Authors
Claim
ಬೆಂಗಳೂರಿನಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ
Fact
ವಿಮಾನ ಮಳೆ ನೀರಿನಿಂದಾಗಿ ಮಗುಚಿದ್ದಲ್ಲ, ಮುಂಭಾಗದ ಲ್ಯಾಂಡಿಂಗ್ ಗಿಯರ್ ಸಮಸ್ಯೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದ್ದು ಈ ವೇಳೆ ಬೆಂಕಿ ಅವಘಡ ತಪ್ಪಿಸಲು ಅಗ್ನಿನಿರೋಧಕ ಫೋಮ್ ಬಳಕೆ ಮಾಡಲಾಗಿದೆ
ಮಳೆ ನೀರಿನಲ್ಲಿ ಮಗುಚಿ ಬಿದ್ದ ವಿಮಾನ ಎಂದು ವೀಡಿಯೋವೊಂದು ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಈ ರೀಲ್ನಲ್ಲಿ “ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ, ಬೆಂಗಳೂರು ಎಚ್ಎಎಲ್” ಎಂದು ಬರೆಯಲಾಗಿದೆ.
ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಪತ್ತೆಯಾಗಿದೆ.
Also Read: Fact Check: ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ಈ ವೀಡಿಯೋ ಹಿಂದಿನ ಸತ್ಯ ಏನು?
Fact Check/ Verification
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
ಜುಲೈ 12, 2023ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಖಾಸಗಿ ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷದಿಂದ ತುರ್ತಾಗಿ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದಿದೆ. ಈ ವರದಿಯಲ್ಲಿ, ಲ್ಯಾಡಿಂಗ್ ಗಿಯರ್ ಸಮಸ್ಯೆಯಿಂದ ಹೀಗಾಗಿದೆ ಎಂದಿದೆ. ಜೊತೆಗೆ ಇಳಿಯುವ ವೇಳೆ ರನ್ ವೇಯಲ್ಲಿ ಬೆಂಕಿ ಅವಘಡ ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಚ್ಎಎಲ್ ಸಾರ್ವಜನಿಕ ಸಂಪರ್ಕಾಧಿಕಾರಿಯ ಹೇಳಿಕೆಯನ್ನು ವರದಿ ಮಾಡಿದೆ.
ಜುಲೈ 12, 2023ರ ಹನ್ಸ್ ಇಂಡಿಯಾ ವರದಿ ಪ್ರಕಾರ, ಲ್ಯಾಂಡಿಂಗ್ ಗಿಯರ್ನಲ್ಲಿ ತಾಂತ್ರಿಕ ದೋಷ ಕಂಡುಬಂದ ಪ್ರಕಾರ, ಖಾಸಗಿ ವಿಮಾನವನ್ನು ತುರ್ತಾಗಿ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ವಿಮಾನದಲ್ಲಿ ಯಾರೂ ಪ್ರಯಾಣಿಕರು ಇರಲಿಲ್ಲ. ಪೈಲಟ್, ಸಹ ಪೈಲಟ್ ಗೆ ಏನೂ ಹಾನಿಯಾಗಲಿಲ್ಲ ಎಂದಿದೆ. ಇದೇ ವರದಿಯಲ್ಲಿ ಲ್ಯಾಂಡಿಂಗ್ ಗಿಯರ್ ಸಮಸ್ಯೆಯಿಂದ ತುರ್ತಾಗಿ ಇಳಿಯುವ ವೇಳೆ ಹೆಚ್ಚಿನ ಹಾನಿ ತಪ್ಪಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ರನ್ವೇಯಲ್ಲಿ ಬೆಂಕಿ ಏಳದಂತೆ ಬೆಂಕಿನಿರೋಧಕ ಫೋಮ್ ಅನ್ನು ಸಿಂಪಡಿಸಿದೆ ಎಂದಿದೆ.
ಜುಲೈ 12, 2023ರ ಝೀ ಬ್ಯುಸಿನೆಸ್ ವರದಿಯಲ್ಲಿ, ಖಾಸಗಿ ವಿಮಾನ ತುರ್ತು ಭೂಸ್ಪರ್ಶದ ಬಗ್ಗೆ ಹೇಳಿದ್ದು, ಪೈಲಟ್ ಅವರ ಮನವಿ ಮೇರೆಗೆ ವಿಮಾನ ನಿಲ್ದಾಣ ಅಧಿಕಾರಿಗಳು ವಿಮಾನ ಇಳಿಯುವ ವೇಳೆ ರನ್ವೇಯಲ್ಲಿ ಬೆಂಕಿ ನಿಗ್ರಹದ ಫೋಮ್ ಪದರವನ್ನು ಹರಿಡಿದ್ದರು ಎಂದಿದೆ.
Also Read: ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Conclusion
ಈ ಸತ್ಯಶೋಧನೆಯ ಪ್ರಕಾರ, ವಿಮಾನ ಮಳೆ ನೀರಿನಿಂದಾಗಿ ಮಗುಚಿದ್ದಲ್ಲ, ಮುಂಭಾಗದ ಲ್ಯಾಂಡಿಂಗ್ ಗಿಯರ್ ಸಮಸ್ಯೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದ್ದು ಈ ವೇಳೆ ಬೆಂಕಿ ಅವಘಡ ತಪ್ಪಿಸಲು ಅಗ್ನಿನಿರೋಧಕ ಫೋಮ್ ಬಳಕೆ ಮಾಡಿರುವುದು ತಿಳಿದುಬಂದಿದೆ.
Result: False
Our Sources:
Report By Deccan Herald, Dated: July 12, 2023
Report By Hans India, Dated: July 12, 2023
Report By ZeeBusiness, Dated: July 12, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.