Authors
Claim
ಚಂದ್ರಯಾನ 3ರ ಮೊದಲ ಫೋಟೋ-ವೀಡಿಯೋಗಳು
Fact
ಇದು ಚಂದ್ರಯಾನ 3ರ ಫೊಟೋ ವೀಡಿಯೋಗಳಲ್ಲ, ನಾಸಾ ಮಂಗಳ ಗ್ರಹ ಸಂಶೋಧನೆಗೆ ಕಳುಹಿಸಿದ ರೋವರ್ ಗಳದ್ದಾಗಿದೆ
ಚಂದ್ರಯಾನ 3ರ ಯಶಸ್ವಿ ಲ್ಯಾಂಡಿಂಗ್ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಅನೇಕ ವೀಡಿಯೋ, ಫೊಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ನಲ್ಲಿ ಕಂಡುಬಂದ ಹೇಳಿಕೆಯೊಂದರಲ್ಲಿ “ಚಂದ್ರಯಾನ 3 ಯಶಸ್ವಿಯಾಗಿ ಮೊದಲ ಫೋಟೋ ವಿಡಿಯೋ ತೆಗೆದು ಭೂಮಿ ಗೆ ಕಳುಹಿಸಿದೆ ನೋಡಿ ಬಂಧುಗಳೇ ಇದು ನಮ್ಮ ಭಾರತೀಯರ ಗೌರವದ ಸಂಗತಿಯಾಗಿದೆ..” ಎಂದು ಹೇಳಿ 5 ವಿವಿಧ ವೀಡಿಯೋಗಳನ್ನು ಹಂಚಿಕೊಳ್ಳಲಾಗಿದೆ.
Also Read: ಆಂಧ್ರದ 1400 ವರ್ಷ ಹಳೆಯ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಚಿತ್ರವಿದೆಯೇ?
ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ತಪ್ಪಾದ ಹೇಳಿಕೆ ಮತ್ತು ವೀಡಿಯೋ ಆಗಿದೆ ಎಂದು ಕಂಡುಬಂದಿದೆ.
Fact Check/ Verification
ಸತ್ಯಶೋಧನೆಗಾಗಿ ನ್ಯೂಸ್ಚೆಕರ್ ಪ್ರತಿಯೊಂದು ವೀಡಿಯೋಗಳನ್ನು ಪರಿಶೀಲಿಸಿದೆ. ಈ ವೀಡಿಯೋಗಳ ಕೀಫ್ರೇಂಗಳನ್ನು ರಿವರ್ಸ್ ಇಮೇಜ್ ಸರ್ಚ್ ಗೆ ಒಳಪಡಿಸಿದ ವೇಳೆ ಇದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ನಾಸಾ ಮಂಗಳ ಗ್ರಹದ ಮೇಲಿನ ಸಂಶೋಧನೆಗೆ ಕಳುಹಿಸಿರುವ ವಿವಿಧ ರೋವರ್ ಯಂತ್ರಗಳು ಮತ್ತು ಅವುಗಳು ಮಂಗಳನ ಮೇಲ್ಮೈ ಬಗ್ಗೆ ತೆಗೆದ ಚಿತ್ರ/ವೀಡಿಯೋಗಳಾಗಿವೆ ಎಂದು ಕಂಡುಬಂದಿದೆ. ಜೊತೆಗೆ ನಾಸಾದ ಮಂಗಳ ಶೋಧನೆಯ ಬಗ್ಗೆ ಇರುವ ವೆಬ್ಸೈಟ್ನಲ್ಲಿ ಇಂತಹ ವೀಡಿಯೋಗಳನ್ನು ಹೋಲುವ ಅನೇಕ ವೀಡಿಯೋಗಳು ಇರುವುದನ್ನು ನಾವು ಇಲ್ಲಿ ಕಂಡುಕೊಂಡಿದ್ದೇವೆ.
ನಾಸಾ ಮಂಗಳನ ಸಂಶೋಧನೆಗೆ ಒಟ್ಟು 6 ರೋವರ್ ಗಳನ್ನು ಈವರೆಗೆ ಕಳುಹಿಸಿದ್ದು, 2012ರಲ್ಲಿ ಕಳುಹಿಸಿದ ಕ್ಯೂರಿಯಾಸಿಟಿ ಮತ್ತು 2020ರಲ್ಲಿ ಕಳುಹಿಸಿದ ಪ್ರಿಸರ್ವೆನ್ಸ್ ಇತ್ತೀಚಿನ ರೋವರ್ ಗಳಾಗಿವೆ.
ಶೋಧನೆಯ ವೇಳೆ ವೈರಲ್ ವೀಡಿಯೋದೊಂದಿಗೆ ಲಗತ್ತಿಸಲಾದ ವೀಡಿಯೋಗಳಿಗೆ ಮತ್ತು ಮಾರ್ಸ್ ಮಿಷನ್ ವ್ಲಾಗ್ ಎಂಬ ಇನ್ಸ್ಟಾ ಗ್ರಾಂ ಖಾತೆಯಲ್ಲಿನ ವೀಡಿಯೋಗಳಿಗೆ ಸಾಮ್ಯತೆ ಇರುವುದು ಕಂಡುಬಂದಿದೆ.
ವೀಡಿಯೋ 1
ಈ ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ವೇಳೆ ನಾಸಾ ಮಾಡಿದ ಟ್ವೀಟ್ ಲಭ್ಯವಾಗಿವೆ. ಇದರಲ್ಲಿ ವೈರಲ್ ವೀಡಿಯೋದಲ್ಲಿ ಕಂಡುಬಂದಿರುವ ಚಿತ್ರಗಳನ್ನು ನಾವು ಇಲ್ಲೂ ಗುರುತಿಸಿದ್ದೇವೆ.
ನಾಸಾ ಕಳುಹಿಸದ ಕ್ಯೂರಿಯಾಸಿಟಿ ಸೆಲ್ಫಿ ತೆಗೆದಿರುವುದನ್ನು ಜುಲೈ 19 2023ರಂದು ಮಾರ್ಸ ಮಿಷನ್ ವ್ಲಾಗ್ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ನೀಡಲಾದ ವೀಡಿಯೋ ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನು ನಾವು ಗುರುತಿಸಿದ್ದೇವೆ.
ವೀಡಿಯೋ 2
ರಿವರ್ಸ್ ಇಮೇಜ್ ಸರ್ಚ್ ವೇಳೆ ನಾಸಾದ ಅಪಾರ್ಚುನಿಟಿ ರೋವರ್ ಜನವರಿ 3, 2008 ರಂದು ಮಂಗಳನಲ್ಲಿ ತೆಗೆದ ಚಿತ್ರ ಇದಾಗಿದೆ. ಈ ಕುರಿತ ಮಾಹಿತಿಯನ್ನು ಇಲ್ಲಿ ನೋಡಬಹುದು.
Also Read: ಚಂದ್ರನ ಮೇಲೆ ಅಶೋಕ ಲಾಂಛನದ ವೈರಲ್ ಚಿತ್ರ ನಿಜವಲ್ಲ, ಅದು ಕಲಾಕೃತಿ!
ವೀಡಿಯೋ 3
ಈ ವೀಡಿಯೋಕ್ಕೆ ಸಂಬಂಧಿಸಿ ಕೀಫ್ರೇಂಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ ವೇಳೆ ಜೂನ್ 14, 2014r ಸೈನ್ಸ್ ವರದಿಯಲ್ಲಿ ಮಾರ್ಸ್ ರೋವರ್ ತೆಗೆದ ಸೆಲ್ಫಿ ಎಂದು ಹೇಳಲಾಗಿದೆ. ಇದರಲ್ಲಿ ಫೊಟೋಗಳನ್ನು ಪತ್ತೆ ಹಚ್ಚಿದ್ದೇವೆ.
ಡಿಸೆಂಬರ್ 18 2015ರ ಸ್ಪೇಸ್ ಡಾಟ್ ಕಾಮ್ನ ಲೇಖನದಲ್ಲೂ ಮಂಗಳನ ಕುರಿತ ಬರಹದಲ್ಲಿ ಇದೇ ರೀತಿಯ ಫೋಟೋವನ್ನು ಬಳಕೆ ಮಾಡಲಾಗಿದೆ.
2015 ಎಪ್ರಿಲ್ 13 ರಂದು ಬಿಬಿಸಿ ಪ್ರಕಟಿಸಿದ ವರದಿಯಲ್ಲೂ ವೈರಲ್ ವೀಡಿಯೋದ ಕೀಫ್ರೇಂನಲ್ಲಿ ಕಂಡುಬಂದಿರುವ ಫೋಟೋವನ್ನು ಪ್ರಕಟಿಸಲಾಗಿದೆ. ಈ ಲೇಖನದಲ್ಲಿ “ಮಂಗಳನಲ್ಲಿ ದ್ರವೀಕೃತ ನೀರು ಕಂಡುಬಂದ ಬಗ್ಗೆ ಸಾಕ್ಷ್ಯಗಳು” ಎಂದಿದೆ.
ವೀಡಿಯೋ 4
ವೈರಲ್ ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ವೇಳೆ, ಮಂಗಳನಲ್ಲಿ ನಾಸಾದ ರೋವರ್ ಸಂಗ್ರಹಿಸಿದ ಮಾದರಿಗಳ ಟ್ಯೂಬ್ಗಳ ಬಗ್ಗೆ ಫೆಬ್ರವರಿ 14, 2023 ರಂದು ನಾಸಾ ಸೈನ್ಸ್ ಮಾರ್ಸ್ ಎಕ್ಸಪ್ಲೋರೇಷನ್ ಪ್ರಕಟಿಸಿದ ವರದಿಯಲ್ಲಿ ಕೀ ಫ್ರೇಂಗಳಲ್ಲಿ ಕಂಡುಬಂದ ರೀತಿಯ ಫೋಟೊವನ್ನು ನಾವು ಪತ್ತೆ ಹಚ್ಚಿದ್ದೇವೆ.
ವೀಡಿಯೋ 5
ವೈರಲ್ ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ವೇಳೆ ಜೂನ್ 15, 2022 ರಂದು ನಾಸಾದ ಪ್ರಿಸರ್ವೆನ್ಸ್ ಮಾರ್ಸ್ ರೋವರ್ ಮಾಡಿದ ಟ್ವೀಟ್ ಲಭ್ಯವಾಗಿದೆ. ರೋವರ್ ಥರ್ಮಲ್ ಬ್ಲ್ಯಾಂಕೆಟ್ ಅನ್ನು ಪತ್ತೆ ಮಾಡಿದ್ದು, ಲ್ಯಾಂಡಿಗ್ ವೇಳೆ ಜೆಟ್ ಪ್ಯಾಕ್ ನಿಂದ ಹಾರಿದ ತುಣುಕು ಇದಾಗಿದೆ ಎಂದು ಹೇಳಿದೆ.
Also Read: ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ ಸೆರೆಹಿಡಿದಿದೆಯೇ?
Conclusion
ಈ ಸತ್ಯಶೋಧನೆಯ ಪ್ರಕಾರ, ಚಂದ್ರಯಾನ 3ರ ವೀಡಿಯೋ ಎಂದು ಹೇಳಲಾದ ಎಲ್ಲ ವೀಡಿಯೋಗಳು ನಾಸಾದ ಮಂಗಳ ಸಂಶೋಧನೆಯ ರೋವರ್ ಗಳ ಕುರಿತ ವೀಡಿಯೋಗಳಾಗಿದ್ದು, ಎಲ್ಲವೂ ತಪ್ಪು ಎಂದು ತಿಳಿದುಬಂದಿದೆ.
Result:False
Our Sources
Website of Nasa Mars Exploration
Website of Spaceplace Nasa
Tweet By Nasa Astrobiology, Dated: February 19, 2022
Tweet By Nasa Preservence Mars Rover, Dated: June 15, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.