Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಆ ವಿಚಾರದ, ಭಾರತ-ಪಾಕಿಸ್ಥಾನ ಕುರಿತ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಹರಿದಾಡಿವೆ. ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ, ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನ ಅಮೆರಿಕದ ಬಳಿ ಬೇಡಿಕೊಂಡಿದ್ದನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದರು, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಆಸ್ಪತ್ರೆಗೆ ದಾಖಲು, ಭಾರತೀಯ ಸೇನೆಯ ಕಲ್ಯಾಣ ನಿಧಿಗೆ ದೇಣಿಗೆ ನೀಡುವ ಬಗ್ಗೆ ಮತ್ತು ಚೂಯಿಂಗ್ ಗಮ್ ತಿಂದರೆ ಹೆಚ್ಚಿನ ಆರೋಗ್ಯ ಪ್ರಯೋಜನ ಎಂಬ ಕುರಿತ ಹೇಳಿಕೆಗಳು ಹರಿದಾಡಿವೆ. ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ ಇವುಗಳು ತಪ್ಪು ಹೇಳಿಕೆಗಳು ಎಂದು ಕಂಡುಬಂದಿವೆ. ಈ ಹೇಳಿಕೆಗಳ ಕುರಿತ ಒಂದು ನೋಟ ಇಲ್ಲಿದೆ.

ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, 2024ರ ವೀಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ಈಗ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಪ್ರಧಾನಿ ಕಚೇರಿಯ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸತ್ಯಶೋಧನೆ ನಡೆಸಿದಾಗ ಶೆಹಬಾಜ್ ಷರೀಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳುವ ಪತ್ರವು ನಕಲಿಯಾಗಿದ್ದು ಅದನ್ನು ನಿಜವೆಂದು ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಸಿಂಧೂ ನದಿ ವಿಚಾರದಲ್ಲಿ ಪಾಕಿಸ್ತಾನ ಅಮೆರಿಕದ ಬಳಿ ಬೇಡಿಕೊಂಡಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೇಲಿ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಸಿಂಧೂ ನದಿ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಪಾಕಿಸ್ತಾನವನ್ನು ಅಣಕಿಸಿದ್ದಾರೆ ಎಂದು ಹೇಳುವ ವಿಡಿಯೋ ಸುಳ್ಳು. ವೈರಲ್ ಆಗಿರುವ ಈ ವೀಡಿಯೋ 2016ರದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ, ಸೇನೆಗೆ ಶಸ್ತ್ರಾಸ್ತ್ರ ಖರೀದಿಗಾಗಿ ದೇಣಿಗೆ ಸ್ವೀಕರಿಸಲು ನರೇಂದ್ರ ಮೋದಿ ಸರ್ಕಾರ ವಿಶೇಷ ಬ್ಯಾಂಕ್ ಖಾತೆಯನ್ನು ತೆರೆದಿದೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಶೋಧ ನಡೆಸಿದಾಗ ‘ಸಶಸ್ತ್ರ ಪಡೆಗಳ ಯುದ್ಧ ಅಪಘಾತ ಕಲ್ಯಾಣ ನಿಧಿ’ಯನ್ನು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗುತ್ತಿಲ್ಲ. ಯುದ್ಧದಲ್ಲಿ ಮಡಿದವರ ಅವಲಂಬಿತರು ಮತ್ತು ವಿಧವೆಯರಿಗೆ ಆರ್ಥಿಕ ನೆರವು/ಅನುದಾನಗಳನ್ನು ಒದಗಿಸಲು ಮಾತ್ರ ಬಳಸಲಾಗುತ್ತದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಚೂಯಿಂಗ್ ತಿಂದರೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ಇದೆ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಮುಖದಲ್ಲಿ, ಮೆದುಳಿಗೆ ರಕ್ತಪರಿಚಲನೆ ಹೆಚ್ಚುತ್ತದೆ. ಹಲ್ಲನ್ನು ಕ್ಲೀನ್ ಮಾಡುತ್ತದೆ, ಒತ್ತಡ ಆತಂಕ ಕಡಿಮೆ ಮಾಡುತ್ತದೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸತ್ಯಶೋಧನೆ ನಡೆಸಿದಾಗ, ಚೂಯಿಂಗ್ ಗಮ್ ಅಗಿಯುವುದರಿಂದ ಆರೋಗ್ಯದ ವಿಷಯದಲ್ಲಿ ಯಾವುದೇ ಪವಾಡ ಸಾಧ್ಯವಿಲ್ಲ. ಸ್ವಲ್ಪ ಮಟ್ಟಿಗೆ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದಷ್ಟೇ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
Ishwarachandra B G
October 4, 2025
Ishwarachandra B G
September 30, 2025
Newschecker and THIP Media
May 2, 2025