Authors
Claim
ಫ್ರಾನ್ಸ್ ಹಿಂಸಾಚಾರ ವೇಳೆ ಗಲಭೆಕೋರರು ಕಟ್ಟಡದಿಂದ ಕಾರುಗಳನ್ನು ದೂಡಿ ಹಾಕಿದರು
Fact
ಇದು ಫ್ರಾನ್ಸ್ ಗಲಭೆಯ ದೃಶ್ಯವಲ್ಲ. ಈ ವೀಡಿಯೋವನ್ನು ಕ್ಲೀವ್ ಲ್ಯಾಂಡ್‌ನಲ್ಲಿ 2016ರಲ್ಲಿ ತೆಗೆದಿದ್ದು “ಫಾಸ್ಟ್ ಆಂಡ್ ಫ್ಯೂರಿಯಸ್ 8” ಚಿತ್ರದ ದೃಶ್ಯೀಕರಣದ ವಿಡಿಯೋವಾಗಿದೆ.
ಹದಿಹರೆಯದ ಬಾಲಕನನ್ನು ಪೊಲೀಸರು ಗುಂಡಿಕ್ಕಿ ಕೊಂದ ಹಿನ್ನೆಲೆಯಲ್ಲಿ ಪ್ರಸ್ತುತ ಫ್ರಾನ್ಸ್‌ನ ಪ್ಯಾರಿಸ್ ಮತ್ತು ಇತರ ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಇದೇ ಹೊತ್ತಿನಲ್ಲಿ ದಂಗೆಕೋರರು ಎತ್ತರದ ಕಟ್ಟಡದಿಂದ ಕಾರುಗಳು ತಳ್ಳಿದ್ದಾರೆ ಎಂದು ಹೇಳುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ಕುರಿತ ಟ್ವೀಟ್ ಇಲ್ಲಿದೆ.
Also Read: ಮೋದಿ ಸರ್ಕಾರ ಸ್ತನ ಕ್ಯಾನ್ಸರ್ ಔಷಧ ಬೆಲೆಯನ್ನು ₹95 ಸಾವಿರದಿಂದ ₹5 ಸಾವಿರಕ್ಕೆ ಇಳಿಸಿದೆಯೇ?
ಫ್ರಾನ್ಸ್‌ನಲ್ಲಿ ಹಿಂಸಾಚಾರ
ಜೂನ್ 27ರ ಬೆಳಗ್ಗೆ ನಿಯಮಿತ ಸಂಚಾರ ತಪಾಸಣೆಯ ಸಮಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು 17 ವರ್ಷದ ಚಾಲಕನನ್ನು ಗುಂಡಿಕ್ಕಿ ಕೊಂದ ನಂತರ ಫ್ರಾನ್ಸ್ ನಾಂಟೆರೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿತ್ತು. ಮಾರ್ಸಿಲ್ಲೆ, ಲಿಯಾನ್, ಗ್ರೆನೋಬಲ್ ಮತ್ತು ಪ್ಯಾರಿಸ್‌ನ ಕೆಲವು ಭಾಗಗಳಲ್ಲಿ ಗಲಭೆಗಳು ವ್ಯಾಪಕವಾಗಿ ನಡೆದಿದ್ದು, ಆ ಬಳಿಕ ದೇಶಾದ್ಯಂತ 1,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅಲ್ಜೀರಿಯಾ ಮೂಲದ ನಹೇಲ್ ಮೆರ್ಜೌಕ್ ಎಂಬಾತನ ಸಾವು ಸಾವು ಫ್ರಾನ್ಸ್ ನಲ್ಲಿ ಜನಾಂಗೀಯ ಅಸಮಾನತೆ ಮತ್ತು ಪೊಲೀಸ್ ತಾರತಮ್ಯದ ಬಗ್ಗೆ ರೋಷ, ಹೇಳಿಕೆಗಳಿಗೆ ಕಾರಣವಾಗಿದೆ.
Fact Check/Verification
ನ್ಯೂಸ್ಚೆಕರ್ ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ. ಈ ವೇಳೆ ಜುಲೈ 1, 2023 ರ ಟ್ವೀಟ್ ಪತ್ತೆಯಾಗಿದೆ. ಅದರ ಪ್ರಕಾರ, ವೀಡಿಯೊವು ಫಾಸ್ಟ್ ಅಂಡ್ ಫ್ಯೂರಿಯಸ್ ಚಲನಚಿತ್ರದ್ದಾಗಿದೆ ಎಂದು ಹೇಳಿದೆ.
ಇದನ್ನು ಗಮನಿಸಿ, ನಾವು ಮತ್ತಷ್ಟು ಕೀವರ್ಡ್ ಸರ್ಚ್ ಗಳನ್ನು ನಡೆಸಿದ್ದು, ಇದು ವೈರಲ್ ವೀಡಿಯೋ ಇರುವ ಜೂನ್ 3, 2016 ರ ಈ ಟ್ವೀಟ್ ಲಭ್ಯವಾಗಿದೆ.
ಜೂನ್ 12, 2016 ರಂದು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾದ ಫಾಕ್ಸ್ ನ್ಯೂಸ್ ವರದಿ ಕೂಡ ನಮಗೆ ಲಭ್ಯವಾಗಿದೆ. ವೈರಲ್ ವೀಡಿಯೋ 00:07 ಅವಧಿಯಷ್ಟಿದೆ. ಅದು ಅಮೆರಿಕದ ಓಹಿಯೋದ ಕ್ಲೀವ್ಲ್ಯಾಂಡ್ನಲ್ಲಿ ನಡೆದ ಫಾಸ್ಟ್ ಅಂಡ್ ಫ್ಯೂರಿಯಸ್ 8 ಚಿತ್ರದ ಚಿತ್ರೀಕರಣದ ದೃಶ್ಯಗಳಾಗಿವೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಖ್ಯಾತಿ ಪಡೆದ ಚಲನಚಿತ್ರ ಫಾಸ್ಟ್ ಅಂಡ್ ಫ್ಯೂರಿಯಸ್ ನ ಎಂಟನೇ ಆವೃತ್ತಿ, “ದಿ ಫೇಟ್ ಆಫ್ ದಿ ಫ್ಯೂರಿಯಸ್” ಏಪ್ರಿಲ್ 12, 2017 ರಂದು ಬಿಡುಗಡೆಯಾಗಿದೆ.
Also Read: ಗೋಮಾಂಸ ರಫ್ತಿನಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಿಂಗ್ ಆಗಿದ್ದಾರೆಯೇ, ಸತ್ಯ ಏನು?
ನಂತರ ನಾವು ಜೂನ್ 4, 2016 ರ ದಿ ಮಿರರ್ ವರದಿಯನ್ನು ನೋಡಿದ್ದೇವೆ. ಅದರಲ್ಲಿ ದಿ ಫಾಸ್ಟ್ ಅಂಡ್ ಫ್ಯೂರಿಯಸ್ ತಂಡವು ಇತ್ತೀಚಿನ ಚಲನಚಿತ್ರವಾದ ಫಾಸ್ಟ್ 8 ಗಾಗಿ ಅತ್ಯಂತ ಸಾಹಸಿಕ ದೃಶ್ಯಗಳಲ್ಲಿ ಒಂದನ್ನು ಚಿತ್ರೀಕರಿಸಿದೆ ಎಂದು ಹೇಳುತ್ತದೆ ಮತ್ತು ಏಪ್ರಿಲ್ 2017 ರಂದು ಬಿಡುಗಡೆಗೆ ಉದ್ದೇಶಿಸಲಾಗಿದೆ ಎಂದು ಇದು ಹೇಳುತ್ತದೆ.
ಈ ವರದಿಯ ಪ್ರಕಾರ, ಓಹಿಯೋದ ಕ್ಲೀವ್ಲ್ಯಾಂಡ್ನ ಬೀದಿಗಳಲ್ಲಿ ಚಲನಚಿತ್ರ ತಂಡ ಸಾಹಸಿಕ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿದ್ದ ವೇಳೆ ಸ್ಥಳೀಯರೊಬ್ಬರು ಹತ್ತಿರದ ಕಟ್ಟಡದಿಂದ ಈ ದೃಶ್ಯವನ್ನು ತೆಗೆದು ಅಪ್ಲೋಡ್ ಮಾಡಿದ್ದಾರೆ.
“ಈ ದೃಶ್ಯದಲ್ಲಿ ಸಾಮಾನ್ಯ ರೀತಿಯ ಕಟ್ಟಡ ಕಾಣಿಸುತ್ತದೆ. ಏಕಾಏಕಿ ಎಲ್ಲಿಂದಲೋ ಬಂದ ವಾಹನಗಳು ಕಟ್ಟಡದ ಕಾರ್ ಪಾರ್ಕಿಂಗ್ ಪ್ರದೇಶದ ಒಳಗಿನಿಂದ ಹೊರಕ್ಕೆ ಬೀಳುವುದು ಕಾಣುತ್ತದೆ” ಎಂದು ವರದಿಯಲ್ಲಿ ಹೇಳಲಾಗಿದೆ. ಇದು ವೈರಲ್ ವೀಡಿಯೋದ ಅದೇ ದೃಶ್ಯವನ್ನು ದೃಢಪಡಿಸುತ್ತದೆ. ಇದೇ ರೀತಿಯ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Also Read: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್
Conclusion
ಕ್ಲೀವ್ಲ್ಯಾಂಡ್ನಲ್ಲಿ ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರಕ್ಕಾಗಿ ನಡೆದ ಸಾಹಸಮಯ ದೃಶ್ಯದ ಚಿತ್ರೀಕರಣದ ವೀಡಿಯೋವನ್ನು ಫ್ರಾನ್ಸ್ ಹಿಂಸಾಚಾರಕ್ಕೆ ಸಂಬಂಧ ಕಲ್ಪಿಸಿರುವುದು ಸತ್ಯಶೋಧನೆಯಲ್ಲಿ ಸಾಬೀತಾಗಿದೆ.
Result: False
Our Sources
Tweet, Justin King, June 3, 2016
The Mirror report, June 4, 2016
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.