತ್ತು ಉಳಿದಿರುವ ಎಲ್ಲಾ ಮುಗ್ಧ ಸ್ಥಳೀಯ ಡೋನಿ ಪೋಲೊ ಭಕ್ತರನ್ನು ಈ ಅಫ್ರಾ ಕಾಯ್ದೆಯನ್ನು ಬಳಸಿಕೊಂಡು ನಿಮ್ಮ ಕ್ರಿಶ್ಚಿಯನ್ ತಾನಿ ಸಹೋದರರ ವಿರುದ್ಧ ಹೋಗಲು ದಾರಿ ತಪ್ಪಿಸಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ.
“ದಯವಿಟ್ಟು ಇಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂದು ನೋಡಲು ಪ್ರಯತ್ನಿಸಿ. ನಿಮ್ಮ ಡೋನಿ ಪೋಲೊ ಅನುಯಾಯಿಗಳಲ್ಲಿ ಕೆಲವರು ನಿಮ್ಮ ಸ್ಥಳೀಯ ನಂಬಿಕೆಯಾದ ಡೋನಿ ಪೋಲೊವನ್ನು ಆರೆಸ್ಸೆಸ್ ಗೆ ಹಣಕ್ಕಾಗಿ ಮಾರಿದ್ದಾರೆ. ಈಗ ನಿಮ್ಮ ನಂಬಿಕೆ ಆರೆಸ್ಸೆಸ್ ನ ನಿಯಂತ್ರಣದಲ್ಲಿದೆ. ಅವರು ಈಗ ನಿಮ್ಮ ನಂಬಿಕೆ ಮತ್ತು ಅದರ ಸಮುದಾಯವನ್ನು ರಾಜಕೀಯವಾಗಿ ತಮಗೆ ಲಾಭ ಎಂದು ಭಾವಿಸುವಲ್ಲೆಲ್ಲಾ ಬಳಸಬಹುದು. ನಿಮ್ಮ ಪೂರ್ವಜರು ನಿಮ್ಮನ್ನು ನೋಡಲು ಸಂತೋಷಪಡುತ್ತಾರೆ ಎಂದು ನೀವು ಭಾವಿಸುತ್ತೀರಾ? ಡೋನಿ ಸಹೋದರರು ಆರೆಸ್ಸೆಸ್ ನಂತಹ ಹೊರಗಿನವರಿಂದ ಪ್ರಭಾವಿತವಾದ ಯಾವುದನ್ನಾದರೂ ಪರಸ್ಪರ ವಿರೋಧಿಸುತ್ತಾರೆ. ಟ್ಯಾನಿ ಸಹೋದರರ ನಡುವೆ ನಡೆಯುವ ಎಲ್ಲದರ ಬಗ್ಗೆ ನಿಮ್ಮ ಪೂರ್ವಜರು ಏನು ಮಾಡಿದ್ದಾರೆ ಮತ್ತು ಹೇಳುತ್ತಾರೆ ಎಂಬುದರ ಬಗ್ಗೆ ಯೋಚಿಸಿ.
“ಡೋನಿ ಪೋಲೊ ಸಮುದಾಯದ ಕೆಲವು ವ್ಯಾಪಾರಿಗಳು ನಿಮ್ಮ ಗುರುತು ಮತ್ತು ನಂಬಿಕೆಯನ್ನು ಆರ್ಎಸ್ಎಸ್ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಮಾರಾಟ ಮಾಡುತ್ತಿದ್ದಾರೆ, ಇದು ನಿಮ್ಮ ತಾನಿ ಸಹೋದರರ ನಡುವೆ ದೊಡ್ಡ ಗಲಭೆಗೆ ಕಾರಣವಾಗುತ್ತಿದೆ ಮತ್ತು ಭವಿಷ್ಯದಲ್ಲಿ ಯಾವುದೇ ಯುದ್ಧ ಭುಗಿಲೆದ್ದರೆ, ಅವರು ತಮ್ಮ ಎಸಿ ಕೋಣೆಯಲ್ಲಿ ಸುದ್ದಿ ಕೇಳಿ ತಾನಿ ಸಹೋದರರು ಪರಸ್ಪರ ಕೊಲ್ಲುವುದನ್ನು ಆರಾಮವಾಗಿ ನೋಡುತ್ತಾ, ಒಳಗೆ ನಗುತ್ತಾ, ಅರುಣಾಚಲ ಪ್ರದೇಶದ ಅತ್ಯಂತ ಒಗ್ಗಟ್ಟಿನ ಮತ್ತು ಬಲಿಷ್ಠ ಸ್ಥಳೀಯ ಜನರನ್ನು ಮತ್ತು ನಿಮ್ಮ ತಾನಿ ಕುಲವನ್ನು ವಿಭಜಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಭಾವಿಸುತ್ತಾರೆ. ಕೊನೆಯಲ್ಲಿ ತಾನಿ ಸಹೋದರರ ರಕ್ತ ಮಾತ್ರ ಚೆಲ್ಲಲ್ಪಟ್ಟಿದೆ ಮತ್ತು ಬೇರೆ ಯಾರದ್ದೂ ಅಲ್ಲ ಎಂದು ನೀವು ಕಂಡುಕೊಳ್ಳುತ್ತೀರಿ.
“ಇನ್ನೂ ಸಮಯವಿದೆ. ನಿಮ್ಮ ತಾನಿ ಸಹೋದರರನ್ನು ಆರೆಸ್ಸೆಸ್ ವಿಭಜಿಸುವಂತೆ ಸಹಾಯ ಮಾಡಲು ಹಣ ಪಡೆದ ವ್ಯಾಪಾರಿಗಳು ಯಾರು ಎಂದು ಕಂಡುಹಿಡಿಯಿರಿ. ನಿಮ್ಮ ಪೂರ್ವಜರು ಹಳೆಯ ದಿನಗಳಲ್ಲಿ ಹೊಂದಿದ್ದ ಶುದ್ಧ, ಮೂಲ ಮತ್ತು ನಿಜವಾದ ಸ್ಥಳೀಯ ನಂಬಿಕೆಯಾದ ಡೋನಿ ಪೋಲೊ ನಂಬಿಕೆಯ ನಿಮ್ಮ ಸ್ವಂತ ಚಳುವಳಿಯನ್ನು ಪ್ರಾರಂಭಿಸಲು ನಾನು ಸೂಚಿಸುತ್ತೇನೆ. ಆ ಮೂಲಕ ನಿಮ್ಮಲ್ಲಿರುವ ವ್ಯಾಪಾರಿಗಳು ಯಾರೆಂದು ನಿಮಗೆ ಸುಳಿವು ಸಿಗುತ್ತದೆ. ನಿಮ್ಮ ನಾಯಕರನ್ನು ಕುರುಡಾಗಿ ಅನುಸರಿಸಬೇಡಿ, ಎಲ್ಲವನ್ನೂ ನೀವೇ ಯೋಚಿಸಿ ಮತ್ತು ಅರ್ಥಮಾಡಿಕೊಳ್ಳಿ. ನೀವು ಆರೆಸ್ಸೆಸ್ ನಿಂದ ಯಾವುದೇ ಹಣವನ್ನು ಪಡೆದಿಲ್ಲದಿದ್ದರೆ ನೀವು ಡೋನಿ ಪೋಲೊ ನಂಬಿಕೆಯ ನಿಜವಾದ ಅನುಯಾಯಿಗಳು. 98% ಡೋನಿ ಪೋಲೊ ಅನುಯಾಯಿಗಳು ಆರೆಸ್ಸೆಸ್ ನಿಂದ ಯಾವುದೇ ಹಣವನ್ನು ಪಡೆದಿಲ್ಲ ಮತ್ತು ಉಳಿದ 2% ಜನರು ನಿಜವಾಗಿಯೂ ದೊಡ್ಡ ಮೊತ್ತದ ಹಣವನ್ನು ಪಡೆದ ಪ್ರಭಾವಿ ವ್ಯಕ್ತಿಗಳಾಗಿರಬೇಕು ಎಂದು ನನಗೆ ಖಚಿತವಾಗಿದೆ, ಅವರು ಉಳಿದ ಮುಗ್ಧ ಡೋನಿ ಪೋಲೊ ಸಮುದಾಯವನ್ನು ಆರೆಸ್ಸೆಸ್ ತೋರಿಸಿದ ದಿಕ್ಕಿನಲ್ಲಿ ಮುನ್ನಡೆಸಲು ಯತ್ನಿಸುತ್ತಿದ್ದಾರೆ. ಆರೆಸ್ಸೆಸ್ ನಿಂದ ಯಾವುದೇ ಹಣವನ್ನು ಪಡೆಯದ ಡೋನಿ ಪೋಲೊ ನಂಬಿಕೆಯ ಎಲ್ಲಾ ನಿಜವಾದ ಅನುಯಾಯಿಗಳು ಒಟ್ಟಾಗಿ ಸೇರಿ ಧರ್ಮವನ್ನು ಬಳಸಿಕೊಂಡು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ನಿಮ್ಮ ಸ್ವಂತ ತಾನಿ ಸಹೋದರನ ರಕ್ತವನ್ನು ಚೆಲ್ಲಲು ಪ್ರಯತ್ನಿಸುತ್ತಿರುವ ಈ ವಿಷಕಾರಿ ಪ್ರಭಾವಗಳನ್ನು ರಾಜ್ಯದಿಂದ ಹೊರಹಾಕಬೇಕೆಂದು ನಾನು ಬಯಸುತ್ತೇನೆ. ಇದು ಧರ್ಮದ ಬಗ್ಗೆ ಅಲ್ಲ, ಬದಲಾಗಿ ಧರ್ಮವನ್ನು ಬಳಸಿಕೊಂಡು ರಾಜಕೀಯ ಮಾಡುವ ಬಗ್ಗೆ. ”
ಸ್ಥಳೀಯ ಭಾಷೆಯಲ್ಲಿ “ಸೂರ್ಯ ಮತ್ತು ಚಂದ್ರ” ಎಂಬ ಅರ್ಥವನ್ನು ನೀಡುವ ಡೋನಿ ಪೊಲೊ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ತಾನಿ ಮತ್ತು ಇತರ ಸಿನೋ-ಟಿಬೆಟಿಯನ್ ಬುಡಕಟ್ಟು ಜನಾಂಗದ ಸ್ಥಳೀಯ ಮತವಾಗಿದೆ.
Also Read: ಮಹಾಕುಂಭ ಮೇಳದ ಕೊನೆಯಲ್ಲಿ ವಾಯುಪಡೆ ವಿಮಾನಗಳು ತ್ರಿಶೂಲದ ಚಿತ್ತಾರ ಬಿಡಿಸಿವೆಯೇ?
ಟ್ರಂಪ್ ಅವರ ತುಟಿ ಚಲನೆಗಳು ಅವರ ಭಾಷಣಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗದಿರುವುದನ್ನು ನ್ಯೂಸ್ಚೆಕರ್ ಗಮನಿಸಿದೆ, ಇದು ಕೃತಕ ಬುದ್ಧಿಮತ್ತೆ (ಎಐ)ನಿಂದ ಮಾಡಲ್ಪಟ್ಟಿದೆಯೇ ಎಂಬ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಅನಂತರ ನಾವು “ಟ್ರಂಪ್ ಅರುಣಾಚಲ ಪ್ರದೇಶ ಆರ್ಎಸ್ಎಸ್” ಗಾಗಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಆದರೆ ಅಮೆರಿಕ ಅಧ್ಯಕ್ಷರ ಅಂತಹ ಭಾಷಣದ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಅಧಿಕೃತ ಹೇಳಿಕೆಗಳು ನಮಗೆ ಸಿಗಲಿಲ್ಲ.
ನ್ಯೂಸ್ಚೆಕರ್ ಈ ವೀಡಿಯೊವನ್ನು ಹೈವ್ ಮಾಡರೇಶನ್ ಮೂಲಕ ಪರಿಶೀಲಿಸಿದೆ, ಇದು ಎಐ ನಿಂದ ಮಾಡಿದ್ದಾಗಿದ್ದು “99.6% ರಷ್ಟು AI-ರಚಿತ ಅಥವಾ ಡೀಪ್ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆಯಿದೆ” ಎಂದು ಅದು ಕಂಡುಹಿಡಿದಿದೆ. ನಾವು ವೀಡಿಯೋವನ್ನು ಸಮುದಾಯ-ಚಾಲಿತ ಓಪನ್-ಸೋರ್ಸ್ ಡೀಪ್ಫೇಕ್ ಪತ್ತೆ ಸಾಧನವಾದ ಡೀಪ್ವೇರ್ ಮೂಲಕವೂ ನೋಡಿದ್ದೇವೆ, ಅದು “ಅನುಮಾನಾಸ್ಪದ” ಎಂದು ಹೇಳಿದೆ . ನಾವು ಆಡಿಯೋವನ್ನು ರೆಸೆಂಬಲ್ AI ನ ಡೀಪ್ಫೇಕ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದ್ದೇವೆ , ಆ ಧ್ವನಿ “ನಕಲಿ” ಎಂದು ಹೇಳಿದೆ.
ನ್ಯೂಸ್ ಚೆಕರ್ ಒಂದು ಭಾಗವಾಗಿರುವ ದಿ ಮಿಸ್ಇನ್ಫಾರ್ಮೇಶನ್ ಕಾಂಬ್ಯಾಟ್ ಅಲೈಯನ್ಸ್ (ಎಂಸಿಎ) ನ ಡೀಪ್ಫೇಕ್ಸ್ ಅನಾಲಿಸಿಸ್ ಯೂನಿಟ್ (ಡಿಎಯು), ಡೀಪ್ಫೇಕ್-ಒ-ಮೀಟರ್ ಉಪಕರಣದಲ್ಲಿ ವೀಡಿಯೋ ಪರಿಶೀಲಿಸಿದೆ. ಈ ವೇಳೆ ಆಡಿಯೋ ನಿಜವಲ್ಲ ಎಂಬುದನ್ನು ಕಂಡುಕೊಂಡಿದೆ. ಇನ್ನು ಹಿಯಾ ಎಐ ವಾಯ್ಸ್ ಡಿಟೆಕ್ಷನ್ ಟೂಲ್ ಧ್ವನಿಯನ್ನು “ಎಐ ಮೂಲಕ ರಚಿಸಿದಂತೆ ಅಥವಾ ಮಾರ್ಪಡಿಸಿದಂತೆ ಕಾಣುತ್ತದೆ” ಎಂದು ಹೇಳಿದೆ.
ಮಾರ್ಚ್ 6, 2025 ರಂದು PIB ಫ್ಯಾಕ್ಟ್ ಚೆಕ್ ಹಾಕಿದ ಈ ಎಕ್ಸ್ ಪೋಸ್ಟ್ ಅನ್ನು ನೋಡಿದ್ದೇವೆ. ಅದು ವೈರಲ್ ವೀಡಿಯೋ ನಿಜವಾದ್ದಲ್ಲ ಅದು ಎಐ ನಿಂದ ಮಾಡಲಾಗಿದೆ ಎಂದು ಹೇಳಿದೆ.
ಅರುಣಾಚಲ ಪ್ರದೇಶದಲ್ಲಿ ಜನಾಂಗೀಯ ಘರ್ಷಣೆಯನ್ನು ಪ್ರಚೋದಿಸುವ ಆರ್ಎಸ್ಎಸ್ ಯೋಜನೆಯನ್ನು ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ ಎಂದು ಹೇಳುವ ವೈರಲ್ ವೀಡಿಯೋ ನಕಲಿ ಎಂದು ಕಂಡುಬಂದಿದೆ.
Also Read: ನಿರ್ಮಲಾ ಸೀತಾರಾಮನ್ ಹೂಡಿಕೆ ಯೋಜನೆಗೆ ಅನುಮೋದನೆ ನೀಡಿರುವ ಡೀಪ್ಫೇಕ್ ವೀಡಿಯೋ ವೈರಲ್
Sources
X post, PIB Fact Check, March 6, 2025
Facebook post, AI of Arunachal Pradesh, March 3, 2025
Hive Moderation tool
Deepware tool
Resemble AI’s Deepfake Detector
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
June 28, 2025
Ishwarachandra B G
June 26, 2025
Ishwarachandra B G
June 23, 2025