Fact Check: ಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದೇ, ಇದರಲ್ಲಿ ಸತ್ಯಾಂಶ ಇದೆಯೇ?

ಬೆಲ್ಲ, ಮಧುಮೇಹ,

Claim
ಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದು

Fact
ಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಬೆಲ್ಲದಲ್ಲೂ ಸಕ್ಕರೆಯ ಅಂಶ ಇರುವುದರಿಂದ ನಿತ್ಯ ಬೆಲ್ಲ ತಿಂದರೆ ಕಾಯಿಲೆ ಪರಿಸ್ಥಿತಿ ಬಿಗಡಾಯಿಸಬಹುದು.

ಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದು ಎನ್ನುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ನಲ್ಲಿ “ಬೆಲ್ಲ ತಿಂದರೆ ರಕ್ತ ಶುದ್ಧಿಯಾಗುತ್ತದೆ. ಪ್ರತಿದಿನ ಊಟದ ನಂತರ ಬೆಲ್ಲವನ್ನು ತಿನ್ನುವುದರಿಂದ ಹೊಟ್ಟೆಯು ತಂಪಾಗಿರುತ್ತದೆ ಮತ್ತು ಗ್ಯಾಸ್‌ ಬರುವುದಿಲ್ಲ. ಮತ್ತು ಮಧುಮೇಹ ಕಾಯಿಲೆಯನ್ನು ತಡೆಗಟ್ಟಬಹುದು” ಎಂದು ಹೇಳಲಾಗಿದೆ.  

ಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಬಹುದೇ

ನ್ಯೂಸ್‌ಚೆಕರ್‌ ಈ ಕ್ಲೇಮಿನ ಸತ್ಯಶೋಧನೆಯನ್ನು ನಡೆಸಿದ್ದು ಇದು ತಪ್ಪು ಎಂದು ಕಂಡುಬಂದಿದೆ. 

Fact Check/ Verification

ಬೆಲ್ಲ ತಿಂದರೆ ಸಕ್ಕರೆ ಕಾಯಿಲೆ ತಡೆಗಟ್ಟಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಬೆಲ್ಲದಲ್ಲಿ ಸಕ್ಕರೆಯಿಂದ ಹೆಚ್ಚು ಪೋಷಕಾಂಶಗಳಿವೆ. ಆದ್ದರಿಂದ ರಿಫೈನ್ಡ್ ಸಕ್ಕರೆಯಿಂದ ಬೆಲ್ಲ ತಿನ್ನುವುದು ಹೆಚ್ಚು ಉತ್ತಮವಾಗಿದೆ. 

ಮೊಲಾಸೆಸ್‌ ಎನ್ನವುದು ಪೌಷ್ಟಿಕ ಅಂಶವಾಗಿದ್ದು, ಸಾಮಾನ್ಯವಾಗಿ ಸಕ್ಕರೆ ತಯಾರಿಕೆ ವೇಳೆ ಇದನ್ನು ತೆಗೆಯಲಾಗುತ್ತದೆ. ಇದರೊಂದಿಗೆ ಉತ್ಪನ್ನ ತಯಾರಿಕೆಯ ಕೊನೆಯ ಹಂತದಲ್ಲಿ ಸ್ವಲ್ಪ ಪ್ರಮಾಣದ ಮೊಲಾಸಸ್‌ ನನ್ನು ಸಕ್ಕರೆಗೆ ಸೇರಿಸಲಾಗುತ್ತದೆ. ಈ ಸಿಹಿಕಾರಕದ ನಿಖರವಾದ ಪೌಷ್ಟಿಕ ಅಂಶಗಳು ಸಕ್ಕರೆ ತಯಾರಿಕೆಗೆ ಬಳಸುವ ಮೂಲವಸ್ತುವನ್ನು ಅವಲಂಬಿಸಿ ಉದಾಹರಣೆಗೆ ಕಬ್ಬು, ತಾಳೆಯನ್ನು ಅವಲಂಬಿಸಿ ಬದಲಾಗಬಹುದು. 

Also Read: ಬಿಯರ್‌ ಕುಡಿದರೆ ಆರೋಗ್ಯಕ್ಕೆ ಪ್ರಯೋಜನವಿದೆಯೇ? ವೈರಲ್‌ ಕ್ಲೇಮ್‌ ಹಿಂದಿನ ಸತ್ಯ ಏನು?

ಸಂಶೋಧನಾ ವರದಿಯೊಂದರ ಪ್ರಕಾರ, 100 ಗ್ರಾಂ ಅಥವಾ ಒಂದು ಕಪ್‌ ಬೆಲ್ಲದಲ್ಲಿ ಈ ಪೌಷ್ಟಿಕಾಂಶಗಳು ಇರಬಹುದು. 

  • ಕ್ಯಾಲೊರಿ 383
  • ಸುಕ್ರೋಸ್‌ 65-86 ಗ್ರಾಂ
  • ಪ್ರುಕ್ಟೋಸ್‌ ಮತ್ತು ಗ್ಲೂಕೋಸ್‌ 10-15 ಗ್ರಾಂ
  • ಪ್ರೊಟೀನ್‌ 0.4 ಗ್ರಾಂ
  • ಫ್ಯಾಟ್‌ 0.1 ಗ್ರಾಂ
  • ಕಬ್ಬಿಣಾಂಶ 11 ಎಂಜಿ ಅಥವಾ ಆರ್‌ಡಿಐನ ಶೇ.61ರಷ್ಟು 
  • ಮೆಗ್ನೀಶಿಯಂ 70-90 ಎಂಜಿ ಅಥವಾ ಆರ್‌ಡಿಐನ ಶೇ.20ರಷ್ಟು 
  • ಪೊಟಾಶಿಯಂ 1050 ಎಂಜಿ ಅಥವಾ ಆರ್‌ಡಿಐ
  • ಇದರೊಂದಿಗೆ ಬೆಲ್ಲದಲ್ಲಿ ವಿಟಮಿನ್‌ ಬಿ, ಕ್ಯಾಲ್ಸಿಯಂ, ಝಿಂಕ್‌, ಫಾಸ್ಫರಸ್‌ ಮತ್ತು ತಾಮ್ರದಂತಹ ಖನಿಜಗಳಿವೆ. 

ಕೊನೆಯದಾಗಿ, ಬೆಲ್ಲ ಅಂದರೆ ಅದರಲ್ಲಿರುವುದು ಸಕ್ಕರೆಯ ಅಂಶ. ಸಕ್ಕರೆ ಕಾಯಿಯನ್ನು ನಿಯಂತ್ರಿಸದೆ, ನಿಯಮಿತವಾಗಿ ಬೆಲ್ಲವನ್ನು ತಿನ್ನುವುದರಿಂದ ಪರಿಸ್ಥಿತಿ ಬಿಗಡಾಯಿಸುವ ಅಪಾಯವಿದೆ. 

Conclusion

ಸತ್ಯಶೋಧನೆಯ ಪ್ರಕಾರ, ಬೆಲ್ಲ ತಿನ್ನುವುದರಿಂದ ಸಕ್ಕರೆ ಕಾಯಿಲೆ ತಡೆಗಟ್ಟಲು ಸಾಧ್ಯ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಈ ಕ್ಲೇಮ್‌ ತಪ್ಪಾಗಿದೆ.

Result: False

(This article has been published in collaboration with THIP Media)

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.