Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸಾವರ್ಕರ್ ಕುರಿತ ಟ್ವೀಟ್ ಗಳನ್ನು ರಾಹುಲ್ ಗಾಂಧಿ ಅಳಿಸಿ ಹಾಕಿದ್ದಾರೆ, ಸಂಸತ್ ಭವನಕ್ಕೆ ಯುಪಿಎ ಕಾಲದಲ್ಲಿ ಯೋಜನಾ ವೆಚ್ಚ 3 ಸಾವಿರ ಕೋಟಿ, ಬಿಜೆಪಿ ಕಾಲದಲ್ಲಿ 970 ಕೋಟಿ, ಹೃದಯಾಘಾತಕ್ಕೆ ಆಂಜಿಯೋಪ್ಲಾಸ್ಟಿಗಿಂತ ಮನೆಮದ್ದು, ಆಯುರ್ವೇದ ಉತ್ತಮ, ಬಿಸಿನೀರಿಗೆ ಚಹಾಪೌಡರ್ ಹಾಕಿ ಕಾಲು ಅದ್ದಿ ಇಟ್ಟರೆ ಕಾಲುನೋವು ಮಾಯ ಎನ್ನುವ ಕ್ಲೇಮ್ಗಳು ಈ ವಾರ ಸುದ್ದಿ ಮಾಡಿವೆ.
ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಸಾವರ್ಕರ್ ಕುರಿತ ಎಲ್ಲ ಟ್ವೀಟ್ಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಳಿಸಿ ಹಾಕಿದ್ದಾರೆ ಮತ್ತು ಹೊಸ ಸಂಸತ್ ಭವನಕ್ಕೆ ಯೋಜನಾ ವೆಚ್ಚ ಕಾಂಗ್ರೆಸ್ ಕಾಲದಲ್ಲಿ ಹೆಚ್ಚಿತ್ತು ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದ್ದವು. ಇದೆರಡೂ ತಪ್ಪು ಕ್ಲೇಮ್ ಗಳು ಎಂಬುದು ನ್ಯೂಸ್ಚೆಕರ್ ಸತ್ಯಶೋಧನೆಯಲ್ಲಿ ಕಂಡುಬಂದಿವೆ.

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಯುಪಿಎ ಕಾಲದಲ್ಲಿ ಅನುಮೋದನೆಯಾಗಿದ್ದು ಅದರ ವೆಚ್ಚ 3 ಸಾವಿರ ಕೋಟಿ ರೂ. ಆಗಿತ್ತು. ಆದರೆ 2020ರಲ್ಲಿ ಬಿಜೆಪಿ ಅವಧಿಯಲ್ಲಿ ನಿರ್ಮಾಣ ವೆಚ್ಚ 970 ಕೋಟಿ ರೂ. ಆಗಿದೆ ಎಂಬ ಮೆಸೇಜ್ ಒಂದು ಫೇಸ್ಬುಕ್ನಲ್ಲಿ ಹರಿದಾಡಿದೆ. 2012ರಲ್ಲಿ ಹೊಸ ಸಂಸತ್ ಭವನದಕ್ಕೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಅನುಮೋದನೆ ನೀಡಿದ್ದು, 35 ಸಾವಿರ ಚದರ ಮೀಟರ್ ವ್ಯಾಪ್ತಿಯ ಕಟ್ಟಡಕ್ಕೆ 3 ಸಾವಿರ ಕೋಟಿ ರೂ. ವೆಚ್ಚಕ್ಕೆ ಯೋಜನೆ ರೂಪಿಸಲಾಗಿತ್ತು, 2020ರ ಹೊತ್ತಿಗೆ ಮೋದಿ ಆಡಳಿತಾವವಧಿಯಲ್ಲಿ 65 ಸಾವಿರ ಚದರ ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ 970 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎನ್ನಲಾಗಿತ್ತು. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, 2012ರ ಹೊತ್ತಿಗೆ ಸ್ಪೀಕರ್ ಮೀರಾ ಕುಮಾರ್ ಅವರು ಹೊಸ ಸಂಸತ್ ಭವನದ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದ್ದರೂ, ಇದು ಮುಂದುವರಿದಿರಲಿಲ್ಲ. ಜೊತೆಗೆ ಯಾವುದೇ ಯೋಜನಾ ವೆಚ್ಚವನ್ನು ಅಂದಾಜಿಸಿರಲಿಲ್ಲ. 2015ರಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಯೋಜನೆ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದ್ದು, ಯೋಜನೆ ಮುನ್ನೆಲೆಗೆ ಬಂದಿತ್ತು. ಇದರೊಂದಿಗೆ ಈಗ ಯೋಜನಾ ವೆಚ್ಚ 1200 ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ ಎನ್ನವುದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರ ಕುರಿತು ಪದೇ ಪದೇ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಸಾವರ್ಕರ್ ಅವರ ಮೊಮ್ಮಗ ವಿಡಿ ಸಾವರ್ಕರ್ ಅವರು ಕೇಸು ದಾಖಲಿಸುವ ಎಚ್ಚರಿಕೆ ನೀಡಿದ ಬಳಿಕ ಸಾವರ್ಕರ್ ಕುರಿತ ಎಲ್ಲ ಟ್ವೀಟ್ಗಳನ್ನು ಅಳಿಸಿ ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಫೇಸ್ಬುಕ್ನಲ್ಲಿ ಕಂಡುಬಂದ ಈ ಕ್ಲೇಮ್ ಕುರಿತು ಸತ್ಯಶೋಧನೆ ನಡೆಸಿದಾಗ, ಯಾವುದೇ ಟ್ವೀಟ್ಗಳನ್ನು ಅವರು ಡಿಲೀಟ್ ಮಾಡಿರುವುದು ಕಂಡುಬಂದಿರುವುದಿಲ್ಲ. ಇದಕ್ಕಾಗಿ ಸೋಷ್ಯಲ್ ಬ್ಲೇಡ್ ಮತ್ತು ಗೂಗಲ್ ಕ್ಯಾಶೆಗಳನ್ನು ಪರಿಶೀಲಿಸಲಾಗಿದ್ದು ಇತ್ತೀಚಿಗೆ ಅವರು ಸಾವರ್ಕರ್ ಬಗ್ಗೆ ಟ್ವೀಟ್ ಮಾಡದೇ ಇರುವುದು ಮತ್ತು ಕಾಂಗ್ರೆಸ್ ಅಧಿಕೃತ ಹ್ಯಾಂಡಲ್ನಲ್ಲೂ ಟ್ವೀಟ್ಗಳನ್ನು ಡಿಲೀಟ್ ಮಾಡಿರುವುದು ಕಂಡುಬಂದಿಲ್ಲ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಬಿಸಿ ನೀರಿಗೆ ಬಳಸಿದ ಚಹಾ ಪುಡಿಯನ್ನು ಹಾಕಿ ಕಾಲನ್ನು ಅದ್ದುವುದರಿಂದ ಕಾಲು ನೋವು ಉಪಶಮನವಾಗುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ, ನಿರ್ದಿಷ್ಟವಾಗಿ ಯಾವ ರೀತಿಯ ನೋವು ಮತ್ತು ಯಾವ ರೀತಿಯ ಸಂದರ್ಭದಲ್ಲಿ ಎಂಬುದನ್ನು ಇಲ್ಲಿ ಹೇಳಿಲ್ಲ. ಜೊತೆಗೆ, ಬಿಸಿ ನೀರಿಗೆ ಬಳಸಿದ ಚಹಾ ಹುಡಿಯನ್ನು ಹಾಕಿ ಕಾಲನ್ನು ಇಡುವುದರಿಂದ ನೋವು ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಿಲ್ಲದಿರುವುದು ನ್ಯೂಸ್ಚೆಕರ್ ಸತ್ಯಶೋಧನೆಯಲ್ಲಿ ತಿಳಿದುಬಂದಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಹೃದಯದ ಬ್ಲಾಕ್ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನಕಾರಿ ಎಂಬ ಕ್ಲೇಮ್ ಒಂದು ವಾಟ್ಸಪ್ನಲ್ಲಿ ಹರಿದಾಡಿತ್ತು. ಈ ಬಗ್ಗೆ ಸತ್ಯಶೋಧನೆಗೆ ವಾಟ್ಸಾಪ್ ಟಿಪ್ಲೈನ್ನಲ್ಲಿ ನ್ಯೂಸ್ಚೆಕರ್ಗೆ ಮನವಿ ಬಂದಿತ್ತು. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಹೃದಯದ ರಕ್ತ ನಾಳಗಳ ಬ್ಲಾಕ್, ಹೃದಯಾಘಾತದ ಸಮಸ್ಯೆಗೆ ತಕ್ಷಣಕ್ಕೆ ಮನೆಮದ್ದು ಆಯುರ್ವೇದ ಔಷಧ, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ ಇತ್ಯಾದಿಗಳನ್ನು ಬಳಸುವುದು ಪರಿಣಾಮಕಾರಿಯಲ್ಲ, ಉತ್ತಮ ಆಹಾರ, ಜೀವನಶೈಲಿಯಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
Ishwarachandra B G
August 30, 2025
Kushel Madhusoodan
August 26, 2025
Ishwarachandra B G
August 12, 2025