ಚಹಾ ಕುಡಿದರೆ ಆರೋಗ್ಯಕ್ಕೆ ಹಾಳು; ಚಹಾ ಕುಡಿಯುವವರು ಹೆಚ್ಚು ವರ್ಷ ಬದುಕುತ್ತಾರೆ, ಯಾವುದು ಸತ್ಯ?

ಚಹಾ, ಆರೋಗ್ಯ, ಒಳ್ಳೆಯದು, ಕೆಟ್ಟದ್ದು

ಚಹಾ ಆರೋಗ್ಯಕ್ಕೆ ಒಳ್ಳೆಯದು, ಎರಡರಿಂದ ಮೂರು ಕಪ್‌ ಟೀ ಕುಡಿಯುವವರು ಕುಡಿಯದವರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ ಎಂದು ಒಂದು ಕ್ಲೇಮ್‌ ಹೇಳುತ್ತೆ, ಇನ್ನೊಂದು ಕ್ಲೇಮ್‌ ಹೇಳುತ್ತದೆ. ಈ ಎರಡೂ ಕ್ಲೇಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇನ್ ಸ್ಟಾಗ್ರಾಂನಲ್ಲಿ ಕಂಡುಬಂದ ಮೊದಲನೇ ಕ್ಲೇಮ್‌ ಪ್ರಕಾರ “ಚಹಾ ಆರೋಗ್ಯಕ್ಕೆ ಒಳ್ಳೆಯದು, ಎರಡರಿಂದ ಮೂರು ಕಪ್‌ ಟೀ ಕುಡಿಯುವವರು ಕುಡಿಯದವರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ” ಎಂದಿದ್ದರೆ, ಫೇಸ್‌ಬುಕ್‌ನಲ್ಲಿ ಕಂಡುಬಂದ ಎರಡನೇ ಕ್ಲೇಮ್‌ ಪ್ರಕಾರ “ಮೂರು ಕಪ್‌ಗಿಂತ ಹೆಚ್ಚು ಟೀ ಕಾಫಿ ಕುಡಿದ್ರೆ ದೇಹದ ಮೇಲಾಗಲಿದೆ ಭಾರೀ ಡ್ಯಾಮೇಜ್‌ ಎಚ್ಚರ !” ಎಂದಿದೆ.

ಈ ಹಿನ್ನೆಲೆಯಲ್ಲಿ ಕ್ಲೇಮ್‌ಗಳ ಸತ್ಯ ಪರಿಶೀಲನೆಯನ್ನು ನ್ಯೂಸ್ ಚೆಕರ್‌ ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

Fact check/ Verification

ಕಡಿಮೆ ಅಥವಾ ಸಾಮಾನ್ಯ ರೀತಿಯಲ್ಲಿ ಚಹಾ ಕುಡಿಯುವುದು ಹೆಚ್ಚಿನ ಜನರ ಭ್ಯಾಸವಾಗಿದೆ. ಆದರೆ ತೀವ್ರ ಪ್ರಮಾಣದಲ್ಲಿ ಚಹಾ ಸೇವನೆ, ಕೆಲವೊಂದು ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು.

ಸದ್ಯ ಲಭ್ಯವಿರುವ ಸಂಶೋಧನಾ ವರದಿಗಳು ಹೇಳುವ ಪ್ರಕಾರ, ತುಂಬಾ ಪ್ರಮಾಣದ ಕಾಫಿ ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣದ ಅಂಶಗಳನ್ನು ಎಳೆದುಕೊಂಡು ದೇಹದಲ್ಲಿ ಕಬ್ಬಿಣಾಂಶ ಕೊರತೆಗೆ ಕಾರಣವಾಗುತ್ತವೆ. ಹಾಗೆಯೇ, ತುಂಬಾ ಚಹಾ ಕುಡಿಯುವುದರಿಂದ ಹೆಚ್ಚಿನ ಉದ್ವೇಗ, ಒತ್ತಡ, ಚಡಪಡಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತವೆ. ತುಂಬಾ ಚಹಾ ಕುಡಿಯುವುದರಿಂದ ಇತರ ಅಡ್ಡ ಪರಿಣಾಮಗಳು ಇವೆ ಅದೇನೆಂದರೆ, ನಿದ್ರಾಹೀನತೆ  ವಾಕರಿಕೆ, ಎದೆಯುರಿ, ಗರ್ಭಧಾರಣೆಯ ಸಂಕೀರ್ಣತೆ, ತಲೆನೋವು, ತಲೆ ತಿರುಗುವಿಕೆ ಮತ್ತು ಕೆಫೀನ್‌ ಚಟಕ್ಕೆ ಕಾರಣವಾಗುತ್ತದೆ. ಇದರೊಂದಿಗೆ ಕೆಲವೊಂದು ಸಾಕ್ಷ್ಯಗಳೂ ಹೆಚ್ಚಿನ ಪ್ರಮಾಣದಲ್ಲಿ ಚಹಾ ಕುಡಿಯುವುದರಿಂದ ಚಹಾದಲ್ಲಿ ಇರುವ ಹಾನಿಕಾರಕ ಅಂಶಗಳು, ದೇಹದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿವೆ. ಇಲ್ಲಿ ಹೈಪರ್‌ ಲಿಂಕ್‌ಗಳ ಮೂಲಕ ಕೊಡಲಾದ ಸಂಶೋಧನಾ ವರದಿಗಳು ಎರಡು ಕಪ್‌ಗಿಂತ ಹೆಚ್ಚು ಚಹಾ ಕುಡಿದರೆ ಕೆಲವೊಂದು ಅಡಸ್ಡ ಪರಿಣಾಮ ಉಂಟಾಗಬಹುದು ಎಂದು ಹೇಳುತ್ತವೆ.

ಆದರೆ ಚಹಾವನ್ನು ಮಿತವಾಗಿ ಸೇವಿಸುವುದರಿಂದ ಕೆಲವೊಂದು ಲಾಭಗಳಿವೆ. ಈ ಕುರಿತ ವೈಜ್ಞಾನಿಕ ಸಾಕ್ಷ್ಯಗಳು ಕೂಡ ಚಹಾವನ್ನು ಮಿತವಾಗಿ ಕುಡಿಯುವುದರ ಬಗ್ಗೆ ಹೇಳುತ್ತವೆ. ಇದರಿಂದ ಬದುಕಿನ ಗುಣಮಟ್ಟ ಸುಧಾರಣೆಯಾಗಬಹುದು ಎಂದು ಹೇಳುತ್ತದೆ. ಆದಾಗ್ಯೂ ಚಹಾ ಕುಡಿಯದವರಿಗಿಂತ ಚಹಾ ಕುಡಿಯುವವರು ಹೆಚ್ಚು ವರ್ಷ ಬದುಕುತ್ತಾರೆ ಎಂದು ಹೇಳುವುದಕ್ಕೆ ಈ ಸಂಶೋಧನಾ ವರದಿಗಳು ಸಾಕಾಗುವುದಿಲ್ಲ.

Also Read: ಖಾಲಿ ಹೊಟ್ಟೆಯಲ್ಲಿ ಆಪಲ್‌ ತಿಂದರೆ ಮೈಗ್ರೇನ್‌ ನೋವು ಮಾಯ?: ಸತ್ಯ ಏನು?

ಎಲ್ಲ ನೈಜ ಚಹಾವನ್ನು ಕ್ಯಾಮೆಲಿಯಾ ಸಿನೆನ್ಸಿಸ್‌ ಸಸ್ಯದಿಂದ ತಯಾರಿಸಲಾಗುತ್ತದೆ. ಆದರೆ ಗಿಡಮೂಲಿಕೆಯ ಚಹಾಗಳು ಈ ವರ್ಗಕ್ಕೆ ಸೇರಿರುವುದಿಲ್ಲ. ಪ್ರಕಟವಾಗಿರುವ ವೈಹ್ಞಾನಿಕ ಸಂಶೋಧನೆಯ ಪ್ರಕಾರ, ಈ ಸಸ್ಯವು ಕ್ಯಾನ್ಸರ್‌, ಸ್ಥೂಲಕಾಯ, ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲೀನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಪಾತ್ರವನ್ನು ವಹಿಸುವ ಸಂಯುಕ್ತಗಳನ್ನು ಹೊಂದಿವೆ

ಅಲ್ಲದೇ ಇತ್ತೀಚಿನ ಅಂದರೆ 2022ರ ಸಂಶೋಧನಾ ವರದಿಯೊಂದರ ಪ್ರಕಾರ ಮಿತ ಪ್ರಮಾಣದಲ್ಲಿ ಚಹಾ ಕುಡಿಯುವುದರಿಂದ ಮರಣ ಪ್ರಮಾಣ ಕಡಿಮೆ ಮಾಡಬಹುದು ಎಂದಿದೆ.

ಈ ಕ್ಲೇಮ್‌ಗಳ ಸತ್ಯಾಸತ್ಯತೆ ಬಗ್ಗೆ ಮುಂಬೈ ಮೂಲದ ವೈದ್ಯರಾದ ಡಾ. ಕಶ್ಯಪ್‌ ದಕ್ಷಿಣಿ ಅವರು ಪ್ರತಿಕ್ರಿಯಿಸಿದ್ದು, ಅವರ ಪ್ರಕಾರ, “ಚಹಾ ಕುಡಿಯುವುದರಿಂದ ಕ್ಯಾನ್ಸರ್‌, ಹೃದಯ ರಕ್ತನಾಳದ ಕಾಯಿಲೆಗಳು, ಸಂಧಿವಾತ, ಸಕ್ಕರೆ ಕಾಯಿಲೆಗಳಿಗೆ ಉತ್ತಮ ಎಂಬ ವರದಿಗಳಿವೆ. ಆದರೆ, ಆದರೆ ಇವುಗಳು ಮಾನವನ ಮೇಲಿನ ಅಧ್ಯಯನಗಳು/ಕ್ಲಿನಿಕಲ್‌ ಪ್ರಯೋಗಗಳ ಫಲಿತಾಂಶಗಳಲ್ಲಿ ಧನಾತ್ಮಕವಾಗಿಲ್ಲ. ಏಕೆಂದರೆ ಮನುಷ್ಯರು ಸಾಮಾನ್ಯವಾಗಿ ಸೇವಿಸುವ ಪ್ರಮಾಣಕ್ಕೆ ಹೋಲಿಸಿದರೆ, ಪ್ರಾಣಿಗಳ ಮೇಲಿನ ಅಧ್ಯಯನದಲ್ಲಿ ಹೆಚ್ಚಿನ ಪ್ರಮಾಣವನ್ನು ಬಳಸಲಾಗುತ್ತದೆ.  ಚಹಾ ಸೇವನೆಯಿಂದ ಆರೋಗ್ಯಕ್ಕೆ ಉತ್ತಮವಾಗುವ ಪರಿಣಾಮವನ್ನು ಕಂಡುಹಿಡಿಯಲು ದೊಡ್ ಪ್ರಮಾಣದ, ನಿಯಂತ್ರಿತ ಮಾನವ ಕ್ಲಿನಿಕಲ್‌ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಕಾಫಿ ಸೇವನೆಯು ದಿನಕ್ಕೆ 2-3 ಕಪ್‌ಗಳವರೆಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಕಾಫಿಯ ಪ್ರಯೋಜನಗಳನ್ನು ಉತ್ತಮವಾಗಿ ಅರ್ಥೈಸಿಕೊಳ್ಳಲು ಯಾದೃಚ್ಛಿಕವಾದ ನಿಯಂತ್ರಿತ ಪ್ರಯೋಗಗಳ ಅಗತ್ಯವಿದೆ. ಹೆಚ್ಚಾದರೆ ಎಲ್ಲವೂ ಕೆಟ್ಟದ್ದೇ. ಆದ್ದರಿಂದ ಯಾರೂ ದಿನಕ್ಕೆ 3 ಕಪ್‌ಗಳಿಗಿಂತ ಚಹಾ ಅಥವಾ ಕಾಫಿಯನ್ನು ಕುಡಿಯಲು ಶಿಫಾರಸು ಮಾಡುವುದಿಲ್ಲ.” ಎಂದು ಹೇಳುತ್ತಾರೆ.

Conclusion

ಈ ಸತ್ಯಶೋಧನೆಗಳ ಪ್ರಕಾರ, “ಚಹಾ ಆರೋಗ್ಯಕ್ಕೆ ಒಳ್ಳೆಯದು, ಎರಡರಿಂದ ಮೂರು ಕಪ್‌ ಟೀ ಕುಡಿಯುವವರು ಕುಡಿಯದವರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ” ಎನ್ನುವುದು ಮತ್ತು “ಮೂರು ಕಪ್‌ಗಿಂತ ಹೆಚ್ಚು ಟೀ ಕಾಫಿ ಕುಡಿದ್ರೆ ದೇಹದ ಮೇಲಾಗಲಿದೆ ಭಾರೀ ಡ್ಯಾಮೇಜ್‌ ಎಚ್ಚರ !” ಎನ್ನುವುದು ತಪ್ಪಾದ ಸಂದರ್ಭವಾಗಿದೆ.

Result: Missing Context

Our Sources
The Impact of Tannin Consumption on Iron Bioavailability and Status: A Narrative Review – PubMed (nih.gov)
Putative Roles of Plant-Derived Tannins in Neurodegenerative and Neuropsychiatry Disorders: An Updated Review – PubMed (nih.gov)
Effect of caffeine on lower esophageal sphincter pressure in Thai healthy volunteers – PubMed (nih.gov)
Caffeine induces gastric acid secretion via bitter taste signaling in gastric parietal cells – PubMed (nih.gov)
Association between coffee or caffeine consumption and fecundity and fertility: a systematic review and dose-response meta-analysis – PubMed (nih.gov)
Association between coffee or caffeine consumption and fecundity and fertility: a systematic review and dose-response meta-analysis – PubMed (nih.gov)
Poor Sleep and Obesity: Concurrent Epidemics in Adolescent Youth – PubMed (nih.gov)
Safety and efficacy of black cohosh (Cimicifuga racemosa) during pregnancy and lactation – PubMed (nih.gov)
Safety classification of herbal medicines used among pregnant women in Asian countries: a systematic review – PubMed (nih.gov)
Moderate Caffeine Consumption During Pregnancy | ACOG
Maternal Caffeine Consumption during Pregnancy and Risk of Low Birth Weight: A Dose-Response Meta-Analysis of Observational Studies – PubMed (nih.gov)
Moderate Caffeine Consumption During Pregnancy | ACOG
Safety classification of herbal medicines used among pregnant women in Asian countries: a systematic review – PubMed (nih.gov)
[Chronic daily headaches caused by too much caffeine] – PubMed (nih.gov)
The clinical toxicology of caffeine: A review and case study – PubMed (nih.gov)
Caffeine Withdrawal – StatPearls – NCBI Bookshelf (nih.gov)
The Safety of Ingested Caffeine: A Comprehensive Review – PubMed (nih.gov)
Caffeine content of brewed teas – PubMed (nih.gov)
Green tea: A boon for periodontal and general health – PubMed (nih.gov)
Effects of caffeine on sleep quality and daytime functioning – PubMed (nih.gov)
Know about ingredients that are toxic in green tea | by Fluoride India | Medium
The benefits and risks of consuming brewed tea: beware of toxic element contamination – PubMed (nih.gov)
Toxic effects of herbal teas – PubMed (nih.gov)
Tea and Health: Studies in Humans – PMC (nih.gov)
Tea drinkers live longer — ScienceDaily
Tea and human health: biomedical functions of tea active components and current issues – PMC (nih.gov)
Associations of Coffee and Tea Consumption with Survival to Age 90 among Older Women – PMC (nih.gov)
Associations between frequency of tea consumption and health and mortality: evidence from old Chinese – PubMed (nih.gov)
Associations of Coffee and Tea Consumption with Survival to Age 90 among Older Women – PMC (nih.gov)
Tea and human health: biomedical functions of tea active components and current issues – PMC (nih.gov)
Tea and Its Consumption: Benefits and Risks: Critical Reviews in Food Science and Nutrition: Vol 55, No 7 (tandfonline.com)
Tea Consumption and All-Cause and Cause-Specific Mortality in the UK Biobank: A Prospective Cohort Study: Annals of Internal Medicine: Vol 175, No 9 (acpjournals.org)
Conversation with Dr. Kashyap Dakshini, General physician Mumbai

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.