Saturday, March 29, 2025
ಕನ್ನಡ

Fact Check

Fact Check: ರಾಹುಲ್‌ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಾ?

Written By Runjay Kumar, Translated By Ishwarachandra B G, Edited By JP Tripathi
Nov 24, 2023
banner_image

Claim
ರಾಹುಲ್‌ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ

Fact
ಭಾಷಣದ ವೇಳೆ ಮಲ್ಲಿಕಾರ್ಜುನ ಖರ್ಗೆ ರಾಹುಲ್‌ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದ್ದಾರೆ ಎಂದು ಹೇಳಿ ಬಳಿಕ ಕೂಡಲೇ ತಪ್ಪು ಸರಿಪಡಿಸಿಕೊಂಡಿದ್ದಾರೆ. ವೈರಲ್‌ ವೀಡಿಯೋದಲ್ಲಿ ಅವರು ತಪ್ಪಾಗಿ ಹೇಳಿದ್ದನ್ನು ಮಾತ್ರ ತೋರಿಸಲಾಗಿದೆ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವೀಡಿಯೋದಲ್ಲಿ, ಅವರು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತ.. “ರಾಹುಲ್ ಗಾಂಧಿಯಂತಹ ನಾಯಕ ಈ ದೇಶದ ಏಕತೆಗಾಗಿ ತಮ್ಮ ಜೀವನವನ್ನು ಅರ್ಪಿಸಿದರು” ಎಂದು ಹೇಳುತ್ತಾರೆ. ಅವರ ಈ ಭಾಷಣದ ತುಣಕನ್ನು ಮಾಧ್ಯಮಗಳೂ ಸೇರಿದಂತೆ ಬಿಜೆಪಿಯ ಅಧಿಕೃತ ಎಕ್ಸ್‌ ಖಾತೆ ಮತ್ತು ವಿವಿಧ ಮಂದಿ ಹಂಚಿಕೊಂಡಿದ್ದು,  ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸಲಾಗಿದೆ.

ಸತ್ಯಶೋಧನೆಯಲ್ಲಿ ಇದು ವೀಡಿಯೋದ ಒಂದು ತುಣುಕು ಮಾತ್ರ ಎಂದು ಕಂಡುಕೊಂಡಿದ್ದೇವೆ. ವಾಸ್ತವವಾಗಿ, ಮಲ್ಲಿಕಾರ್ಜುನ ಖರ್ಗೆ ಅವರು ರಾಜಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತಪ್ಪಾಗಿ ಮಾತನಾಡಿದ ಬಳಿಕ ಅದಕ್ಕೆ ಕ್ಷಮೆಯಾಚಿಸಿದರು. ರಾಜೀವ್ ಗಾಂಧಿ ದೇಶದ ಏಕತೆಗಾಗಿ ತಮ್ಮ ಜೀವ ಸಮರ್ಪಿಸಿದರು, ರಾಹುಲ್‌ ಗಾಂಧಿ ಅಲ್ಲ ಎಂದು ಸರಿಪಡಿಸಿ ಹೇಳಿದರು.

Also Read: ವರ್ಲ್ಡ್ ಕಪ್‌ ಫೈನಲ್‌ನಲ್ಲಿ ಹನುಮಾನ್‌ ಚಾಲೀಸಾ ಪಠಣ, ವೈರಲ್‌ ವೀಡಿಯೋ ಅಸಲಿಯತ್ತೇನು?

8 ಸೆಕೆಂಡ್ ಗಳ ಈ ವೀಡಿಯೋವನ್ನು ಉದಯವಾಣಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಇದರೊಂದಿಗೆ ಬಿಜೆಪಿ ಅಧಿಕೃತ ಖಾತೆ, ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಹಂಚಿಕೊಂಡಿದ್ದಾರೆ.

Fact Check: ರಾಹುಲ್‌ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಾ?

Fact Check/Verification

ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ವೀಡಿಯೋವನ್ನು ನಾವು ಮೊದಲು ಹುಡುಕಿದ್ದೇವೆ. ಈ ವೇಳೆ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ  ನವೆಂಬರ್ 20, 2023 ರಂದು ಲೈವ್ ಮಾಡಲಾದ ವೀಡಿಯೋ ಕಂಡುಬಂದಿದೆ.

ರಾಜಸ್ಥಾನದ ಅನೂಪ್‌ಗಢದಲ್ಲಿ ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದು,ಆ ವೀಡಿಯೋ ಸುಮಾರು 31 ನಿಮಿಷ 30 ಸೆಕೆಂಡ್ ಗಳದ್ದಾಗಿದೆ.

ಇನ್ನು ವೈರಲ್‌ ವೀಡಿಯೋವನ್ನು ಸಮಗ್ರವಾಗಿ ನಾವು ವೀಕ್ಷಿಸಿದ್ದೇವೆ. ಭಾಷಣದಲ್ಲಿ ವಾಗ್ದಾಳಿ ನಡೆಸಿದ ಅವರು, “ಕಾಂಗ್ರೆಸ್ ಪಕ್ಷವು ದೇಶದ ಸೇವೆಯಲ್ಲಿ ತೊಡಗಿದೆ, ನಮ್ಮ ಪಕ್ಷದಲ್ಲಿ, ಇಂದಿರಾ ಅವರಂತಹ ಮಹಾನ್ ನಾಯಕಿ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿಯಂತಹ ನಾಯಕರು ಈ ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ” ಎಂದು ಹೇಳಿದ್ದಾರೆ.

Also Read: ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತರಲಾಗಿದೆ ಎಂದ ವೀಡಿಯೋ ನಿಜವೇ?

ಈ ಸಂದರ್ಭ ಅವರ ಮಾತುಗಳನ್ನು ವೇದಿಕೆ ಮೇಲಿದ್ದ ಯಾರೋ ಸರಿಪಡಿಸುವಂತೆ ಹೇಳಿದ್ದರಿಂದ, ಕೂಡಲೇ ಅವರು ತಪ್ಪು ಸರಿ ಪಡಿಸಿಕೊಂಡು ಕ್ಷಮೆಯಾಚಿಸಿದ್ದಾರೆ. “ರಾಜೀವ್ ಗಾಂಧಿ ದೇಶದ ಏಕತೆಗಾಗಿ ತಮ್ಮ ಜೀವನವನ್ನು ಅರ್ಪಿಸಿದರು. ಕಾಂಗ್ರೆಸ್ನಲ್ಲಿ ತಮ್ಮ ಪ್ರಾಣವನ್ನು ಅರ್ಪಿಸುವ ಜನರಿದ್ದಾರೆ ಮತ್ತು ಬಿಜೆಪಿಯಲ್ಲಿ ತಮ್ಮ ಪ್ರಾಣವನ್ನು ತೆಗೆಯುವ ಜನರಿದ್ದಾರೆ ” ಎಂದು ಅವರು ಹೇಳಿದರು. ಈ ನಂತರ ಅವರು ಮಹಾತ್ಮ ಗಾಂಧಿಯವರ ಹತ್ಯೆಯನ್ನು ಉಲ್ಲೇಖಿಸಿ ಬಿಜೆಪಿಯನ್ನು ಟೀಕಿಸಿದರು.

ತನಿಖೆಯ ವೇಳೆ  ಕಾಂಗ್ರೆಸ್‌ ನ ಅಧಿಕೃತ ಫೇಸ್ಬುಕ್ ಖಾತೆಯಿಂದ ನವೆಂಬರ್ 20, 2023 ರಂದು ಲೈವ್ ಮಾಡಿದ ವೀಡಿಯೋವನ್ನು ಸಹ ನಾವು ಗಮನಿಸಿದ್ದೇವೆ. ಈ ವೀಡಿಯೋದಲ್ಲಿ ಅದೇ ದೃಶ್ಯಗಳನ್ನು 31 ನಿಮಿಷಗಳ ಕಾಲ ನೋಡಬಹುದು.

ಇನ್ನು ನವೆಂಬರ್ 21, 2023ರಂದು ನವಭಾರತ್ ಟೈಮ್ಸ್ ವೆಬ್ಸೈಟ್ ನಲ್ಲಿ ಪ್ರಕಟವಾದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದು ಹೇಳಿದ್ದರು. ಇದನ್ನು ಕೇಳಿದ ಕಾಂಗ್ರೆಸ್ ನಾಯಕರು ವೇದಿಕೆಯ ಮೇಲೆ ಕೂಗಲು ಪ್ರಾರಂಭಿಸಿದಾಗ, ಖರ್ಗೆ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದು ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು ಎಂದು ತಪ್ಪನ್ನು ಸರಿಪಡಿಸಿಕೊಂಡರು ಎಂದಿದೆ. ಈ ಕುರಿತು ಎನ್‌ಬಿಟಿ ರಾಜಸ್ಥಾನ್‌ ಟ್ವೀಟ್ ಕೂಡ ಮಾಡಿದ್ದು ಅದು ಇಲ್ಲಿದೆ.

Conclusion

ಸತ್ಯಶೋಧನೆಯ ಪ್ರಕಾರ, ವೈರಲ್‌ ವೀಡಿಯೋ ನೈಜ ವೀಡಿಯೋದ ಒಂದು ತುಣುಕು ಮಾತ್ರ ಆಗಿದೆ. ಒಂದು ಬಾರಿ ಖರ್ಗೆ ಅವರು ತಪ್ಪಾಗಿ ಹೇಳಿದ್ದರೂ, ಕೂಡಲೇ ತಪ್ಪಿಗೆ ಕ್ಷಮೆಯಾಚಿಸಿ, ಸರಿಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

Also Read: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್‌ ಗಾಂಧಿ ಅವಮಾನಿಸಿದರೇ, ಸತ್ಯ ಏನು?

Result: Missing Context

Our Sources

YouTube video By Indian National Congress Dated: 20th November 2023

Facebook Video By Indian National Congress, Dated: 20th November 2023

Report By Navabharat Times, Dated: 21st November 2023

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,571

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.