ಪಾಕ್-ಚೀನಾಕ್ಕೆ ಬಲೂಚಿ ಆರ್ಮಿಯ ನೇರ ಎಚ್ಚರಿಕೆ, ಉತ್ತರಾಖಂಡದಲ್ಲಿ ಮಸೀದಿಗಳ ವಿರುದ್ಧ ಕಾರ್ಯಾಚರಣೆ, ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಬಂದ ವೀಡಿಯೋ, ಸದಾಪುಷ್ಪದ ಚಹಾ ಕುಡಿಯುವುದರಿಂದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದು ಎನ್ನುವ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ. ಈ ವಾರದಲ್ಲಿ ಹರಿದಾಡಿದ ಪ್ರಮುಖ ಹೇಳಿಕೆಗಳ ಕುರಿತ ವಾರದ ನೋಟ ಇಲ್ಲಿದೆ.

ಪಾಕ್-ಚೀನಾಕ್ಕೆ ಬಲೂಚಿ ಆರ್ಮಿಯ ನೇರ ಎಚ್ಚರಿಕೆ ಎಂದು ಹಂಚಿಕೊಂಡ ವೀಡಿಯೋ ಹಳೆಯದು!
ಬಲೂಚಿಸ್ತಾನ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ಪ್ರಯಾಣಿಕ ರೈಲು ಹೈಜಾಕ್ ಮಾಡಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ (ಬಿಎಲ್‌ಎ) ಇದೀಗ ನೇರವಾಗಿ ಚೀನಾ ಮತ್ತು ಪಾಕಿಸ್ತಾನ ಸೇನೆಗೆ ಖಡಕ್ ಎಚ್ಚರಿಕೆ ನೀಡಿದೆ ಎಂದು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ಮಾಡಿದಾಗ, ವೀಡಿಯೋ 2019ರದ್ದು ಈಗಿನದ್ದಲ್ಲ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ

ಉತ್ತರಾಖಂಡದಲ್ಲಿ ಮಸೀದಿಗಳ ವಿರುದ್ಧ ಕಾರ್ಯಾಚರಣೆ: ಹಂಚಿದ ವೀಡಿಯೋ ಇಂಡೋನೇಷ್ಯಾದ್ದು!
ಉತ್ತರಾಖಂಡದಲ್ಲಿ ಮಸೀದಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ವೈರಲ್ ವೀಡಿಯೋ ಉತ್ತರಾಖಂಡದ್ದಲ್ಲ. ಅದು ಇಂಡೋನೇಷ್ಯಾದ್ದಾಗಿದೆ. ಪ್ರವಾಹಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಫ್ಯಾಂಟಸಿ ಪಾರ್ಕ್ ಒಂದನ್ನು ತೆರವು ಮಾಡಲಾಗಿದೆ. ಈ ಕುರಿತ ವರದಿ ಇಲ್ಲಿದೆ

ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಬಂದ ವೀಡಿಯೋ ಎಂದ ಪೋಸ್ಟ್ ಹಿಂದಿನ ಸತ್ಯವೇನು?
ನಾಸಾ ಗಗನ ಯಾತ್ರಿ ಸುನೀತಾ ವಿಲಿಯಮ್ಸ್ ಅವರು 9 ತಿಂಗಳ ಬಾಹ್ಯಾಕಾಶ ವಾಸ ಮುಗಿಸಿ ಭೂಮಿಗೆ ಬಂದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಬಂದಿಳಿದ ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಪರಿಶೀಲನೆ ನಡೆಸಿದಾಗ, ಸುನೀತಾ ವಿಲಿಯಮ್ಸ್ ತಂಡ ಭೂಮಿಗೆ ಬಂದ ಕ್ಷಣ ಎಂದು ಹೇಳಲಾದ ವೀಡಿಯೋ ತಪ್ಪಾಗಿದ್ದು, ಅದುಸ್ಪೇಸ್ಎಕ್ಸ್ ಸ್ಟಾರ್ ಶಿಪ್ ಇಳಿಯುವ ವೀಡಿಯೋ ಆಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಸದಾಪುಷ್ಪದ ಚಹಾ ಕುಡಿಯುವುದರಿಂದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದೇ?
ಸದಾಪುಷ್ಪ ಚಹಾ ಕುಡಿಯುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಬಹುದು ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸತ್ಯಶೋಧನೆ ನಡೆಸಿದಾಗ ಸದಾಪುಷ್ಪದ ಚಹಾ ಕುಡಿಯುವುದರಿಂದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದು ಎನ್ನುವುದು ಮನುಷ್ಯರಿಗೆ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಇಲ್ಲಿಗಳಲ್ಲಿ ಮಾತ್ರ ಇದರ ಪರಿಣಾಮ ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ