Authors
Claim
ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್ ದಿರಿಸಿನಲ್ಲಿ
Fact
ಕುಕಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಆರೋಪಿಗಳು ಇವರಲ್ಲ. ಇವರು ಮಣಿಪುರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಅವರ ಪುತ್ರ. ಈ ಸುಳ್ಳು ಸುದ್ದಿಯ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ
ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಮತ್ತು ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ ಆರೆಸ್ಸೆಸ್ ಸಮವಸ್ತ್ರದಲ್ಲಿದ್ದ ಇಬ್ಬರು ಪುರುಷರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇಬ್ಬರು ಕುಕಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪುರುಷರ ಗುಂಪಿನಲ್ಲಿ ಇವರಿಬ್ಬರು ಸೇರಿದ್ದಾರೆ ಎಂದು ಹಲವರು ಹೇಳಿದ್ದಾರೆ.
ಏತನ್ಮಧ್ಯೆ ಬಿ.ಫೈನೋಮ್ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲಾಗಿಸಿ ಎಳೆದೊಯ್ಯುತ್ತಿರುವ ವೈರಲ್ ವೀಡಿಯೋದ ಪ್ರಕರಣಕ್ಕೆ ಸಂಬಂಧಿಸಿ. ಆ ವೀಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಟ್ವೀಟ್ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಮಣಿಪುರ ರಾಜ್ಯದಲ್ಲಿ ಮಹಿಳೆಯರ ಬೆತ್ತಲೆಯಾಗಿ ಮೆರವಣಿಗೆ ಕರಾಳ ವ್ಯಕ್ತಿಗಳು ಇವರೆ… ನಕಲಿ ದೇಶ ಭಕ್ತರು ! ಇದೇ ಅಸ್ಲಿಯತ್ತು.?” ಎಂದು ಹೇಳಲಾಗಿದೆ.
Also Read: ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆಯೇ ಪ್ರವಾಹ, ವೈರಲ್ ವೀಡಿಯೋ ನಿಜವೇ?
ಆರ್ಕೈವ್ ಮಾಡಲಾದ ಟ್ವೀಟ್ ಇಲ್ಲಿದೆ.
ಇದೇ ರೀತಿ ಫೇಸ್ಬುಕ್ ಪೋಸ್ಟ್ ಕೂಡ ಕಂಡುಬಂದಿದ್ದು ಅದು ಇಲ್ಲಿದೆ.
ಇದರೊಂದಿಗೆ ಸಿಪಿಐ (ಎಂ) ನಾಯಕಿ ಸುಭಾಷಿಣಿ ಅಲಿ ಕೂಡ “ಅವರು ಮಣಿಪುರದ ಆರೋಪಿಗಳು. ಅವರ ಬಟ್ಟೆಗಳಿಂದ ಅವರನ್ನು ಗುರುತಿಸಿ.” ಎಂದು ಹೇಳಿದ್ದರು. ಆ ವ್ಯಕ್ತಿಗಳಿಬ್ಬರು ಧರಿಸಿದ್ದ ಆರೆಸ್ಸೆಸ್ನ ಹಳೆಯ ಸಮವಸ್ತ್ರವನ್ನು ಉಲ್ಲೇಖಿಸಿದ ಅಲಿ, ಈಶಾನ್ಯ ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ ಆರೆಸ್ಸೆಸ್ ಭಾಗಿಯಾಗಿದೆ ಎಂಬಂತೆ ಮಾತನಾಡಿದ್ದರು.
Fact Check/Verification
ಸುಭಾಷಿಣಿ ಅವರ ಟ್ವೀಟ್ನ ಕಮೆಂಟ್ಸ್ ವಿಭಾಗವನ್ನು ನಾವು ಪರಿಶೀಲಿಸಿದ್ದು, ಹಲವರು ಇದು ಸುಳ್ಳು ಎಂದು ಹೇಳಿರುವುದು ಕಂಡುಬಂದಿದೆ.
ತನಿಖೆಯ ಸಮಯದಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ವೈರಲ್ ಮಾಡಿದ ಚಿತ್ರವು ಮಣಿಪುರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಚಿದಾನಂದನ್ ಸಿಂಗ್ ಅವರದ್ದು ಎಂದು ಕೆಲವು ಟ್ವೀಟ್ಗಳನ್ನು ನಾವು ಕಂಡುಕೊಂಡಿದ್ದೇವೆ. ಇದರ ಸಹಾಯ ಪಡೆದು ನಾವು ಚಿದಾನಂದನ್ ಸಿಂಗ್ ಅವರ ಸಾಮಾಜಿಕ ಜಾಲತಾಣದ ಖಾತೆಯನ್ನು ಹುಡುಕಿದ್ದೇವೆ. ಅದರಂತೆ, ಅಕ್ಟೋಬರ್ 17, 2022 ರಂದು ಅಪ್ಲೋಡ್ ಮಾಡಲಾದ ಅವರ ಫೇಸ್ಬುಕ್ ಪುಟದಲ್ಲಿ ನಾವು ವೈರಲ್ ಆದ ಚಿತ್ರವನ್ನೇ ಹೋಲುವ ಚಿತ್ರವನ್ನು ಕಂಡುಹಿಡಿದಿದ್ದೇವೆ. ಅಕ್ಟೋಬರ್ 16 ರಂದು ಇಂಫಾಲ್ ಜಿಲ್ಲೆಯಲ್ಲಿ ನಡೆದ ಆರೆಸ್ಸೆಸ್ ಪಥಸಂಚಲನವೊಂದರಲ್ಲಿ ತನ್ನ ಪುತ್ರ ಚೌಧರಿ ಸಚ್ಚಿನಂದ್ ಮತ್ತು ಸೋದರಸಂಬಂಧಿ ಅಶೋಕ್ ಅವರೊಂದಿಗೆ ಹಾಜರಿದ್ದೆ ಎಂದು ಅವರು ಫೋಟೋದ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ. ಈ ಪೋಸ್ಟ್ ಇಲ್ಲಿದೆ.
ವೈರಲ್ ಕ್ಲೇಮ್ ಹಂಚಿಕೊಂಡ ಬೇರೆ ಖಾತೆಗಳನ್ನು ಪರಿಶೀಲಿಸಿದಾಗ, ಮಣಿಪುರದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಚಿದಾನಂದ ಸಿಂಗ್ ಅವರ ಟ್ವೀಟ್ ನಮಗೆ ಲಭ್ಯವಾಗಿದೆ. ಆ ಟ್ವೀಟ್ ನಲ್ಲಿ ಅವರು ವೈರಲ್ ಆಗಿರುವ ಚಿತ್ರದಲ್ಲಿರುವುದು ತಾನು ಮತ್ತ ತನ್ನ ಮಗ ಎಂದು ಹೇಳಿಕೊಂಡಿದ್ದಾರೆ.
ಆ ನಂತರ ನಾವು ಚಿದಾನಂದ ಸಿಂಗ್ ಅವರನ್ನು ಸಂಪರ್ಕಿಸಿದ್ದೇವೆ. ನ್ಯೂಸ್ಚೆಕರ್ ಜೊತೆಗೆ ಮಾತನಾಡಿದ ಅವರು, “ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ದೃಢಪಡಿಸಿದರು. “ಶ್ರೀಮತಿ ಅಲಿ ಅದನ್ನು ಹಂಚಿಕೊಳ್ಳುವ ಮೊದಲೇ ನನ್ನ ವಿರುದ್ಧದ ನಕಲಿ ಸುದ್ದಿಗಳನ್ನು ನಾನು ನೋಡಿದ್ದೇನೆ. ಮುಖ್ಯ ಆರೋಪಿಯ ಬಂಧನದ ಹೊರತಾಗಿಯೂ ನಕಲಿ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ನಾನು ಡಿಜಿಪಿಗೆ ದೂರು ನೀಡಿದ್ದೇನೆ. ಅವರು ನನ್ನನ್ನು ನಿರ್ದಿಷ್ಟವಾಗಿ ಗುರಿಯಾಗಿಸುತ್ತಿಲ್ಲ, ಅವರು ಆರೆಸ್ಸೆಸ್ ಅನ್ನು ಗುರಿಯಾಗಿಸುತ್ತಿದ್ದಾರೆ” ಎಂದವರು ಹೇಳಿದ್ದಾರೆ.
Also Read: ಒಂದೇ ಟ್ರ್ಯಾಕ್ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ ಎಂದ ಈ ವೈರಲ್ ವೀಡಿಯೋ ಸತ್ಯವೇ?
‘ಫ್ರೆಂಡ್ಸ್ ಆಫ್ ಆರೆಸ್ಸೆಸ್’ ಎಂಬ ಟ್ವಿಟರ್ ಹ್ಯಾಂಡಲ್ ಕೂಡ ಸುಭಾಷಿಣಿ ಅಲಿ ವಿರುದ್ಧ ಈ ವಿಷಯದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಟ್ವೀಟ್ ಮಾಡಿದೆ.
ಇದರೊಂದಿಗೆ ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಖಚಿತಪಡಿಸುವ ಮಣಿಪುರ ಪೊಲೀಸರ ಟ್ವೀಟ್ ಅನ್ನು ಕೂಡ ನಮಗೆ ಲಭ್ಯವಾಗಿದೆ.
ಮಣಿಪುರ ಪೊಲೀಸರು ದಾಖಲಿಸಿದ ಎಫ್ಐಆರ್ ಪ್ರತಿಯನ್ನು ಚಿದಾನಂದ ಸಿಂಗ್ ಅವರು ಹಂಚಿಕೊಂಡಿದ್ದಾರೆ.
ಈ ಬೆಳವಣಿಗೆಗಳ ಬಳಿಕ ಸುಳ್ಳು ಹೇಳಿಕೆಗಳೊಂದಿಗೆ ವೈರಲ್ ಫೋಟೋವನ್ನು ಹಂಚಿಕೊಂಡ ಸುಭಾಷಿಣಿ ಅಲಿ ಅವರು ಜುಲೈ 23, 2023ರಂದು ಕ್ಷಮೆಕೋರುವ ಟ್ವೀಟ್ ಮಾಡಿದ್ದಾರೆ. “ಮಹಿಳೆಯರ ವಿರುದ್ಧದ ತೀವ್ರ ಲೈಂಗಿಕ ದೌರ್ಜನ್ಯದ ಭಯಾನಕ ಮಣಿಪುರ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲಾಗುತ್ತಿರುವ ಇಬ್ಬರು ವ್ಯಕ್ತಿಗಳ ಬಗ್ಗೆ ಸುಳ್ಳು ಟ್ವೀಟ್ ಅನ್ನು ನಾನು ರೀಟ್ವೀಟ್ ಮಾಡಿದ್ದಕ್ಕಾಗಿ ನಾನು ತುಂಬಾ ವಿಷಾದಿಸುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಉಂಟುಮಾಡಿದ ಯಾವುದೇ ಮುಜುಗರಕ್ಕಾಗಿ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
Also Read: ಲುಪ್ಪೋ ಕೇಕ್ ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
“ಅವರು ಬಿಕ್ಕಟ್ಟಿಗೆ ಹೆಚ್ಚಿನ ಇಂಧನವನ್ನು ಸೇರಿಸುತ್ತಿದ್ದಾರೆ. ಇದು ಮೂರ್ಖತನದ ಕೃತ್ಯ” ಎಂದು ಚಿದಾನಂದ ಸಿಂಗ್ ಎಚ್ಚರಿಸಿದ್ದಾರೆ.
Conclusion
ಮಣಿಪುರ ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಅವರ ಪುತ್ರ ಆರೆಸ್ಸೆಸ್ ಸಮವಸ್ತ್ರದಲ್ಲಿರುವ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
Result: False
Our Sources
Tweet by Manipur police, dated July 23, 2023
Tweet by Chidananda Singh, dated July 23, 2023
Tweet by Friends of RSS, dated July 23, 2023
Tweet by Subhashini Ali, dated July 24, 2023
Telephone conversation with Chidananda Singh, BJP State Vice President, Manipur
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.