Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರೌಡಿಯೊಬ್ಬನ ವಿರುದ್ಧ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಪೊಲೀಸರು ತಕ್ಷಣ ಸ್ಥಳದಲ್ಲೇ ಪಾಠ ಕಲಿಸಿದರು
ರೌಡಿಯೊಬ್ಬನ ವಿರುದ್ಧ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಪೊಲೀಸರು ತಕ್ಷಣ ಸ್ಥಳದಲ್ಲೇ ಪಾಠ ಕಲಿಸಿದರು ಎನ್ನಲಾದ ವೀಡಿಯೋ ಉತ್ತರ ಪ್ರದೇಶದ್ದಲ್ಲ. ಇದು ಪುಣೆಯದ್ದಾಗಿದ್ದು ಸಾರ್ವಜನಿಕರಿಗೆ ಭೀತಿ ಹುಟ್ಟಿಸುತ್ತಿದ್ದ ಕ್ಯೋಟೋ ಹೆಸರಿನ ಗ್ಯಾಂಗ್ನ ರೌಡಿ ವಿರುದ್ಧ ಮಹಾರಾಷ್ಟ್ರ ಪೊಲೀಸರು 2022ರಲ್ಲಿ ಕ್ರಮಕೈಗೊಂಡ ಘಟನೆಯಾಗಿದೆ
ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದ ರೌಡಿಯೊಬ್ಬನಿಗೆ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಸ್ಥಳದಲ್ಲೇ ಬಿಸಿ ಮುಟ್ಟಿಸಿದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯ ಪ್ರಕಾರ, “ಅಲ್ಲೇ ಲಾಟರಿ ಅಲ್ಲೇ ಡ್ರಾ . ಸ್ಥಳದಲ್ಲೇ ಬಹುಮಾನ ಇದೇ ಯೋಗೀಜೀ ಆದೇಶ!! ಕಾಯೋದು ನೋಡೋದು ಯಾವುದೂ ಇಲ್ಲ” ಎಂದಿದೆ.

ಈ ಬಗ್ಗೆ ಸತ್ಯಶೋಧನೆ ಮಾಡಲಾಗಿದ್ದು, ಇದು ತಪ್ಪಾದ ಹೇಳಿಕೆ ಎಂದು ತಿಳಿದುಬಂದಿದೆ.
Also Read: ಚಲನ್ ನೀಡಿದ ಮುಂಬೈ ಟ್ರಾಫಿಕ್ ಪೊಲೀಸರಿಗೆ ಮುಸ್ಲಿಮರು ಥಳಿಸಿದರು ಎಂದ ವೈರಲ್ ವೀಡಿಯೋ ಹಿಂದಿನ ಸತ್ಯವೇನು?
ಸತ್ಯಶೋಧನೆಗಾಗಿ ನಾವು ಇನ್ವಿಡ್ ಮೂಲಕ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ನಲ್ಲಿ ಹುಡುಕಾಟ ನಡೆಸಿದ್ದೇವೆ.
ಈ ಸಂದರ್ಭ ಮಾಧ್ಯಮ ವರದಿಗಳು ಲಭ್ಯವಾಗಿವೆ.
ಜನವರಿ 4, 2023ರ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ, “ಪುಣೆಯಲ್ಲಿ ಕೊಯ್ಟಾ ಎಂದೂ ಕರೆಯಲ್ಪಡುವ ದುಷ್ಕರ್ಮಿಗಳ ಗ್ಯಾಂಗ್ ಒಂದು ಹರಿತವಾದ ಮಚ್ಚುಗಳಿಂದ ಜನರ ಮೇಲೆ ದಾಳಿ ಮಾಡಿ ಭಯಭೀತಗೊಳಿಸುವ ಹಲವಾರು ಘಟನೆಗಳು ವರದಿಯಾದ ನಂತರ, ಈ ಕ್ರಿಮಿನಲ್ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಪರಾಧ ವಿಭಾಗ ಮಂಗಳವಾರ ತಿಳಿಸಿದೆ. ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಇತ್ತೀಚೆಗೆ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಕಳೆದ ಕೆಲವು ವಾರಗಳಲ್ಲಿ, ಪುಣೆ ಮತ್ತು ಅದರ ಹೊರವಲಯದಲ್ಲಿ ಮಂಜರಿ, ಭೇಕ್ರೈ ನಗರ, ಅಂಬೆಗಾಂವ್ ಬುದ್ರುಕ್ ಮತ್ತು ನಾನಾ ಪೇಠ್ನಂತಹ ಪ್ರದೇಶಗಳಲ್ಲಿ ಹಲವಾರು ಘಟನೆಗಳು ವರದಿಯಾಗಿವೆ, ಇದರಲ್ಲಿ ಹೆಚ್ಚಿನವರು ಯುವಕರು, ದುಷ್ಕರ್ಮಿಗಳ ಗುಂಪುಗಳು ಹರಿತವಾದ ಮಚ್ಚಿನಿಂದ ಜನರನ್ನು ಭಯಭೀತಗೊಳಿಸಿವೆ. ಈ ಗುಂಪುಗಳು ಹಿಂಸಾಚಾರ ನಡೆಸಿ, ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಿ, ಜನರ ಮೇಲೆ ದಾಳಿ ಮಾಡಿವೆ.” ಎಂದಿದೆ. ಈ ವರದಿಯೊಂದಿಗೆ ವೈರಲ್ ವೀಡಿಯೋ ಕೀಫ್ರೇಂ ಹೋಲುವ ದೃಶ್ಯವೊಂದನ್ನು ಪೋಸ್ಟ್ ಮಾಡಲಾಗಿದೆ.

ಈ ವರದಿಯನ್ನು ಸಾಕ್ಷ್ಯವನ್ನಾಗಿರಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಡಿಸೆಂಬರ್ 30, 2022ರಂದು ಇಂಡಿಯಾ ಟುಡೇ ಪ್ರಕಟಿಸಿದ ವರದಿಯಲ್ಲಿ, “ಗುರುವಾರ ರಾತ್ರಿ ಪುಣೆಯಲ್ಲಿ ಕೊಯ್ಟಾ (ಕುಡುಗೋಲು) ಗ್ಯಾಂಗ್ನ ಸದಸ್ಯರು ನಾಗರಿಕರ ಮೇಲೆ ಮಚ್ಚಿನಿಂದ ದಾಳಿ ಮಾಡಿ ಪ್ರಯಾಣಿಕರನ್ನು ಭಯಭೀತಗೊಳಿಸಿದರು, ಇದರ ವೀಡಿಯೋ ಕಣ್ಗಾವಲು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪುಣೆಯ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಹಗಡ್ ಕಾನೂನು ಕಾಲೇಜು ಆವರಣದ ಮುಂಭಾಗದಲ್ಲಿ ದುಷ್ಕರ್ಮಿಗಳು ಜನರನ್ನು ಗುರಿಯಾಗಿಸಿಕೊಂಡರು.
ವೀಡಿಯೋದಲ್ಲಿ, ದುಷ್ಕರ್ಮಿಗಳು ಅಂಗಡಿಗಳಿಗೆ ನುಗ್ಗಿ ಜನರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅವರ ಮೇಲೆ ದಾಳಿ ಮಾಡುವುದನ್ನು ಕಾಣಬಹುದು. ಶಂಕಿತರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗರಿಕನೊಬ್ಬನನ್ನು ಗಾಯಗೊಳಿಸಿದ್ದಾರೆ. ಕೊಯ್ಟಾ ಗ್ಯಾಂಗ್ನ ಕೃತ್ಯಗಳು ನಡೆದ ನಂತರ ಪೊಲೀಸರು ಅವರನ್ನು ಬೆನ್ನಟ್ಟಿದ್ದಾರೆ. ಪೊಲೀಸ್ ಸಿಬ್ಬಂದಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದರು” ಎಂದಿದೆ.

ಡಿಸೆಂಬರ್ 30, 2022ರ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಸಿಂಘಡ್ ಕಾನೂನು ಕಾಲೇಜು ಆವರಣದ ಬಳಿಯ ವಿರಾಜ್ ಹೈಟ್ಸ್ ಕಟ್ಟಡದ ನೆಲಮಾಳಿಗೆಯಲ್ಲಿ ಬುಧವಾರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ. ಭಾರತಿ ವಿದ್ಯಾಪೀಠ ಪೊಲೀಸರು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದಾರೆ, ಆದರೆ ಪ್ರದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸಿದ್ದ ಆತನ ಸಹಾಯಕ ಕಿರಣ್ ದಳವಿ (20) ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಈ ಘಟನೆ ಬುಧವಾರ ರಾತ್ರಿ 10 ಗಂಟೆಗೆ ಅಂಬೆಗಾಂವ್-ಬುದ್ರುಕ್ನ ಸಿಂಹಗಡ್ ಕಾನೂನು ಕಾಲೇಜು ಆವರಣದ ಬಳಿಯ ವಿರಾಜ್ ಹೈಟ್ಸ್ ಕಟ್ಟಡದ ನೆಲಮಾಳಿಗೆಯಲ್ಲಿ ಸಂಭವಿಸಿದೆ.
ಪೊಲೀಸರ ಪ್ರಕಾರ, ಬಲಿಪಶು ಅಥರ್ವ್ ಲಡಕೆ (20) ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಅಪ್ರಾಪ್ತ ವಯಸ್ಕ ಮತ್ತು ಆತನ ಸಹಾಯಕ ಆ ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಸಿದರು.
ನಿವಾಸಿಗಳನ್ನು ಭಯಭೀತಗೊಳಿಸಲು ಇಬ್ಬರೂ ಕುಡುಗೋಲುಗಳನ್ನು ಬಳಸಿದರು, ಇದರ ಪರಿಣಾಮವಾಗಿ ಮಾಲೀಕರು ಭಯದಿಂದ ಅಂಗಡಿ ಮುಚ್ಚಬೇಕಾಯಿತು. ಆರೋಪಿಗಳು ರಸ್ತೆಯುದ್ದಕ್ಕೂ ಇದ್ದ ಮೋಟಾರ್ ಸೈಕಲ್ಗಳು ಮತ್ತು ತಿನಿಸುಗಳನ್ನು ಸಹ ಧ್ವಂಸಗೊಳಿಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.” ಎಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು
ಈ ಸಾಕ್ಷ್ಯಾಧಾರಗಳ ಪ್ರಕಾರ, ಕುಡುಗೋಲು ಹಿಡಿದು ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದ ರೌಡಿಯೊಬ್ಬನಿಗೆ ಯೋಗಿ ಆದಿತ್ಯನಾಥ್ ಆಡಳಿತ ಸ್ಥಳದಲ್ಲೇ ಬಿಸಿಮುಟ್ಟಿಸಿದೆ ಎಂಬಂತೆ ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಪುಣೆಯದ್ದಾಗಿದ್ದು, 2022ರ ಸಂದರ್ಭದ್ದು. ಇದಕ್ಕೂ ಉತ್ತರಪ್ರದೇಶದ ಪೊಲೀಸರಿಗೂ ಸಂಬಂಧವಿಲ್ಲ ಎಂದು ತಿಳಿದುಬಂದಿದೆ.
Also Read: ಬ್ರಿಟಿಷ್ ಪೈಲಟ್ ವಿಮಾನದಲ್ಲಿ ಮಹಾಕುಂಭ ಮೇಳದ ಮಹತ್ವ ಹೇಳಿದ್ದಾರೆ ಎನ್ನುವುದು ಸುಳ್ಳು!
Our Sources
Report By Indian Express, Dated: January 4, 2023
Report By India Today, Dated: December 30, 2022
Report By Hindustan Times, Dated, December 30, 2022
Kushel Madhusoodan
November 15, 2025
Salman
October 6, 2025
Ishwarachandra B G
October 1, 2025