Authors
Claim
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಇಸ್ಲಾಮಿಕ್ ಮತಾಂಧರಿಂದ ಬಿಜೆಪಿ ಧ್ವಜದ ಮೇಲೆ ಗೋಹತ್ಯೆಗೈದು ಸಂಭ್ರಮ
Fact
ಬಿಜೆಪಿ ಧ್ವಜದ ಮೇಲೆ ಹಸುವನ್ನು ಕಡಿದ ಘಟನೆ ಕರ್ನಾಟಕದ್ದಲ್ಲ. ಇದು 2022ರಲ್ಲಿ ಮಣಿಪುರದಲ್ಲಿ ನಡೆದ ಘಟನೆಯಾಗಿದೆ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಹಲವು ರೀತಿಯ ಕ್ಲೇಮುಗಳು ಹರಿದಾಡಿವೆ. ಈ ಗೆಲುವಿನ ಹಿನ್ನೆಲೆಯಲ್ಲಿ ಹಸುವನ್ನು ಕಡಿದು ಸಂಭ್ರಮಿಸಿದರು ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ಹರಿದಾಡಿದೆ.
ಟ್ವಿಟರ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಇಸ್ಲಾಮಿಕ್ ಮತಾಂಧರು ಬಿಜೆಪಿ ಧ್ವಜದ ಮೇಲೆ ಹಸುವಿನ ಕೊರಳನ್ನು ಕತ್ತರಿಸಿ ವಿಜಯೋತ್ಸವ ಆಚರಿಸಿದರು” ಎಂದಿದೆ. ಈ ಟ್ವೀಟ್ ಇಲ್ಲಿದೆ.
Also Read: ಭಟ್ಕಳ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆಯೇ? ಇಲ್ಲ, ಈ ಕ್ಲೇಮ್ ಸುಳ್ಳು
ಈ ಕುರಿತು ಸತ್ಯಶೋಧನೆಯನ್ನು ನಡೆಸಿದ್ದು, ಇದೊಂದು ಸುಳ್ಳು ಕ್ಲೇಮ್ ಎಂದು ಕಂಡುಬಂದಿದೆ.
Fact Check/ Verification
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಹಲವು ಮಾಧ್ಯಮ ವರದಿಗಳು ಲಭ್ಯವಾಗಿವೆ.
ಫೆಬ್ರವರಿ 2, 2022ರ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, “ಬಿಜೆಪಿ ಧ್ವಜದ ಮೇಲೆ ಹಸುವನ್ನು ಸಾರ್ವಜನಿಕವಾಗಿ ಹತ್ಯೆಗೈದ ಮೂವರನ್ನು ಮಣಿಪುರದ ತೌಬಾಲ್ ಜಿಲ್ಲೆಯ ಲಿಲಾಂಗ್ ಪ್ರದೇಶದ ಮೈತೇಯ್ ಪಾಂಗಲ್ (ಮೈತೇಯ್ ಮುಸ್ಲಿಂ)ಬಾಹುಳ್ಯದ ಪ್ರದೇಶದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಹಸು ಹತ್ಯೆ ಯ ವೀಡಿಯೋದಲ್ಲಿ ಎನ್ ಬಿರೇನ್ ಸಿಂಗ್ ಮತ್ತು ಮಣಿಪುರ ಬಿಜೆಪಿ ಅಧ್ಯಕ್ಷೆ ಎ ಶಾರದಾ ದೇವಿ ಅವರನ್ನು ನಿಂದಿಸುವ ಆಡಿಯೋ ಇದೆ. ನಝ್ವಬುಲ್ ಹುಸೇನ್, ಅಬ್ದುಲ್ ರಶೀದ್, ಎಮ್‌ಡಿ ಆರಿಫ್ ಖಾನ್ ವಿರುದ್ಧ ಲಿಲಾಂಗ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಕೇಸು ದಾಖಲಿಸಿದ್ದಾಗಿ” ವರದಿ ಹೇಳಿದೆ
ಜನವರಿ 31, 2022ರ ಇಂಫಾಲ್ ಫ್ರೀ ಪ್ರೆಸ್ ವರದಿಯ ಪ್ರಕಾರ, “ಮಣಿಪುರ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದರ ವಿರುದ್ಧ ಆಕ್ರೋಶಿತಗೊಂಡ ಗ್ರಾಮಸ್ಥರು ಬಿಜೆಪಿ ಧ್ವಜದ ಮೇಲೆ ಹಸುವನ್ನು ಕಡಿದಿದ್ದಾರೆ. ರವಿವಾರದಂದು ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಟಿಕೆಟ್ ಆಕಾಂಕ್ಷಿಗಳಾಗಿ, ಸಿಗದೇ ಇದ್ದ ನಾಯಕರ ಬೆಂಬಲಿಗರು ಬಿಜೆಪಿ ಧ್ವಜವನ್ನು ಹರಿಯುವುದು, ಬೆಂಕಿ ಹಾಕುವುದು ಮತ್ತು ಬ್ಯಾನರ್‌ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸುವನ್ನು ಕಡಿದ ವೈರಲ್ ವೀಡಿಯೋದಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ವಿರುದ್ಧ ಘೋಷಣೆ ಕೇಳಿದೆ” ಎಂದು ವರದಿ ತಿಳಿಸಿದೆ.
ಜನವರಿ 31, 2022ರ ಒಪಿಇಂಡಿಯಾ ವರದಿ ಪ್ರಕಾರ, ಲಿಲಾಂಗ್ ಪೊಲೀಸರು ಬಿಜೆಪಿ ಧ್ವಜದ ಮೇಲೆ ಹಸು ಹತ್ಯೆಗೈದ ಮೂವರು ಯುವಕರನ್ನು ಬಂಧಿಸಿದ್ದಾರೆ. ಇವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಹರಿಯಬಿಟ್ಟಿದ್ದರು. ಯುವಕರು ಬೆಂಬಲಿಸುವ ವ್ಯಕ್ತಿಗೆ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇರುವ ಕಾರಣದಿಂದ ಈ ಕೃತ್ಯ ಎಸಗಿದ್ದಾರೆ. ಇದರೊಂದಿಗೆ ವೈರಲ್ ವೀಡಿಯೋದಲ್ಲಿ ಸುಮಾರು 10 ಮಂದಿ ಇದ್ದು, ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್, ಬಿಜೆಪಿ ಅಧ್ಯಕ್ಷೆ ಎ ಶಾರದಾ ದೇವಿ ಅವರನ್ನು ನಿಂದಿಸುವುದು ಕಂಡುಬಂದಿದೆ” ಎಂದಿದೆ. ಇದೇ ವರದಿಯಲ್ಲಿ ಲಿಲಾಂಗ್ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿದ್ದಾರ ಎಂದು ಹೇಳಲಾಗಿದ್ದು “ಎಫ್‌ಐಆರ್ ಸಂಖ್ಯೆ 10(01)2022” ಎಂದು ಹೇಳಲಾಗಿದೆ.
Also Read:
ಇದನ್ನು ಆಧರಿಸಿ ಮಣಿಪುರ ಪೊಲೀಸ್ ವೆಬ್‌ಸೈಟ್‌ನಲ್ಲಿ ಮೂಲ ಎಫ್‌ಐಆರ್ ಪ್ರತಿಯನ್ನು ಶೋಧಿಸಲಾಗಿದೆ. ಅದು ಇಲ್ಲಿದ್ದು, ವರದಿಗಳಲ್ಲಿ ಹೇಳಿರುವ ಘಟನೆಗೆ ಸಾಮ್ಯತೆಯನ್ನು ಹೊಂದಿರುವುದು ತಿಳಿದುಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಟ್ವೀಟ್ ಪ್ರತಿಕ್ರಿಯೆಯನ್ನು ಎನ್ ಬಿರೇನ್ ಸಿಂಗ್ ಅವರು ನೀಡಿದ್ದು ಅದು ಇಲ್ಲಿದೆ.
Also Read: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ವೇಳೆ ಕಾಂಗ್ರೆಸ್‌ನಿಂದ ವಂಚನೆ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Conclusion
ಈ ಸತ್ಯಶೋಧನೆಯ ಪ್ರಕಾರ ಹಸುವನ್ನು ಕಡಿದ ಘಟನೆ ಕರ್ನಾಟಕದ್ದಲ್ಲ. ಇದು ಮಣಿಪುರದಲ್ಲಿ ನಡೆದಿದ್ದಾಗಿದ್ದು 2022ರ ಹೊತ್ತಿನದ್ದು. ಆದ್ದರಿಂದ ಈ ಕ್ಲೇಮ್ ತಪ್ಪಾಗಿದೆ.
Result: False
Our Sources
Report By Times of India, Dated: February 2, 2022
Report By Imphal Free Press, Dated: January 31, 2022
Report By OPIndia, Dated: January 31, 2022
Tweet By N Biren Singh, Dated February 1, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.