ಪಾಕಿಸ್ತಾನದ ಕುರಿತ ಹೇಳಿಕೆಗಳು ಈ ವಾರ ವೈರಲ್ ಆಗಿವೆ. ಪಾಕಿಸ್ತಾನದಲ್ಲಿ ಜನರು ಆಹಾರಕ್ಕಾಗಿ ಮಸೀದಿ ಧ್ವಂಸ ಮಾಡಿ ಕಬ್ಬಿಣ, ಇಟ್ಟಿಗೆ ಮಾರಾಟ ಮಾಡುತ್ತಿದ್ದಾರೆ, ಪಾಕಿಸ್ತಾನದಲ್ಲಿ ಉಗ್ರರ ಗುಂಡಿನ ದಾಳಿಗೆ ಹೊತ್ತಿ ಉರಿದ ರೈಲು ಎಂದು ಕರಾಚಿ ಪ್ರದೇಶದಲ್ಲಿ ಬೆಂಕಿ ತಗುಲಿದ ವೀಡಿಯೋ, ಪಾಕಿಸ್ತಾನದಲ್ಲಿ ಬಲೂಚ್ ಉಗ್ರರು ರೈಲು ಸ್ಫೋಟಿಸಿದ್ದಾರೆ ಎಂಬ ವೀಡಿಯೋ ಹಂಚಲಾಗಿದೆ. ಇದರೊಂದಿಗೆ ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್ ನಲ್ಲಿ ಮೆಟ್ರೋ ರೈಲು ಅಪಘಾತವಾಗಿದೆ ಎಂದು ಎಐ ವೀಡಿಯೋ, ಚಾಂಪಿಯನ್ಸ್ ಟ್ರೋಫಿ ವೇಳೆ ರಂಜಾನ್ ಉಪವಾಸ ಮುರಿದಿದ್ದಕ್ಕಾಗಿ ವೇಗಿ ಮೊಹಮ್ಮದ್ ಶಮಿ ಕ್ಷಮೆ ಎಂಬ ವೀಡಿಯೋಗಳೂ ವೈರಲ್ ಆಗಿದ್ದವು. ಇವುಗಳ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ಸುಳ್ಳು ಎಂದು ಸಾಬೀತು ಪಡಿಸಿವೆ.

ಪಾಕಿಸ್ತಾನದಲ್ಲಿ ಜನರು ಆಹಾರಕ್ಕಾಗಿ ಮಸೀದಿ ಧ್ವಂಸ ಮಾಡಿ ಕಬ್ಬಿಣ, ಇಟ್ಟಿಗೆ ಮಾರಾಟ ಮಾಡುತ್ತಿದ್ದಾರೆಯೇ?
ಪಾಕಿಸ್ತಾನದಲ್ಲಿ ಜನರು ಆಹಾರಕ್ಕಾಗಿ ಮಸೀದಿ ಧ್ವಂಸ ಮಾಡಿ ಕಬ್ಬಿಣ, ಇಟ್ಟಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿಕೆಯೊಂದನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಕರಾಚಿಯಲ್ಲಿ ಅಲ್ಪಸಂಖ್ಯಾತ ಸಮುದಾಯವಾದ ಅಹ್ಮದೀಯರ ಪೂಜಾ ಸ್ಥಳವನ್ನು ಜನರು ಧ್ವಂಸ ಮಾಡುತ್ತಿರುವ ದೃಶ್ಯ ಇದಾಗಿದ್ದು, ಆಹಾರಕ್ಕಾಗಿ ಮಸೀದಿ ಧ್ವಂಸ ಮಾಡಿ ಕಬ್ಬಿಣ, ಇಟ್ಟಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಹೇಳಿಕೆ ಸುಳ್ಳಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್ ನಲ್ಲಿ ಮೆಟ್ರೋ ರೈಲು ಅಪಘಾತವಾಗಿದೆ ಎಂದು ಎಐ ವೀಡಿಯೋ ಹಂಚಿಕೆ
ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್ ನಲ್ಲಿ ಮೆಟ್ರೋ ರೈಲು ಅಪಘಾತವಾಗಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್ ನಲ್ಲಿ ಮೆಟ್ರೋ ರೈಲು ಅಪಘಾತವಾಗಿದೆ ಎನ್ನುವುದು ನಿಜವಲ್ಲ, ಇದು ಎಐ ನಿಂದ ರಚಿಸಲಾದ ವೀಡಿಯೋ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ

ಚಾಂಪಿಯನ್ಸ್ ಟ್ರೋಫಿ ವೇಳೆ ರಂಜಾನ್ ಉಪವಾಸ ಮುರಿದಿದ್ದಕ್ಕಾಗಿ ವೇಗಿ ಮೊಹಮ್ಮದ್ ಶಮಿ ಕ್ಷಮೆ ಕೇಳಿದ್ರಾ?
ಚಾಂಪಿಯನ್ಸ್ ಟ್ರೋಫಿ ವೇಳೆ ರಂಜಾನ್ ಉಪವಾಸ ಮುರಿದಿದ್ದಕ್ಕಾಗಿ ಭಾರತದ ಕ್ರಿಕೆಟಿಗ, ವೇಗಿ ಮೊಹಮ್ಮದ್ ಶಮಿ ಕ್ಷಮೆ ಕೇಳಿದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ವೇಗಿ ಮೊಹಮ್ಮದ್ ಶಮಿ ಕ್ಷಮೆ ಕೇಳಿದರು ಎಂದು ಹೇಳಲಾದ ವೀಡಿಯೋ ಸುಳ್ಳು, ಹಳೆಯ ವೀಡಿಯೋಕ್ಕೆ ಎಐ ಮೂಲಕ ರಚಿಸಲಾದ ಧ್ವನಿಯನ್ನು ಡಿಜಿಟಲ್ ಆಗಿ ಸೇರಿಸಲಾಗಿದೆ. ಈ ಕುರಿತ ವರದಿ ಇಲ್ಲಿದೆ

ಪಾಕಿಸ್ತಾನದಲ್ಲಿ ಉಗ್ರರ ಗುಂಡಿನ ದಾಳಿಗೆ ಹೊತ್ತಿ ಉರಿದ ರೈಲು ಎಂದು ಕರಾಚಿ ಪ್ರದೇಶದಲ್ಲಿ ಬೆಂಕಿ ತಗುಲಿದ ವೀಡಿಯೋ ಹಂಚಿಕೆ
ಪಾಕಿಸ್ತಾನದಲ್ಲಿ ಉಗ್ರರ ಗುಂಡಿನ ದಾಳಿಗೆ ಹೊತ್ತಿ ಉರಿದ ರೈಲು ಎಂಬತೆ ಹೇಳಿಕೆಯೊಂದನ್ನು ವೀಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ನ್ಯೂಸ್‌ಚೆಕರ್ ಇದರ ಬಗ್ಗೆ ತನಿಖೆ ನಡೆಸಿದಾಗ, ಪಾಕಿಸ್ತಾನದಲ್ಲಿ ಉಗ್ರರ ಗುಂಡಿನ ದಾಳಿಗೆ ಹೊತ್ತಿ ಉರಿದ ರೈಲು ಎಂಬ ಹೇಳಿಕೆ ತಪ್ಪಾಗಿದ್ದು, ವೈರಲ್ ವೀಡಿಯೋ ಕರಾಚಿಯ ಗುಲ್ಶನ್-ಎ-ಮೇಮರ್ ಮೀರ್ ಚಕರ್ ನಲ್ಲಿ ಸಂಭವಿಸಿದ ಅಗ್ನಿ ದುರಂತದ್ದಾಗಿದೆ. ಈ ಕುರಿತ ವರದಿ ಇಲ್ಲಿದೆ

ಪಾಕಿಸ್ತಾನದಲ್ಲಿ ಬಲೂಚ್ ಉಗ್ರರು ರೈಲು ಸ್ಫೋಟಿಸಿದ್ದಾರೆ ಎಂದು ಹಳೆಯ ವೀಡಿಯೋ ವೈರಲ್
ಪಾಕಿಸ್ತಾನದಲ್ಲಿ ಬಲೂಚ್ ಉಗ್ರರು ರೈಲು ಸ್ಫೋಟಿಸಿದ್ದಾರೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಪಾಕಿಸ್ತಾನದಲ್ಲಿ ಬಲೂಚ್ ಉಗ್ರರು ರೈಲು ಸ್ಫೋಟಿಸಿದ್ದಾರೆ ಎಂದ ಈ ವೀಡಿಯೋ ಹಳೆಯದಾಗಿದೆ. 2022ರಲ್ಲಿ ರೈಲಿನ ಮೇಲೆ ನಡೆದ ಬಿಎಲ್‌ಎ ದಾಳಿಯ ವೀಡಿಯೋ ಇದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ