Authors
Claim
ಇಸ್ರೇಲ್ ಪ್ಯಾಲೆಸ್ತೀನಿನ ಮಸೀದಿಯನ್ನು ಧ್ವಂಸಗೈದಿದೆ
Fact
ಇಸ್ರೇಲ್ ಪ್ಯಾಲೆಸ್ತೀನ್ ಮಸೀದಿಯನ್ನು ಧ್ವಂಸಗೊಳಿಸಿದ ದೃಶ್ಯ ಅಲ್ಲ, ಇದು ಐಸಿಸ್ ಸಿರಿಯಾದಲ್ಲಿ 2014ರಲ್ಲಿ ಶಿಯಾ ಮಸೀದಿಯನ್ನು ಧ್ವಂಸಗೈದ ಕೃತ್ಯವಾಗಿದೆ
ಇಸ್ರೇಲ್ ಹಮಾಸ್ ನಡುವಿನ ಸಂಘರ್ಷದ ಮಧ್ಯೆ, ಇಸ್ರೇಲ್ ಮಸೀದಿಯೊಂದನ್ನು ಧ್ವಂಸಗೈದಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿರುವ ಮಧ್ಯೆಯೇ, ಬಾಂಬಿಟ್ಟು ಮಸೀದಿಯನ್ನು ಧ್ವಂಸಮಾಡಲಾಗಿದೆ ಎಂಬರ್ಥದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯ ಪ್ರಕಾರ “ಪಾಪ ಪೂರ್ತಿಯಾಗಿ ಕಿರಿಚೊಕೆ ಆದ್ರು ಬಿಡಬೇಕಿತ್ತು ಇಸ್ರೇಲ್ ಏರ್ ಫೋರ್ಸ್” ಎಂದಿಂದೆ. ಇದರೊಂದಿಗೆ ಆಜಾನ್ ನಡುವೆ ಮಸೀದಿಯೊಂದು ಧ್ವಂಸವಾಗುತ್ತಿರುವ ದೃಶ್ಯವಿದೆ. ಈ ಪೋಸ್ಟ್ ಇಲ್ಲಿದೆ.
Also Read: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂಬುದು ನಿಜವೇ?
ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಜೂನ್ 6, 2014ರಂದು ಇಸ್ಲಾಮಿಕ್ ಇನ್ವಿಟೇಷನ್ ಟರ್ಕಿ ಹೆಸರಿನ ವೆಬ್‌ಸೈಟ್ ಪ್ರಕಟಿಸಿದ ವರದಿಯಲ್ಲಿ “ಇಸ್ಲಾಂ ವಿರೋಧಿ ಟರ್ಕಿ ಬೆಂಬಲಿತ ಉಗ್ರರು ಉವೈಸಿ ಖುರಾನಿ ಶ್ರದ್ಧಾ ಕೇಂದ್ರವನ್ನು ಉಡಾಯಿಸಿರುವುದು” ಎಂದಿದೆ.
ಜೂನ್ 4, 2021ರಂದು ಎಎಫ್‌ಪಿ ಫ್ಯಾಕ್ಟ್ ಚೆಕ್ ಪ್ರಕಟಿಸಿದ ವರದಿಯಲ್ಲೂ ಇಸ್ಲಾಮಿಕ್ ಸ್ಟೇಟ್ ಗ್ರೂಪ್ (ಐಸಿಸ್) ಸಿರಿಯಾದಲ್ಲಿ 2014ರಲ್ಲಿ ಉಡಾಯಿಸಿದ ಉವಾಯ್ಸ್ ಅಲ್ ಖುರಾನಿ ಹೆಸರಿನ ಮಸೀದಿ ಇದಾಗಿದೆ ಎಂದಿದೆ. ಈ ವರದಿಯ ಪ್ರಕಾರ, ಇಸ್ರೇಲ್ ಪ್ಯಾಲೆಸ್ತೀನ್ ನ ಮಸೀದಿಯನ್ನು ಧ್ವಂಸಗೈದಿದೆ ಎಂದು ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಸಿರಿಯಾದ ಮಸೀದಿ ಎಂದು ತಿಳಿದುಬಂದಿದೆ.
Also Read: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರ ಶೇ.55 ತೆರಿಗೆ ಹಾಕುವುದು ನಿಜವೇ?
ಇದನ್ನು ಆಧಾರವಾಗಿರಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದು ಈ ವೇಳೆ ಮಾರ್ಚ್ 26, 2014ರಂದು ರಾಯ್ಟರ್ಸ್ ಪ್ರಕಟಿಸಿದ ವರದಿ ಲಭ್ಯವಾಗಿದೆ. ಇದರ ಪ್ರಕಾರ, ಸಿರಿಯಾದ ರಖ್ಖಾದಲ್ಲಿರುವ ಶಿಯಾ ಸಮುದಾಯಕ್ಕೆ ಸೇರಿದ ಶ್ರದ್ಧಾಕೇಂದ್ರವನ್ನು ಅಲ್ ಖೈದಾದಿಂದ ಪ್ರತ್ಯೇಕಗೊಂಡ ಐಸಿಸ್ ಉಗ್ರರು ಉಡಾಯಿಸಿದ್ದಾರೆ. ಅಮ್ಮರ್ ಬಿನ್ ಯಾಸಿರ್ ಮತ್ತು ಒವಾಯ್ಸ್ ಅಲ್ ಖುರಾನಿ ಹೆಸರಿನ ಈ ಮಸೀದಿ ಇರಾನ್, ಲೆಬನಾನ್, ಇರಾಕ್‌ನ ಶಿಯಾ ಮುಸ್ಲಿಮ್ ಯಾತ್ರಿಕರ ಶ್ರದ್ಧಾಕೇಂದ್ರವಾಗಿದ್ದು, ವರ್ಷಗಳ ಹಿಂದೆ ಇದನ್ನು ಸುನ್ನಿ ಬಂಡುಕೋರರು ಅಧ್ಯಕ್ಷ ಬಶರ್ ಅಲ ಅಸಾದ್ ಅವರನ್ನು ಕಿತ್ತೆಸೆದು ಇದನ್ನು ಕೈವಶಮಾಡಿಕೊಂಡಿದ್ದರು” ಎಂದಿದೆ.
Also Read: ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?
Conclusion
ಈ ಸತ್ಯಶೋಧನೆಗಳ ಪ್ರಕಾರ, ಇದು ಇಸ್ರೇಲ್ ಪ್ಯಾಲೆಸ್ತೀನ್ ಮಸೀದಿಯನ್ನು ಧ್ವಂಸಗೊಳಿಸಿದ ದೃಶ್ಯ ಅಲ್ಲ, ಇದು ಐಸಿಸ್ ಸಿರಿಯಾದಲ್ಲಿ 2014 ನಡೆಸಿದ ಕೃತ್ಯವಾಗಿದೆ ಎಂದು ಕಂಡುಬಂದಿದೆ.
Result: False
Our Sources
Report By Islamic Invitation Turkey, Dated: June 6, 2014
Report By AFP Fact Check, Dated: June 4, 2021
Report By Reuters, Dated: March 26, 2014
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.