Authors
ಗೋಮಾಂಸ ರಫ್ತು ಉದ್ಯಮವನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರಂಭಿಸಿದ್ದಾರೆ ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸತ್ಯಶೋಧನೆ ವೇಳೆ ಇದು ಸುಳ್ಳು ಎಂಬುದನ್ನು ನ್ಯೂಸ್‌ಚೆಕರ್ ಸಾಬೀತು ಪಡಿಸಿದೆ. ಇದೇ ರೀತಿ ಕಾಶ್ಮೀರ ಹೈವೇ ಎಂದು ಚೀನ ಹೆದ್ದಾರಿಯ ಫೋಟೋ ಹಾಕಿ ಸುಳ್ಳು ಬಿತ್ತರಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ದೇಗುಲ ಸಮೀಪ ನದಿಯಲ್ಲಿ ನಾಗ ಪ್ರತ್ಯಕ್ಷ, ಮೋದಿ ಸ್ತನ ಕ್ಯಾನ್ಸರ್ ಔಷಧ ಬೆಲೆಯನ್ನು ₹95 ಸಾವಿರ ದಿಂದ 5 ಸಾವಿರಕ್ಕೆ ಇಳಿಸಿದೆ ಎಂಬ ಹೇಳಿಕೆಯೂ ಈ ವಾರ ಹರಿದಾಡಿತ್ತು. ಆದರೆ ಇವುಗಳು ಸತ್ಯಕ್ಕೆ ದೂರವಾದದ್ದು ಎಂಬುದನ್ನು ಸತ್ಯಶೋಧನೆ ವೇಳೆ ನ್ಯೂಸ್‌ಚೆಕರ್ ಬಹಿರಂಗಪಡಿಸಿದೆ.
ಗೋಮಾಂಸ ರಫ್ತಿನಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಿಂಗ್ ಆಗಿದ್ದಾರೆಯೇ, ಸತ್ಯ ಏನು?
ದೇಶದ ಅತಿ ದೊಡ್ಡ ಗೋಮಾಂಸ ಉದ್ಯಮ ಪ್ರಾರಂಭಿಸಿದ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಮಾಲೀಕ ಹಾಗೂ ಬಿಜೆಪಿ ಸಂಸದ ರಾಜೀವ್ ಚಂದ್ರ ಶೇಖರ್ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸುದ್ದಿಯನ್ನು ಕನ್ನಡಪ್ರಭ ಪತ್ರಿಕೆಯ ಹೆಸರಿನಲ್ಲಿ ಪ್ರಚಾರ ಮಾಡಲಾಗಿತ್ತು. ಇದನ್ನು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ ವೇಳೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಗೋಮಾಂಸದ ಉದ್ಯಮವನ್ನು ಹೊಂದಿಲ್ಲ ಮತ್ತು ಈ ಕುರಿತು ಕನ್ನಡಪ್ರಭ ಹೆಸರಿನಲ್ಲಿ ಪ್ರಕಟಿಸಿದ ವರದಿ ಸುಳ್ಳು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಕಾಶ್ಮೀರ ಹೈವೇ ಎಂದು ಚೀನ ಹೆದ್ದಾರಿ ಫೋಟೋ ವೈರಲ್
ಜಮ್ಮು ಮತ್ತು ಕಾಶ್ಮೀರ ಹೈವೇ ಎಂದು ಹೆದ್ದಾರಿಯೊಂದರ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಹೇಳಿಕೆ ಸತ್ಯಾಸತ್ಯತೆ ಪರಿಶೀಲನೆಗೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಇದು ಜಮ್ಮು-ಕಾಶ್ಮೀರದ ಹೆದ್ದಾರಿ ಚಿತ್ರವಲ್ಲ; ಇದು ಚೀನಾದ ಗಾನ್ಸು ಪ್ರಾಂತ್ಯದ ವೀಯುವಾನ್-ವುಡು ಎಕ್ಸ್‌ಪ್ರೆಸ್ ವೇ ಯ ಫೋಟೋ ಎಂದು ವಿವಿಧ ತಿಳಿದುಬಂದಿದೆ. ವಿವಿಧ ಮಾಧ್ಯಮಗಳು ಈ ಫೋಟೋದ ನಿಜವಾದ ಪ್ರದೇಶ ಬಗ್ಗೆ ವರದಿಗಳಲ್ಲಿ ಹೇಳಿರುವುದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಇ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಸುಬ್ರಹ್ಮಣ್ಯ ದೇಗುಲ ಸನಿಹದ ನದಿಯಲ್ಲಿ ನಾಗ ಪ್ರತ್ಯಕ್ಷ ಎನ್ನುವುದು ನಿಜವೇ?
ನಾಡಿನ ಖ್ಯಾತ ಸುಬ್ರಹ್ಮಣ್ಯ ದೇಗುಲ, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ದೇಗುಲ ಸನಿಹದ ನದಿಯಲ್ಲಿ ದೊಡ್ಡ ನಾಗ ಪ್ರತ್ಯಕ್ಷವಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದಾಗ, ಇದು ಸುಳ್ಳು ಎಂದು ತಿಳಿದುಬಂದಿದೆ. ಸತ್ಯಶೋಧನೆಗೆ ನಾವು ದೇಗುಲದ ಕಾರ್ಯನಿರ್ವಹಣಾಧಿಕಾರಿ, ಸ್ಥಳೀಯರನ್ನು ಸಂಪರ್ಕಿಸಿದ್ದು, ಸುಳ್ಳು ಎಂದು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮೋದಿ ಸರ್ಕಾರ ಸ್ತನ ಕ್ಯಾನ್ಸರ್ ಔಷಧ ಬೆಲೆಯನ್ನು ₹95 ಸಾವಿರದಿಂದ ₹5 ಸಾವಿರಕ್ಕೆ ಇಳಿಸಿದೆಯೇ?
ಮಹಿಳೆಯರನ್ನು ಅತಿ ಹೆಚ್ಚಾಗಿ ಕಾಡುವ ಸ್ತನ ಕ್ಯಾನ್ಸರ್ ಔಷಧ ದರ ಇಳಿಕೆ ಕುರಿತಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ (ಐಬ್ರಾನ್ಸ್) ಪಾಲ್ಬೊಕ್ಲಿಸಿಬ್ (ಇದು ಜೆನರಿಕ್ ಹೆಸರು) ಔಷಧದ ಬೆಲೆಯನ್ನು ಮೋದಿ ಸರ್ಕಾರ ₹95 ಸಾವಿರಗಳಿಂದ ₹5 ಸಾವಿರಗಳಿಗೆ ಇಳಿಸಿದೆ ಎಂದು ಹೇಳಲಾಗಿತ್ತು. ಸತ್ಯಶೋಧನೆ ವೇಳೆ ಕೇಂದ್ರ ಸರ್ಕಾರ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಪಾಲ್ಬೊಕ್ಲಿಸಿಬ್ ಔಷಧದ ಬೆಲೆಯನ್ನು ಇಳಿಸಿಲ್ಲ, ಬದಲಾಗಿ ಇದರ ಪೇಟೆಂಟ್ ಅವಧಿ ಜನವರಿ 10ಕ್ಕೆ ಮುಕ್ತಾಯವಾಗಿದ್ದು, ಇನ್ನು ಜೆನೆರಿಕ್ ಔಷಧ ತಯಾರಿಕೆಯಾಗಲಿದೆ. ಆದ್ದರಿಂದ ಔಷಧ ಬೆಲೆ ಮಾಸಿಕ ₹5 ಸಾವಿರ ಒಳಗೆ ಆಗಲಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.