Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಒಡಿಶಾದಲ್ಲಿ ಸಂಭವಿಸಿದ ಅತಿ ಭೀಕರ ರೈಲು ದುರಂತ ಈ ವಾರ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸದ್ದು ಮಾಡಿದೆ. ಈ ದುರಂತದ ಬೆನ್ನಲ್ಲೇ ಅತಿ ಹೆಚ್ಚು ಸುಳ್ಳು ಹೇಳಿಕೆಗಳೂ ಹರಿದಾಡಿವೆ. ದುರಂತ ಬೆನ್ನಲ್ಲೇ ಅದಕ್ಕೆ ಕೋಮು ಬಣ್ಣ ನೀಡುವಂತೆ ರೈಲು ಹಳಿ ಪಕ್ಕ ದೇಗುಲದ ಚಿತ್ರವನ್ನು ಕ್ರಾಪ್ ಮಾಡಿ ಹಾಕಿ ಮಸೀದಿ ಇದೆ ಎಂದಿದ್ದು, ದುರಂತ ಬಳಿಕ ಸನಿಹದ ಸ್ಟೇಷನ್ ಮಾಸ್ಟರ್ ಶರೀಫ್ ಪರಾರಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ ಬಾಲಕನೊಬ್ಬ ಹಳಿಗೆ ಕಲ್ಲು ಇಟ್ಟ ಪ್ರಕರಣವೊಂದರಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಜೊತೆಗೆ ರಾಹುಲ್ ಗಾಂಧಿ ‘ನಾನು ಮುಸ್ಲಿಂ’ ಹೇಳಿಕೆಯೂ ವೈರಲ್ ಆಗಿತ್ತು. ಸತ್ಯಶೋಧನೆ ವೇಳೆ ಈ ಹೇಳಿಕೆಗಳು ಸುಳ್ಳು ಎಂದು ಸಾಬೀತಾಗಿವೆ.

ಒಡಿಶಾದ ಬಾಲಸೋರ್ ನಲ್ಲಿ ರೈಲು ದುರಂತ ನಡೆದ ಬೆನ್ನಲ್ಲೇ ಇದು ಮಸೀದಿಯೊಂದರ ಬಳಿ ನಡೆದಿದೆ ಎಂದು ಎಂದು ಕೋಮು ಬಣ್ಣ ಹಚ್ಚುವ ಯತ್ನ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ. ಅಪಘಾತದ ಸ್ಥಳದ ಬಳಿ ಮಸೀದಿಯಿದೆ ಎಂಬಂತೆ ತೋರಿಸುವ ಚಿತ್ರವೊಂದು ವೈರಲ್ ಆಗಿತ್ತು. ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ಮಾಡಿದ್ದು, ವೈರಲ್ ಚಿತ್ರದಲ್ಲಿ ಮಸೀದಿ ಎಂದು ಹೇಳಲಾಗಿರುವ ಕಟ್ಟಡ ನಿಜವಾಗಿ ಇಸ್ಕಾನ್ ದೇವಾಲಯ, ಮಸೀದಿ ಎಂದು ಹೇಳಿದ ಫೋಟೋ ಸುಳ್ಳು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಒಡಿಶಾ ರೈಲು ದುರಂತ ಬಳಿಕ ಸ್ಟೇಷನ್ ಮಾಸ್ಟರ್ ಶರೀಫ್ ತಲೆಮರೆಸಿಕೊಂಡಿದ್ದಾರೆ ಜೊತೆಗೆ ಗುಪ್ತಚರ ಸಂಸ್ಥೆಗಳು ಬಾಂಗ್ಲಾದೇಶ ಮತ್ತು ರೋಹಿಂಗ್ಯಾ ಐಎಸ್ಐ ಮತ್ತು ಮಣಿಪುರದ ವಿಚಾರ ಕಾರಣಗಳನ್ನೂ ಶಂಕಿಸಿವೆ ಎಂದು ಸಂದೇಶವೊಂದು ವೈರಲ್ ಆಗಿತ್ತು. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದಾಗ, ಒಡಿಶಾ ರೈಲು ದುರಂತ ಬಳಿಕ ಸ್ಟೇಷನ್ ಮಾಸ್ಟರ್ ಶರೀಫ್ ಪರಾರಿ ಎನ್ನವುದು ಸುಳ್ಳು. ಅಂತಹ ಹೆಸರಿನ ಯಾವುದೇ ವ್ಯಕ್ತಿ ಬಹನಾಗ ನಿಲ್ದಾಣದಲ್ಲಿ ಕರ್ತವ್ಯದಲ್ಲಿಲ್ಲ. ಅಪಘಾತದ ದಿನದಂದು ಕರ್ತವ್ಯದಲ್ಲಿದ್ದವರು ಸ್ಟೇಷನ್ ಮಾಸ್ಟರ್ ಎಸ್ ಬಿ ಮೊಹಾಂತಿ ಎಂಬವರಾಗಿದ್ದರು ಎಂದು ತಿಳಿದುಬಂದಿದೆ. ಅಲ್ಲದೇ ಐಎಸ್‌ಐ, ಮಣಿಪುರ ಕೈವಾಡ ಕುರಿತ ಯಾವುದೇ ಸಾಕ್ಷ್ಯಗಳೂ ಕಂಡುಬಂದ ಬಗ್ಗೆ ತನಿಖಾ ತಂಡಗಳು ಹೇಳಿಲ್ಲ ಎಂದು ತಿಳಿದುಬಂದಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಒಡಿಶಾ ರೈಲು ದುರಂತದ ಬೆನ್ನಲ್ಲೇ ರೈಲ್ವೇ ಟ್ರ್ಯಾಕ್ ಮೇಲೆ ಕಲ್ಲು ಇಟ್ಟು 2024ರ ಲೋಕಸಭೆ ಚುನಾವಣೆಗೆ ಮುನ್ನ ಬಹುದೊಡ್ಡ ಪಿತೂರಿ ಮಾಡಲಾಗುತ್ತಿದೆ ಇದು ಸರ್ಕಾರದ ವಿರುದ್ಧದ ಯುದ್ಧದಂತೆ ತೋರುತ್ತಿದೆ, ಮುಗ್ಧ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಮತ್ತು ಅವಘಡಗಳಿಗೆ ಸರ್ಕಾರವನ್ನು ದೂಷಿಸಲಾಗುತ್ತಿದೆ ಎಂಬ ಹೇಳಿಕೆಯೊಂದು ವೀಡಿಯೋದ ಜೊತೆಗೆ ವೈರಲ್ ಆಗಿತ್ತು. ಸತ್ಯಶೋಧನೆ ವೇಳೆ ರೈಲ್ವೇ ಟ್ರ್ಯಾಕ್ ಮೇಲೆ ಕಲ್ಲು ಇಟ್ಟ ಪ್ರಕರಣ 2018ರದ್ದಾಗಿದ್ದು, ಬಾಲಕರು ಹುಡುಗಾಟಿಕೆಯಲ್ಲಿ ಈ ಕೃತ್ಯ ಎಸಗಿದ್ದಾರೆ, ಈ ಪ್ರಕರಣ ನಡೆದಿರುವುದು ಕರ್ನಾಟಕದ ಕಲಬುರಗಿಯಲ್ಲಿ ಎಂದು ತಿಳಿದುಬಂದಿದೆ ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಬೈಕಿನ ಹಿಂಬದಿಯಲ್ಲಿ ಶವವನ್ನು ಕಟ್ಟಿ ತೆಗೆದುಕೊಂಡು ಹೋಗುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶವವನ್ನು ಪ್ಯಾಕ್ ಮಾಡಲಾಗಿದ್ದು, ಕಾಲು ಹೊರಗಿದೆ. ಈ ಚಿತ್ರವನ್ನು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು “ಲವ್ ಜಿಹಾದ್” ಪ್ರಕರಣ ಎಂದು ಹೇಳಲಾಗಿತ್ತು. ಸತ್ಯಶೋಧನೆಯ ವೇಳೆಗೆ ಇದು ಭಾರತದಲ್ಲಿ ನಡೆದಿದ್ದಲ್ಲ ಎಂದು ಗೊತ್ತಾಗಿದೆ. ಅಷ್ಟೇ ಅಲ್ಲ, ಈ ವೈರಲ್ ಫೊಟೋ ಈಜಿಪ್ಟ್‌ನದ್ದಾಗಿದ್ದು, ವ್ಯಕ್ತಿ ಗೊಂಬೆಯನ್ನು ಸಾಗಿಸುತ್ತಿದ್ದಾನೆ, ಹೊರತು ಹೆಣವಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಮಾರುಕಟ್ಟೆಗೆ ಹೊಸ ₹1000 ಮುಖಬೆಲೆಯ ನೋಟುಗಳ ಎಂಟ್ರಿ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಜೊತೆಗೆ ಹಸಿರು ಬಣ್ಣದ ನೋಟುಗಳ ಚಿತ್ರವನ್ನು ಹಾಕಿ ಇದು ಹೊಸ ನೋಟು ಎಂದು ಹೇಳಲಾಗಿತ್ತು. ಸತ್ಯಶೋಧನೆ ವೇಳೆ ಇದು ಸುಳ್ಳು ಎಂದು ಗೊತ್ತಾಗಿದೆ. ಆರ್ ಬಿಐ ಗವರ್ನರ್ ಅವರ ಪ್ರಕಾರ ₹1 ಸಾವಿರ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ, ಇದುವರೆಗೆ ಹೊಸ ನೋಟು ಮಾರುಕಟ್ಟೆಗೆ ಬಂದಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಾನು ಮುಸ್ಲಿಂ, ಪಾಕಿಸ್ಥಾನವನ್ನು ಬೆಂಬಲಿಸಬೇಕು ಎಂಬಂತೆ ಹೇಳಿಕೆ ನೀಡಿದ್ದಾರೆ ಎಂಬಂತೆ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಎಬಿಪಿ ನ್ಯೂಸ್‌ನ ಬ್ರೇಕಿಂಗ್ ನ್ಯೂಸ್ ಟೆಂಪ್ಲೆಟ್ ನಲ್ಲಿ ಈ ಸುದ್ದಿ ಹಬ್ಬಿಸಲಾಗಿತ್ತು. ಸತ್ಯಶೋಧನೆ ವೇಳೆ, ರಾಹುಲ್ ಗಾಂಧಿಯವರ ಹೇಳಿಕೆಯ ಈ ಬ್ರೇಕಿಂಗ್ ನ್ಯೂಸ್‌ನ ಚಿತ್ರ ನಿಜವಾದ್ದಲ್ಲ. ಇದನ್ನು ತಿರುಚಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಹುರಿಗಡಲೆ ಮತ್ತು ಖರ್ಜೂರವನ್ನು ಒಟ್ಟಿಗೆ ಸೇವಿಸುವುದರಿಂದ ಬೇಗ ತೂಕ ಹೆಚ್ಚಿಸಬಹುದು ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಸತ್ಯಶೋಧನೆಯಲ್ಲಿ ಕೇವಲ ಹುರಿಗಡಲೆ ಮತ್ತು ಖರ್ಜೂರದ ಮೇಲೆ ಅವಲಂಬಿಸುವುದರಿಂದ ಆರೋಗ್ಯಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶಗಳನ್ನು ಒದಗಿಸುವುದಿಲ್ಲ, ಇದು ಒಂದರಿಂದ ಮಾತ್ರವೇ ತೂಕ ಹೆಚ್ಚಾಗುವುದು ಸಾಧ್ಯವಿಲ್ಲ ಎಂದು ತಿಳಿದುಬಂದಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
Runjay Kumar
October 13, 2025
Ishwarachandra B G
August 30, 2025
Kushel Madhusoodan
August 26, 2025