ರೋಸ್‌ಮೆರಿ ಎಲೆ ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತಾ?

Claim

ರೋಸ್‌ಮೆರಿ ಎಲೆಯನ್ನು ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎನ್ನುವ ಕುರಿತ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತ ಕ್ಲೇಮ್‌ ಹೀಗಿದೆ “ಅಧ್ಯಯನದ ಪ್ರಕಾರ, ರೋಸ್‌ಮೆರಿ ಗಿಡವನ್ನು ಮೂಸುವುದುರಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು ಶೇಕಡ 75ರಷ್ಟು ಹೆಚ್ಚಿಸಬಹುದಾಗಿದೆ. ಪರೀಕ್ಷೆಗೂ ಮುನ್ನ ಈ ಗಿಡವನ್ನು ಮೂಸಿ” ಎಂದು ಬರೆಯಲಾಗಿದೆ.

ರೋಸ್‌ಮೆರಿ ಎಲೆ, ಜ್ಞಾಪಕ ಶಕ್ತಿ ಹೆಚ್ಚಳ, ಆಘ್ರಾಣಿಸುವಿಕೆ
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

ಈ ಕ್ಲೇಮ್‌ ಸತ್ಯವೇ ಎಂಬುದರ ಬಗ್ಗೆ ನ್ಯೂಸ್‌ ಚೆಕರ್‌ ಪರಿಶೀಲನೆ ನಡೆಸಿದ್ದು ಇದು ತಪ್ಪು ಎಂದು ತಿಳಿದುಬಂದಿದೆ.

Fact check/Verification

ರೋಸ್‌ಮೆರಿ ಗಿಡವನ್ನು ಮೂಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎನ್ನುವುದರ ಬಗ್ಗೆ ನಾವು ಕೆಲವೊಂದು ಪರಿಶೀಲನೆಯನ್ನು ನಡೆಸಿದ್ದೇವೆ.

ರೋಸ್‌ಮೆರಿಯನ್ನು Salvia Rosmarinus (ಸ್ಲಾವಿಯಾ ರೋಸ್‌ಮೇರಿನಸ್‌) ಎಂದು ಕರೆಯಲಾಗುತ್ತದೆ. ಇದು ಅದರ ಸಸ್ಯಶಾಸ್ತ್ರೀಯ ಹೆಸರು. ಇದು Lamiaceae (ಲೆಮೇಸಿಯಾಯಿ) ಎಂಬ ಪುದೀನ ಜಾತಿಗೆ ಸೇರಿದ ಸಸ್ಯವಾಗಿದೆ. ಆಹಾರದಲ್ಲಿ ಹೆಚ್ಚಿನ ರುಚಿಯನ್ನು ಉಂಟುಮಾಡಲು ಇದರ ಎಲೆಯನ್ನು ಬಳಸಲಾಗುತ್ತದೆ.

ರೋಸ್‌ಮೆರಿ ಗಿಡವನ್ನು ಮೂಸುವುದರಿಂದ ನೆನೆಪಿನ ಶಕ್ತಿ ಹೆಚ್ಚುತ್ತದೆ ಎನ್ನುವುದಕ್ಕೆ ಯಾವುದೇ ಅಧ್ಯಯನಗಳು ಲಭ್ಯವಿಲ್ಲ. ಲಭ್ಯವಿರುವ ಅಲ್ಪ ಸಂಶೋಧನೆಯು ರೋಸ್‌ಮೆರಿ ನೆನಪಿನ ಶಕ್ತಿಯನ್ನು ಸುಧಾರಣೆ ಮಾಡುವ ಗುಣಲಕ್ಷಣಗಳನ್ನು ಮಾತ್ರ ಅದು ಹೊಂದಿರುವ ಸಾಧ್ಯತೆ ಇದೆ ಎಂದು ಊಹಿಸುತ್ತದೆ. ಆದರೆ ಈ ಸಂಶೋಧನಾ ಲೇಖನಗಳು ರೋಸ್‌ಮೆರಿಯಿಂದಾಗಿ ಕೂಡಲೇ ನೆನಪಿನ ಶಕ್ತಿ ಹೆಚ್ಚುತ್ತದೆಯೇ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿ ಜನರ ಮೇಲೆ ಯಾವುದೇ ಪ್ರಯೋಗಿಕ ಸಂಶೋಧನೆಗಳನ್ನು ನಡೆಸಿಲ್ಲ. ಆದ್ದರಿಂದ ರೋಸ್‌ಮೆರಿಯಿಂದಾಗಿ ನೆನಪಿನ ಶಕ್ತಿ ಹೆಚ್ಚಳವಾಗುತ್ತದೆ ಎಂದು ಲಭ್ಯವಿರುವ ಸಂಶೋಧನೆಗಳ ಪ್ರಕಾರ ಹೇಳಲು ಸಾಧ್ಯವಿಲ್ಲ.

Also Read: ಪರೀಕ್ಷೆಗೆ ಓದುವಾಗ ಡಾರ್ಕ್‌ ಚಾಕಲೆಟ್‌ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತಾ?

ಕಡಿಮೆ ನೆನಪಿನ ಶಕ್ತಿಗೆ ಸಾಮಾನ್ಯವಾಗಿ ಆಹಾರದಲ್ಲಿ ಸಾಚ್ಯುರೇಟೆಡ್‌ ಮತ್ತು ಟ್ರಾನ್ಸ್‌ಫ್ಯಾಟ್‌ಗಳು ಹೆಚ್ಚಿರುವುದು ಸಂಬಂಧ ಹೊಂದಿರುತ್ತದೆ. ಹಾರ್ವರ್ಡ್‌ ಹೆಲ್ತ್‌ ಪ್ರಕಟಿಸಿದ ಒಂದು ಲೇಖನದಲ್ಲಿ, ಹೆಚ್ಚು ಸಾಚ್ಯುರೇಟೆಡ್ ಮತ್ತು ಟ್ರಾನ್ಸ್‌ಫ್ಯಾಟ್‌ ಆಹಾರಕ್ಕೆ ಸಂಬಂಧವಿರುವುದು ಅಷ್ಟು ಸ್ಪಷ್ಟವಾಗಿ ಚಿತ್ರಿತವಾಗಿಲ್ಲ. ಈ ಲೇಖನವು ಅಪೋಲಿಪೊಪ್ರೊಟಿನ್‌ ಇ ಜೀನ್‌ನಿಂದಾಗಿ ಮಧ್ಯಸ್ಥಿಗೆ ವಹಿಸಬಹುದು ಎಂದು ಹೇಳುತ್ತದೆ. ಈ ಜೀನ್‌ ಕೊಲೆಸ್ಟರಾಲ್‌ ಮತ್ತು ಅಲ್ಜೈಮರ್‌ಗೆ ಕಾರಣವಾಗುವ ಜೀನ್‌ಗಳನ್ನು ನಿಯಂತ್ರಿಸುತ್ತದೆ. ಒಂದು ವೇಳೆ ಸ್ಮರಣ ಶಕ್ತಿ ಕಡಿಮೆಯಾಗುತ್ತಿದ್ದರೆ, ವೈದ್ಯರನ್ನು ಭೇಟಿಯಾಗುವುದು ಉತ್ತಮವಾದ ವಿಧಾನವಾಗಿದೆ.

Conclusion

ಈ ಸತ್ಯಶೋಧನೆಯ ಪ್ರಕಾರ ರೋಸ್‌ಮೆರಿ ಗಿಡವನ್ನು ಆಘ್ರಾಣಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನವುದು ಸುಳ್ಳಾಗಿದೆ.

Result: False

(This article has been published in collaboration with THIP Media)

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.