Authors
ಸೌದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪ್ರತಿಮೆ ತಯಾರು ಮಾಡಲಾಗಿದೆ, ಖಲಿಸ್ತಾನ ವಿವಾದ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಹಗ್ಗಜಗ್ಗಾಟ ಭಾರತ-ಕೆನಡಾ ಮಧ್ಯೆ ನಡೆದಿರುವಂತೆಯೇ, ಭಾರತಕ್ಕೆ ಪ್ರಯಾಣಿಸುವ ವೇಳೆ ಎಚ್ಚರಿಕೆ ವಹಿಸುವಂತೆ ಕೆನಡಾ ಸೂಚನೆ, ಮುಳುಗಿ ಮೃತನಾದ ವ್ಯಕ್ತಿಯನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಜೀವಂತವಾಗುತ್ತಾನೆ, ತೆಲಂಗಾಣ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆ, ಗರ್ಭಿಣಿಯರು ಪ್ರತಿ ದಿನ ಬಾದಾಮಿ ತಿಂದರೆ, ಹುಟ್ಟುವ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಕ್ಲೇಮುಗಳು ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು ಸತ್ಯಾಸತ್ಯತೆಯನ್ನು ತೆರೆದಿಟ್ಟಿದೆ.
ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಕೆನಡಾ ಹೇಳಿದೆ ಎಂಬ ಎಎನ್ಐ ವರದಿ ನಿಜವೇ?
ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಕೆನಡಾ ಹೇಳಿದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ‘ಊಹಿಸಲಾಗದ ಪರಿಸ್ಥಿತಿ’ಯಿರುವ ಬಗ್ಗೆ ಅದು ತನ್ನಪ್ರಜೆಗಳಿಗೆ ಎಚ್ಚರಿಕೆ ನೀಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿತ್ತು. ಆದರೆ ಸತ್ಯಶೋಧನೆಯಲ್ಲಿ ಅಂತಹ ಯಾವುದೇ ಪುರಾವೆಗಳು ಸಿಕ್ಕಿಲ್ಲ ಮತ್ತು ಅಂತಹ ಎಚ್ಚರಿಕೆಯನ್ನು ನೀಡಿಲ್ಲ ಎಂದು ಕೆನಡಾ ರಾಯಭಾರ ಕಚೇರಿ ನ್ಯೂಸ್ಚೆಕರ್ಗೆ ತಿಳಿಸಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆ ಸೌದಿಯಲ್ಲಿ ಕೆತ್ತಲಾಗಿದೆ ಎನ್ನುವುದು ನಿಜವೇ?
ಪ್ರಧಾನಿ ನರೇಂದ್ರ ಮೋದಿ ಚಿನ್ನದ ಪ್ರತಿಮೆಯನ್ನು ಸೌದಿ ಅರೇಬಿಯಾದಲ್ಲಿ ಕೆತ್ತಲಾಗಿದೆ ಎಂದು ಹೇಳಿ ಚಿನ್ನದ ಪ್ರತಿಮೆಯ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆ ವೇಳೆ ಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆ ಕೆತ್ತಿ ಸೌದಿಯಲ್ಲಿಡಲಾಗಿಲ್ಲ. ಇದನ್ನು ಸೂರತ್ ಆಭರಣ ವ್ಯಾಪಾರಿಯೊಬ್ಬರು 2022ರಲ್ಲಿ ಗುಜರಾತ್ನಲ್ಲಿ ಬಿಜೆಪಿ 156 ಸ್ಥಾನದಲ್ಲಿ ಗೆದ್ದ ನಿಮಿತ್ತ ಕೆತ್ತಿಸಿದ್ದಾರೆ ಎಂದು ಗೊತ್ತಾಗಿದೆ ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಉಪ್ಪಿನ ರಾಶಿಯಲ್ಲಿ ಮೃತದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎನ್ನುವುದು ಸತ್ಯವೇ?
ಉಪ್ಪಿನ ರಾಶಿಯಲ್ಲಿ ಮೃತ ದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮುಳುಗಿ ಸತ್ತವರ ಮೃತದೇಹವನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಮತ್ತೆ ವ್ಯಕ್ತಿ ಜೀವಂತವಾಗುತ್ತಾನೆ ಎನ್ನುವುದು ಸಂಪೂರ್ಣ ಸುಳ್ಳಾಗಿದೆ ಎಂದು ಫಾರೆನ್ಸಿಕ್ ತಜ್ಞರು ನ್ಯೂಸ್ಚೆಕರ್ ಗೆ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?
ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದ್ದು, ಅದನ್ನು ಅಲ್ಲಿನ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಉದ್ಘಾಟಿಸಿದ್ದಾರೆ. ಹಿಂದೂಗಳ ಮೂರ್ಖರಾದ ಪರಿಣಾಮ ಇದು ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದೆ. ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದಾಗ, ತೆಲಂಗಾಣ ಕಾರ್ಯಾಲಯದಲ್ಲಿ ಮಸೀದಿ, ಚರ್ಚ್, ದೇಗುಲಗಳನ್ನು ನಿರ್ಮಿಸಿರುವುದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಗರ್ಭಿಣಿಯರು ಪ್ರತಿ ದಿನ ಬಾದಾಮಿ ತಿಂದರೆ ಹುಟ್ಟುವ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎಂಬುದು ನಿಜವೇ?
ಗರ್ಭಿಣಿಯರು ಪ್ರತಿ ದಿನ ಬಾದಾಮಿ ನೀರಿನಲ್ಲಿ ನೆನೆಸಿ ತಿನ್ನಬೇಕು ಇದರಿಂದ ಹುಟ್ಟುವ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿತ್ತು. ಈ ಕುರಿತು ಸತ್ಯಶೋಧನೆ ನಡೆಸಿದಾಗ, ಗರ್ಭಿಣಿಯರು ಬಾದಾಮಿ ತಿಂದರೆ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.