Fact Check: ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ರೊಬೋಟ್ ಮಾನವ ಎದುರಾಳಿಯನ್ನು ಸೋಲಿಸುವ ವೀಡಿಯೋ ವೈರಲ್

ರೊಬೊಟ್ ವೈರಲ್‌ ವೀಡಿಯೋ ಟೇಬಲ್‌ ಟೆನ್ನಿಸ್

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ರೊಬೋಟ್ ಮಾನವ ಎದುರಾಳಿಗಿಂತ ಉತ್ತಮ

Fact
ಇಬ್ಬರು ಆಟಗಾರರ ನಡುವಿನ ಟೇಬಲ್‌ ಟೆನ್ನಿಸ್ ಪಂದ್ದದ ಕ್ಲಿಪ್‌ ಅನ್ನೇ ಡಿಜಿಟಲ್‌ ಆಗಿ ಮಾರ್ಪಡಿಸಿ ರೊಬೋಟ್‌ ಆಡುತ್ತಿದೆ ಎಂಬಂತೆ ಮಾಡಲಾಗಿದೆ

ಸಾಮಾಜಿಕ ಜಾಲತಾಣಗಳಲ್ಲಿ ರೊಬೋಟ್‌ ಒಂದು ಮಾನವ ಎದುರಾಳಿ ಕ್ರೀಡಾಪಟುವನ್ನು ಟೇಬಲ್‌ ಟೆನ್ನಿಸ್‌ ಪಂದ್ಯದಲ್ಲಿ ಸೋಲಿಸುವ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ರೊಬೋಟ್‌ ಪಂದ್ಯವನ್ನು ಗೆಲ್ಲುವುದರೊಂದಿಗೆ ಇದು ಹಲವು ಚರ್ಚೆಗಳನ್ನೂ ಹುಟ್ಟು ಹಾಕಿದೆ.

ಕ್ಲೇಮ್‌ ಕುರಿತು ಕುರಿತು ಸತ್ಯಶೋಧನೆಯನ್ನು ನಾವು ಮಾಡಿದ್ದು, ಇದೊಂದು ತಿರುಚಲಾದ ವೀಡಿಯೋ ಎಂದು ನಾವು ಕಂಡುಕೊಂಡಿದ್ದೇವೆ.

Also Read: ಬ್ರೆಜಿಲ್‌ ನಲ್ಲಿ ನಡೆದ ಮಹಿಳೆಯ ಬರ್ಬರ ಹತ್ಯೆಯ ಹಳೆಯ ವೀಡಿಯೋ ಮಣಿಪುರದ್ದು ಎಂದು ತಪ್ಪಾಗಿ ಹಂಚಿಕೆ

Fact Check: ಟೇಬಲ್ ಟೆನಿಸ್ ಪಂದ್ಯದಲ್ಲಿ ರೊಬೋಟ್ ಮಾನವ ಎದುರಾಳಿಯನ್ನು ಸೋಲಿಸುವ ವೀಡಿಯೋ ವೈರಲ್

ಆರ್ಕೈವ್ ಮಾಡಲಾದ ಕ್ಲೇಮ್‌ಗಳ ಟ್ವೀಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

Fact Check/Verification

ವೈರಲ್‌ ವೀಡಿಯೋದಲ್ಲಿ ತೋರಿಸಿದಂತೆ ಟೇಬಲ್ ಟೆನ್ನಿಸ್‌ ಪಂದ್ಯಾಟ ವೃತ್ತಿಪರ ವಾತಾವರಣದಲ್ಲಿ ನಡೆಯುತ್ತಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ನಾವು “Robot table tennis match” ಎಂಬ ಕೀವರ್ಡ್‌ ಸರ್ಚ್ ನೊಂದಿಗೆ ಹುಡುಕಾಟ ನಡೆಸಿದ್ದು, ಯಾವುದೇ ಖಚಿತ ವರದಿಗಳು ಅಥವಾ ವೀಡಿಯೋಗಳು ಲಭ್ಯವಾಗಲಿಲ್ಲ.

ಅನಂತರ ನಾವು ಟ್ವಿಟರ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ ಮಾರ್ಚ್ 24, 2023 ರ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ., “Absolutely Insane Table Tennis Defense from Yang Wang”” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ನಾವು ಗಮನಿಸಿದ್ದೇವೆ.

ಈ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿ ತುಲನೆ ಮಾಡಿದಾಗ, ಪಂದ್ಯದಲ್ಲಿ ವ್ಯಾಂಗ್‌ ಯಾಂಗ್ ಅವರ ಕೊನೆಯ ಹೊಡೆತಕ್ಕೂ ರೊಬೊಟ್ ಹೊಡೆತಕ್ಕೂ ಸಾಮ್ಯತೆ ಇರುವುದು ಕಂಡುಬಂದಿದೆ. ಮತ್ತು ವೀಕ್ಷಕರ ಗ್ಯಾಲರಿಯಲ್ಲಿರುವ ವ್ಯಕ್ತಿಗಳಿಗೆ ಸಾಮ್ಯತೆಗಳಿರುವುದನ್ನು ನೋಡಬಹುದು. ಆ ಪ್ರಕಾರ, ಸಿಜೆಐ ಹ್ಯೂಮನಾಯ್ಡ್ ರೊಬೊಟ್ ಅನ್ನು ಸ್ಲೊವಾಕಿಯಾದ, ಚೀನ ಮೂಲದ ಟೇಬಲ್‌ ಟೆನ್ನಿಸ್‌ ಆಟಗಾರ ವ್ಯಾಂಗ್‌ ಅವರ ಕೀಫ್ರೇಂಗಳ ಮೇಲೆ ಡಿಜಿಟಲ್‌ ಆಗಿ ಬದಲಾಯಿಸಲಾಗಿದೆ ಎಂಬುದು ಕಂಡುಬಂದಿದೆ.

Also Read: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್‌ ದಿರಿಸಿನಲ್ಲಿದ್ದ ಫೋಟೋ ನಿಜವೇ?

ಪಂದ್ಯದ ಇನ್ನೊಂದು ಆವೃತ್ತಿಯನ್ನು ಇಲ್ಲಿ ನೋಡಬಹುದಾಗಿದ್ದು, ಇದು ಎಡಿಟ್ ಮಾಡಲಾದ ಅದೇ ವೀಡಿಯೋ ಎಂದು ದೃಢಪಡಿಸುತ್ತದೆ.

Conclusion 

ಈ ಸತ್ಯಶೋಧನೆಯ ಪ್ರಕಾರ ಇಬ್ಬರು ಆಟಗಾರರು ಟೇಬಲ್‌ ಟೆನ್ನಿಸ್‌ ಆಡಿದ್ದನ್ನೇ, ರೊಬೊಟ್ ಆಡುತ್ತಿರುವಂತೆ ಡಿಜಿಟಲ್‌ ಆಗಿ ತಿರುಚಲಾಗಿದೆ.

Also Read: ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆಯೇ ಪ್ರವಾಹ, ವೈರಲ್ ವೀಡಿಯೋ ನಿಜವೇ?

Result: Altered Media

Our Sources
Image analysis

Youtube video, Jan Valenta Table Tennis, Dated: March 24, 2023

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.